40ರ ವಯಸ್ಸಿನ ನಂತರ ನಿಮ್ಮ ಸೆಕ್ಸ್ ಲೈಫ್‌ನಲ್ಲಿ ಏನಾಗುತ್ತದೆ?

By Suvarna NewsFirst Published Oct 7, 2021, 7:16 PM IST
Highlights

ಇಪ್ಪತ್ತರ ಹರೆಯದಲ್ಲಿ ಸೆಕ್ಸ್ ಒಂದು ಥರ ಇರುತ್ತದೆ. ನಲುವತ್ತರ ನಂತರ ಅದು ಬೇರೆಯದೇ ರೂಪ ಪಡೆದುಕೊಳ್ಳುತ್ತದೆ. ಬನ್ನಿ ಆಗ ಏನೇನಾಗುತ್ತದೆ ತಿಳಿಯೋಣ.
 

ಗಂಡು ಮತ್ತು ಹೆಣ್ಣು ಇಬ್ಬರೂ ಇಪ್ಪತ್ತರ ಹರೆಯದಲ್ಲಿ ಮದುವೆಯಾದರೆ ನಲುವತ್ತರ ಹೊತ್ತಿಗಾಗಲೇ ಸಾಕಷ್ಟು ಸೆಕ್ಸ್ (Sex) ಅನ್ನು ಅನುಭವಿಸಿರುತ್ತಾರೆ. ಹೀಗಾಗಿ ನಲುವತ್ತರ ನಂತರದ ಸೆಕ್ಸ್ ಎಂದರೆ ಪ್ರಯೋಗ ಮಾಡಲು, ಹೊಸಹೊಸದನ್ನು ಅನ್ವೇಷಿಸಲು ಸೂಕ್ತ ಕಾಲ. ಪುರುಷರು (Men) ಮತ್ತು ಮಹಿಳೆಯರ ಹಾರ್ಮೋನ್ (Female Harmone) ಬದಲಾವಣೆಗಳಾಗುತ್ತವೆ. ಲೈಂಗಿಕ ಬಯಕೆ (Sexual Eagerness) ಮತ್ತು ಚಟುವಟಿಕೆಯ ಸಮಯದಲ್ಲಿ ಬದಲವಾಗುತ್ತದೆ. ಲೈಂಗಿಕ ಚಟುವಟಿಕೆಯ ಸಮಯದಲ್ಲಿ ಉತ್ತೇಜನದಲ್ಲಿ ಹೆಚ್ಚಳವಾಗಬಹುದು ಅಥವಾ ಉದ್ರೇಕಗೊಳ್ಳಲು ಹೆಚ್ಚಿನ ಗಮನ ಹರಿಸಬಹುದು. ಇಲ್ಲಿದೆ ಕೆಲವು ಟಿಪ್ಸ್.

ಕಡಿಮೆ ಸೆಕ್ಸ್ (sex) ಎಂಬುದು ನಿಜವಲ್ಲ
40 ವರ್ಷದ ಬಳಿಕ ಸೆಕ್ಸ್ ಕಡಿಮೆಯಾಗುತ್ತದೆ ಎಂಬುದು ನಿಜವಲ್ಲ. ಪ್ರತಿದಿನ ಮಾಡುತ್ತಿದ್ದವರು ಮೂರು ದಿನಕ್ಕೊಮ್ಮೆ ಮಾಡಬಹುದು. ಆದರೆ ಕೆಲವು ಅಧ್ಯಯನಗಳ ಪ್ರಕಾರ 40ರ ಹರೆಯದ ದಂಪತಿಗಳು ತಮ್ಮ ಜೀವನದ ಅತ್ಯುತ್ತಮ ಲೈಂಗಿಕತೆಯನ್ನು ಹೊಂದುತ್ತಾರೆ. ಲೈಂಗಿಕತೆಯ ವಿವಿಧ ಅಂಶಗಳನ್ನು ಅನ್ವೇಷಿಸಲು ಅವರಿಗೆ ಹೆಚ್ಚಿನ ಮುಕ್ತತೆ ಇರುತ್ತದೆ. ದಂಪತಿಗಳು ಬಾಂಡಿಂಗ್, ರೋಲ್ ಪ್ಲೇ ಮಾಡಬಹುದು. ಪೋರ್ನ್ ಅನ್ನು ಒಟ್ಟಿಗೆ ವೀಕ್ಷಿಸಬಹುದು. ಹೊಸ ಹೊಸ ತಂತ್ರಗಳನ್ನು ಪ್ರಯತ್ನಿಸಬಹುದು. ಅದಕ್ಕೆ ಕಾರಣ ಲೈಂಗಿಕ ಆತ್ಮವಿಶ್ವಾಸ, ಬಲವಾದ ಲೈಂಗಿಕ ಪ್ರಜ್ಞೆ, ಲೈಂಗಿಕತೆಯನ್ನು ಹೆಚ್ಚು ಮಾಡುವ ಬಯಕೆ ಅಥವಾ ಹೆಚ್ಚು ಅರ್ಥಪೂರ್ಣ ಸಂಬಂಧ ಮತ್ತು ಆಳವಾದ ಭಾವನಾತ್ಮಕ ಬಂಧ. 
 

ಹೃದಯದ ಆರೋಗ್ಯ (Cardiac)
ಈ ವಯಸ್ಸಿನಲ್ಲಿ ನಿಮ್ಮ ಹೃದಯ ರಕ್ತನಾಳದ ಸುವ್ಯವಸ್ಥೆ ಲೈಂಗಿಕ ಜೀವನಕ್ಕೆ ಪ್ರಮುಖವಾಗಿದೆ.  ಉತ್ತಮ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ನಿಮ್ಮ ಕಾರ್ಡಿಯೋವನ್ನು ಮುಂದುವರಿಸಿ. ಉತ್ತಮವಾಗಿ ಕಾಣುವ ಆತ್ಮವಿಶ್ವಾಸವು ಯಾವಾಗಲೂ ಸಹಾಯ ಮಾಡುತ್ತದೆ. ನಿಯಮಿತವಾಗಿ ವಾಕಿಂಗ್, ವ್ಯಾಯಾಮ, ಜಿಮ್ಗೆ ಹೋಗುವುದರಿಂದ ನಿಮ್ಮ ಕಾಮಾಸಕ್ತಿಯು ಹೆಚ್ಚಿನ ಉತ್ತೇಜನವನ್ನು ನೀಡುತ್ತದೆ.
 

ನಿರಾಳತೆ 
ಲೈಂಗಿಕ ಬಯಕೆ ಏರಿಳಿತವಾಗಬಹುದು ಮತ್ತು ವಯಸ್ಸಾದಂತೆ ಅನೇಕ ದಂಪತಿಗಳಲ್ಲಿ ಸೆಕ್ಸ್ ನಿಧಾನವಾಗಬಹುದು. ಆದರೆ ಈ ವಯಸ್ಸಿನಲ್ಲಿಯೂ ಲೈಂಗಿಕತೆ ಮುಖ್ಯ. ಒಂದು ಬಗೆಯ ನಿರಾಳತೆ, ಗರ್ಭ ಧರಿಸುವ ಆತಂಕಗಳು ಇಲ್ಲದೆ, ಸೂಕ್ತ ಗರ್ಭನಿರೋಧಕ ಕ್ರಮಗಳ ಜೊತೆಗೆ ಸೆಕ್ಸ್ ನಡೆಸುವ ತಿಳುವಳಿಕೆ ಬರಬಹುದು. 

ಗರ್ಭಿಣಿಯಾಗಲು ಪ್ರಯತ್ನಿಸುವುದು ಬೋರ್ (pregnancy)
ವಯಸ್ಸಾದಂತೆ ಮಹಿಳೆಯಲ್ಲಿ ಅಂಡಗಳ ಪ್ರಮಾಣ ಮತ್ತು ಗುಣಮಟ್ಟ ಕಡಿಮೆಯಾಗುತ್ತದೆ. ಹೀಗಾಗಿ 40ರ ನಂತರ ಗರ್ಭಧಾರಣೆ ಸವಾಲಿನದ್ದಾಗಿದೆ. ನೀವು ಈಗಲೂ ಮಕ್ಕಳಿಗಾಗಿ ಸೆಕ್ಸ್‌ನಲ್ಲಿ ತೊಡಗಿದ್ದರೆ ಲೈಂಗಿಕತೆಯು ಅಷ್ಟೇನೂ ರೋಚಕವಾಗಿರದು. 

ಮಹಿಳೆಯರಿಗೆ ಹೆಚ್ಚು ಪರಾಕಾಷ್ಠೆ (Orgasm)
ವಯಸ್ಸಾದಂತೆ ಮಹಿಳೆಯರು ಲೈಂಗಿಕ ಪರಾಕಾಷ್ಠೆಯ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ ಎಂದು ಹೇಳುವುದು ನಿಜವಲ್ಲ. ತಜ್ಞರು ಹೇಳುವಂತೆ 40ಕ್ಕಿಂತ ಹೆಚ್ಚಿನ ಮಹಿಳೆಯರು ಲೈಂಗಿಕತೆಯಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಆನಂದವನ್ನು ಪಡೆಯಬಹುದು. ಕೆಲವು ಮಹಿಳೆಯರಿಗೆ, ಪರಾಕಾಷ್ಠೆಯು ಅನುಭವ, ಆತ್ಮವಿಶ್ವಾಸದೊಂದಿಗೆ ಬೆಳೆಯುತ್ತದೆ. ಅನೇಕ ಮಹಿಳೆಯರು ತಮ್ಮ ಲೈಂಗಿಕ ಅನುಭವದ ಎರಡನೇ ಹಂತವನ್ನು ಕಂಡುಕೊಳ್ಳಬಹುದು. ಅದನ್ನು ತಲುಪಲು ಏನೆಲ್ಲ ಮಾಡಬೇಕೋ ಅದನ್ನೆಲ್ಲ ಮಾಡಲು ಅವರು ಈ ಹಂತದಲ್ಲಿ ನಾಚಿಕೆಪಡುವುದಿಲ್ಲ.

#Feelfree: ಪತ್ನಿಯ ಕನ್ಯಾಪೊರೆ ಹರಿದಿರೋದು ಪತಿಗೆ ಗೊತ್ತಾಗುತ್ತಾ?

ಪುರುಷರಿಗೆ ಹೆಚ್ಚು ಹೊತ್ತು ನಿಮಿರುವಿಕೆ (erection) 
ಈ ವಯಸ್ಸಿನಲ್ಲಿ ಹಾರ್ಮೋನ್ ಮಟ್ಟದಲ್ಲಿ ಕುಸಿತವಾಗುತ್ತದೆ. ಆದ್ದರಿಂದ ಶಿಶ್ನ ಥಟ್ಟನೆ ಸ್ಖಲನವಾಗಿ ನಿಮಿರುವಿಕೆ ಇಳಿಯುವುದಿಲ್ಲ. ಪುರುಷರಿಗೆ ವಯಸ್ಸಾದಂತೆ, ಅವರು ಸಾಮಾನ್ಯವಾಗಿ ನಿಮಿರುವಿಕೆಯನ್ನು ವಿಳಂಬಗೊಳಿಸಲು ಸಮರ್ಥರಾಗುತ್ತಾರೆ. ಲೈಂಗಿಕ ಅನುಭವವನ್ನು ಹೆಚ್ಚು ಸಂಪೂರ್ಣವಾಗಿ ಆನಂದಿಸಬಹುದು.
 

ಲ್ಯೂಬ್ರಿಕೆಂಟ್ ಬಳಸಬೇಕಾಗಬಹುದು (Lubricant)
40ರ ನಂತರ ನಿಮ್ಮ ಲೈಂಗಿಕ ಅಂಗಗಳು ಮೊದಲಿನಂತೆ ತೇವವಾಗುವುದಿಲ್ಲ. ಇದಕ್ಕೆ ಕಾರಣ ಹಾರ್ಮೋನ್‌ಗಳ ಕಡಿಮೆ ಸ್ರಾವ. ತೇವವಿಲ್ಲದಿದ್ದರೆ ಸೆಕ್ಸ್ ನೋವು ಉಂಟುಮಾಡಬಹುದು. ಕಿರಿಕಿರಿ, ರಕ್ತಸ್ರಾವವಾಗಬಹುದು. ಹೀಗಾಗಿ ಲ್ಯೂಬ್ರಿಕೆಂಟ್‌ಗಳನ್ನು ಬಳಸಿ.

ಲೈಂಗಿಕ ಕಾಯಿಲೆಗಳ ಅಪಾಯ (STD)
ಈ ವಯಸ್ಸಿನಲ್ಲಿ ಜನನ ನಿಯಂತ್ರಣದ ಅಗತ್ಯತೆ ಕಡಿಮೆಯಾಗುವುದು ಮತ್ತು ಯೋನಿ ಅಂಗಾಂಶಗಳು ತೆಳುವಾಗುವುದರಿಂದ ಇದು ಮಹಿಳೆಯರಲ್ಲಿ ಕೆಲವು ಸೋಂಕಿಗೆ ತುತ್ತಾಗುವಂತೆ ಮಾಡುತ್ತದೆ. ಗರ್ಭಧಾರಣೆಯ ಸಾಧ್ಯತೆಗಳು ಕಡಿಮೆ ಇದ್ದರೂ ಸಹ, ಹೊಸ ಸಂಗಾತಿಯೊಂದಿಗೆ ಕಾಂಡೋಮ್ ಬಳಸುವುದು ಆರೋಗ್ಯಕ್ಕೆ (health) ಪ್ರಮುಖವಾಗಿದೆ. 

Feelfree: ನನ್ನ ಗೆಳೆಯ ಥ್ರೀಸಮ್‌ಗೆ ಒತ್ತಾಯಿಸ್ತಾನೆ, ಏನು ಮಾಡಲಿ?

ನಿಮಿರುವಿಕೆಯ ಸಮಸ್ಯೆ
ಹಾರ್ಮೋನ್‌ಗಳ ಕಡಿಮೆ ಸ್ರಾವದ ಪರಿಣಾಮ, 40ರ ವಯಸ್ಸಿನಲ್ಲಿ ಪುರುಷರು ನಿಮಿರುವಿಕೆಯ ಸಮಸ್ಯೆಗಳನ್ನು ಕಾಣಬಹುದು. ನಿಮಿರುವಿಕೆ ನಿಧಾನವಾಗಬಹುದು, ಎರಡು ನಿಮಿರುವಿಕೆಗಳ ನಡುವಿನ ಅವಧಿ ಹೆಚ್ಚಬಹುದು. ವಯಾಗ್ರದಂಥ ಔಷಧಗಳನ್ನು ಅವಲಂಬಿಸುವ ಮೊದಲು, ಪುರುಷರು ತಮ್ಮ ಲೈಂಗಿಕ ಆರೋಗ್ಯವನ್ನು ಸುಧಾರಿಸುವ ಜೀವನಶೈಲಿಯ ಬದಲಾವಣೆಗಳನ್ನು ನೋಡಬೇಕು. ವ್ಯಾಯಾಮ ಮಾಡಬೇಕು ಅಥವಾ ಫ್ಲೇವೊನೈಡ್ ಭರಿತ ಆಹಾರಗಳನ್ನು (ಬ್ಲೂಬೆರ್ರಿ, ಕೆಂಪು ವೈನ್, ಚೆರ್ರಿ, ಮೂಲಂಗಿ) ಸೇವಿಸಬೇಕು. 
 

ಅನ್ಯೋನ್ಯತೆಯ ಹೆಚ್ಚಳ 
ಈ ಪ್ರಾಯದಲ್ಲಿ ಸಂಭೋಗ ಅದ್ಭುತವಾಗಿರಲಿದೆ. ಯಾಕೆಂದರೆ ನಿಮ್ಮ ನಡುವಿನ ಅನ್ಯೋನ್ಯತೆ ಹೆಚ್ಚಿರುವುದರಿಂದ. ನೀವು ಸಂತೋಷದ ಇತರ ಮಾರ್ಗಗಳನ್ನು ಅನ್ವೇಷಿಸುತ್ತಿರಬಹುದು. ಲೈಂಗಿಕತೆಯ ನೀವು ಇಷ್ಟಪಡುವ ಸಂಗತಿಗಳ ಮೇಲೆ ಹೆಚ್ಚು ಗಮನ ಹರಿಸಬಹುದು. ಪರಸ್ಪರ ಮುಷ್ಟಿಮೈಥುನದಂಥ ಕ್ರಿಯೆಗಳೂ ತುಂಬಾ ಆನಂದದಾಯಕವಾಗಿರುತ್ತವೆ. 

click me!