ಹುಡುಗಿಯರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸಮಸ್ಯೆ ಇದು. ಸಂಭೋಗದ ಮಧ್ಯೆ ಅಪ್‌ಸೆಟ್ ಆಗುವುದು, ಮೂಡ್ ಕಳೆದುಕೊಳ್ಳುವುದು..ಇದ್ಯಾಕೆ ಹೀಗೆ?
ಪ್ರಶ್ನೆ : ನಾನು ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದೇನೆ. ಆದರೆ ಈ ವಿಚಾರ ಹುಡುಗಿ ಮನೆಯಲ್ಲಾಗಲೀ, ನಮ್ಮ ಮನೆಯಲ್ಲಾಗಲೀ ಯಾರಿಗೂ ಗೊತ್ತಿಲ್ಲ. ಈಗ ಲಾಕ್‌ಡೌನ್‌ನಲ್ಲಿ ನಾವಿಬ್ಬರೂ ರೂಮ್‌ನಲ್ಲೇ ಇರುವ ಕಾರಣ ಹೆಚ್ಚು ಸಮಯ ಸಿಗುತ್ತೆ, ಹೆಚ್ಚು ಕ್ಲೋಸ್ ಆಗ್ತಿದ್ದೀವಿ. ನಮ್ಮಿಬ್ಬರ ನಡುವೆ ಜಗಳಗಳು ಕಡಿಮೆ, ಹೊಂದಾಣಿಕೆ ಚೆನ್ನಾಗಿದೆ. ಆದರೆ ನಾನು ಅವಳಲ್ಲಿ ಒಂದು ವಿಷಯ ಗಮನಿಸಿದ್ದೇನೆ. ಅವಳಿಗೆ ಶುರುವಿಗೆ ಸೆಕ್ಸ್ ಬಗ್ಗೆ ತುಂಬ ಆಸಕ್ತಿ ಇರುತ್ತದೆ. ಒಂದು ಹಂತದ ಬಳಿಕ ಸಡನ್ನಾಗಿ ಮೂಡ್ ಔಟ್ ಆಗಿ ಬಿಡುತ್ತದೆ. ನಾನೆಷ್ಟು ಪ್ರಯತ್ನಿಸಿದರೂ ಅವಳಿಗೆ ಪುನಃ ಮೂಡ್ ಬರೋದಿಲ್ಲ. ಎಷ್ಟೋ ಸಲ ಅವಳೇ ಸೆಕ್ಸ್‌ಗೆ ಮುಂದೆ ಬಂದು ನನ್ನ ಪ್ರಚೋದಿಸಿದ್ದಿದೆ. ಈ ಟೈಮ್‌ನಲ್ಲೂ ಅವಳಿಗೆ ಒಂದು ಹಂತದಲ್ಲಿ ಸಡನ್ನಾಗಿ ಇನ್ನೇನು ನಾವು ಕ್ರಿಯೆ ಶುರು ಮಾಡಬೇಕು ಅನ್ನುವ ಹೊತ್ತಲ್ಲಿ ಮೂಡ್ ಔಟ್ ಆಗಿ ಬಿಡುತ್ತೆ. ಆ ಹೊತ್ತಿಗೆ ಅವಳ ಮುಖದಲ್ಲಿ ಸಣ್ಣ ಆತಂಕ ಇರೋದನ್ನು ಗಮನಿಸಿದ್ದೇನೆ. ಅದೇನು ಅಂತ ತಿಳಿಯಲು ಎಷ್ಟು ಪ್ರಯತ್ನಿಸಿದರೂ ತಿಳಿಯೋದಿಲ್ಲ. ಜೊತೆಗೆ ನನಗೆ ಅವಳನ್ನು ಮದುವೆ ಆಗುವ ಆಸಕ್ತಿ ಇದೆ. ಆದರೆ ಅವಳು ಕೊನೇವರೆಗೂ ಹೀಗೇ ಇರೋಣ. ಮದುವೆ, ಮಕ್ಕಳು ಅಂತಾದ್ರೆ ಜವಾಬ್ದಾರಿಯಲ್ಲೇ ಲೈಫು ಮುಗಿದುಹೋಗುತ್ತೆ ಅಂತಿರುತ್ತಾಳೆ. ನಾನು ಅದಕ್ಕೂ ಒಪ್ಪಿಕೊಂಡಿದ್ದೇನೆ. ಅವಳನ್ನು ಬಹಳ ಪ್ರೀತಿಸುತ್ತೇನೆ. ಈ ಸಣ್ಣ ಕಾರಣಕ್ಕೆ ಅವಳನ್ನು ಬಿಡುವ ಯೋಚನೆಯಂತೂ ಖಂಡಿತಾ ಇಲ್ಲ. ಆದರೆ ಈ ಸಮಸ್ಯೆ ಬಗೆಹರಿಸಿ ಅವಳಿಗೂ ಆ ಸುಖ ಸಿಗುವ ಹಾಗಾಗಬೇಕು ಅನ್ನೋದು ನನ್ನ ಆಸೆಯಷ್ಟೇ.
#Feelfree: ಹಸ್ತಮೈಥುನ ಬಿಟ್ಟ ನಂತರ ದೇಹದಲ್ಲಿ ಏನಾಗುತ್ತೆ ಬದಲಾವಣೆ? ...
ಉತ್ತರ: ನೀವು ಹೇಳಿದ ಈ ಸಮಸ್ಯೆ ಕೇವಲ ಹುಡುಗಿಯರಲ್ಲಿ ಮಾತ್ರ ಅಲ್ಲ ಹುಡುಗರಲ್ಲೂ ಕಾಣಿಸಿಕೊಳ್ಳೋದಿದೆ. ಆದರೆ ಕಾರಣಗಳು ಒಬ್ಬೊಬ್ಬರಿಗೆ ಒಂದೊಂದು ಇರುತ್ತದೆ. ಹೆಚ್ಚಾಗಿ ಹುಡುಗರಲ್ಲಿ ಸ್ಟ್ರೆಸ್‌ಗೆ ಹೀಗಾಗುತ್ತೆ. ಶುರುವಿನಲ್ಲಿರುವ ಲೈಂಗಿಕ ಆಸಕ್ತಿ ಮಧ್ಯದಲ್ಲೆಲ್ಲೋ ಕಟ್ ಆಗಿ ಬಿಡುತ್ತೆ. ಆಮೇಲೆ ಎಷ್ಟೇ ಪ್ರಯತ್ನಿಸಿದರೂ ಆಸಕ್ತಿ ಬರೋದಿಲ್ಲ. ಹುಡುಗರಲ್ಲಿ ಈ ಸಮಸ್ಯೆ ಇದ್ದಾಗ ಸೂಕ್ಷ್ಮ ಮನಸ್ಸಿನ ಹುಡುಗಿಯರು ಇದಕ್ಕೆ ತಾವು ಕಾರಣ ಆಗಿರಬಹುದೇನೋ ಅಂತ ಒಳಗೊಳಗೇ ಕೊರಗೋದೂ ಇದೆ. ಜೊತೆಗೆ ಹುಡುಗರಲ್ಲಿ ತನ್ನಲ್ಲಿ ಲೈಂಗಿಕ ಶಕ್ತಿಯೇ ಇಲ್ಲ ಎಂದು ಭಾವಿಸಿ ಗಾಬರಿಯಾಗುವ ಗುಣ ಇದೆ. ಹುಡುಗಿಯರಲ್ಲೂ ಈ ಸಮಸ್ಯೆಗೆ ಅವರ ಒತ್ತಡದ ಜೊತೆಗೆ ಸಮಾಜದ ಬಗ್ಗೆ ಅವರಿಗಿರುವ ಭಯ, ಆತಂಕವೂ ಕಾರಣ. ಕೆಲವರು ಸಣ್ಣ ವಯಸ್ಸಲ್ಲಿ ಲೈಂಗಿಕ ದೌರ್ಜನ್ಯಕ್ಕೆ ತುತ್ತಾದವರಲ್ಲೂ ಈ ಸಮಸ್ಯೆ ಕಾಣಿಸಬಹುದು.
#Feelfree: ಕೊರೋನಾ ಕಾಲದ ಎಫೆಕ್ಟ್, ಸೆಕ್ಸ್ ಅಂದರೆ ಭಯ! ...
ಅವರ ಆತಂಕಕ್ಕೆ ಕಾರಣ ಏನು ಅಂತ ಒಬ್ಬ ಸ್ನೇಹಿತ ಕೇಳುವಂತೆ ಕೇಳಿ. ಮದುವೆ ಆಗೋದಿಲ್ಲ ಅಂತ ಅವರು ಹೇಳುತ್ತಾರೆ ಅಂತ ನೀವೇ ಹೇಳಿದಿರಿ. ಹೀಗಾಗಿ ಮದುವೆ ಆದ ಮೇಲೇ ಲೈಂಗಿಕತೆ ಇರಬೇಕು ಅನ್ನುವ ಬಗ್ಗೆ ಅವರಿಗೆ ನಂಬಿಕೆ ಇದ್ದ ಹಾಗಿಲ್ಲ. ಆದರೆ ಒಳಗೆಲ್ಲೋ ಬೆಳೆದ ಪರಿಸರ, ಮನೆಯ ವಾತಾವರಣವೂ ಅವರಲ್ಲಿ ಈ ಆತಂಕ ಕಾಣಲು ಕಾರಣ ಇರಬಹುದು. ಅವರ ಆತಂಕದ ಬಗ್ಗೆ ನೀವು ಸೂಕ್ಷ್ಮವಾಗಿ ತಿಳಿಯುತ್ತಾ ಹೋದರೆ ಸಮಸ್ಯೆಗೆ ಪರಿಹಾರ ಸಿಗುತ್ತೆ. ಸಿಗಲಿಲ್ಲ ಅಂತಾದ್ರೆ ಆನ್‌ಲೈನ್‌ನಲ್ಲೇ ಕೌನ್ಸಿಲಿಂಗ್ ಪಡೆಯುವಂತೆ ಹೇಳಬಹುದು. ಜೊತೆಗೆ ನಿತ್ಯ ವ್ಯಾಯಾಮ, ಪ್ರಾಣಾಯಾಮ, ಉತ್ತಮ ಆಹಾರ ಸೇವನೆಯೂ ಇರಲಿ. ಆಕೆಯ ಮನೆಯ ವಿಚಾರ ನೀವಿಲ್ಲಿ ತಿಳಿಸಿಲ್ಲ. ಆಕೆಯ ಮನೆಯವರು ಸಂಪ್ರದಾಯಸ್ಥರಾಗಿದ್ದರೆ ಅಥವಾ ಮನೆಮಂದಿಯಲ್ಲಿ ಯಾರಾದರೂ ವಿವಾಹ ಪೂರ್ವ ಲೈಂಗಿಕತೆಯನ್ನು ವಿರೋಧಿಸುವವರಿದ್ದಾರಾ ಅಂತ ಚೆಕ್ ಮಾಡಿಕೊಳ್ಳಿ. ಅಥವಾ ಆ ಕ್ರಿಯೆ ಮಾಡುವಾಗ ಅವರಿಗೆ ನೋವು, ಕಂಫರ್ಟ್ ಫೀಲ್ ಇಲ್ಲದಂಥಾ ಸಮಸ್ಯೆಯಾಗುತ್ತಾ ಅಂತಲೂ ತಿಳಿದುಕೊಳ್ಳಬಹುದು. ಎಷ್ಟೋ ಸಲ ಫ್ರೆಂಡ್ಲಿ ಆಗಿರುವ ಹುಡುಗರು ಲೈಂಗಿಕ ಕ್ರಿಯೆಯ ವೇಳೆ ಒರಟರಾಗಿ ನಡೆದುಕೊಳ್ಳೋದಿದೆ. ಅದು ನೋವು ತಂದಿರಬಹುದು. ಈ ಆಂಗಲ್‌ಗಳಲ್ಲಿ ಯೋಚನೆ ಮಾಡಿ ಅವರ ಸಮಸ್ಯೆ ಸರಿ ಮಾಡಬಹುದು ಅನಿಸುತ್ತೆ.
#Feelfree: ವೀರ್ಯ ಹೊಟ್ಟೆಗೆ ಹೋದರೆ ಗರ್ಭಿಣಿಯಾಗಬಹುದೇ? ...