ಲವ್-ಮರ್ಡರ್-ಮಿಸ್ಟರಿ ಸ್ಟೋರಿಗಳು ಇತ್ತೀಚಿಗೆ ತುಂಬಾ ಸಾಮಾನ್ಯವಾಗಿವೆ. ಅದರಲ್ಲೂ ಮೂವಿ, ವೆಬ್ ಸಿರೀಸ್ ನೋಡಿ ಜನ್ರು ಇತ್ತೀಚಿಗೆ ಕೊಲೆ ಮಾಡಲು ನಾನಾ ದಾರಿಗಳನ್ನು ಹುಡುಕಿಕೊಳ್ತಿದ್ದಾರೆ. ಹಾಗೆಯೇ ಇಲ್ಲೊಬ್ಬ ಯುವತಿ ತನ್ನ ಲವರ್‌ನ್ನು ಕೊಲ್ಲಲು ರೂಪಿಸಿದ ಪ್ಲಾನ್ ಎಲ್ಲರೂ ಬೆಚ್ಚಿಬೀಳುಂತೆ ಮಾಡಿದೆ.
ಡೆಹ್ರಾಡೂನ್: ಯುವತಿಯೊಬ್ಬಳು ತನ್ನ ಗೆಳೆಯನ ಜತೆಗೂಡಿ ಪ್ರಿಯಕರನನ್ನೇ ಹಾವಿನಿಂದ ಕಚ್ಚಿಸಿ ಕೊಲೆ ಮಾಡಿರುವ ಆಘಾತಕಾರಿ ಪ್ರಕರಣ ಉತ್ತರಾಖಂಡ್‌ನಲ್ಲಿ ನಡೆದಿದೆ. ಘಟನೆ ಬಳಿಕ ಪ್ರಿಯತಮೆ ತನ್ನ ಗೆಳೆಯನ ಜೊತೆ ನೇಪಾಳಕ್ಕೆ ಪರಾರಿಯಾಗಿದ್ದಾಳೆ. ಇಲ್ಲಿನ ರಾಂಪುರ ನಿವಾಸಿ ಅಂಕಿತ್ ಚೌಹಾಣ್ (32) ಮತ್ತು ಆರೋಪಿ ಮಹಿ ಡೇಟಿಂಗ್ ಮಾಡುತ್ತಿದ್ದರು. ಅಂಕಿತ್ ಯುವ ಉದ್ಯಮಿಯಾಗಿದ್ದು ಮಹಿಯನ್ನು ಪ್ರೀತಿಸುತ್ತದ್ದ. ಆದರೆ ಮಹಿಗೆ ಆತ ತನ್ನ ಜೀವನದಲ್ಲಿ ಹಸ್ತಕ್ಷೇಪ ಮಾಡುವುದು ಇಷ್ಟವಿರಲಿಲ್ಲ. ಹೀಗಾಗಿ ತನ್ನ ಇನ್ನೊಬ್ಬ ಸ್ನೇಹಿತನ ಜೊತೆ ಸೇರಿ ಅಂಕಿತ್‌ನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಳು.
ಜು.15 ರಂದು ಕಾರಿನ ಹಿಂಬದಿ ಸೀಟಲ್ಲಿ ಅಂಕಿತ್ ಶವವಾಗಿ ಪತ್ತೆಯಾಗಿದ್ದ. ಈ ವೇಳೆ ಕಾರಿನ ಏಸಿಯಿಂದ ಕಾರ್ಬಬ್ ಮೊನಾಕ್ಸೈಡ್ ಹೊರಹೊಮ್ಮುತ್ತಿದ್ದರಿಂದ ಆತ ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿದ್ದಾನೆ ಎಂದು ಭಾವಿಸಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ 2 ಕಾಲುಗಳಿಗೆ ಹಾವು (Snake) ಕಚ್ಚಿ ಅಂಕಿತ್ ಸಾವನ್ನಪ್ಪಿದ್ದಾಗಿ ತಿಳಿದು ಬಂದಿದ್ದು. ಬಳಿಕ ಅಂಕಿನ್‌ನ ಸೋದರಿ ನೀಡಿದ ದೂರಿನ ಆಧಾರದಲ್ಲಿ ತನಿಖೆ (Enquiry) ನಡೆಸಿದಾಗ ಮಹಿ, ಹಾವಾಡಿನೊಬ್ಬನಿಗೆ ಕರೆ ಮಾಡಿದ್ದು ಬೆಳಕಿಗೆ ಬಂದಿತ್ತು.
ಗಂಡ, ಇಬ್ಬರು ಮಕ್ಕಳನ್ನು ಬಿಟ್ಟು ಲವರ್ ಹುಡುಕಿಕೊಂಡು ಬಂದ ಮೇಕಪ್ ಆರ್ಟಿಸ್ಟ್ ದುರಂತ ಅಂತ್ಯ!
ಪೊಲೀಸರು ಆತನನ್ನು ಪತ್ತೆ ಮಾಡಿ ವಿಚಾರಣೆ ನಡೆಸಿದಾಗ ಮಹಿ ಮನೆಗೆ ಅಂಕಿತ್ ಭೇಟಿ ನೀಡಿದಾಗ ಆತನ ಕಾಲಿಗೆ ಎರಡು ಬಾರಿ ಹಾವಿನಿಂದ (Snake) ಕಡಿಸಿದ್ದೆ. ಇದಕ್ಕಾಗಿ ಮಹಿ ನನಗೆ 10000 ನೀಡಿದ್ದಳು ಎಂದು ಹಾವಾಡಿಗ ಒಪ್ಪಿಕೊಂಡಿದ್ದಾನೆ. ಅಂಕಿತ್‌ಗೆ ಕುಡಿತದ ಚಟ ಇದ್ದ ಕಾರಣ, ಆತ ಕುಡಿದ ಮತ್ತಿನಲ್ಲಿ ಇದ್ದಾಗ ಹಾವಿನಿಂದ ಕಡಿಸಿರಬಹುದು ಎನ್ನಲಾಗಿದೆ. ಇದಾದ ಬಳಿಕ ಆತನ ದೇಹ (Body)ವನ್ನು ಕಾರಿನಲ್ಲಿಟ್ಟು ಆಕಸ್ಮಿಕ ಸಾವಿನ ಸಂಚು ರೂಪಿಸಲಾಗಿತ್ತು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಹಿಂದೆ ಕೇರಳದಲ್ಲೂ ಇಂಥಹದ್ದೇ ಘಟನೆಯೊಂದು ನಡೆದಿತ್ತು.
ವಿಷಸರ್ಪ ಕಚ್ಚಿಸಿ ಮಡದಿಯನ್ನೇ ಸಾಯಿಸಿದ್ದ, ತನಿಖೆಯಿಂದ ಬಯಲಾಗಿತ್ತು ಸತ್ಯ
ಕೇರಳದಲ್ಲೊಬ್ಬ ವ್ಯಕ್ತಿ ವರ್ಷಗಳ ಹಿಂದೆ ವಿಷಸರ್ಪದಿಂದ ಕಚ್ಚಿಸಿ ಮುದ್ದಿನ ಮಡದಿಯನ್ನೇ ಸಾಯಿಸಿದ್ದ. ಒಂದು ಸಾರಿ ಹಾವು ಕಚ್ಚಿಸಿ ಆಕೆ ಬದುಕುಳಿದಾಗ ಆಸ್ಪತ್ರೆಯಲ್ಲಿ ಆಕೆಯ ಆರೈಕೆ ಮಾಡಿದಂತೆ ನಟಿಸಿದ್ದ. ಮತ್ತೆ ಹಾವನ್ನು ತರಿಸಿ ಆಕೆಯನ್ನು ಸಾಯಿಸಿದ್ದ ಅಳುತ್ತಾ ನಿಂತಿದ್ದ ಗಂಡನೇ ಕೊಲೆ ಮಾಡಿದ್ದಾನೆಂಬ ರಹಸ್ಯ ವಾರಗಳ ತನಿಖೆಯ ನಂತರವಷ್ಟೇ ಬಯಲಿಗೆ ಬಂದಿತ್ತು.
'ಒಮ್ಮೆ ಶರಣಾದ್ರೆ ಪ್ರೀತಿಗೆ, ಕತ್ತು ಕೊಟ್ಟಂಗೆ ಕತ್ತಿಗೆ..' ಮೂರೇ ತಿಂಗಳ ಪ್ರೀತಿಗೆ ನೂರ್ಕಾಲದ ಬದುಕು ಕಳೆದುಕೊಂಡ್ರು!
ಕೇರಳದಲ್ಲಿ 2020ರಲ್ಲಿ ಈ ಘಟನೆ ನಡೆದಿತ್ತು. ಕೊಲ್ಲಂ ನಿವಾಸಿ ಸೂರಜ್ ನಾಗರಹಾವನ್ನು ಬಳಸಿ ಪತ್ನಿಯನ್ನು ಕೊಲೆಗೈದಿದ್ದ. ಈ ವಿಚಾರ ದೇಶಾದ್ಯಂತ ಭಾರೀ ಚರ್ಚೆಯನ್ನು ಹುಟ್ಟು ಹಾಕಿತ್ತು. ಇದು ಸ್ವಾಭಾವಿಕ ಹಾವು ಕಡಿತದಿಂದ ಉಂಟಾದ ಸಾವು ಎಂದೇ ಮೊದಲು ಅಂದುಕೊಳ್ಳಲಾಗಿತ್ತು. ಆದರೆ ತನಿಖೆ (Investigation) ಮಾಡುತ್ತಾ ಹೋದಂತೆ ಎಲ್ಲವೂ ಬಯಲಾಗುತ್ತಾ ಹೋಯಿತು. ಪತ್ನಿಯ ಸಾವಿನಿಂದ ಅಳುತ್ತಾ ನಿಂತಿದ್ದ ಗಂಡನೇ ಆಕೆಯ ಸಾವಿನ ಹಿಂದಿದ್ದ ಎಂಬುದು ಬಯಲಾಯ್ತು. ಪತ್ನಿಯನ್ನು ಕೊಲೆ (Murder) ಮಾಡಲು ಸೂರಜ್ ಹಾವನ್ನು ಬಳಸಿದ್ದ. ವಿಷಸರ್ಪವನ್ನು ಬಳಸಿ ಆಕೆಯ ಜೀವ ತೆಗೆದಿದ್ದ.
ಘಟನೆಯ ವಿವರ:
ಕೊಲ್ಲಂ ಜಿಲ್ಲೆಯ ಅಂಚಲಾ ಎಂಬಲ್ಲಿ 25 ವರ್ಷದ ಉತ್ತರಾ, ಮೇ 7, 2020ರಂದು ಗಂಡನ (Husband) ಮನೆಯಲ್ಲಿ ಮಲಗಿದ್ದಲ್ಲಿಯೇ ಹಾವು ಕಡಿತದಿಂದ ಮೃತಪಟ್ಟಿದ್ದರು. ಆಕೆ ಮಲಗಿದ್ದಲ್ಲಿಯೇ ಹಾವು ಬಂದು ಕಚ್ಚಿ ಆಕೆಯ ಸಾವಾಗಿತ್ತು. ಆಕೆಗೆ ಈ ಹಿಂದೆಯೂ ಒಂದು ಸಾರಿ ಹಾವು ಕಚ್ಚಿ ಆಸ್ಪತ್ರೆಗೆ (Hospital) ದಾಖಲಾಗಿ ಚೇತರಿಸಿಕೊಂಡು ಬಂದಿದ್ದರು. ಹೀಗಾಗಿ ಜನರು ಸರ್ಪದೋಷದಿಂದಲೇ ಹೀಗಾಗಿದೆ ಎಂದು ಮಾತನಾಡಿಕೊಂಡಿದ್ದರು. ಆಕೆಯ ಸಾವು ಸಾಕಷ್ಟು ಪ್ರಶ್ನೆಗಳನ್ನು ಬಳಸಿಕೊಂಡು ನಿಗೂಢವಾಗಿಯೇ ಉಳಿದಿತ್ತು. ಆದರೆ ಉತ್ತರಾ ಪೋಷಕರು ಗಂಡನ ಕೈವಾಡವಿರುವುದರ ಬಗ್ಗೆ ಆರೋಪಿಸಿದರು. ಪೊಲೀಸರು ತನಿಖೆ ನಡೆಸಿದಾಗ ನಿಜಾಂಶ ಬೆಳಕಿಗೆ ಬಂದಿದೆ.