ಮಕ್ಕಳ ಪಾಲನೆ ಸುಲಭದ ಕೆಲಸವಲ್ಲ. ಮಕ್ಕಳನ್ನು ಆಜ್ಞೆ ಮೂಲಕ ಬೆಳೆಸೋದು ಕಷ್ಟ. ಇದು ಮಕ್ಕಳನ್ನು ಮತ್ತಷ್ಟು ಮೊಂಡು ಮಾಡುತ್ತೆ. ಪಾಲಕರು ಹೇಳಿದಂತೆ ಮಕ್ಕಳು ಕೇಳ್ಬೇಕೆಂದ್ರೆ ಒಂದೇ ಒಂದು ವಿಧಾನ ಪಾಲಿಸಬೇಕು.
ಬೆಳಿಗ್ಗೆ ಎದ್ದ ತಕ್ಷಣ ಅಪ್ಪ – ಅಮ್ಮಂದಿರ ಕಿರುಚಾಟ ಶುರುವಾಗುತ್ತೆ. ಕಚ್ಚಾಟ ದಂಪತಿ ಮಧ್ಯೆ ಇರೋದಿಲ್ಲ, ಮಕ್ಕಳ ಮೇಲಿರುತ್ತೆ. ಶಾಲೆಗೆ ಹೋಗುವ ಮಕ್ಕಳು ಮನೆಯಲ್ಲಿದ್ರೆ ಅವರನ್ನು ಸಿದ್ಧಪಡಿಸೋದೇ ದೊಡ್ಡ ತಲೆನೋವು ಪಾಲಕರಿಗೆ. ಬೆಳಿಗ್ಗೆ ಹಾಸಿಗೆಯಿಂದ ಏಳುವಾಗ್ಲೇ ಕಿರಿಕಿರಿ ಶುರು. ಹಾಸಿಗೆಯಿಂದ ಎದ್ದೇಳು, ಸ್ಕೂಲಿಗೆ ಲೇಟ್ ಆಗುತ್ತೆ ಎನ್ನುವ ರಾಗ ಮಕ್ಕಳು ಸ್ಕೂಲಿಗೆ ಹೋದ್ಮೇಲೆ ತಣ್ಣಗಾಗುತ್ತೆ. ಬ್ರೆಷ್ ಮಾಡು, ಸ್ನಾನ ಮಾಡು, ತಿಂಡಿ ತಿನ್ನು ಹೀಗೆ ಒಂದೊಂದು ವಿಷ್ಯವನ್ನೂ ಮಕ್ಕಳಿಗೆ 10 ರಿಂದ 15 ಬಾರಿ ಹೇಳ್ಬೇಕು. ಒಂದ್ಕಡೆ ಅಪ್ಪ- ಅಮ್ಮ ಹೇಳ್ತಾನೆ ಇರ್ತಾರೆ ಇನ್ನೊಂದು ಕಡೆ ಮಕ್ಕಳು ತಮ್ಮ ಕೆಲಸ ಮಾಡ್ತಾನೆ ಇರ್ತಾರೆ.
ಇದು ಬರೀ ಸಣ್ಣ ಮಕ್ಕಳಿ (Children) ಗೆ ಅನ್ವಯವಾಗೋದಿಲ್ಲ, ಹೈಸ್ಕೂಲ್, ಕಾಲೇಜ್ ಗೆ ಹೋಗುವ ಮಕ್ಕಳು ಕೂಡ ನಾಲ್ಕೈದು ಬಾರಿ ಪಾಲಕರ ಬಳಿ ಹೇಳಿಸ್ಕೊಂಡ್ಮೇಲೆ, ಬೈಸಿ ಕೊಂಡ್ಮೇಲೆ ಕೆಲಸ ಮಾಡ್ತಾರೆ. ಮಕ್ಕಳ ನಿತ್ಯದ ಕೆಲಸ ಮಾತ್ರವಲ್ಲ ಓದು, ಆಟ, ಶಿಸ್ತು ಸೇರಿ ಎಲ್ಲದ್ರಲ್ಲೂ ಪಾಲಕರು ಬರ್ಬೇಕು. ಪದೇ ಪದೇ ಹೇಳ್ಬೇಕು. ಎಷ್ಟು ಹೇಳಿದ್ರೂ ಮಕ್ಕಳು ಸ್ಪಂದಿಸುತ್ತಿಲ್ಲ..ನಮ್ಮ ಜೊತೆ ಮಕ್ಕಳು ಕನೆಕ್ಟ್ ಆಗ್ತಿಲ್ಲ.. ನಮ್ಮ ಮನೆ (House) ಯಲ್ಲೂ ಹೀಗೆ ಆಗ್ತಿದೆ ಅಂದ್ರೆ ಇನ್ಮುಂದೆ ನಿಮ್ಮ ಟೆಕ್ನಿಕ್ ಬದಲಿಸಿ.
ಸೆಕ್ಸ್ ನಂತರ ಅಳುವ ಹೆಣ್ಣು: ಸಾಮೀಪ್ಯ, ಸುರಕ್ಷತೆ, ತಲ್ಲೀನತೆಯ ಭಾವದ ಅನುಭವವೇ?
ಅಡುಗೆ ಮನೆಯಲ್ಲಿ ನಿಂತೋ, ಬೆಡ್ ರೂಮಿನಲ್ಲಿ ನಿಂತೋ, ಬಾಲ್ಕನಿಯಲ್ಲಿರುವ, ಬಾತ್ ರೂಮಿನಲ್ಲಿರುವ ನಿಮ್ಮ ಮಕ್ಕಳಿಗೆ ಸೂಚನೆ ನೀಡಿದ್ರೆ ಪ್ರಯೋಜನವಿಲ್ಲ. ನೀವು ಎಷ್ಟೇ ಬಾರಿ ಸೂಚನೆಯನ್ನು ಪುನರಾವರ್ತನೆ ಮಾಡಿದ್ರೂ ಮಕ್ಕಳು ಇದನ್ನು ಕೇಳೋದಿಲ್ಲ. ನಿಮ್ಮ ಮಕ್ಕಳು ನೀವು ಹೇಳಿದ ಕೆಲಸವನ್ನು ಫಟ್ ಅಂತಾ ಮಾಡ್ಬೇಕು ಅಂದ್ರೆ ನೀವು ಮೊದಲು ಬದಲಾಗ್ಬೇಕು. ನೀವು ಮಕ್ಕಳಿಗೆ ಹೇಳುವ ವಿಧಾನ ಬದಲಾಗಬೇಕು.
ಸ್ಪರ್ಶ (Touch) ಹಾಗೂ ಐ ಕಾಂಟೆಕ್ಟ್ ಗಿರುವ ಶಕ್ತಿ, ಪುನಾರಾವರ್ತನೆ ಮಾಡುವ ಮಾತಿಗಿರೋದಿಲ್ಲ. ಹಾಗಾಗಿ ನೀವು ಮಕ್ಕಳನ್ನು ಸ್ಪರ್ಶಿಸಿ ಏನು ಹೇಳ್ಬೇಕು ಎಂಬುದನ್ನು ಹೇಳಿ. ದೂರದಿಂದ ನೀವು ಆಡಿದ ಮಾತು ಮಕ್ಕಳನ್ನು ಸಂಪರ್ಕಿಸೋದಿಲ್ಲ. ಅದು ಬರೀ ಸೂಚನೆಯಾಗಿರುತ್ತದೆ. ಹಾಗಾಗಿ ಮಕ್ಕಳು ನೀವು ಹೇಳಿದಂತೆ ಕೇಳೋದಿಲ್ಲ.
ಉದಾಹರಣೆಗೆ ನಿಮಗೆ ಮಗು ತಿಂಡಿ ತಿನ್ನಲು ಬರ್ಬೇಕು ಎಂದಾದರೆ ನೀವು ದೂರದಲ್ಲಿ ನಿಂತು, ಊಟಕ್ಕೆ ಬಾ ಅಂತಾ ಕರಿಯಬೇಡಿ. ಮೊದಲು ಮಗು ಎಲ್ಲಿದೆ ಅಲ್ಲಿಗೆ ಹೋಗಿ. ನಿಮ್ಮ ಕೈಗಳನ್ನು ಮಗುವಿನ ಭುಜದ ಮೇಲಿಡಿ. ನಂತ್ರ ಕಣ್ಣಿನಲ್ಲಿ ಕಣ್ಣಿಟ್ಟು ಮಗುವಿಗೆ ಊಟಕ್ಕೆ ಬರುವಂತೆ ಹೇಳಿ. ನಿಮ್ಮ ಸೂಚನೆ ಗೌರವಯುತವಾಗಿರಲಿ. ನಿಮ್ಮ ಸ್ಪರ್ಶದಲ್ಲಿ ಬಲವಿರಬಾರದು, ಪ್ರೀತಿ ಇರಬೇಕು. ಹಾಗೇ ನಿಮ್ಮ ಸೂಚನೆ ದೃಢವಾಗಿರಲಿ. ಇದು ಬರೀ ನಿಮ್ಮ ಸಣ್ಣ ಮಕ್ಕಳಿಗೆ ಮಾತ್ರ ಅನ್ವಯವಾಗೋದಿಲ್ಲ. ಮನೆಯಲ್ಲಿರುವ ಎಲ್ಲರ ಜೊತೆ ನೀವು ಈ ಟೆಕ್ನಿಕ್ ಬಳಸಬಹುದು.
ಬ್ಯೂಟಿ ಟಿಪ್ಸ್ ಹೇಳಿ, ಪತಿಯೊಂದಿಗೆ ಅಡುಗೆ ಮಾಡಿದ ಅದಿತಿ ಪ್ರಭುದೇವ್!
ಇನ್ಸ್ಟಾಗ್ರಾಮ್ ಬಳಕೆದಾರರೊಬ್ಬರು ಪಾಲಕರಿಗೆ ಸ್ಪರ್ಶ ಹಾಗೂ ಐ ಕಾಂಟೆಕ್ಟ್ ನಲ್ಲಿ ಮಕ್ಕಳಿಗೆ ಸೂಚನೆ ನೀಡಿದ್ರೆ ಅವರು ಬೇಗ ಕೆಲಸ ಮಾಡ್ತಾರೆ, ನಿಮ್ಮ ಸಂಪರ್ಕಕ್ಕೆ ಬರ್ತಾರೆ ಎಂಬ ಮಾಹಿತಿ ನೀಡಿದ್ದಾರೆ. ಇದ್ರಿಂದ ಮ್ಯಾಜಿಕ್ ಆಗುತ್ತೆ ಅಂತಾ ಅವರು ವಿವರಿಸಿದ್ದಾರೆ. ಇನ್ಸ್ಟಾಗ್ರಾಮ್ ವಿಡಿಯೋಕ್ಕೆ ಸಾಕಷ್ಟು ಕಮೆಂಟ್ ಬಂದಿದೆ. ಪಾಲಕರು ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ. ಮಕ್ಕಳು, ವಯಸ್ಕರಂತೆ ಮೇಲಾಧಿಕಾರಿಗಳು ಹಾಗೂ ಅವರ ಆಜ್ಞೆಯನ್ನು ಇಷ್ಟಪಡೋದಿಲ್ಲ. ಅವರಿಗೆ ಸ್ವಲ್ಪ ಗೌರವ ನೀಡಿದ್ರೆ ಅವರು ನಿಮ್ಮನ್ನು ನೋಡುವ ದೃಷ್ಟಿಯೇ ಬದಲಾಗುತ್ತೆ ಎನ್ನುತ್ತಾರೆ ಬಳಕೆದಾರರು.ಇದಕ್ಕೆ ಯಾವುದೇ ವಯಸ್ಸಿನ ಮಿತಿಯಿಲ್ಲ. ಇದು ಎಲ್ಲ ವಯಸ್ಸಿನ ಜನರಿಗೆ ಅನ್ವಯವಾಗುತ್ತೆ ಎನ್ನುತ್ತಾರೆ ಇನ್ನೊಬ್ಬ ಬಳಕೆದಾರರು.