
ಯಾವುದೇ ಅಪರಿಚಿತ ವ್ಯಕ್ತಿ ಭೇಟಿಯಾದಾಗ ಮೊದಲು ಅವರ ಹೆಸರು ಕೇಳ್ತೇವೆ. ನಂತ್ರ ನಮ್ಮ ಹೆಸರು ಹೇಳ್ತೇವೆ. ಅದ್ರಲ್ಲೂ ಪ್ರೀತಿ, ಪ್ರೇಮದ ಸಂಬಂಧ ಬೆಳೆಸುವ ಮೊದಲು ಹೆಸರು ಮಾತ್ರವಲ್ಲ ಅವರ ಜಾತಕ ಜಾಲಾಡುವವರಿದ್ದಾರೆ. ಕೆಲವೊಮ್ಮೆ ಒಬ್ಬ ವ್ಯಕ್ತಿಯ ಜೊತೆ ಗಂಟೆಗಟ್ಟಲೆ ಮಾತನಾಡಿರ್ತೇವೆ. ಆದ್ರೆ ಹೆಸರು ಕೇಳಿರೋದಿಲ್ಲ. ಮತ್ತೆ ಕೆಲವೊಮ್ಮೆ ಹೆಸರು ಕೇಳಿರ್ತೇವೆ, ಅವರು ಹೇಳಿರ್ತಾರೆ. ಆದ್ರೆ ಅದು ನೆನಪಿನಲ್ಲಿರೋದಿಲ್ಲ. ಮತ್ತೆ ಯಾವಾಗ್ಲೋ ಅವರು ಸಿಕ್ಕಾಗ ಅವರು ಹೆಸರೇನು ಅಂತಾ ತಲೆಕೆಡಿಸಿಕೊಳ್ಳೋದಿದೆ.
ಮತ್ತೆ ಕೆಲವರಿಗೆ ಎಷ್ಟು ಬಾರಿ ನಮ್ಮ ಹೆಸರು ಹೇಳಿದ್ರೂ ಉಚ್ಚರಿಸೋಕೆ ಬರಲ್ಲ, ಇಲ್ಲ ನೆನಪಿರೋದಿಲ್ಲ. ಆಗ ಅವರು ನಮ್ಮನ್ನು ಬೇರೆ ಹೆಸರಿ (Name) ನಿಂದ ಕರೆಯುತ್ತಾರೆ. ಇನ್ನು ಕೆಲವರು ಸಹವಾಸ ಬೇಡ ಅಂತಾ ಅವರೇ ನಮಗೆ ನಾಮಕರಣ ಮಾಡಿರ್ತಾರೆ. ಅಪರೂಪಕ್ಕೆ ಸಿಗುವ ವ್ಯಕ್ತಿಗಳ ಹೆಸರು ಕನ್ಫ್ಯೂಜ್ ಆಗೋದು ಸಾಮಾನ್ಯ. ಆದರೆ ಬಾಯ್ ಫ್ರೆಂಡ್ (BoyFriend ) ಹೆಸರು ಮರೆತ್ರೆ ಹೇಗೆ ಸ್ವಾಮಿ?. ಇಲ್ಲೊಬ್ಬ ಮಹಿಳೆಗೆ ನಾಲ್ಕು ತಿಂಗಳಿಂದ ಡೇಟ್ ಮಾಡ್ತಿದ್ದ ವ್ಯಕ್ತಿ ಹೆಸರೇ ಗೊತ್ತಿಲ್ಲವಂತೆ. ಆಕೆ ತನ್ನ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ಆಕೆ ಪೋಸ್ಟ್ (Post) ವೈರಲ್ ಆಗಿದೆ. ನಾಲ್ಕು ತಿಂಗಳ ಕಾಲ ಗೆಳೆಯನ ಹೆಸರು ತಿಳಿಯದೆ ಡೇಟಿಂಗ್ ಮಾಡಿದ್ದೇನೆ ಎಂದು ಮಹಿಳೆ ಹೇಳಿದ್ದಾಳೆ. ಮಹಿಳೆಗೆ ತನ್ನ ಬಾಯ್ ಫ್ರೆಂಡ್ ಹೆಸರಿನಲ್ಲಿ ಕನ್ಫ್ಯೂಜ್ ಇತ್ತಂತೆ. ಆತನ ಹೆಸರು ಪ್ಯಾಟ್ರಿಕ್ ಅಥವಾ ರಿಚರ್ಡ್ ಎರಡರಲ್ಲಿ ಒಂದು ಎಂಬುದು ಆಕೆಗೆ ಗೊತ್ತಿತ್ತು. ಆದ್ರೆ ಎರಡರಲ್ಲಿ ಯಾವುದು ಆತನ ಹೆಸರು ಎಂಬುದನ್ನು ತಿಳಿಯಲು ಸಾಕಷ್ಟು ಪ್ರಯತ್ನಪಟ್ಟಿದ್ದಾಳೆ. ಕೊನೆಯದಾಗಿ ಆತನ ಕಾರಿನ ಡಾಕ್ಯುಮೆಂಟ್ ಸಿಕ್ಕಿದ್ದು, ಅದ್ರಲ್ಲಿ ಆತನ ಹೆಸರನ್ನು ಪತ್ತೆ ಮಾಡಿದ್ದಾಳೆ.
ಕೆಲಸಕ್ಕೆ ಹೋಗೋ ಅಮ್ಮಂದಿರ ಮಕ್ಕಳ ವ್ಯಕ್ತಿತ್ವ ಹೇಗಿರುತ್ತೆ? ಅಮ್ಮನಂತೆ ಸ್ಟ್ರಾಂಗು ಗುರು
ರೆಡ್ಡಿಟ್‌ನಲ್ಲಿ ಮಹಿಳೆ ಈ ವಿಷ್ಯವನ್ನು ಹಂಚಿಕೊಂಡಿದ್ದಾಳೆ. ನಾಲ್ಕು ತಿಂಗಳ ಡೇಟಿಂಗ್ ನಂತರ ನನ್ನ ಗೆಳೆಯನ ಹೆಸರನ್ನು ನಾನು ಕಂಡುಕೊಂಡೆ. ಅವನ ಹೆಸರು ಪ್ಯಾಟ್ರಿಕಾ ಇಲ್ಲ ರಿಚರ್ಡಾ ಎಂಬುದು ನನಗೆ ಖಚಿತವಾಗಿರಲಿಲ್ಲ. ಹಾಗಾಗಿ ನಾನು ಅವನ ಹೆಸರು ಹಿಡಿದು ಕರೆದಿರಲಿಲ್ಲವೆಂದು ಆಕೆ ಬರೆದಿದ್ದಾಳೆ. ಇಂಟರ್ನೆಟ್ ಅಥವಾ ಫೇಸ್ಬುಕ್ ಇರದ ಸಮಯವದು. ಹಾಗಾಗಿ ನಾನು ಅವನ ಹೆಸರನ್ನು ಹುಡುಕಲು ಸಾಕಷ್ಟು ಕಷ್ಟಪಡಬೇಕಾಯ್ತು. ಕೊನೆಯಲ್ಲಿ ಕಾರಿನಲ್ಲಿದ್ದ ವಿಮಾ ಕಾರ್ಡ್ ಅನ್ನು ಪರಿಶೀಲಿಸಿದ ನಂತರ ನಾನು ಅಂತಿಮವಾಗಿ ಆತನ ಹೆಸರು ಪತ್ತೆ ಹಚ್ಚಿದೆ ಎನ್ನುತ್ತಾಳೆ ಮಹಿಳೆ. ಗೆಳೆಯನ ಹೆಸರು ತಿಳಿದ ನಂತ್ರ ಶೀಘ್ರವೇ ನಿಶ್ಚಿತಾರ್ಥ ಮಾಡಿಕೊಂಡ್ವಿ. ನಂತ್ರ ಮದುವೆಯಾಯ್ತು ಎಂದು ಮಹಿಳೆ ಬರೆದಿದ್ದಾಳೆ. ಕೊನೆಯಲ್ಲಿ ನಮ್ಮಿಬ್ಬರ ಮದುವೆ ವಿಚ್ಛೇದನದಲ್ಲಿ ಕೊನೆಯಾಯ್ತು ಎಂಬುದನ್ನೂ ಹೇಳಿದ್ದಾಳೆ. ಈಗ ಆಕೆ ಆತನನ್ನು ಬೇರೆ ಹೆಸರಿನಿಂದ ಕರೆಯುತ್ತಾಳಂತೆ.
ಮಗನಿಗೆ ಮಾತ್ರವಲ್ಲ, ಅವನ ಫ್ರೆಂಡ್‌ಗೂ ಲಂಚ್ ಬಾಕ್ಸ್ ಕಳುಹಿಸೋ ಅಮ್ಮನಿಗೆ ಚಪ್ಪಾಳೆ!
ಸಾಮಾಜಿಕ ಜಾಲತಾಣದಲ್ಲಿ ವೈರಲ್ : ರೆಡ್ಡಿಟ್ ನಲ್ಲಿ ಪೋಸ್ಟ್ ಆದ ಈ ಪೋಸ್ಟ್, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಳಕೆದಾರರು ಸಾಕಷ್ಟು ಕಮೆಂಟ್ ಮಾಡಿದ್ದಾರೆ. ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ನನ್ನನ್ನು ಜೋ ಎಂದು ಕರೆಯುವ ಸಹೋದ್ಯೋಗಿಯೊಬ್ಬನನ್ನು ನಾನು ಹೊಂದಿದ್ದೇನೆ. ಅದು ನನ್ನ ಹೆಸರಲ್ಲ. ಆದ್ರೂ ಆತ ನನ್ನನ್ನು ಹಾಗೆ ಕರೆದ್ರೆ ನಾನು ಅದಕ್ಕೆ ವಿರೋಧ ವ್ಯಕ್ತಪಡಿಸೋದಿಲ್ಲ. ಆತ ವಾರದಲ್ಲಿ ಒಂದೆರಡು ಬಾರಿ ನನಗೆ ಸಿಗ್ತಾನೆ ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಕೆಲವರು ಹೆಸರಿನ ವಿಷ್ಯಕ್ಕೆ ಕೆಟ್ಟವರಾಗಿರ್ತಾರೆಂದು ಮಹಿಳೆಯೊಬ್ಬಳು ಕಮೆಂಟ್ ಮಾಡಿದ್ದಾಳೆ. ನನ್ನ ಪತಿ ನನ್ನ ಸ್ನೇಹಿತೆ ನ್ಯಾನ್ಸಿ ಯನ್ನು ಎರಡು ವರ್ಷಗಳ ಕಾಲ ಸುಝೇನ್ ಎಂದು ಕರೆದರು. ನಾವು ಅದರ ಬಗ್ಗೆ ನಗುತ್ತಿದ್ದೆವು ಎಂದಿದ್ದಾಳೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.