ಹಗಲಲ್ಲಿ ನ್ಯಾಯಾಧೀಶ..ರಾತ್ರಿಯಾದ್ರೆ ಪೋರ್ನ್‌ ಸ್ಟಾರ್‌, ಸೆಕ್ಸ್‌ ಫಿಲ್ಮ್‌ನಲ್ಲಿ ನಟಿಸುತ್ತಿದ್ದ ಜಡ್ಜ್‌ ವಜಾ!

Published : Mar 29, 2023, 09:17 AM IST
ಹಗಲಲ್ಲಿ ನ್ಯಾಯಾಧೀಶ..ರಾತ್ರಿಯಾದ್ರೆ ಪೋರ್ನ್‌ ಸ್ಟಾರ್‌, ಸೆಕ್ಸ್‌ ಫಿಲ್ಮ್‌ನಲ್ಲಿ ನಟಿಸುತ್ತಿದ್ದ ಜಡ್ಜ್‌ ವಜಾ!

ಸಾರಾಂಶ

ರಜೆಯನ್ನು ಕಳೆಯುವ ರೀತಿ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಕೆಲವರು ರೆಸ್ಟ್ ಮಾಡಲು ಬಯಸಿದರೆ, ಇನ್ನು ಕೆಲವರು ಟ್ರಾವೆಲ್ ಮಾಡಲು ಇಷ್ಟಪಡುತ್ತಾರೆ. ಮತ್ತೆ ಕೆಲವರು ತಮ್ಮ ಹವ್ಯಾಸಗಳಿಗೆ ಪ್ರಾಮುಖ್ಯತೆ ನೀಡುತ್ತಾರೆ. ಆದ್ರೆ ಇಲ್ಲೊಬ್ಬ ಭೂಪ ಮಾತ್ರ ತಾನು ರಜೆಯನ್ನು ಕಳೆಯುತ್ತಿದ್ದ ವಿಚಿತ್ರ ರೀತಿಗೆ ಕೆಲಸವನ್ನೇ ಕಳ್ಕೊಂಡಿದ್ದಾನೆ.

ವಿಚಿತ್ರ ಘಟನೆಗಳು ನಡೆಯೋ ಜಗತ್ತಿನಲ್ಲಿ ನಾವಿದ್ದೇವೆ. ಇಲ್ಲಿ ಆಗೊಮ್ಮೆ ಈಗೊಮ್ಮೆ ಹೀಗೂ ಮಾಡ್ತಾರಾ ಅಂತನಿಸೋ ರೀತಿಯ ವಿಚಿತ್ರ ಘಟನೆಗಳು, ವ್ಯಕ್ತಿಗಳು ಎದುರಾಗುತ್ತಲೇ ಇರುತ್ತಾರೆ. ಹಾಗೆಯೇ ಅಮೇರಿಕಾದಲ್ಲೊಬ್ಬ ವ್ಯಕ್ತಿ ಜವಾಬ್ದಾರಿಯುತ ಕೆಲಸದಲ್ಲಿದ್ದು ಬೇಜವಾಬ್ದಾರಿ ಕೆಲಸ ಮಾಡಿದ್ದಾನೆ. ತಾನು ಮಾಡಿದ ತಪ್ಪಿಗೆ ತನ್ನ ಕೆಲಸವನ್ನೇ ಕಳ್ಕೊಂಡಿದ್ದಾನೆ. ರಜೆ ಅವಧಿಯಲ್ಲಿ ಜನರು ಟ್ರಾವೆಲ್‌, ರೆಸ್ಟ್‌ ಮಾಡಬೇಕೆಂದು ಬಯಸುತ್ತಾರೆ. ಆದರೆ ಇಲ್ಲೊಬ್ಬ ರಜೆಯಲ್ಲಿ ನೀಲಿಚಿತ್ರಗಳಲ್ಲಿ ನಟಿಸುತ್ತಿದ್ದನಂತೆ. ಆದರೆ ಸುದ್ದಿ ಇಷ್ಟೇ ಅಲ್ಲ, ಈತನೊಬ್ಬ ನ್ಯಾಯಾಧೀಶ. ಹೀಗಾಗಿಯೇ ಈತ ತನ್ನ ಕೆಲಸವನ್ನು ಕಳೆದುಕೊಂಡಿದ್ದಾನೆ. 

ಪೋರ್ನ್‌ಸ್ಟಾರ್‌ ಆಗಿ ಕೆಲಸ ಮಾಡ್ತಿದ್ದ ಜಡ್ಜ್‌ ವಜಾ
ಯುವಜನರ ಗ್ರೂಪ್‌ನಲ್ಲಿ ಪೋರ್ನ್‌ ಸೈಟ್‌ಗಳು ಹೆಚ್ಚು ಜನಪ್ರಿಯವಾಗಿದೆ. ಆದ್ರೆ ಈ ಪೋರ್ನ್‌ ಸೈಟ್‌ನಲ್ಲಿ ಜವಾಬ್ದಾರಿಯುತ (Responsible) ಸ್ಥಾನದಲ್ಲಿರುವ ವ್ಯಕ್ತಿಯೊಬ್ಬ ಕಂಡು ಬಂದರೆ ಯಾರಿಗಾದರೂ ಅಚ್ಚರಿಯಾಗುವುದು ಖಂಡಿತ.. ಇಲ್ಲಾಗಿದ್ದೂ ಅದೇ. ಹೌದು ತನ್ನ ರಜೆಯಲ್ಲಿ ಸೆಕ್ಸ್‌ ಸಿನಿಮಾಗಳಲ್ಲಿ ನಟಿಸುತ್ತಿದ್ದ ಜಡ್ಜ್‌ನನ್ನು ಅಮೆರಿಕದಲ್ಲಿ ವಜಾಗೊಳಿಸಲಾಗಿದೆ. 33 ವರ್ಷದ ಗ್ರೆಗೊರಿ ಎ. ಲಾಕ್‌ ಎಂಬ ಜಡ್ಜ್‌ ‘ಪೋರ್ನ್‌ ಸ್ಟಾರ್‌’ ಕೂಡಾ ಆಗಿದ್ದ. ಈತನ ವಿಡಿಯೋ ನೋಡಿದ್ದ ಜನರು, ನ್ಯಾಯಾಲಯದಲ್ಲಿ (Court) ಆತನನ್ನು ನೋಡಿ ಇವನೇನಪ್ಪಾ ಈ ಪುಣ್ಯಾತ್ಮ ಇಲ್ಲಿ ಎಂದು ಬೆರಗಾಗಿದ್ದಾರೆ. ಇದು ವೃತ್ತಿಪರವಲ್ಲದ ವರ್ತನೆಯಾದ್ದರಿಂದ ಅಧಿಕಾರಿಗಳು ಗ್ರೆಗೊರಿಯನ್ನು ವಜಾಗೊಳಿಸಿದ್ದಾರೆ. 

ನಂದೇ ವಿಡಿಯೋ ಇರ್ಬಹುದಾ? ರೈಲು ನಿಲ್ದಾಣದಲ್ಲಿ ಅಶ್ಲೀಲ ಚಿತ್ರ ಪ್ರಸಾರ ಬಳಿಕ ಪೋರ್ನ್ ಸ್ಟಾರ್ ರಿಯಾಕ್ಷನ್ ವೈರಲ್

ಅಶ್ಲೀಲ ವೀಡಿಯೊಗಳಲ್ಲಿ ನಟಿಸಿದ್ದ  ಗ್ರೆಗೊರಿ ಎ ಲಾಕ್
ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ನ್ಯೂಯಾರ್ಕ್ ಸಿಟಿ ಆಡಳಿತದಲ್ಲಿ ನ್ಯಾಯಾಧೀಶರಾಗಿ ಕೆಲಸ ಮಾಡಿದ 33 ವರ್ಷದ ಗ್ರೆಗೊರಿ ಎ ಲಾಕ್ ಅಶ್ಲೀಲ ವೀಡಿಯೊಗಳನ್ನು ನಿರ್ಮಿಸಿ ಅದರಲ್ಲಿ ನಟಿಸಿದ್ದಾರೆ. ಅವರು ಕೆಲಸದ ನಂತರದ ಸಮಯದಲ್ಲಿ ಪೋರ್ನ್ ಸ್ಟಾರ್ ಆಗಿ ಕೆಲಸ ಮಾಡಿದರು ಮತ್ತು ಅವರ ವಿಷಯವನ್ನು ವೀಕ್ಷಿಸಲು ಅಭಿಮಾನಿಗಳಿಗೆ (Fans) ತಿಂಗಳಿಗೆ ಇಂತಿಷ್ಟು ಎಂದು ವಿಧಿಸಿದರು. ಅವರು ತಮ್ಮ ಓನ್ಲಿ ಫ್ಯಾನ್ಸ್ ಮೂಲಕ ಹಾರ್ಡ್‌ಕೋರ್ ಅಶ್ಲೀಲತೆಯನ್ನು ಒಳಗೊಂಡ 100 ಕ್ಕೂ ಹೆಚ್ಚು ವಯಸ್ಕ ಪೋಸ್ಟ್‌ಗಳನ್ನು ನಿರ್ಮಿಸಿದ್ದಾರೆ ಎಂದು ತಿಳಿದುಬಂದಿದೆ. ಓನ್ಲಿ ಫ್ಯಾನ್ಸ್‌ನಲ್ಲಿ ಪೋರ್ನ್ ಸ್ಟಾರ್ ಆಗಿ ಕೆಲಸ ಮಾಡುತ್ತಿರುವುದನ್ನು ಕಂಡು US ನ ನ್ಯಾಯಾಧೀಶರನ್ನು ವಜಾ (Suspend) ಮಾಡಲಾಗಿದೆ.

ವಜಾಗೊಂಡ ಜಡ್ಜ್‌ ಖಾತೆಯ ಬಯೋ ಸಹ ವಿಚಿತ್ರವಾಗಿದೆ. 'ಹಗಲು ವೈಟ್ ಕಾಲರ್ ಪ್ರೊಫೆಷನಲ್ ಮತ್ತು ರಾತ್ರಿ ತುಂಬಾ ವೃತ್ತಿಪರವಲ್ಲದ ಹವ್ಯಾಸಿ ಕೆಲಸ' ಎಂದು ಬರೆದುಕೊಂಡಿದ್ದಾರೆ. ಓನ್ಲಿ ಫ್ಯಾನ್ಸ್‌ನಲ್ಲಿನ ಖಾತೆಯ ಹೊರತಾಗಿ, ಜಸ್ಟ್‌ಫಾರ್.ಫ್ಯಾನ್ಸ್ ಎಂಬ ಹೆಸರಿನ ಮತ್ತೊಂದು ವಯಸ್ಕ ವೇದಿಕೆಯಲ್ಲಿ ಖಾತೆ ಇರುವುದು ಕಂಡುಬಂದಿದೆ.  ಅವರ ಚಟುವಟಿಕೆಯನ್ನು 'ವೃತ್ತಿಪರವಲ್ಲದ' ಎಂದು ಪರಿಗಣಿಸಿ, ಲಾಕ್ ಅವರನ್ನು ನಗರ ಅಧಿಕಾರಿಗಳು (Officers) ವಜಾಗೊಳಿಸಿದರು.

ಪೋರ್ನ್ ವೀಡಿಯೋ ನೋಡುವಾಗ ಹೆಂಡ್ತಿ ಕೈಗೆ ಸಿಕ್ಕಿಬಿದ್ದ ಗಂಡ, ಮುಂದೆ ನಡೆದಿದ್ದು ದುರಂತ!

'ಕಾನೂನು ಅಧಿಕಾರದ ಸ್ಥಾನಗಳಲ್ಲಿ ಲಾಕ್‌ನಂತಹ ವ್ಯಕ್ತಿಗಳನ್ನು ನೇಮಿಸಿಕೊಳ್ಳುವುದು ನಮ್ಮ ಸಂಸ್ಥೆಗಳ ವೃತ್ತಿಪರತೆ ಮತ್ತು ನಿಷ್ಪಕ್ಷಪಾತದ ಮೇಲಿನ ಜನರ ನಂಬಿಕೆಯನ್ನು ನಾಶಪಡಿಸುತ್ತದೆ' ಎಂದು ಸಿಟಿ ಕೌನ್ಸಿಲ್‌ವುಮನ್ ವಿಕಿ ಪಲಾಡಿನೊ ಹೇಳಿದರು. ಅದೇನೆ ಇರ್ಲಿ, ಜನರಿಗೆ ನ್ಯಾಯ ಒದಗಿಸಿ, ಸಮಾಜಕ್ಕೆ ಮಾದರಿಯಾಗಬೇಕಾದ ಜಡ್ಜ್‌ ಇಂಥಾ ಕೆಲ್ಸ ಮಾಡ್ತಿದ್ದು ಮಾತ್ರ ವಿಚಿತ್ರವೇ ಸರಿ. ಏನೇ ಹೇಳಿ ಕಲಿಯುಗ ಅಂತಾರಲ್ಲಾ ಇದಕ್ಕೆ ಇರಬೇಕು ನೋಡಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Zodiac Love: ನಿಮ್ಮ ಜನ್ಮರಾಶಿಯ ಪ್ರೀತಿಯ ಭಾಷೆ ಇದು!
Karna Serial: ಆ ಒಂದು ಸತ್ಯ ತೇಜಸ್​ಗೆ ಹೇಳಲು ಬಾಯಿ ಬಿದ್ದೋಗಿತ್ತಾ? ಕರ್ಣನ ಮೇಲೆ ಕಿಡಿಕಾರ್ತಿರೋ ವೀಕ್ಷಕರು