ತಂಗಿ ಅದ್ಧೂರಿ ಮದುವೆ, ವೇದಿಕೆಯಲ್ಲೇ 8 ಕೋಟಿ ರೂಪಾಯಿ ವರದಕ್ಷಿಣೆ ನೀಡಿದ ಸಹದೋರರು!

By Suvarna News  |  First Published Mar 28, 2023, 7:37 PM IST

ವರದಕ್ಷಿಣೆ  ಅಪರಾಧವಾಗಿದೆ. ಆದರೆ ಭಾರತದ ವರದಕ್ಷಿಣೆ ಪಿಡುಗಿನಿಂದ ಮುಕ್ತವಾಗಿಲ್ಲ. ಈಗಲೂ ವರದಕ್ಷಿಣೆ ನಡೆಯುತ್ತಲೇ ಇದೆ. ಇದರ ನಡುವೆ ಸಹೋದರರು ತಮ್ಮ ತಂಗಿ ಮದುವೆಗೆ ಬರೋಬ್ಬರಿ 8 ಕೋಟಿ ರೂಪಾಯಿ ವರದಕ್ಷಿಣೆ ನೀಡಿ ಬಾರಿ ಸುದ್ದಿಯಾಗಿದ್ದಾರೆ.


ಜೈಪುರ(ಮಾ.28): ಭಾರತದಲ್ಲಿ ವರದಕ್ಷಿಣೆ ನಿಷೇಧಿಸಲಾಗಿದೆ. ವರದಕ್ಷಿಣೆ ನಿಷೇಧ ಕಾಯ್ದೆ 1961ರ ಪ್ರಕಾರ ಕೊಡುವುದು ಹಾಗೂ ಕೊಳ್ಳುವುದು ಅಪರಾಧವಾಗಿದೆ. ಆದರೂ ಎಲ್ಲಾ ಕಡೆ ವರದಕ್ಷಿಣೆ ಈಗಲೂ ಚಾಲ್ತಿಯಲ್ಲಿದೆ. ಇದೇ ವರದಕ್ಷಿಣೆ ಹಲವು ರೂಪದಲ್ಲಿ ಬೆಳೆದು ನಿಂತಿದೆ. ಈ ಚರ್ಚೆ ನಡುವೆ ರಾಜಸ್ಥಾನದ ನಾಗೌರ್ ಜಿಲ್ಲೆಯ ದಿಂಗಸಾಗರ ಗ್ರಾಮದ ಮೆಹರಿಯ ಕುಟುಂಬ ಇದೀಗ ಭಾರತದಾದ್ಯಂತ ಸದ್ದು ಮಾಡುತ್ತಿದೆ. ಕಾರಣ ನಾಲ್ವರು ಸಹೋದರರು ತಮ್ಮ ಒಡಹುಟ್ಟಿದ ತಂಗಿ ಮದುವೆಗೆ 8 ಕೋಟಿ ರೂಪಾಯಿ ವರದಕ್ಷಿಣೆ ನೀಡಿದ್ದಾರೆ. ಕಂತೆ ಕಂತೆ ದುಡ್ಡಿನ ನೋಟು ವೇದಿಕೆಗೆ ತಂದು ಎಲ್ಲರ ಮುಂದೆ ಪ್ರದರ್ಶಿಸಿ ವರದಕ್ಷಿಣೆ ನೀಡಲಾಗಿದೆ.

ಮೆಹರಿಯಾ ಕುಟುಂಬದ ಭನ್ವಾರಿ ದೇವಿ ಮದುವೆ ಮಾರ್ಚ್ 26 ರಂದು ನಿಗದಿ ಮಾಡಲಾಗಿತ್ತು. ತಂಗಿಯ ಮದುವೆಗೆ ಸಹೋದರರಾದ  ಅರ್ಜುನ್ ರಾಮ್ ಮೆಹರಿಯಾ, ಭಗೀರತ್ ಮೆಹರಿಯಾ, ಉಮೈದ್ ಜೀ ಮೆಹರಿಯಾ ಹಾಗೂ ಪ್ರಹ್ಲಾದ್ ಮೆಹರಿಯಾ, ಬರೋಬ್ಬರಿ 8.31 ಕೋಟಿ ರೂಪಾಯಿ ವರದಕ್ಷಿಣೆ ನೀಡಿ ಎಲ್ಲರ ಹುಬ್ಬೇರಿಸಿದ್ದಾರೆ.

Latest Videos

undefined

 

ವರದಕ್ಷಿಣೆ ಕೇಳಿದ ವರನನ್ನು ಕೂಡಿ ಹಾಕಿದ ವಧು!

8.31 ಕೋಟಿ ರೂಪಾಯಿ ವರದಕ್ಷಿಣೆಯಲ್ಲಿ 2.21 ಕೋಟಿ ರೂಪಾಯಿ ನಗದು ಹಣವನ್ನು ಮದುವೆ ಮಂಟಪದ ವೇದಿಕೆಯಲ್ಲಿ ನೀಡಲಾಗಿದೆ. ಬುಟ್ಟಿಯಲ್ಲಿ ಹೊತ್ತುಕೊಂಡು ಹಣ ತರಲಾಗಿತ್ತು. ನಾಗೌರ್ ಜಿಲ್ಲೆಯಲ್ಲಿ ಮಯ್ರಾ ಅನ್ನೋ ಸಂಪ್ರದಾಯ ಹೆಚ್ಚಾಗಿದೆ. ವರದಕ್ಷಿಣೆ ರೂಪದಲ್ಲಿ ಹುಡುಗಿಗೆ ಹಣ ಹಾಗೂ ಕೆಲಸ ವಸ್ತುಗಳನ್ನು ನೀಡಲಾಗುತ್ತದೆ. ಹುಡುಗಿ ಮನೆಯವರು ಹುಡುಗನ ಮನೆಯವರಿಗೆ ಹಣ ಹಾಗೂ ವಸ್ತುಗಳನ್ನು ಮುಂದಿನ ಜೀವನಕ್ಕಾಗಿ ನೀಡುತ್ತಾರೆ. ಆದರೆ ವರದಕ್ಷಿಣೆ ನಿಷೇಧದ ಬಳಿಕವೂ ಮಯ್ರಾ ಹೆಸರಿನಲ್ಲಿ ಈ ಸಂಪ್ರದಾಯ ಮುಂದುವರಿದುಕೊಂಡು ಬಂದಿದೆ. ಮೇಲ್ನೋಟಕ್ಕೆ ಸಂಪ್ರದಾಯಕ್ಕೆ ಒಂದಿಷ್ಟು ಹಣ ಹಾಗೂ ಒಂದೆರೆಡು ವಸ್ತುಗಳನ್ನು ನೀಡುತ್ತಾರೆ. ಆದರೆ ಇದರ ಹಿಂದೆ ಭಾರಿ ಮೊತ್ತದ ವರದಕ್ಷಿಣ ನೀಡಲಾಗಿರುತ್ತದೆ. ಆದರೆ ಮೆಹರಿಯಾ ಕುಟುಂಬ ಬಹಿರಂಗವಾಗಿಯೇ 8.31 ಕೋಟಿ ರೂಪಾಯಿ ವರದಕ್ಷಿಣೆ ನೀಡಿದ್ದಾರೆ.

2.21 ಕೋಟಿ ರೂಪಾಯಿ ವೇದಿಕೆಯಲ್ಲೇ  ನಗದು ರೂಪದಲ್ಲಿ ನೀಡಿದರೆ, ದಿಂಗಸಾಗರ ಗ್ರಾಮದಲ್ಲಿ 4 ಕೋಟಿ ರೂಪಾಯಿ ಬೆಲೆಬಾಲುವ ಜಮೀನು, ಭಗವಂಡಾಸ್ ಗ್ರಾಮದಲ್ಲಿ 50 ಲಕ್ಷ ರೂಪಾಯಿ ಜಮೀನು, 71 ಲಕ್ಷ ರೂಪಾಯಿ ಬೆಲೆಬಾಳುವ 1 ಕೆಜಿ ಚಿನ್ನ, 9.8 ಲಕ್ಷ ರೂಪಾಯಿ ಮೌಲ್ಯದ 14 ಕೆಜಿ ಬೆಳ್ಳಿ ಸೇರಿದಂತೆ ಒಟ್ಟು 8.31 ಕೋಟಿ ರೂಪೂಯಿ ವರದಕ್ಷಿಣೆ ನೀಡಲಾಗಿದೆ. ಇದರ ಜೊತೆಗೆಯಲ್ಲಿ 7 ಲಕ್ಷ ರೂಪಾಯಿ ಬೌಲೆಯ ಟ್ರಾಕ್ಟರ್ ವಾಹನವನ್ನು ವರದಕ್ಷಿಣೆಯಾಗಿ ನೀಡಲಾಗಿದೆ. ಈ ಕುರಿತು ಕೆಲ ಮಾಧ್ಯಮಗಳು ವರದಿ ಮಾಡಿದೆ.

 

Bengaluru: ವರದಕ್ಷಿಣೆ ತರದ್ದಕ್ಕೆ ಮಧ್ಯರಾತ್ರಿ ಪತ್ನಿಯನ್ನು ಬಿಟ್ಟು ಹೋದ ಪತಿ

ಇಷ್ಟೊಂದು ಮೊತ್ತ ವರದಕ್ಷಿಣೆ ನೀಡಿದರೂ ಯಾವುದೇ ಕಾನೂನು ಕ್ರಮ ಆಗಿಲ್ಲವೇ? ಎಂದು ಹಲವರು ಪ್ರಶ್ನಿಸಿದ್ದಾರೆ. ಇಂತಹ ಜನಪ್ರಿಯ ನಡೆಯಿಂದಲೇ ಈಗಲೂ ವರದಕ್ಷಿಣೆ ಜೀವಂತವಾಗಿದೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

click me!