
ಮದುವೆಯಾಗುವ ಮೊದಲು ಇತ್ತೀಚಿನ ವರ್ಷಗಳಲ್ಲಿ ಡೇಟಿಂಗ್ ಮಾಡುವುದು ಸಾಮಾನ್ಯ. ಹುಡುಗ-ಹುಡುಗಿ ಪರಸ್ಪರ ಡೇಟ್ ಮಾಡಿ ಇಬ್ಬರ ಬಗ್ಗೆಯೂ ತಿಳಿದುಕೊಳ್ಳುತ್ತಾರೆ. ಹೊಂದಾಣಿಕೆಯಾದರೆ ಮದುವೆಯಾಗುತ್ತಾರೆ. ಇಲ್ಲವಾದರೆ ಬ್ರೇಕಪ್ ಮಾಡಿಕೊಳ್ಳುತ್ತಾರೆ. ಇಲ್ಲೊಬ್ಬಾಕೆ ಬರೋಬ್ಬರಿ ಆರು ವರ್ಷದಿಂದ ಹುಡುಗನ ಜೊತೆ ಡೇಟಿಂಗ್ ಮಾಡ್ತಿದ್ಲು. ಆದ್ರೆ ಡಿಎನ್‌ಎ ಪರೀಕ್ಷೆ ನಡೆಸಿದಾಗ ಶಾಕಿಂಗ್ ವಿಚಾರ ಬದಲಾಗಿದೆ. ಆರು ವರ್ಷಗಳಿಂದ ಬಾಯ್‌ಫ್ರೆಂಡ್‌ನೊಂದಿಗೆ ಡೇಟಿಂಗ್ ಮಾಡುತ್ತಿರುವ ಮಹಿಳೆ ಅವನು ತನ್ನ ಜೈವಿಕ ಸಹೋದರ ಎಂಬುದನ್ನು ಕಂಡುಕೊಂಡಿದ್ದಾಳೆ. ತನ್ನ ಆರು ವರ್ಷಗಳ ಗೆಳೆಯ ನಿಜವಾಗಿ ತನ್ನ ಸಹೋದರ ಎಂಬುದನ್ನು ಸಾಮಾಜಿಕ ಮಾಧ್ಯಮದ ಮೂಲಕ ಜಗತ್ತಿಗೆ ಬಹಿರಂಗಪಡಿಸಿದ್ದಾಳೆ.
ಡಿಎನ್‌ಎ ಪರೀಕ್ಷೆಯಲ್ಲಿ ಬಯಲಾಯ್ತು ಸಂಗಾತಿಯೇ ತಮ್ಮ !
ರೆಡ್ಡಿಟ್‌ನಲ್ಲಿ ಸುದೀರ್ಘ ಪೋಸ್ಟ್‌ನಲ್ಲಿ, ಅನಾಮಧೇಯ ಮಹಿಳೆ (woman) ಡಿಎನ್‌ಎ ಪರೀಕ್ಷೆಯ ನಂತರ ತನ್ನ ಸಂಗಾತಿಯ ಬಗ್ಗೆ ಸತ್ಯವನ್ನು ಕಂಡುಕೊಂಡಿದ್ದಾಳೆ ಎಂದು ಬರೆದಿದ್ದಾರೆ. 'ನಮ್ಮ ಸಂಬಂಧವು (Relationship) ಉತ್ತಮವಾಗಿದೆ. ನಾವು ಒಬ್ಬರನ್ನೊಬ್ಬರು ಬಹಳ ವೇಗವಾಗಿ ಅರ್ಥಮಾಡಿಕೊಂಡಿದ್ದೇವೆ. ನಾವು ಪರಸ್ಪರ ಬೇಗನೆ ಆಕರ್ಷಿತರಾಗಿದ್ದೇವೆ. ಪರಿಚಿತತೆಯನ್ನು ಅನುಭವಿಸಿದೆ' ಎಂದು ಅವರು ಬರೆದಿದ್ದಾರೆ. ನಾವು ಸಾಮಾನ್ಯ ದಂಪತಿಗಳಂತೆ ಇದ್ದೆವು ಎಂದು ರೆಡ್ಡಿಟ್ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ. ಆದರೆ ಅವರು ತಮ್ಮ ಪೂರ್ವಜರನ್ನು ಕಂಡುಹಿಡಿಯಲು ಡಿಎನ್ಎ ಪರೀಕ್ಷೆಗೆ ಹೋಗಲು ನಿರ್ಧರಿಸಿದಾಗ ಎಲ್ಲವೂ ಬದಲಾಯಿತು.
ಭಾರತದಲ್ಲಿ ಹೆಚ್ಚಾಗ್ತಿದೆ Green Dating ! ಏನಿದು ಟ್ರೆಂಡ್?
ನಾನು ಡಿಎನ್‌ಎ ಪರೀಕ್ಷೆ ಪಡೆಯುವ ಮೊದಲು, ನಾವು ಏನಾಗಿದ್ದೇವೆ ಎಂದು ನೋಡಲು ನಾನು ಉತ್ಸುಕಳಾಗಿದ್ದೆ. ಆದರೆ ಪರೀಕ್ಷೆಯ ಬಳಿಕ ನಾವಿಬ್ಬರೂ ಒಡಹುಟ್ಟಿದವರು ಎಂದು ತಿಳಿದು ನಾನು ಶಾಕ್ ಆದೆ. ನಾನು ಈ ಮಾಹಿತಿಯನ್ನು ಮಾತ್ರ ಕಂಡುಕೊಂಡಿದ್ದೇನೆ ಮತ್ತು ನಾನು ನನ್ನ ಗೆಳೆಯನಿಗೆ ಹೇಳಿಲ್ಲ ಎಂದು ಮಹಿಳೆ ಬರೆದಿದ್ದಾರೆ.
'ಡಿಎನ್‌ಎ ಪರೀಕ್ಷೆಯ ಫಲಿತಾಂಶ ನನ್ನನ್ನು ವಿಚಲಿತಗೊಳಿಸುತ್ತಿದೆ ಮತ್ತು ನಾನು ಏನು ಮಾಡಬೇಕೆಂದು ನನಗೆ ತಿಳಿದಿಲ್ಲ. ನಾನು ಇನ್ನೂ ನನ್ನ ಗೆಳೆಯ/ಸಹೋದರನನ್ನು ಪ್ರೀತಿಸುತ್ತೇನೆ ಮತ್ತು ನಾವು 6 ವರ್ಷಗಳಿಂದ ಒಟ್ಟಿಗೆ ಇದ್ದೇವೆ. ನಾವು ಒಟ್ಟಿಗೆ ಮನೆ ಮತ್ತು ಸಂಪೂರ್ಣ ಆರಾಮದಾಯಕ ಜೀವನವನ್ನು ಹೊಂದಿದ್ದೇವೆ. ಈ ಪರೀಕ್ಷೆಯು ತಪ್ಪಾಗಿದೆ ಮತ್ತು ಶೀಘ್ರದಲ್ಲೇ ನಿಜವಾದ ಪರೀಕ್ಷೆಯನ್ನು ಮಾಡುತ್ತೇನೆ ಎಂದು ನಾನು ಭಾವಿಸುತ್ತೇನೆ' ಎಂದು ಅವರು ಬರೆದಿದ್ದಾರೆ.
Relationship Tips: ಮದ್ವೆ ಮೊದ್ಲು ಇವುಗಳನ್ನು ತಿಳ್ಕೊಂಡ್ರೆ ಮ್ಯಾರೀಡ್ ಲೈಫ್ ಚೆನ್ನಾಗಿರುತ್ತೆ
ಡೇಟಿಂಗ್ ಮತ್ತು ರಿಲೇಷನ್ಶಿಪ್ ನಡುವಿನ ವ್ಯತ್ಯಾಸ
ನಿಮ್ಮ ಸಂಬಂಧವು ಈಗಷ್ಟೇ ಆರಂಭವಾಗಿದ್ದು, ನಿಮಗೆ ಒಬ್ಬರನ್ನೊಬ್ಬರು ಪರಿಚಯ ಮಾತ್ರವಿದ್ದು, ಒಬ್ಬರನ್ನೊಬ್ಬರು ತುಂಬಾ ಹತ್ತಿರದಿಂದ ತಿಳಿದುಕೊಳ್ಳದಿದ್ದಾಗ, ಅದನ್ನು ಡೇಟಿಂಗ್ ಎಂದು ಕರೆಯಲಾಗುತ್ತೆ. ನೀವಿಬ್ಬರು ಪರಿಚಯವಾಗಿ, ಸ್ನೇಹ (Friendship) ಮೂಡಿ, ಒಬ್ಬರ ಬಗ್ಗೆ ಇನ್ನೊಬ್ಬರು ತುಂಬಾನೆ ತಿಳಿದುಕೊಂಡಿರುತ್ತೀರಿ. ನೀವು ಪರಸ್ಪರರ ಆಸಕ್ತಿ ತಿಳಿದುಕೊಳ್ಳಲು ಮಾತ್ರ ಹೆಚ್ಚಿನ ಆಸಕ್ತಿ ಹೊಂದಿದ್ದು, ಈಗಾಗಲೇ ತುಂಬಾನೆ ಹತ್ತಿರವಾಗಿದ್ರೆ ಅದನ್ನು ರಿಲೇಷನ್ಶಿಪ್ ಎಂದು ಕರೆಯಲಾಗುತ್ತೆ.
ನೀವು ಪರಸ್ಪರ ಲಿವ್-ಇನ್ ನಲ್ಲಿ(Live in relationship) ವಾಸಿಸಲು ಪ್ರಾರಂಭಿಸಿದಾಗ, ನೀವು ಮಾನಸಿಕ ಮತ್ತು ದೈಹಿಕವಾಗಿ ಪರಸ್ಪರ ಸಂಪರ್ಕ ಹೊಂದುತ್ತೀರಿ. ಆವಾಗ ನೀವು ರಿಲೇಷನ್ಶಿಪ್ನ್ ಲ್ಲಿರುತ್ತೀರಿ ಎಂದು ಹೇಳಬಹುದು ಮತ್ತು ಅದು ಡೇಟಿಂಗ್ ಅಲ್ಲ ಅನ್ನೋದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ನೀವು ಹೃದಯದಿಂದ ಯಾರೊಂದಿಗಾದರೂ ಕನೆಕ್ಟ್ ಆಗಿರದೇ ಇದ್ದರೆ, ಪರಸ್ಪರ ಸುಮ್ಮನೆ ಹ್ಯಾಂಗ್ ಔಟ್(Hang out) ಮಾಡುತ್ತಿದ್ದರೆ ಮತ್ತು ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದರೆ, ಅಥವಾ ಜೊತೆಯಾಗಿ ಡಿನ್ನರ್, ಔಟಿಂಗ್ ಮಾಡುತ್ತಿದ್ದರೆ ಅದನ್ನು ಡೇಟಿಂಗ್ ಎಂದು ಕರೆಯಲಾಗುತ್ತೆ
ಆದರೆ ಹೃದಯದಿಂದ ಮತ್ತು ಭಾವನಾತ್ಮಕವಾಗಿ(Feeling) ನೀವು ಒಟ್ಟಿಗೆ ಇದ್ದಾಗ, ಅದನ್ನು ರಿಲೇಷನ್ಶಿಪ್ ಎಂದು ಕರೆಯಲಾಗುತ್ತೆ. ಇದರಲ್ಲಿ ಇಬ್ಬರನ್ನೊಬ್ಬರು ಬಿಟ್ಟಿರಲಾರದ ಬಂಧವಾಗಿರುತ್ತೆ. ಡೇಟಿಂಗ್ ಅಲ್ಪಾವಧಿಗೆ ಮತ್ತು ಈ ರಿಲೇಷನ್ಶಿಪ್ ಗಂಭೀರ ಮತ್ತು ಲಾಂಗ್ ಟೈಮ್ (Long time)ಸಂಬಂಧ ಆಗಿರುತ್ತೆ. ಇದು ಡೇಟಿಂಗ್ ಮತ್ತು ರಿಲೇಷನ್ಶಿಪ್ ನಡುವಿನ ಮುಖ್ಯ ವ್ಯತ್ಯಾಸ(Difference). ಡೇಟಿಂಗ್ ರಿಲೇಷನ್ಶಿಪ್ ನಿಂದ ಬೇರ್ಪಡಿಸುವ ಅಥವಾ ಅದನ್ನು ಅನನ್ಯಗೊಳಿಸುವ ಇತರ ಅನೇಕ ವಿಷಯಗಳಿವೆ. ಅವುಗಳನ್ನ ನೀವು ಅರ್ಥ ಮಾಡಿಕೊಳ್ಳಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.