ರಾಜಸ್ಥಾನದಲ್ಲಿ ಕೌಟುಂಬಿಕ ಗಲಾಟೆಯೊಂದು ಕೋರ್ಟ್ ಮೆಟ್ಟಿಲೇರಿದೆ. ಪತ್ನಿ ವರ್ತನೆಯಿಂದ ಅನುಮಾನಗೊಂಡ ಪತಿ, ಬೆನ್ನು ಬಿದ್ದಾಗ ಭಯಾನಕ ಸತ್ಯ ಹೊರಗೆ ಬಿದ್ದಿದೆ. ಪತ್ನಿ ಮೋಸಕ್ಕೆ ದಂಗಾಗಿರುವ ಪತಿ ನ್ಯಾಯಕ್ಕೆ ಮೊರೆ ಹೋಗಿದ್ದಾನೆ.
ಮದುವೆಯಾಗಿ ಸುಖ ಸಂಸಾರ ನಡೆಸುವ ಕನಸು ಕಂಡಿದ್ದ ಈ ವ್ಯಕ್ತಿ. ಆದ್ರೆ ಅವನು ಅಂದ್ಕೊಂಡಂಗೆ ಏನೂ ಆಗ್ಲಿಲ್ಲ. ಶಾರೀರಿಕ ಸಂಬಂಧ (Physical relationship) ಬೆಳೆಸುವ ವೇಳೆ ಸುರಕ್ಷತೆಗಾಗಿ ಕಾಂಡೋಮ್ ಬಳಸದಂತೆ ಪತ್ನಿ ಹೇಳ್ತಿದ್ದಳು. ಪತ್ನಿ ವರ್ತನೆ ಪತಿಗೆ ಅನುಮಾನ ಮೂಡಿಸಿದೆ. ಸೂಕ್ತ ಪ್ಲಾನ್ ಮಾಡಿ ಪತ್ನಿ ಹಿಂದೆ ಬಿದ್ದವನಿಗೆ ಸತ್ಯ (true) ತಿಳಿಯುತ್ತಿದ್ದಂತೆ ಜೀವ ಬಾಯಿಗೆ ಬಂದಂತಾಗಿದೆ. ಜೀವನ ಸಂಗಾತಿಯಾಗಿ ಜೀವನ ಪರ್ಯಂತ ಜೊತೆಗಿರ್ತೇನೆ ಎಂದು ಭರವಸೆ ನೀಡಿದ್ದ ಮಡದಿಯೇ ಮೋಸ ಮಾಡಿದ್ದಾಳೆ. ಪ್ರಕರಣ ಕೋರ್ಟ್ (Court) ಮೆಟ್ಟಿಲೇರಿದ ಮೇಲೆ ವಿಷ್ಯ ಬಹಿರಂಗವಾಗಿದ್ದು, ಮಹಿಳೆ ಮೋಸ ಕೇಳಿ ಜನರು ದಂಗಾಗಿದ್ದಾರೆ.
ರಾಜಸ್ಥಾನ (Rajasthan)ದ ಮಾತಾ ಕಾ ಥಾನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆರೋಗ್ಯ ವಿಷ್ಯದಲ್ಲಿ ಪತ್ನಿ ನನಗೆ ಮೋಸ ಮಾಡಿದ್ದಾಳೆ ಎಂದು ಪೀಡಿತ ಪತಿ, ನ್ಯಾಯಾಲಯಕ್ಕೆ ದೂರು ನೀಡಿದ್ದಾನೆ. ಈತನಿಗೆ ಜುಲೈನಲ್ಲಿ ಮದುವೆ ಆಗಿದೆ. ಮಹಿಳೆಗೆ ಮೊದಲು ಬೇರೆ ವ್ಯಕ್ತಿ ಜೊತೆ ಪತ್ನಿಗೆ ನಿಶ್ಚಿತಾರ್ಥವಾಗಿತ್ತು. ಆದ್ರೆ ನಿಶ್ಚಿತಾರ್ಥದ ನಂತ್ರ ಮದುವೆ ಮುರಿದು ಬಿದ್ದಿತ್ತು. ಪತ್ನಿ ಫೋನ್ ನಲ್ಲಿದ್ದ ನಂಬರ್ ಪರಿಶೀಲನೆ ನಡೆಸಿದಾಗ ಮೊದಲ ವ್ಯಕ್ತಿ ಏಕೆ ಮದುವೆ ಮುರಿದುಕೊಂಡಿದ್ದಾನೆ ಎಂಬ ಸಂಗತಿ ಪತಿಗೆ ತಿಳಿಯಿತು. ಹಾಗಾಗಿ ಕಚೇರಿ ಕೆಲಸದ ನೆಪ ಹೇಳಿ, ಪತ್ನಿಯ ಆರೋಗ್ಯ ಪರೀಕ್ಷೆಗೆ ಮುಂದಾಗ್ತಾನೆ. ಇದನ್ನು ಪತ್ನಿ ನಿರಾಕರಿಸ್ತಾಳೆ. ದಂಗಾಗುವ ಆಕೆ, ಯಾವುದೇ ಕಾರಣಕ್ಕೂ ಪರೀಕ್ಷೆಗೆ ಬರುವುದಿಲ್ಲ ಎಂದು ಪಟ್ಟು ಹಿಡಿಯುತ್ತಾಳೆ. ಆಕೆ ಮನೆಯವರಿಂದಲೂ ವಿರೋಧ ಬರುತ್ತೆ. ಆದ್ರೆ ಪತ್ನಿಯನ್ನು ಒತ್ತಾಯಪೂರ್ವಕವಾಗಿ ಆಸ್ಪತ್ರೆಗೆ ಕರೆದೊಯ್ಯುವ ಪತಿ, ರಕ್ತ ಪರೀಕ್ಷೆ (blood test) ಮಾಡ್ತಾನೆ.
undefined
ಧರ್ಮೇಂದ್ರ ವರಿಸೋ ಮುನ್ನ ಹೇಮಾ ಮಾಲಿನಿ ಈ ವ್ಯಕ್ತಿ ಜೊತೆ ಹಸೆಮಣೆ ಏರಬೇಕಿತ್ತು!
ಆಗಸ್ಟ್ 31ರ ರಾತ್ರಿ ಇಬ್ಬರಿಗೂ ಪರೀಕ್ಷೆ ನಡೆಯುತ್ತದೆ. ಪರೀಕ್ಷಾ ವರದಿ ನೋಡಿ ಪತಿ ದಂಗಾಗ್ತಾನೆ. ಪತ್ನಿಗೆ ಎಚ್ ಐವಿ ಪಾಸಿಟಿವ್ (HIV positive) ಇರೋದು ಆತನಿಗೆ ತಿಳಿಯುತ್ತದೆ. ಸದ್ಯ ಪತಿಗೆ ನೆಗೆಟಿವ್ ಬಂದಿದೆ. ಇದು ಸ್ವಲ್ಪ ನೆಮ್ಮದಿ ನೀಡಿದ್ರೂ, ಮೂರು ತಿಂಗಳ ನಂತ್ರ ಇನ್ನೊಮ್ಮೆ ಪರೀಕ್ಷೆ ನಡೆಸಲು ವೈದ್ಯರು ಸಲಹೆ ನೀಡಿದ್ದಾರೆ.
ಪತ್ನಿಗೆ ಈ ವಿಷ್ಯ ಮೊದಲೇ ತಿಳಿದಿತ್ತು. ಆದ್ರೆ ಎಚ್ ಐವಿ ವಿಷ್ಯವನ್ನು ಮುಚ್ಚಿಟ್ಟು ಆಕೆ ಮದುವೆಯಾಗಿದ್ದಳು. ಪತಿಗೆ ತನ್ನ ಖಾಯಿಲೆ ವಿಷ್ಯ ತಿಳಿಯುತ್ತಿದ್ದಂತೆ ಸಹೋದರಿ ಜೊತೆ ಪತ್ನಿ ಮನೆ ಬಿಟ್ಟಿದ್ದಾಳೆ. ಸಹೋದರಿ ಜೊತೆ ರೂಮ್ ಸೇರಿ ಸ್ವಲ್ಪ ಹೊತ್ತು ಬಾಗಿಲು ಹಾಕಿಕೊಂಡಿದ್ದ ಪತ್ನಿ, ನಂತ್ರ ಸೂಟ್ ಕೇಸ್ ಹಿಡಿದು, ಮನೆಯಿಂದ ಹೊರಗೆ ಹೋಗಿದ್ದಾಳೆ. ಆಕೆ ಹೋದ್ಮೇಲೆ ಮನೆಯಲ್ಲಿದ್ದ ಎಲ್ಲ ಒಡವೆಯನ್ನು ಹೊತ್ತೊಯ್ದಿದ್ದಾಳೆ ಎಂಬುದು ಪೀಡಿತನಿಗೆ ಗೊತ್ತಾಗಿದೆ. ಪತ್ನಿ ವರ್ತನೆಗೆ ದಂಗಾಗಿರುವ ಪತಿ ನ್ಯಾಯಾಲಯದಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದಾನೆ. ನ್ಯಾಯಾಲಯದ ಆದೇಶದ ಮೇರೆಗೆ ಪೊಲೀಸರು ಪತ್ನಿ, ಆಕೆಯ ತಂದೆ ಮತ್ತು ಸಹೋದರಿಯನ್ನು ಆರೋಪಿಗಳನ್ನಾಗಿ ಮಾಡಿದ್ದಾರೆ.
ಪಾಕಿಸ್ತಾನಿ ಗಾಯಕ ಉಮೈರ್ ಜಸ್ವಾಲ್ ಜೊತೆ ಸಾನಿಯಾ ಮಿರ್ಜಾ 2ನೇ ಮದುವೆ?
ಪತ್ನಿ, ನನಗೂ ಎಚ್ ಐವಿ ಸೋಂಕು ಹರಡುವ ಉದ್ದೇಶ ಹೊಂದಿದ್ದಳು. ಇದೇ ಕಾರಣಕ್ಕೆ ಆಕೆ ಶಾರೀರಿಕ ಸಂಬಂಧ ಬೆಳೆಸುವ ವೇಳೆ ಕಾಂಡೋಮ್ ಬಳಸದಂತೆ ಒತ್ತಾಯ ಮಾಡುತ್ತಿದ್ದಳು ಎಂದು ಪತಿ ದೂರಿದ್ದಾನೆ. ಮಹಿಳೆ ಮೊದಲು ನಿಶ್ಚಿತಾರ್ಥ ಮಾಡಿಕೊಂಡಿದ್ದ ವ್ಯಕ್ತಿಗೆ ಎಚ್ ಐವಿ ಇತ್ತು. ಆತನಿಂದ ಈ ಮಹಿಳೆಗೆ ಎಚ್ ಐವಿ ಸೋಂಕು ತಗುಲಿದೆ. ಆಕೆ ತನ್ನ ಖಾಯಿಲೆಯನ್ನು ತನ್ನ ಪತಿಗೆ ಹರಡುವ ಉದ್ದೇಶ ಹೊಂದಿದ್ದಳು ಎಂದು ಪೊಲೀಸರು ಹೇಳಿದ್ದಾರೆ.