ಸಾನಿಯಾ ಮಿರ್ಜಾ ಅವರ ಎರಡನೇ ಮದುವೆಯ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಉಮೈರ್ ಜಸ್ವಾಲ್ ಅವರ ಎರಡನೇ ಮದುವೆಯ ಫೋಟೋಗಳು ಈ ವದಂತಿಗಳಿಗೆ ಕಾರಣವಾಗಿವೆ. ಆದರೆ, ಸಾನಿಯಾ ಮಿರ್ಜಾ ಎರಡನೇ ಮದುವೆಯಾಗಿಲ್ಲ ಎಂಬುದು ಸತ್ಯ.
ನವದೆಹಲಿ (ಅ.15): ಮಾಜಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರ 2ನೇ ಮದುವೆ ವಿಚಾರ ಮತ್ತೊಮ್ಮೆ ಜೋರಾಗಿ ಚರ್ಚೆಯಾಗುತ್ತಿದೆ. ಟೀಮ್ ಇಂಡಿಯಾ ಕ್ರಿಕೆಟರ್ ಮೊಹಮದ್ ಶಮಿ ಅವರೊಂದಿಗೆ ಸಾನಿಯಾ ಮಿರ್ಜಾ 2ನೇ ಮದುವೆ ಆಗುತ್ತಾರೆ ಎನ್ನುವ ಗಾಸಿಪ್‌ಗಳು ದೊಡ್ಡ ಮಟ್ಟದಲ್ಲು ಚರ್ಚೆಯಾದ ಬಳಿಕ ಮತ್ತೊಮ್ಮೆ ಸಾನಿಯಾ ಮದುವೆ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ. ಇದಕ್ಕೆ ಕಾರಣವೂ ಇದೆ. ಶೋಯೆಬ್ ಮಲೀಕ್, ಸಾನಿಯಾ ಮಿರ್ಜಾಗೆ ವಿಚ್ಛೇದನ ನೀಡಿ ನಟಿ ಸನಾ ಜಾವೇದ್ ಅವರನ್ನು ವಿವಾಹವಾಗಿದ್ದರು. ಸನಾ ಜಾವೇದ್‌ಗೂ ಅದು 2ನೇ ಮದುವೆಯಾಗಿತ್ತು. ಇತ್ತೀಚೆಗೆ ಸನಾ ಜಾವೇದ್ ಅವರ ಮೊದಲ ಪತಿ ಉಮೈರ್ ಜಸ್ವಾಲ್ 2ನೇ ಮದುವೆಯಾಗಿವ ಮೂಲಕ ವೈಯಕ್ತಿಕ ಜೀವನದಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಮದುವೆಯ ಫೋಟೋವನ್ನು ಉಮೈರ್ ಜಸ್ವಾಲ್ ಹಂಚಿಕೊಳ್ಳುವ ಮೂಲಕ ಉಮೈರ್ ಎಲ್ಲರಿಗೂ ಅಚ್ಚರಿ ನೀಡಿದ್ದರು. ಮದುವೆ ಮಾಡಿಕೊಂಡಿದ್ದನ್ನೂ ಖಚಿತಪಡಿಸಿದ್ದರೂ. ವಧು ಯಾರು, ಆಕೆಯ ಹೆಸರೇನು ಅನ್ನುವ ಮಾಹಿತಿಗಳನ್ನುಉಮೈರ್ ಜಸ್ವಾಲ್ ಗೌಪ್ಯವಾಗಿ ಇರಿಸಿದ್ದೇ ಇದಕ್ಕೆ ಕಾರಣವಾಗಿದೆ. ಹೆಚ್ಚಿನವರು ವಧು ಸಾನಿಯಾ ಮಿರ್ಜಾ ಇರಬೇಕು ಎಂದು ಅಂದುಕೊಂಡಿದ್ದಾರೆ.
ಉಮೈರ್ ಜಸ್ವಾಲ್ ಪೋಸ್ಟ್ ಮಾಡಿದ ಚಿತ್ರ ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿತ್ತು. ಹೆಚ್ಚಿನವರು ಉಮೈರ್ ಜಸ್ವಾಲ್ ಅವರ ಹೊಸ ಪತ್ನಿ ಯಾರಾಗಿರಬಹುದು ಎನ್ನುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆಸಿದ್ದಾರೆ. ಜಸ್ವಾಲ್ ಈ ಪೋಸ್ಟ್‌ಅನ್ನು ಹಂಚಿಕೊಳ್ಳುತ್ತಿದ್ದಂತೆ ಸಾನಿಯಾ ಮಿರ್ಜಾ ಕುರಿತಾಗಿ ವದಂತಿಗಳು ಹಬ್ಬಲು ಆರಂಭವಾಗಿದ್ದವು. ಸಾನಿಯಾ ಮಿರ್ಜಾ ಗುಟ್ಟಾಗಿ 2ನೇ ಮದುವೆಯಾಗಿದ್ದಾರೆ. ಈಗಾಗಲೇ ಅವರ ಮದುವೆ ದುಬೈನಲ್ಲಿ ನಡೆದಿದೆ ಎನ್ನುವಂತೆ ಪೋಸ್ಟ್‌ಗಳು ಹರಿದಾಡಿದ್ದವು.
ಸೋಶಿಯಲ್ ಮೀಡಿಯಾದಲ್ಲಿ ಈ ಚರ್ಚೆಗಳು ನಡೆಯುತ್ತಿದ್ದರೂ, ಅಸಲಿ ವಿಚಾರ ಏನೆಂದರೆ, ಸಾನಿಯಾ ಮಿರ್ಜಾ ಅವರು 2ನೇ ಮದುವೆ ಆಗಿಲ್ಲ.
ಮತ್ತೊಬ್ಬ ಪಾಕ್ ಕ್ರಿಕೆಟಿಗನ ಪ್ರೀತಿ ಬಲೆಗೆ ಬಿದ್ದ ಭಾರತದ ಪೂಜಾ ಬೊಮನ್; ಲವ್ ಪ್ರಪೋಸ್ ಪೋಸ್ಟ್ ವೈರಲ್!
ಸ್ಪೋರ್ಟ್ಸ್ ಐಕಾನ್ ತನ್ನ ಕುಟುಂಬ ಹಾಗೂ ವೃತ್ತಿಪರ ವಿಚಾರಗಳ ಮೇಲೆ ಸಾಕಷ್ಟು ಸಂತೋಷದಿಂದಲೇ ಗಮನಹರಿಸಿದ್ದು, ಆಧಾರರಹಿತ ಗಾಸಿಪ್‌ಗಳಿಗೆ ಕೊನೆ ಹಾಡಿದ್ದಾರೆ. ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್‌ನಿಂದ ವಿಚ್ಛೇದನ ಪಡೆದ ನಂತರ, ಸಾನಿಯಾ ತಮ್ಮ ಮಗ ಇಜಾನ್ ಮಲಿಕ್ ಜೊತೆ ದುಬೈನಲ್ಲಿ ನೆಲೆಸಿದ್ದಾರೆ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಸಾನಿಯಾ ಅವರ ಇತ್ತೀಚಿನ ಇನ್ಸ್ಟಾಗ್ರಾಮ್ ಫೋಟೋಗಳು ವೈರಲ್ ಆಗುತ್ತಿವೆ. ಅವಳು ತನ್ನ ಸಹೋದರಿ ಅನಮ್ ಮಿರ್ಜಾ ಮತ್ತು ಅವರ ಮಕ್ಕಳೊಂದಿಗೆ ದುಬೈನಲ್ಲಿ ದಿನ ಕಳೆಯುತ್ತಿದ್ದಾರೆ.
ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಬಗೆಗಿನ ಇಂಟ್ರೆಸ್ಟಿಂಗ್ ಸಂಗತಿಗಳಿವು