
ಭಾರತ ದೇಶ ಕಂಡ ಮಹಾನ್ ಬುದ್ಧಿವಂತರಲ್ಲಿ ಆಚಾರ್ಯ ಚಾಣಕ್ಯ ಒಬ್ಬರು. ರಜನೀತಿ ಅವರ ಮಹಾ ಕೊಡುವೆ. ಆದರೆ ಚಾಣಕ್ಯನ ನೀತಿಶಾಸ್ತ್ರದಲ್ಲಿ ಧರ್ಮ, ಅರ್ಥ, ಕೆಲಸ, ಮೋಕ್ಷ, ಕುಟುಂಬ, ಸಂಬಂಧ, ಮಿತಿ, ಸಮಾಜ, ಸಂಬಂಧ, ರಾಷ್ಟ್ರ ಮತ್ತು ಪ್ರಪಂಚದ ತತ್ವಗಳನ್ನು ಕೂಡ ಪ್ರತಿಪಾದಿಸಲಾಗಿದೆ. ಚಾಣಕ್ಯ ನೀತಿಯಲ್ಲಿ, ಆಚಾರ್ಯ ಚಾಣಕ್ಯ ಪತಿ-ಪತ್ನಿ ಸಂಬಂಧದ ಸಿದ್ಧಾಂತವನ್ನು ಸಹ ಪ್ರಸ್ತುತಪಡಿಸಿದ್ದಾರೆ. ಪುರುಷ ಹೇಗೆ ಸ್ತ್ರೀಯನ್ನು ಒಲಿಸಿಕೊಳ್ಳಬೇಕು, ಒಲಿದ ಹೆಣ್ಣನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ಕೂಡ ವಿವರಿಸಲಾಗಿದೆ. ಅದು ಹೇಗೆ ಅಂತ ನೋಡೋಣ.
ತರುಣಿಯನ್ನು ಹೊಗಳಬೇಕು
ಹೊಗಳಿಕೆಗೆ ಮರುಳಾಗದ ತರುಣಿಯೇ ಇಲ್ಲ. ಹೊಗಳಿಕೆ ಆಕೆ ಮನಸೋಲುವಂತೆ ಇರಬೇಕು. ಆಕೆಯ ದೇಹವನ್ನು, ನಡವಳಿಕೆಯನ್ನು, ಸಾಧನೆಯನ್ನು, ಮಾತುಗಳನ್ನು ಶ್ಲಾಘಿಸಬಹುದು. ಆದರೆ ಹೊಗಳುವ ಭರದಲ್ಲಿ ಆಕೆಯ ದೇಹದ ಬಗ್ಗೆ ಅಶ್ಲೀಲ ಕಮೆಂಟ್‌ಗಳನ್ನು ಮಾಡಬಾರದು. ಸ್ವಲ್ಪ ಮಟ್ಟಿಗೆ ರಸಿಕತೆಯಿದ್ದರೆ ನಡೆಯುತ್ತದೆ. ಹೊಗಳಿಕೆಯಲ್ಲಿ ಗೌರವ, ಘನತೆ ಇರಬೇಕು.
ನಗಬೇಕು, ನಗಿಸಬೇಕು
ವಿನೋದ ಸ್ವಭಾವ ಹೊಂದಿರುವ ಪುರುಷರನ್ನು ತರುಣಿಯರು ಹೆಚ್ಚಾಗಿ ಇಷ್ಟಪಡುತ್ತಾರೆ. ಜೋಕ್ ಹೇಳ್ತಾ ನಗಿಸ್ತಾ ಇರುವವರ ಹಿಂದೆ ಹುಡುಗಿಯರು ಹೆಚ್ಚಾಗಿ ಓಡಾಡುತ್ತಿರುವುದನ್ನು ನೀವು ಗಮನಿಸಿರಬಹುದು. ನಿಮ್ಮ ಮುಖದಲ್ಲಿ ಸದಾ ಒಂದು ಮಂದಹಾಸ ಇರಲಿ. ಗಂಭೀರ ವದನ ನಾರಿಯರಿಗೆ ಇಷ್ಟವಾಗೋಲ್ಲ. ಸೀರಿಯಸ್ ಗಂಡಸರನ್ನು ಯಾವ ಮಹಿಳೆಯೂ ಇಷ್ಟಪಡುವುದಿಲ್ಲ.
ನಂಬಿಕೆ ಉಳಿಸಿಕೊಳ್ಳಿ
ತರುಣಿ ನಿಮ್ಮಲ್ಲಿ ಯಾವುದಾದರೂ ಗುಟ್ಟನ್ನು ಹೇಳಿದರೆ ಅದನ್ನು ಪಬ್ಲಿಕ್ ಮಾಡಬಾರದು. ಅಂದರೆ ಈತ ನಂಬಿಕೆಗೆ ಅರ್ಹ ಎಂಬ ಭಾವನೆ ಆಕೆಯಲ್ಲಿ ಮೂಡಬೇಕು. ಹಾಗೇ ನಿಮ್ಮ ಕೆಲವು ಸಣ್ಣಪುಟ್ಟ ಗುಟ್ಟುಗಳನ್ನು ಆಕೆಯಲ್ಲಿ ಹೇಳಿ, ಯಾರಿಗೂ ಹೇಳಬೇಡ ಎನ್ನಬಹುದು. ಆಗ ಈತ ತನ್ನನ್ನು ನಂಬುತ್ತಿದ್ದಾನೆ ಎಂದು ಆಕೆಗೆ ಅನಿಸುತ್ತದೆ.
ಆಕೆಯ ಕುಟುಂಬ
ತರುಣಿಯ ಕುಟುಂಬದ ಬಗ್ಗೆ ನಿಮಗೆ ಒಳಗೊಳಗೇ ಯಾವ ಭಾವನೆ ಇದ್ದರೂ ಅದನ್ನು ಹೊರಗೆ ತೋರಿಸಬಾರದು. ಯಾವ ಹುಡುಗಿಯೂ ತನ್ನ ಅಪ್ಪ ಅಥವಾ ಅಮ್ಮನನ್ನು ತನ್ನ ಗೆಳೆಯ ಟೀಕಿಸುವುದನ್ನು ಇಷ್ಟಪಡುವುದಿಲ್ಲ ಹಾಗೇನಾದರೂ ಮಾಡಿದರೆ ಆಕೆ ಭದ್ರಕಾಳಿ ಆಗಿಬಿಡುತ್ತಾಳೆ.
ಉತ್ತಮ ಪೋಷಾಕು
ಭಿಕ್ಷುಕನಂತೆ ಗಡ್ಡ ಬಿಟ್ಟುಕೊಂಡು, ತಲೆ ಬಾಚದೆ ಹರಿದ ಅಂಗಿ ಧರಿಸಿಕೊಂಡು ಓಡಾಡುತ್ತಿದ್ದರೆ ಯಾವ ತರುಣಿಯೂ ನಿಮ್ಮ ಬಳಿ ಸೋಕುವುದಿಲ್ಲ. ಉತ್ತಮ ಬಟ್ಟೆಬರೆ ಧರಿಸಿ. ದುಬಾರಿಯಾಗಿರಬೇಕೆಂದಿಲ್ಲ. ನಿಮ್ಮಲ್ಲಿ ಇರುವುದರಲ್ಲಿ ಚೆನ್ನಾಗಿದ್ದರಾಯಿತು. ಒಟ್ಟಾರೆ ನಿಮ್ಮ ಜೊತೆ ಓಡಾಡುವಾಗ ಆಕೆಯ ಮುಜುಗರ ಆಗಬಾರದು ಅಷ್ಟೇ. ಮೈಗೆ ಮೃದುವಾದ ಸುಗಂಧ ಪೂಸಿಕೊಂಡರೆ ಓಕೆ.
Chanakya Niti: ಬೆಳೆದ ಮಗನ ಮುಂದೆ ಪೋಷಕರ ಸರಸ ಹೇಗಿರಬೇಕು?
ಉದ್ಯೋಗವೊಂದಿರಲಿ
ಎಷ್ಟೇ ಜೋಕ್ ಮಾಡಲಿ, ಮೃದುವಾಗಿ ಮಾತಾಡಲಿ, ಸೋಮಾರಿಗಳನ್ನು ತರುಣಿಯರು ಮೆಚ್ಚುವುದಿಲ್ಲ. ಈತ ಪರಿಶ್ರಮಿ, ಚೆನ್ನಾಗಿ ದುಡಿಯುತ್ತಾನೆ, ಜೀವನದಲ್ಲಿ ಒಳ್ಳೆಯ ಸ್ಥಿತಿಗೆ ಹೋಗಬಲ್ಲ, ತನ್ನನ್ನು ಸಾಕಬಲ್ಲ ಎಂದು ಆಕೆಗೆ ಅನಿಸಬೇಕು. ತನ್ನ ಮಗುವಿಗೆ ಜವಾಬ್ದಾರಿಯುತ ತಂದೆ ಆಗಬಲ್ಲ ಅಂತ ಆಕೆಯ ಒಳಮನಸು ಹೇಳಬೇಕು. ಹೀಗಾಗಿ ನಿಮಗೆ ಕೆಲಸವೊಂದಿರಬೇಕು. ಅಥವಾ ಕೆಲಸ ಮಾಡುವ ಛಾತಿ ಇರಬೇಕು.
ಒಳ್ಳೆಯ ಕೇಳುಗ
ಪ್ರತೀ ಮಹಿಳೆಯೂ ಯಾರೊಂದಿಗಾದರೂ ಮಾತನಾಡಲು ಬಯಸುತ್ತಾಳೆ, ಆದ್ದರಿಂದ ಪುರುಷ ಕೇಳುಗನಾಗಿದ್ದರೆ ಅದು ಕೇಕ್ ಮೇಲೆ ಐಸಿಂಗ್ ಇದ್ದಂತೆ. ಹುಡುಗಿಯ ಮಾತನ್ನು ಗಂಭೀರವಾಗಿ ಆಲಿಸುವ ಮತ್ತು ಅವಳ ಮಾತುಗಳನ್ನು ಅರ್ಥಮಾಡಿಕೊಳ್ಳುವ ಪುರುಷನು ಮಹಿಳೆಗೆ ಹೆಚ್ಚು ಆಕರ್ಷಕವಾಗಿರುತ್ತಾನೆ. ಪ್ರತಿಯೊಬ್ಬ ಮಹಿಳೆ ತನ್ನ ಜೀವನ ಸಂಗಾತಿಯು ತನ್ನ ಮಾತನ್ನು ಕೇಳಲು ಮತ್ತು ಅವಳ ಮಾತುಗಳಿಗೆ ಗಮನ ಕೊಡಬೇಕೆಂದು ನಿರೀಕ್ಷಿಸುತ್ತಾಳೆ. ಇದಕ್ಕೆ ವಿರುದ್ಧವಾಗಿ, ಒಬ್ಬ ಪುರುಷನು ತನ್ನ ಬಗ್ಗೆ ಮಾತ್ರ ಮಾತನಾಡಿದರೆ ಅವನು ಎಂದಿಗೂ ಮಹಿಳೆಗೆ ಆಕರ್ಷಕವಾಗಿರಲು ಸಾಧ್ಯವಿಲ್ಲ.
ಚಾಣಕ್ಯ ನೀತಿ: ಹಣಕ್ಕಿಂತಲೂ ಮುಖ್ಯವಾದ ಈ ಮೂರು ವಿಚಾರಗಳು ತಿಳಿದಿರಲೇಬೇಕು
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.