ಸಾಮಾನ್ಯವಾಗಿ ಒಬ್ಬ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಎಷ್ಟು ಮದುವೆಯಾಗಬಹುದು, ಒಂದು, ಎರಡು ಮೂರು ಇನ್ನು ಹೆಚ್ಚೆಂದರೆ 10. ಆದರೆ ಸೌದಿ ಅರೇಬಿಯಾದ ವ್ಯಕ್ತಿಯೊಬ್ಬ ಬರೋಬ್ಬರಿ 53 ಮದುವೆಯಾಗಿದ್ದಾನಂತೆ.
ಸೌದಿ ಅರೇಬಿಯಾ: ಸಾಮಾನ್ಯವಾಗಿ ಒಬ್ಬ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಎಷ್ಟು ಮದುವೆಯಾಗಬಹುದು, ಒಂದು, ಎರಡು ಮೂರು ಇನ್ನು ಹೆಚ್ಚೆಂದರೆ 10. ಆದರೆ ಸೌದಿ ಅರೇಬಿಯಾದ ವ್ಯಕ್ತಿಯೊಬ್ಬ ಬರೋಬ್ಬರಿ 53 ಮದುವೆಯಾಗಿದ್ದಾನಂತೆ. ಇದನ್ನು ಸ್ವತಃ ಆತನೇ ಹೇಳಿಕೊಂಡಿದ್ದಾನೆ. 43 ವರ್ಷದಲ್ಲಿ 53 ಮದುವೆಯಾಗಿದ್ದಾಗಿ ಆತ ಹೇಳಿಕೊಂಡಿದ್ದಾನೆ. ಗಲ್ಫ್ ನ್ಯೂಸ್ ವರದಿಯ ಪ್ರಕಾರ, ಈತನಿಗೆ ಇಷ್ಟೊಂದು ಮದುವೆಯಾಗುವ ಉದ್ದೇಶವಿರಲಿಲ್ಲವಂತೆ. ಆದರೆ ಶಾಂತಿಯ ಹುಡುಕಾಟ ಹಾಗೂ ಸಂಬಂಧದಲ್ಲಿ ಸ್ಥಿರತೆ ಕಾಯ್ದುಕೊಳ್ಳುವ ಸಲುವಾಗಿ ತಾನು ಇಷ್ಟೊಂದು ಮದುವೆಯಾದೆ ಎಂದು ಆತ ಹೇಳಿಕೊಂಡಿದ್ದಾನೆ.
ಹೀಗೆ ಇಷ್ಟೊಂದು ಮದುವೆಯಾದ ವ್ಯಕ್ತಿಯನ್ನು 63 ವರ್ಷದ ಅಬು ಅಬ್ದುಲ್ಲಾ ಎಂದು ಗುರುತಿಸಲಾಗಿದೆ. ಅಲ್ಲದೇ ಈತನ್ನು ಶತಮಾನದ ಬಹುಪತ್ನಿತ್ವವಾದಿ (polygamist) ಎಂದು ಗಲ್ಫ್ ಮಾಧ್ಯಮ ಬಿಂಬಿಸಿದೆ. ಸೌದಿ ಅರೇಬಿಯಾದ ಸ್ಥ(Saudi Arebia) ಳೀಯ ಟಿವಿ ಚಾನೆಲ್ ಎಂಬಿಸಿಯ ಸಂದರ್ಶನದಲ್ಲಿ ಭಾಗಿಯಾದ ಈ ಅಬ್ದುಲ್ಲಾ, ಸದ್ಯ ಓರ್ವ ಮಹಿಳೆಯನ್ನು ಮದುವೆಯಾಗಿದ್ದು, ತನಗಿನ್ನು ಮದುವೆಯಾಗುವ ಉದ್ದೇಶವಿಲ್ಲ ಎಂದು ಹೇಳಿಕೊಂಡಿದ್ದಾನೆ. ನಾನು ಮೊದಲ ಬಾರಿ ಮದುವೆಯಾದಾಗ ನಾನು ಒಂದಕ್ಕಿಂತ ಹೆಚ್ಚು ಮಹಿಳೆಯರನ್ನು ಮದುವೆಯಾಗುವ ಯೋಜನೆಯನ್ನು ಹೊಂದಿರಲಿಲ್ಲ. ಏಕೆಂದರೆ ನಾನು ಆಗ ಆರಾಮವಾಗಿದ್ದೆ ಹಾಗೂ ಮಕ್ಕಳನ್ನು ಹೊಂದಿದ್ದೆ. ಆದರೆ ಅದಾಗಿ ಸ್ವಲ್ಪ ಸಮಯದ ನಂತರ ಸಮಸ್ಯೆಗಳು ಶುರುವಾದವು, ಹೀಗಾಗಿ ನಾನು ಮತ್ತೆ ಮದುವೆಯಾಗಲು ನಿರ್ಧರಿಸಿದೆ. ನಾನು ಮತ್ತೆ ಮದುವೆಯಾಗಲು ನಿರ್ಧರಿಸಿದಾಗ ನನ್ನ ವಯಸ್ಸು 23 ವರ್ಷವಾಗಿತ್ತು. ನಾನು ನನ್ನ ನಿರ್ಧಾರವನ್ನು ನನ್ನ ಪತ್ನಿಗೆ ತಿಳಿಸಿದೆ ಎಂದು ಅಬ್ದುಲ್ಲಾ ಟಿವಿ ಸಂದರ್ಶನದಲ್ಲಿ ಹೇಳಿದ್ದಾನೆ.
ಅಯ್ಯೋ ಇರೋ ಒಬ್ಳನ್ನೇ ಮೇಂಟೇನ್ ಮಾಡಕ್ಕಾಗ್ತಿಲ್ಲ ಅನ್ನೋರು ಇಲ್ ಕೇಳಿ
ತನ್ನ ಮೊದಲ ಪತ್ನಿಯೊಂದಿಗೆ ಜಗಳಗಳು ಆಗಲು ಶುರುವಾದಾಗ ನಾನು ಎರಡನೇ ಮದುವೆಯಾದೆ. ಆದರೆ ಎರಡನೇ ಪತ್ನಿಯೊಂದಿಗೂ ಹೊಂದಾಣಿಕೆಯಾಗದೇ ವಾಗ್ವಾದ ಶುರುವಾದಾಗ ಮೂರನೇ ಹಾಗೂ ನಾಲ್ಕನೇ ಮದುವೆಯಾದೆ. ಇವರಲ್ಲಿ ಮೊದಲ ಎರಡನೇಯ ಹಾಗೂ ಮೂರನೇಯ ಪತ್ನಿಗೆ ವಿಚ್ಛೇದನ ನೀಡಿದ್ದೇನೆ ಎಂದು ಅಬ್ದುಲ್ಲಾ ಹೇಳಿಕೊಂಡಿದ್ದಾನೆ. 43 ವರ್ಷಗಳ ಸುಧೀರ್ಘ ವರ್ಷಗಳಲ್ಲಿ ನಾನು 53 ಜನರನ್ನು ಮದುವೆ ಆದೆ. ನಾನು 20 ವರ್ಷದವನಿದ್ದಾಗ ಮೊದಲ ಮದುವೆ ಆದೆ. ನನ್ನ ಮೊದಲ ಪತ್ನಿ ನನಗಿಂತ 6 ವರ್ಷ ದೊಡ್ಡವಳಾಗಿದ್ದಳು ಎಂದು ಆತ ಹೇಳಿದ್ದಾನೆ. ಅಲ್ಲದೇ ಒಂದು ಮದುವೆಯಂತು ಒಂದು ರಾತ್ರಿಯಲ್ಲೇ ಅಂತ್ಯವಾಯ್ತು ಎಂದು ಆತ ಹೇಳಿಕೊಂಡಿದ್ದಾನೆ.
ಪ್ರಪಂಚದಲ್ಲಿರುವ ಪ್ರತಿಯೊಬ್ಬ ಪುರುಷ (Man) ಒಂದು ಮಹಿಳೆಯ (womn) ಜೊತೆ ಬದುಕಲು ಬಯಸುತ್ತಾನೆ. ಅಲ್ಲದೇ ಆಕೆಯೊಂದಿಗೆ ಕೊನೆವರೆಗೂ ಬದುಕಲು ಬಯಸುತ್ತಾನೆ. ಆದರೆ ಸಣ್ಣ ಪ್ರಾಯದ ಮಹಿಳೆಯರಲ್ಲಿ ಸ್ಥಿರತೆ ಇರುವುದಿಲ್ಲ. ಆದರೆ ಸ್ವಲ್ಪ ಹಿರಿಯ ಮಹಿಳೆಯರಲ್ಲಿ ಸ್ಥಿರತೆ ಇರುತ್ತದೆ ಎಂದು ಆತ ಕಂಡು ಕೊಂಡಿದ್ದಾಗಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾನೆ. ಅಲ್ಲದೇ ಹೀಗೆ ತಾನು ಮದುವೆಯಾದ ಎಲ್ಲ ಹೆಂಗಸರು ಕೂಡ ಸೌದಿ ಅರೇಬಿಯಾದವರೆ ಎಂದು ಆತ ಹೇಳಿಕೊಂಡಿದ್ದಾನೆ. ಆದರೆ ಈತ ಬ್ಯುಸಿನೆಸ್ ಟ್ರಿಪ್ ವೇಳೆ ವಿದೇಶಕ್ಕೆ ಹೋಗಿದ್ದಾಗ ವಿದೇಶಿ ಮಹಿಳೆಯರನ್ನು ಕೂಡ ಮದುವೆಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾನೆ.
Udupi ತಲಾಕ್ ನಂತೆ ಬಹುಪತಿತ್ವವನ್ನೂ ನಿಷೇಧಿಸಲು ಮೋದಿಗೆ ಮುಸ್ಲಿಂ ಕುಟುಂಬದ ಮನವಿ
ಒಂದು ಮದುವೆಯನ್ನೇ ನಿಭಾಯಿಸಲಾಗದೇ ಅನೇಕರು ಹೆಣಗಾಟ ನಡೆಸುತ್ತಾರೆ. ಅಂತಹದರಲ್ಲಿ ಈ ಸೌದಿಯ ಬಾಬಾ 43 ವರ್ಷದಲ್ಲಿ 53 ಮದುವೆಯಾಗಿದ್ದಾನೆ. ಅಲ್ಲದೇ ಇಷ್ಟೊಂದು ಮದ್ವೆಯಾದ ಈತನ ಮಾತು, ಪ್ರಪಂಚದ ಸಾವಿರಾರು ಸಿಂಗಲ್ಸ್‌ಗಳನ್ನು ಬೆಚ್ಚಿ ಬೀಳಿಸಿರೋದಂತು ನಿಜ.!
ಪ್ರಸ್ತುತ ಇತ್ತೀಚೆಗೆ ಯುವ ಸಮೂಹ ಸಂಸಾರದ ನೊಗ ಹೊರಲಾರದೇ ಸಂಸಾರದಿಂದ ದೂರ ಬಂದು ಬದುಕಲು ಬಯಸುತ್ತಾರೆ. ಇತ್ತೀಚೆಗಂತೂ ವಿಚ್ಛೇದನ ಪಡೆದುಕೊಂಡು ಒಂಟಿಯಾಗಿ ಬದುಕುವವರ ಸಂಖ್ಯೆ ಹೆಚ್ಚಿದೆ. ಭಾರತದಲ್ಲಂತೂ ಇತ್ತೀಚೆಗೆ ಯುವಕ ಯುವತಿಯರಿಬ್ಬರು ಆರ್ಥಿಕವಾಗಿ ಸ್ವಾವಲಂಬಿಗಳಾಗಿದ್ದು, ಬಹುತೇಕ ಹೆಣ್ಣು ಮಕ್ಕಳು ವಿವಾಹ ಬಂಧನಕ್ಕೊಳಗಾಗದೇ ಸ್ವಾತಂತ್ರವಾಗಿ ಬದುಕುವ ನಿರ್ಧಾರ ಕೈಗೊಳ್ಳುತ್ತಿದ್ದಾರೆ.