ಸಾಮಾಜಿಕ ಜಾಲತಾಣ ಒಂದ್ಕಡೆ ದೂರದ ಜನರನ್ನು ಒಂದು ಮಾಡ್ತಿದೆ. ಜೊತೆಗೆ ಅನೇಕರಿಗೆ ವರವಾಗಿದೆ. ಆದ್ರೆ ಮಕ್ಕಳಿಗೆ ಇದು ದೊಡ್ಡ ಹೊಡೆತ ನೀಡ್ತಿದೆ. ಸಾಮಾಜಿಕ ಜಾಲತಾಣ ಬಳಕೆ ಮಾಡುವ ಮಕ್ಕಳ ಮಾನಸಿಕ ಸ್ಥಿತಿ ಹದಗೆಡ್ತಿದೆ.
ಇದು ಇಂಟರ್ನೆಟ್ ಯುಗ. ಪ್ರತಿಯೊಬ್ಬರೂ ಸಾಮಾಜಿಕ ಜಾಲತಾಣ ಬಳಕೆ ಮಾಡ್ತಾರೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಸಾಮಾಜಿಕ ಜಾಲತಾಣ ಬಳಸ್ತಾರೆ. ಸಾಮಾಜಿಕ ಜಾಲತಾಣ ದೂರದವರನ್ನು ಹತ್ತಿರಕ್ಕೆ ತರುತ್ತದೆ. ಹಾಗೆಯೇ ಸಾಮಾಜಿಕ ಜಾಲತಾಣ ನಕಾರಾತ್ಮಕ ಪ್ರಭಾವ ಕೂಡ ಬೀರುತ್ತದೆ. ಹದಿಹರೆಯದ ಹುಡುಗಿಯರ ಮೇಲೆ ಸಾಮಾಜಿಕ ಮಾಧ್ಯಮ ಹೆಚ್ಚು ಹಾನಿಯುಂಟು ಮಾಡುತ್ತದೆ. ಹದಿಹರೆಯದ ಹುಡುಗಿಯರ ಮಾನಸಿಕ ಆರೋಗ್ಯದ ಮೇಲೆ ಸಾಮಾಜಿಕ ಮಾಧ್ಯಮವು ಹೆಚ್ಚಿನ ಪ್ರಭಾವ ಬೀರುತ್ತದೆ. ಇಂದು ನಾವು ಹದಿಹರೆಯದ ಹುಡುಗಿಯರ ಮೇಲೆ ಸಾಮಾಜಿಕ ಜಾಲತಾಣ ಹೇಗೆ ಪ್ರಭಾವ ಬೀರುತ್ತೆ ಎಂಬುದನ್ನು ಹೇಳ್ತೇವೆ.
ಹದಿಹರೆಯ (Teenage) ಅಂದ್ರೇನು ? : ಹದಿಹರೆಯ ಎಂಬ ಪದವನ್ನು 15ರಿಂದ 17 ವರ್ಷದವರಿಗೆ ಹೇಳಲಾಗುತ್ತದೆ. ಇದು ಅರ್ಥವಾಗದ ವಯಸ್ಸು. ಬಾಲ್ಯದ ಜೀವನವೂ ಅಲ್ಲ, ವಯಸ್ಕ ಜೀವನವೂ ಅಲ್ಲದ ವಯಸ್ಸದು. ಸುತ್ತಲಿನ ಪರಿಸರ ಮಕ್ಕಳ ಮಾನಸಿಕ ಆರೋಗ್ಯ (Mental Health) ದ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ.
ಹದಿಹರೆಯದ ವಯಸ್ಸಿನಲ್ಲಿ ಸಾಮಾಜಿಕ ಜಾಲತಾಣ (Social Network) ದ ಪ್ರಭಾವ : ಸಾಮಾಜಿಕ ಜಾಲತಾಣಗಳು ಇತ್ತೀಚಿಗೆ ಹೆಚ್ಚು ಪ್ರಸಿದ್ಧಿ ಪಡೆದಿವೆ. ಮಕ್ಕಳು, ಸ್ನೇಹಿತರು ಹಾಗೂ ಸಂಬಂಧಿಕರ ಜೊತೆ ಅಪರಿಚಿತರ ಜೊತೆ ಸಂಪರ್ಕ ಬೆಳೆಸ್ತಾರೆ. ದೀರ್ಘಕಾಲದವರೆಗೆ ಸಾಮಾಜಿಕ ಜಾಲತಾಣ ಬಳಕೆ ಮಾಡುವುದ್ರಿಂದ ಅದು ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಹಾಳು ಮಾಡುತ್ತದೆ. ಮೊಬೈಲ್ ನಲ್ಲಿ ಹೆಚ್ಚು ಸಮಯ ಕಳೆಯುವ ಮಕ್ಕಳಿಗೆ ದೈಹಿಕ ಚಟುವಟಿಕೆ ಇಲ್ಲದಂತಾಗುತ್ತದೆ. ಓದಿನ ಮೇಲೆ ಗಮನ ಕಡಿಮೆಯಾಗುತ್ತದೆ. ಕುಟುಂಬದ ಜೊತೆ ಅವರು ಸಮಯ ಕಳೆಯುವುದಿಲ್ಲ. ಅನೇಕ ಮಕ್ಕಳು ಸಾರ್ವಜನಿಕರ ಜೊತೆ ಬೆರೆತು ಮಾತನಾಡುವುದನ್ನೇ ಮರೆತು ಬಿಟ್ಟಿದ್ದಾರೆ. ಇದು ಅವರ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ.
ಕಡಿಮೆಯಾಗುವ ನಿದ್ರೆ : ಹಗಲಿನಲ್ಲಿ ಮಾತ್ರವಲ್ಲದೆ ಅನೇಕ ಮಕ್ಕಳು ರಾತ್ರಿ ಕೂಡ ಸಾಮಾಜಿಕ ಜಾಲತಾಣ ಬಳಕೆ ಮಾಡ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಇರುವ ಮಕ್ಕಳಿಗೆ ಸಮಯ ಹೋಗಿದ್ದು ತಿಳಿಯೋದಿಲ್ಲ. ತಡರಾತ್ರಿಯವರೆಗೆ ಮೊಬೈಲ್ ಬಳಕೆಯಿಂದ ಅವರ ನಿದ್ರೆ ಕಡಿಮೆಯಾಗುತ್ತದೆ. ಇದು ಹಗಲಿನಲ್ಲಿ ಕಿರಿಕಿರಿಯುಂಟು ಮಾಡುತ್ತದೆ. ನಿದ್ರಾಹೀನತೆ ಮಾನಸಿಕ ಸಮಸ್ಯೆಗೆ ಕಾರಣವಾಗುತ್ತದೆ.
ಹಾಳಾಗುವ ಸಂಬಂಧ : ಮೊದಲೇ ಹೇಳಿದಂತೆ ಸಾಮಾಜಿಕ ಜಾಲತಾಣ ಹೆಚ್ಚು ಬಳಸುವ ಜನರು ಅನೇಕ ಸ್ನೇಹಿತರನ್ನು ಹೊಂದಿರ್ತಾರೆ ನಿಜ. ಆದ್ರೆ ಅವರಿಗೆ ವ್ಯಕ್ತಿಗಳು ಎದುರಿಗೆ ಬಂದ್ರೆ ಏನು ಮಾತನಾಡಬೇಕು ಎಂಬುದು ತಿಳಿಯುವುದಿಲ್ಲ. ಮನೆಗೆ ಬಂದ ಸಂಬಂಧಿಕರನ್ನು, ಸ್ನೇಹಿತರನ್ನು ಮಾತನಾಡಿಸಲು ಮಕ್ಕಳಿಗೆ ಬರೋದಿಲ್ಲ. ಇದ್ರಿಂದ ಸಂಬಂಧ ಹಾಳಾಗಲು ಶುರುವಾಗುತ್ತದೆ. ಗಂಟೆಗಟ್ಟಲೆ ಸಾಮಾಜಿಕ ಜಾಲತಾಣದಲ್ಲಿ ಚಾಟ್ ಮಾಡುವ ಮಕ್ಕಳಿಗೆ ತಂದೆ – ತಾಯಿ ಹತ್ತಿರ ಮಾತನಾಡಲು ವಿಷ್ಯವಿರುವುದಿಲ್ಲ.
ಇದನ್ನೂ ಓದಿ: ಯಪ್ಪಾ..ಫಸ್ಟ್‌ನೈಟ್‌ಗೆ ಬೆಡ್‌ರೂಮ್‌ನಲ್ಲಿ ದಂಪತಿ ಜೊತೆ ವಧು ತಾಯಿಯೂ ಇರ್ಬೇಕಂತೆ !
ಹೆಚ್ಚಾಗುವ ಅಸೂಯೆ : ಸಾಮಾಜಿಕ ಜಾಲತಾಣ ಬಳಸುವ ಮಕ್ಕಳು ತಮ್ಮ ವಯಸ್ಸಿನ ಇತರ ಮಕ್ಕಳ ಜೊತೆ ತಮ್ಮ ಜೀವನವನ್ನು ಹೋಲಿಕೆ ಮಾಡಿಕೊಳ್ತಾರೆ. ಬೇರೆ ಮಕ್ಕಳ ಖುಷಿ ಫೋಟೋಗಳನ್ನು ನೋಡಿ ಇವರು ಅಸೂಯೆಪಟ್ಟುಕೊಳ್ತಾರೆ. ನನ್ನ ಬಳಿ ಅದಿಲ್ಲ, ಇದಿಲ್ಲ ಎನ್ನುವ ನೋವು ಅವರನ್ನು ಕಾಡುತ್ತದೆ. ಇದೇ ಕಾರಣವನ್ನಿಟ್ಟುಕೊಂಡು ಪಾಲಕರನ್ನು ದ್ವೇಷಿಸುವ ಮಕ್ಕಳಿದ್ದಾರೆ. ಮಕ್ಕಳ ವರ್ತನೆ ಬದಲಾಗಲು ಸಾಮಾಜಿಕ ಜಾಲತಾಣ ಕಾರಣವಾಗ್ತಿದೆ.
ಇದನ್ನೂ ಓದಿ: RELATIONSHIP: ಸಮಯ ಬೇಕೆಂದಾಗ ಬ್ರೇಕ್ ತೆಗೆದುಕೊಳ್ಳುವ ಮುನ್ನ ಈ ವಿಷಯ ಗಮನದಲ್ಲಿರಲಿ!
ಹೆಚ್ಚಾಗುವ ಮಾನಸಿಕ ಒತ್ತಡ : ಸಾಮಾಜಿಕ ಜಾಲತಾಣದಲ್ಲಿ ಖಾತೆ ತೆರೆದ್ಮೇಲೆ ಅದ್ರಲ್ಲಿ ಏನು ಹಾಕ್ಬೇಕು ಎಂಬುದು ತಿಳಿಯುವುದಿಲ್ಲ. ಸದಾ ಅದ್ರ ಬಗ್ಗೆ ಆಲೋಚನೆ ಮಾಡಲು ಶುರು ಮಾಡ್ತಾರೆ. ಇದ್ರಿಂದ ಮನಸ್ಸು ಗೊಂದಲಕ್ಕೀಡಾಗುತ್ತದೆ. ಹಾಗೆಯೇ ಅಪರಿಚಿತರ ಜೊತೆ ಸಂಬಂಧ ಅತಿಯಾಗಿ ಅನೇಕರು ಆಪತ್ತು ತಂದುಕೊಂಡಿದ್ದಾರೆ.