ಪತ್ನಿಗೆ ಆದಾಯವಿದ್ದರೂ ಪತಿ ಜೀವನಾಂಶದಿಂದ ವಂಚಿತಳಾಗಲು ಸಾಧ್ಯವಿಲ್ಲ, ಹೈಕೋರ್ಟ್ ಮಹತ್ವದ ತೀರ್ಪು!

By Suvarna NewsFirst Published May 31, 2022, 8:05 PM IST
Highlights
  • ವಿಚ್ಚೇದನ ಪಡೆದ ದಂಪತಿಗಳ ಜೀವನಾಂಶ ಕುರಿತು ಮಹತ್ವದ ತೀರ್ಪು
  • ಪತ್ನಿ ಸಂಪಾದಿಸುತ್ತಿದ್ದರೆ ಆಕೆಗೆ ಪತಿ ಜೀವನಾಂಶ ನೀಡಬೇಕು
  • ಪತ್ನಿ ಆದಾಯವಿದೆ ಎಂದು ಆಕೆಗೆ ಜೀವನಾಂಶ ನೀಡದಿರಲು ಸಾಧ್ಯವಿಲ್ಲ

ಜೈಪುರ(ಮೇ.31): ವಿಚ್ಚೇದನ ಪಡೆದ ಜೀವನಾಂಶ ಕುರಿತು ರಾಜಸ್ಥಾನ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪತ್ನಿ ಆದಾಯಗಳಿಸುತ್ತಿದ್ದರೆ ಆಕೆಯನ್ನು ಜೀವನಾಂಶದಿಂದ ವಂಚಿತಳಾಗಿ ಮಾಡಲು ಸಾಧ್ಯವಿಲ್ಲ. ಪತ್ನಿಗೆ ನಿಗದಿಪಡಿಸಿದ ಮೊತ್ತವನ್ನು ಜೀವನಾಂಶವಾಗಿ ಪತಿ ನೀಡಲೇಬೇಕು ಎಂದು ಹೈಕೋರ್ಟ್ ಹೇಳಿದೆ.

ಬಿಕಾರನೇರ್‌ ಮೂಲದ ದಂಪತಿಗಳ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಈ ಮಹತ್ವದ ತೀರ್ಪು ನೀಡಿದೆ. ಜೀವನಾಂಶ ಕುರಿತು ತಕರಾರಿನ ಕಾರಣ ದಂಪತಿಗಳು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಮಹತ್ವದ ತೀರ್ಪು ನೀಡಿದೆ. 

Latest Videos

ಮದ್ವೆಯಾಗಿ 6 ವರ್ಷವಾದ್ರೂ ನಡೆದಿಲ್ಲ ಫಸ್ಟ್ ನೈಟ್, ಬೀದಿಜಗಳವಾದ ಸೆಲೆಬ್ರೆಟಿ ಡಿವೋರ್ಸ್!

ಮೇ.27, 2010ರಲ್ಲಿ ವಿವಾಹವಾಗಿದ್ದ ಈ ದಂಪತಿಗಳು ಅಮೆರಿಕಗೆ ಸ್ಥಳಾಂತರವಾಗಿದ್ದರು. ಉದ್ಯೋಗದ ಕಾರಣ ಅಮೆರಿಕದ ತೆರಳಿದ ಈ ದಂಪತಿಗಳು  ಮೇ.21, 2011ರಲ್ಲಿ ಪೋಷಕರಾಗಿದ್ದಾರೆ. ಮಗ ಹುಟ್ಟಿದ ಬಳಿಕ ಇವರ ದಾಂಪತ್ಯ ಜೀವನದಲ್ಲಿ ಬಿರುಕು ಕಾಣಿಸಿಕೊಂಡಿದೆ. ದಾಂಪತ್ಯ ಜೀವನ ಸರಿದಾರಿಗೆ ತರಲು ಕುಟುಂಬ ಕೂಡ ಹಲವು ಪ್ರಯತ್ನ ಮಾಡಿದೆ. ಆದರೆ ಯಾವುದೂ ಕೈಗೂಡಲಿಲ್ಲ.

2013ರಲ್ಲಿ ಪತಿ ಹಾಗೂ ಪತ್ನಿ ಇಬ್ಬರು ಒಪ್ಪಿಗೆಯಿಂದ ವಿಚ್ಚೇದನಕ್ಕೆ ನಿರ್ಧರಿಸಿದ್ದಾರೆ. ನವೆಂಬರ್, 2013ರಲ್ಲಿ ಫ್ಯಾಮಿಲಿ ಕೋರ್ಟ್ ವಿಚ್ಚೇದನ ನೀಡಿದೆ. ವಿಚ್ಚೇದನದ ಬಳಿಕ ಪತ್ನಿ CRPC ಸೆಕ್ಷನ್ 125ರ ಅಡಿಯಲ್ಲಿ ಜೀವನಾಂಶ ನೀಡಬೇಕು ಎಂದು ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಅರ್ಜಿ ಹಾಕಿದ್ದಾರೆ. 

ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಪತ್ನಿಗೆ ಜೀವನಾಂಶವಾಗಿ 50,000 ರೂಪಾಯಿ ಹಾಗೂ ಮಗನಿಗೆ 20,000 ರೂಪಾಯಿ ಜೀವನಾಂಶ ನೀಡಲು ಕೋರ್ಟ್ ಸೂಚಿಸಿದೆ. ಈ ಸೂಚನೆಯಿಂದ ಬೇಸತ್ತ ಪತ್ನಿ ಜೀವನಾಂಶವನ್ನು ಹೆಚ್ಚಿಸಬೇಕು ಎಂದು ಮತ್ತೆ ಮನವಿ ಮಾಡಿದ್ದರು. ತನಗೆ 2.5 ಲಕ್ಷ ರೂಪಾಯಿ ಹಾಗೂ ಪುತ್ರನಿಗೆ 1 ಲಕ್ಷ ರೂಪಾಯಿ ಒಟ್ಟು 3.5 ಲಕ್ಷ ರೂಪಾಯಿ ಜೀವನಾಂಶ ನೀಡಬೇಕು ಎಂದು ಮನವಿ ಮಾಡಿದ್ದರು.

ಹೆಂಡ್ತಿಗೆ ಮ್ಯಾಗಿ ಬಿಟ್ಟು ಮತ್ತೇನ್ ಮಾಡೋಕೆ ಬರಲ್ಲ, ಮೂರು ಹೊತ್ತು ತಿಂದು ಬೇಸತ್ತು ಡಿವೋರ್ಸ್ ನೀಡಿದ ಪತಿ !

ಈ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಪತ್ನಿಗೆ ನೀಡಬೇಕಿರುವ ಜೀವನಾಂಶ ಹೆಚ್ಚಿಸಲು ಸೂಚಿಸಿದ ಆದೇಶವನ್ನು ಹಿಂಪಡೆಯಲು ಕೋರಿ ಪತಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಿಚ್ಚೇದಿತ ಪತ್ನಿಗೆ ಉದ್ಯೋಗವಿದ್ದು ಆಕೆಯೂ ಸಂಪಾದಿಸುತ್ತಿದ್ದಾಳೆ. ಹೀಗಾಗಿ ಜೀವನಾಂಶ ಹೆಚ್ಚಿಸಬೇಕು ಅನ್ನೋ ಆದೇಶವನ್ನು ಹಿಂಪಡೆಯಬೇಕು ಎಂದು ಪತಿ ಅರ್ಜಿ ಸಲ್ಲಿಸಿದ್ದರು. 

ಪತಿ ಆದಾಯಗಳಿಸುತ್ತಿದ್ದಾಳೆ ಅನ್ನೋ ಕಾರಣಕ್ಕೆ ಜೀವನಾಂಶದಿಂದ ವಂಚಿತಳಾಗಿ ಮಾಡಲು ಸಾಧ್ಯವಿಲ್ಲ. ವಿಚ್ಚೇದನ ನಿಯಮದಂತೆ ಆಕೆ ಪತಿಯಿಂದ ಜೀವನಾಂಶ ಪಡೆಯಲು ಅರ್ಹಳಾಗಿದ್ದಾಳೆ . ಪತಿ ತನ್ನ ಆದಾಯದ 12ರಲ್ಲಿ ಒಂದು ಭಾಗವನ್ನು  ಪತ್ನಿಗೆ ಜೀವನಾಂಶವಾಗಿ ನೀಡಬೇಕು ಎಂದು ಹೈಕೋರ್ಟ್ ಸೂಚಿಸಿದೆ.

ಗಂಡು ಮಗು ಆಗಿಲ್ಲವೆಂದು ಪತ್ನಿಗೆ ಡೈವೋರ್ಸ್‌
ಗಂಡು ಮಗು ಹುಟ್ಟಿಲ್ಲವೆಂಬ ಕಾರಣಕ್ಕೆ ಡೈವೋರ್ಸ್‌ಗೆ ಅರ್ಜಿ ಹಾಕಲು ಮುಂದಾಗಿರುವ ಪತಿಯ ವಿರುದ್ಧ ಗೃಹಿಣಿಯೊಬ್ಬರು ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದ ಘಟನೆ ಯಾದಗಿರಿಯಲ್ಲಿನಡೆದಿದೆ.ಮೂರು ಹೆಣ್ಣು ಮಕ್ಕಳೇ ಹುಟ್ಟಿದ್ದು, ಗಂಡು ಮಗು ಆಗಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿದ ಪತಿರಾಯ, ಆಕೆಯನ್ನು ಮಕ್ಕಳ ಸಮೇತ ತವರುಮನೆಗೆ ಕಳುಹಿಸಿ, ಮತ್ತೊಂದು ಮದುವೆಯಾಗಿದ್ದಾನೆಂದು ದೂರಿ, ಗುರುವಾರ ಮಧ್ಯಾಹ್ನ ಇಲ್ಲಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ವ್ಯಾಜ್ಯ ನಡೆದಿದೆ.
 

click me!