ಪ್ರತಿಯೊಬ್ಬ ಪೋಷಕರೂ (Parents) ತಮ್ಮ ಮಕ್ಕಳು (Children) ಜೀವನದಲ್ಲಿ ಯಶಸ್ವೀ ವ್ಯಕ್ತಿಗಳಾಗಬೇಕು ಎಂದು ಆಶಿಸುತ್ತಾರೆ. ಅದಕ್ಕಾಗಿ ಮಕ್ಕಳನ್ನು ಅತಿ ಮುದ್ದು ಮಾಡುವುದು, ಬೈಯುವುದು, ಕೇಳಿದ್ದನ್ನೆಲ್ಲಾ ಕೊಡಿಸುವುದು ಮೊದಲಾದವನ್ನು ಮಾಡುತ್ತಾರೆ. ಆದ್ರೆ ನಿಜವಾಗಿಯೂ ಪೋಷಕರು ಮಕ್ಕಳ ಜೊತೆ ಹೇಗಿರಬೇಕು ? ಟಾಟಾ ಗ್ರೂಪ್‌ನ (TATA Group) ಮುಖ್ಯ ಸುಸ್ಥಿರತೆ ಅಧಿಕಾರಿ ಸಿದ್ಧಾರ್ಥ್ ಶರ್ಮಾ ಏನ್ ಹೇಳ್ತಾರೆ ಕೇಳೋಣ.
ಮಕ್ಕಳು (Children) ಎಲ್ಲಾ ರೀತಿಯ ಸವಾಲುಗಳನ್ನು ಎದುರಿಸುತ್ತಾರೆ. ಆ ಸವಾಲುಗಳನ್ನು (Problems) ಎದುರಿಸಿ ವಿಜಯಿಗಳಾದಾಗ ಅವರು ಸಾಮಾನ್ಯವಾಗಿ ಬಲವಾದ ವ್ಯಕ್ತಿಗಳಾಗಿ ವಿಕಸನಗೊಳ್ಳುತ್ತಿದ್ದಾರೆ ಎಂಬುದರ ಸಂಕೇತವಾಗಿದೆ. ಆದ್ದರಿಂದ, ಪೋಷಕರಾಗಿ (Parents), ಅವರ ಸಾಧನೆಗಳು ಮತ್ತು ಸೋಲುಗಳು ಎರಡನ್ನೂ ಸಮಾನವಾಗಿ ಒಪ್ಪಿಕೊಳ್ಳುವುದು ಮುಖ್ಯವಾಗಿದೆ. ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಉತ್ತಮವಾದದ್ದನ್ನು ಬಯಸುತ್ತಾರೆ ಅಂದರೆ ಅವರು ಸುರಕ್ಷಿತ, ಆರೋಗ್ಯಕರ, ಸಂತೋಷ ಮತ್ತು ಅಭಿವೃದ್ಧಿ ಹೊಂದುತ್ತಿದ್ದಾರೆ ಎಂದು ಖಚಿತಪಡಿಸಿಕೊಳ್ಳುತ್ತಾರೆ.
ಇತ್ತೀಚೆಗೆ, ಟಾಟಾ ಗ್ರೂಪ್‌ನ (TATA Group) ಮುಖ್ಯ ಸುಸ್ಥಿರತೆ ಅಧಿಕಾರಿ ಸಿದ್ಧಾರ್ಥ್ ಶರ್ಮಾ ಅವರು ತಮ್ಮ ಪುತ್ರರೊಬ್ಬರು ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಪದವಿ ಪಡೆದ ನಂತರ ತಮ್ಮ ಸಂತೋಷವನ್ನು ಲಿಂಕ್ಡ್‌ಇನ್ ನಲ್ಲಿ ಹಂಚಿಕೊಂಡಿದ್ದಾರೆ. ಅವರ ಹಿರಿಯ ಮಗ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಿಂದ ಪಿಎಚ್‌ಡಿ ಓದುತ್ತಿದ್ದರೆ, ಅವರ ಮೂರನೇ ಮಗ ಫ್ರಾನ್ಸ್‌ನ ಪ್ರತಿಷ್ಠಿತ ಸಂಸ್ಥೆಯಿಂದ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾರೆ. ಅವರ ಎಲ್ಲಾ ಮಕ್ಕಳು ತಮ್ಮ ಶಿಕ್ಷಣದಲ್ಲಿ ಅಸಾಧಾರಣವಾಗಿ ಸಾಧನೆ ಮಾಡುತ್ತಿದ್ದಾರೆ. ಶರ್ಮಾ ತಮ್ಮ ಸುದೀರ್ಘ ಪೋಸ್ಟ್‌ನಲ್ಲಿ ತಮ್ಮ ಎಲ್ಲಾ ಮಕ್ಕಳು ಹೇಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಜೊತೆಯಲ್ಲೇ ಕೆಲವೊಂದು ಪೇರೆಂಟಿಂಗ್ ಟಿಪ್ಸ್‌ನ್ನು (Parenting tips) ಹಂಚಿಕೊಂಡಿದ್ದಾರೆ.
ಮಕ್ಕಳ ಕೈಯಲ್ಲಿ ಮೊಬೈಲ್, ಸುಧಾಮೂರ್ತಿಯವರು ಪೋಷಕರಿಗೆ ಹೇಳುವ ಕಿವಿಮಾತೇನು ?
ನಾನು ಸಾಮಾನ್ಯವಾಗಿ ವೈಯಕ್ತಿಕ ಸುದ್ದಿಗಳನ್ನು ಪೋಸ್ಟ್ ಮಾಡುವುದಿಲ್ಲ ಆದರೆ ಗಣಿತ ಮತ್ತು ಕಂಪ್ಯೂಟರ್ ಸೈನ್ಸ್‌ನಲ್ಲಿ ನಮ್ಮ ಕಿರಿಯ ಮಗನ ಹಾರ್ವರ್ಡ್ ಕಾಲೇಜಿನಿಂದ ಪದವಿ ಪಡೆದಿದ್ದು, ಸ್ನಾತಕೋತ್ತರ ಪದವಿಗಾಗಿ ಫ್ರಾನ್ಸ್‌ನ ಪ್ರೀಮಿಯರ್ ವಿಶ್ವವಿದ್ಯಾನಿಲಯವಾದ ಸೈನ್ಸಸ್ ಪೊಗೆ ಹೋಗುತ್ತಿದ್ದಾನೆ ಎಂದು ಶರ್ಮಾ ತಮ್ಮ ಪೋಸ್ಟ್‌ನ ಆರಂಭದಲ್ಲಿ ಹೇಳಿದ್ದಾರೆ. ನಂತರ ಪೋಷಕರು ಅನುಸರಿಸಬಹುದಾದ ಕೆಲವೊಂದು ಸಲಹೆಗಳನ್ನು ಹಂಚಿಕೊಂಡಿದ್ದಾರೆ.
ಮಕ್ಕಳಿಗೆ ಸಮಯ ಮತ್ತು ಪ್ರೀತಿ ನೀಡಬೇಕಾದುದು ತುಂಬಾ ಮುಖ್ಯ
ಪೋಷಕರು ಮುಖ್ಯವಾಗಿ ಮಕ್ಕಳಿಗೆ ಪ್ರೀತಿ (Love) ಮತ್ತು ಅವರಿಗಾಗಿ ಸಮಯ (Time)ವನ್ನು ಮೀಸಲಿಡಬೇಕು.ಮಕ್ಕಳಿಗೆ ಎಲ್ಲವನ್ನೂ ಕೊಡಿಸುವುದಕ್ಕಿಂತ ಮುಖ್ಯವಾಗಿ, ನಿಮ್ಮ ವೃತ್ತಿ ಯಾವುದೇ ಆಗಿರಲಿ, ಮಕ್ಕಳೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವುದು ಅತ್ಯಗತ್ಯ. ಮಕ್ಕಳು ನಿಮ್ಮ ಸಮಯ ಮತ್ತು ಪ್ರೀತಿಗಿಂತ ಹೆಚ್ಚಿನದನ್ನು ಬಯಸುವುದಿಲ್ಲ. ಪೋಷಕರ ಪ್ರೀತಿಯನ್ನು ನೀವಷ್ಟೇ ನೀಡಬೇಕು. ಬೇರೆ ಯಾರು ಸಹ ಇದನ್ನು ನೀಡಲು ಸಾಧ್ಯವಿಲ್ಲ. ಅಪ್ಪ-ಅಮ್ಮ ಇಬ್ಬರಲ್ಲಿ ಒಬ್ಬರಾದರೂ, ಗುಣಮಟ್ಟದ ಕ್ಷಣಗಳನ್ನು ಕಳೆಯಲು ಅವರೊಂದಿಗೆ ಯಾವಾಗಲೂ ಲಭ್ಯವಿರುವಂತೆ ನೀವು ಖಚಿತಪಡಿಸಿಕೊಳ್ಳಬೇಕು.
Child Care : ಓದಲು ಆಸಕ್ತಿ ತೋರದ ಮಕ್ಕಳ ಪಾಲಕರಿಗೆ ಇಲ್ಲಿದೆ ಟಿಪ್ಸ್
ಮಹಿಳೆಯರನ್ನು ಗೌರವಿಸಲು ಮಕ್ಕಳಿಗೆ ಕಲಿಸಿಕೊಡಬೇಕು
ಮಕ್ಕಳಿಗೆ ಸಾಮಾಜಿಕ ಬದ್ಧತೆಯನ್ನು ಕಲಿಸಿಕೊಡಬೇಕು. ಹಿರಿಯರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದು ತಿಳಿದಿರಬೇಕು. ಮಹಿಳೆಯರನ್ನು (Woman) ಗೌರವಿಸಲು ಮಕ್ಕಳಿಗೆ ಕಲಿಸುವುದು ಮುಖ್ಯ. ಈ ರೀತಿ ಉತ್ತಮ ಸಂಸ್ಕಾರವನ್ನು ಹೇಳಿಕೊಡುವುದರಿಂದ ಮಕ್ಕಳು ಬೆಳೆಯುತ್ತಾ ಉತ್ತಮ ವ್ಯಕ್ತಿಗಳಾಗುತ್ತಾರೆ. ಅತಿ ಮುಖ್ಯವಾಗಿ, ಮಹಿಳೆಯರಿಗೆ ಗೌರವ (Respect) ನೀಡುವುದನ್ನು ಕಲಿಸಿ ಮತ್ತು ಅವರು ನಮ್ಮ ಜೀವನವನ್ನು ಹೇಗೆ ಉತ್ಕೃಷ್ಟಗೊಳಿಸುತ್ತಾರೆ ಎಂಬುದನ್ನು ಅವರಿಗೆ ಹೇಳಿ ಕೊಡಿ ಎಂದು ಸಿದ್ಧಾರ್ಥ್ ಶುಕ್ಲಾ ಹೇಳುತ್ತಾರೆ.
ಮೌಲ್ಯದ ಬಗ್ಗೆ ಬೋಧನೆ
ಶರ್ಮಾ ಅವರು ಮಕ್ಕಳಿಗೆ ಹಣ, ಮನುಷ್ಯನ ಘನತೆ ಮತ್ತು ದುಡಿಮೆಯ ಮೌಲ್ಯವನ್ನು ಕಲಿಸುವ ಮಹತ್ವವನ್ನು ಎತ್ತಿ ತೋರಿಸುತ್ತಾರೆ. ಪೋಷಕರು ಮಕ್ಕಳಿಗೆ ಚರ್ಚಿಸಲು ಮತ್ತು ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವಕಾಶ ನೀಡುವುದು ಮುಖ್ಯ. ಪಾಲಕರು ಯಾವಾಗಲೂ ತಮ್ಮ ಭಿನ್ನಾಭಿಪ್ರಾಯಗಳನ್ನು ಮಕ್ಕಳಿಂದ ದೂರವಿಡಬೇಕು. ನಿಮ್ಮ ಮಕ್ಕಳ ಆಯ್ಕೆಗಳೊಂದಿಗೆ ಸಂತೋಷವಾಗಿರಿ- ಅದು ಅವರ ವೃತ್ತಿ, ಜೀವನ ಸಂಗಾತಿ ಅಥವಾ ಇನ್ನಾವುದೇ ವಿಷಯ ಆಗಿರಲಿ. ಅವರು ನೀವು ಹೇಳಿದಂತೆ ನಡೆಯಬೇಕು ಎಂಬ ಮನೋಭಾವ ಬಿಟ್ಟುಬಿಡಿ. ಅವರು ನಿಮ್ಮ ಮಕ್ಕಳು, ನೀವಲ್ಲ. ಅವರ ಬದುಕನ್ನು ಅವರೇ ಬದುಕಲು ಬಿಡಿ ಎಂದು ಸಿದ್ಧಾರ್ಥ್ ಹೇಳುತ್ತಾರೆ.