Propose Day 2022: ಹೆಣ್ಣಿಗೆ ಪ್ರಪೋಸ್ ಮಾಡೋದು ಗಂಡಿಗೆ ಯಾಕಿಷ್ಟು ಕಷ್ಟ?!

Suvarna News   | Asianet News
Published : Feb 08, 2022, 03:11 PM IST
Propose Day 2022: ಹೆಣ್ಣಿಗೆ ಪ್ರಪೋಸ್ ಮಾಡೋದು ಗಂಡಿಗೆ ಯಾಕಿಷ್ಟು ಕಷ್ಟ?!

ಸಾರಾಂಶ

ಇಂದು ಪ್ರಪೋಸ್ ಡೇ. ಅಯ್ಯಾ ಗಂಡು ಪ್ರಾಣಿಗಳೇ, ನೀವು ಪ್ರಪೋಸ್ ಮಾಡುವ ಮುನ್ನ ತಿಳಿದುಕೊಳ್ಳಬೇಕಾದ್ದೇನು ಗೊತ್ತೇ?    

ಪ್ರೀತಿಯಲ್ಲಿ (Love) ಬಿದ್ದ ಗಂಡು ಪ್ರಾಣಿಗಳ ಅತಿ ದೊಡ್ಡ ಸಮಸ್ಯೆ ಎಂದರೆ ಪ್ರಪೋಸ್ (Propose) ಮಾಡುವುದು. ಹೆಣ್ಣು ಪ್ರಾಣಿಗೆ ಈ ಸಮಸ್ಯೆ ಅಷ್ಟಾಗಿಲ್ಲ. ಅದು ತನ್ನ ಚಲನವಲನ, ದೇಹಭಂಗಿ (Gesture), ಸೂಕ್ಷ್ಮ ಸನ್ನೆಇತ್ಯಾದಿಗಳಿಂದಲೇ ತನ್ನ ಮನದ ಮಾತನ್ನು ಹೇಳುತ್ತದೆ. ಗಂಡು ನವಿಲು (Peacock) ಬಲುಭಾರದ ತನ್ನ ರೆಕ್ಕೆಯನ್ನೆಲ್ಲಾ ಕಿರೀಟದಂತೆ ಎತ್ತಿಕೊಂಡು ಪ್ರಯಾಸಪಡುತ್ತಾ ಕುಣಿದಾಡಿಬಿಡುತ್ತದೆ. ಆದರೆ ಹೆಣ್ಣು ನವಿಲು ಸುಮ್ಮನೇ ಮುಗುಳ್ನಕ್ಕು ತನ್ನ ಪಾಡಿಗೆ ತಾನು ಅಂಡು ತಿರುಗಿಸಿ ನಡೆದುಬಿಡುತ್ತದೆ. ಗಂಡು ಚಿರತೆ (Leopord) ಗಳು, ಗಂಡು ಹುಲಿ (Tiger) ಗಳು ತಮ್ಮ ಪ್ರೇಯಸಿಯ ಮನಸ್ಸು ಗೆಲ್ಲಲು ಇತರ ಗಂಡುಗಳ ಜೊತೆಗೆ ಕಾದಾಡಿ ಮೈಕೈಯೆಲ್ಲಾ ಪರಚಿಕೊಂಡು ಸುಸ್ತಾಗುತ್ತವೆ. ಹೆಣ್ಣು ಹುಲಿ ಮಾತ್ರ ಬಾಲ ಅಲ್ಲಾಡಿಸಿಕೊಂಡು ಆ ಗಂಡುಗಳಲ್ಲಿ ಒಂದನ್ನು ಮನಸ್ಸಲ್ಲೇ ಆರಿಸಿಕೊಂಡು, ಗೆದ್ದ ಹುಲಿಗೆ ಕೃಪೆ ಮಾಡಿದಂತೆ ಬೀಗುತ್ತದೆ!

ಮನುಷ್ಯರಲ್ಲೂ ಇದೇ ಕತೆ ಕಣ್ರೀ!

ಮನುಷ್ಯರಲ್ಲಿ ಗಂಡು ಎಂಬ ಪ್ರಾಣಿ ಇದೆಯಲ್ಲ, ಅದು ಜಗಮೊಂಡನಾದರೂ ಪ್ರೀತಿಯ ವಿಷಯಕ್ಕೆ ಬಂದಾಗ ಪೆದ್ದು. ಹೆಣ್ಣಿನಷ್ಟು ಸೂಕ್ಷ್ಮವಲ್ಲ. ಆದ್ದರಿಂದ ಹೆಣ್ಣು ರವಾನಿಸುವ ಸೂಕ್ಷ್ಮ ಸಂಕೇತಗಳೆಲ್ಲಾ ಅದಕ್ಕೆ ಅರ್ಥವಾಗಲ್ಲ. ಆದ್ದರಿಂದ ತನ್ನ ಮನಸ್ಸಿನ ಮಾತನ್ನು ಹೇಳುವುದಕ್ಕೆ ತಡಬಡಾಯಿಸುತ್ತಾ ಇರುತ್ತಾನೆ ಪುರುಷ ಪುಂಗವನೆಂಬ ಪ್ರಾಣಿ. ಅದಕ್ಕೆ ಮುಹೂರ್ತ ನೋಡುವುದೇನು, ಹೆಣ್ಣಿನ ಮೂಡ್ ತಿಳಿಯುವುದೇನು, ಪತ್ರ ಬರೆಯುವುದೇನು, ಪತ್ರವನ್ನು ರಕ್ತದಿಂದ ಸಿಂಗರಿಸುವುದೇನು, ಕೆಂಪು ಗುಲಾಬಿ ಹೂವು ಹುಡುಕುವುದೇನು, ಗಿಫ್ಟುಗಳಿಗಾಗಿ ತಡಕಾಡುವುದೇನು, ಹೃದಯವನ್ನೇ ಕಿತ್ತು ಕೊಡುವಂತೆ ನಟಿಸುವುದೇನು! ಒಂದೇ ಎರಡೇ!

Relationship Tips: ನಿಮ್ಮನ್ನು ಯಾರೂ ಮಿಸ್ ಮಾಡ್ಕೊಳ್ತಿಲ್ವಾ..ಈ ಟ್ರಿಕ್ ಯೂಸ್ ಮಾಡಿ

ಬಾಲಿವುಡ್‌ (Bollywood) ಮತ್ತಿತರ ಸಿನೆಮಾಗಳಲ್ಲಿ ನೀವು ಸಾವಿರಾರು ಬಾರಿ ಹೀರೋ ಹೀರೋಯಿನ್‌ಗೆ ಪ್ರಪೋಸ್ ಮಾಡುವ ದೃಶ್ಯಗಳನ್ನು ನೋಡಿರಬಹುದು. ಅವೆಲ್ಲಾ ಚಿತ್ರವಿಚಿತ್ರವಾಗಿರುತ್ತವೆ. ರಣರಂಗದಲ್ಲಿ ಪ್ರಪೋಸ್ ಮಾಡುವ ಸೀನ್‌ಗಳೂ ಇವೆ. ಆದರೆ ಸಾಮಾನ್ಯ ಮನುಷ್ಯರಾದ ನಮ್ಮನಿಮ್ಮಂಥವರಿಂದ ಅದೆಲ್ಲಾ ಸಾಧ್ಯವಿಲ್ಲ ತಾನೇ? ಆದ್ದರಿಂದ ನೀವು ಪ್ರಪೋಸ್ ಮಾಡೋಕೆ ಸೂಕ್ತ ಸನ್ನಿವೇಶವನ್ನು ನೀವಾಗೇ ಸೃಷ್ಟಿಸಿಕೊಳ್ಳಬೇಕಾಗುತ್ತೆ. ಹಾಗಂತ ಕಾಸ್ಟ್‌ಲೀ ಹೋಟೆಲ್‌ನಲ್ಲಿ, ನೂರಾರು ಕ್ಯಾಂಡಲ್ ಲೈಟ್‌ಗಳ ನಡುವೆ, ಸ್ಪೆಶಲ್ಲಾಗಿ ಆರ್ಡರ್ ಮಾಡಿದ ಸೂಟ್‌ನಲ್ಲಿ, ಪ್ರಿಯತಮೆಗೆ ಪ್ರಪೋಸ್ ಮಾಡುತ್ತೀರಾ? ಅದೂ ಒಳ್ಳೆ ಐಡಿಯಾನೇ. ಆದರೆ ಕಿಸೆಯಲ್ಲಿ ಕಾಸಿರಬೇಕು. ಇಲ್ಲಾಂದರೆ ಏನ್ ಮಾಡಬೇಕು?

ಪ್ರಪೋಸ್ ಮಾಡೋ ಮೊದ್ಲು ನೀವು ತಿಳ್ಕೊಬೇಕಾದ್ದು ಒಂದಷ್ಟಿದೆ:

  • ಹುಡುಗೀರು ಕಾಸ್ಟ್‌ಲೀ ಗಿಫ್ಟ್ (Gifts) ಆಸೆ ಪಡ್ತಾರೆ ಎಂದೇನಿಲ್ಲ. ಪ್ರೀತಿಯಿಂದ ನೀವು ಒಂದು ಕೆಂಪು ಗುಲಾಬಿ ಹೂ (Red Rose) ಕೊಟ್ರೂ ಸಂತೋಷ ಪಡ್ತಾರೆ. ಕಾಸಿಲ್ಲದ ಹುಡುಗನನ್ನು ಹುಡುಗೀರು ಇಷ್ಟಪಡಬಹುದು, ಆದ್ರೆ ಪ್ರೀತಿಯಿಲ್ಲದ ಒರಟು ಹುಡುಗರನ್ನು ಇಷ್ಟಪಡೋಲ್ಲ.
  • ತಮ್ಮ ಹುಡುಗ ಹ್ಯೂಮರಸ್, ನಗಿಸುವ ಸ್ವಭಾವದವನಾಗಿರಬೇಕು ಅಂತ ಹುಡುಗೀರು ಆಸೆಪಡ್ತಾರೆ. ಆದ್ರಿಂದ ತುಸು ತಮಾಷೆಯೆನಿಸಿದರೂ ಪರವಾಗಿಲ್ಲ, ವಿಶಿಷ್ಟವಾದ ದಾರಿಯನ್ನೇ ಪ್ರಪೋಸ್ ಮಾಡಲು ಹುಡುಕಿ.
  • ಹುಡುಗಿ ಒಪ್ಪಿಕೊಂಡಳು ಅಂತ ಮೊದಲ ದಿನವೇ ಹೆಚ್ಚಿನ ಸ್ವಾತಂತ್ರ್ಯ ತಗೋಬೇಡಿ. ಮುಟ್ಟಬೇಕು, ಕಿಸ್ ಕೊಡಬೇಕು ಎಂಬ ಆಸೆಯೆಲ್ಲಾ ನಿಮಗಿರಬಹುದು. ಆದ್ರೆ ಅದೆಲ್ಲಾ ಇನ್ನೊಂದು ದಿನಕ್ಕಿರಲಿ. ಯಾವುದಕ್ಕೂ ಕಾಲ ಪಕ್ವವಾಗಲಿ. ತನ್ನ ಹುಡುಗನ ಮೇಲೆ ಹುಡುಗಿಗೆ ಮುದ್ದು ಉಕ್ಕಿದ ದಿನವೇ ಶುಭದಿನ ಅಲ್ವೇ.
  • ನಿಮ್ಮತನ ಇರಲಿ. ಇನ್ನೊಬ್ಬರ ಅನುಕರಣೆ ಮಾಡಬೇಡಿ. ನೀವು ಶ್ರೀಮಂತನಾಗಿದ್ದರೆ ಬಡವನಂತೆ, ಬಡವನಾಗಿದ್ದರೆ ಶ್ರೀಮಂತನಂತೆ, ತೀರ ಶಾಣ್ಯಾನಂತೆ ನಟಿಸುವ ಅಗತ್ಯವೇನೂ ಇಲ್ಲ. ಸಹಜವಾಗಿರಿ. ಸಹಜತೆ ಹುಡುಗಿಯರಿಗೆ ಇಷ್ಟ.
  • ಮುದ್ದಾದ ವಾತಾವರಣ ಸುತ್ತ ಇರಲಿ. ಸಂತೆಯ ನಡುವೆ, ಜಾತ್ರೆಯಲ್ಲಿ, ಗೆಳೆಯರ ಗುಂಪು ಗದ್ದಲ, ಸಿಟಿಬಸ್ಸಿನ ರಶ್ಶುಗಳೆಲ್ಲಾ ಪ್ರಪೋಸ್ ಮಾಡಲು ಸೂಕ್ತ ತಾಣಗಳಲ್ಲ. ಆಕೆಗೆ ಸಂಭ್ರಮಿಸಲು ಸ್ವಲ್ಪ ಹೊರಗಾಳಿ ಇರಲಿ.

Monthly Love Horoscope: ಈ ಪ್ರೀತಿಯ ತಿಂಗಳು ಯಾರಿಗುಂಟು ಯಾರಿಗಿಲ್ಲ ಪ್ರೇಮ?

ಪ್ರಪೋಸ್ ಮಾಡುವಾಗ ಏನು ಮಾಡಬಾರದು?

  • ತೀರಾ ಅಂಜಿಸಬಾರದು. ಪ್ರಪೋಸ್ ಮಾಡುವ ವಿಧಾನ ತೀರಾ ಮುಜುಗರ ತರಿಸುವಂತಿರಬಾರದು. ಆಕೆಯ ಗೆಳತಿಯರ ಮುಂದೆ ಮರ್ಯಾದೆ ಹೋಗುವಂತಿರಬಾರದು.
  • ಆಕೆಗೆ ಇಷ್ಟವಿಲ್ಲದ ಜಾಗದಲ್ಲಿ, ಆಕೆಗೆ ಇಷ್ಟವಿಲ್ಲದ ತಿಂಡಿ ಕೊಡಿಸಿ, ಆಕೆಗೆ ಇಷ್ಟವಿಲ್ಲದ ಗಿಫ್ಟ್ ಕೊಟ್ಟು ನೀವು ಪ್ರಪೋಸ್ ಮಾಡಿದರೆ ಖಂಡಿತ ಏಟು ತಿನ್ನುತ್ತೀರಿ.
  • ಕೆಂಪು ಗುಲಾಬಿ ಮಸ್ಟ್. ಚಾಕೊಲೇಟ್ (Chocolate) ಇರತಕ್ಕದ್ದು. ಅದರೊಂದಿಗೆ ಮುದ್ದಾದ ಒಂದು ಗಿಫ್ಟ್. ಖಾಲಿ ಕೈಯಲ್ಲಿ ಪ್ರಪೋಸ್ ಮಾಡುವುದು ಶುಭವಲ್ಲ.

 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಈ ಸುಂದರ ದೇಶದಲ್ಲಿ ಬಾಡಿಗೆಗೆ ಸಿಗ್ತಾನೆ ಗಂಡ, ಗಂಟೆಗೆ ಇಷ್ಟಿದೆ ಸಂಬಳ!
ಮದುವೆ ಮುಂದೂಡಿಕೆ ಆದ 12 ದಿನಗಳ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ಮೊದಲ ಪೋಸ್ಟ್‌ ಮಾಡಿದ ಸ್ಮೃತಿ, ಕೈಯಲ್ಲಿದ್ದ ರಿಂಗ್‌ ಮಾಯ!