Propose Day: ಪ್ರಪೋಸ್ ಮಾಡುವಾಗ 'ನೋ' ಹೇಳೋಕೆ ಹಿಂಜರಿಕೆಯಾ ? ಈ ಟ್ರಿಕ್ಸ್ ಯೂಸ್ ಮಾಡಿ

By Suvarna News  |  First Published Feb 8, 2022, 11:57 AM IST

ರೋಸ್ (Rose) ಹಿಡ್ಕೊಂಡು, ಅವ್ನು ಅಷ್ಟು ದೂರದಿಂದ ಬರ್ಬೇಕಾದ್ರೇನೆ ಎದೆ ಢವ ಢವ ಅಂತ ಹೊಡ್ಕೊಳ್ಳುತ್ತೆ. ಇನ್ನು ಪ್ರಪೋಸ್ (Propose) ಮಾಡಿದ್ರೆ ಕೈ ಕಾಲೇ ಆಡೋದಿಲ್ಲ. ಅವ್ನ ಎಕ್ಸೆಟ್ಮೆಂಟ್ ನೋ ಅಂತ ಹೇಳೋದಾದ್ರೂ ಹೇಗೆ ಅನ್ನೋ ಭಯಾನ ? ಪ್ರಪೋಸ್ ಮಾಡಿದವರಿಗೆ ಶಾಕ್ ಆಗದಂತೆ ಬೇಸರವಾಗದಂತೆ ಈ ರೀತಿ ನೋ ಹೇಳಿ.


ಪ್ರೀತಿ (Love)ಯನ್ನು ಹೇಳೋಕೆ, ಪ್ರೀತಿಯನ್ನು ಒಪ್ಪೋಕು ಒಂದು ದಿನ ಬೇಕಾ ? ಹೀಗೆ ಕೇಳಿದರೆ ಬಹುಶಃ ಉತ್ತರಿಸುವುದು ಕಷ್ಟ. ಯಾಕೆಂದರೆ ಪ್ರೀತಿ ಸರ್ವಾಂತರ್ಯಾಮಿ. ಪ್ರತಿ ದಿನ, ಪ್ರತಿ ಕ್ಷಣ, ಪ್ರತಿ ಜೀವದಲ್ಲೂ ಪ್ರೀತಿಯಿದೆ. ಅಮ್ಮ-ಮಗ, ಅಪ್ಪ-ಮಗಳು, ಅಣ್ಣ-ತಮ್ಮ, ಅಕ್ಕ-ತಂಗಿ, ಸ್ನೇಹಿತರು ಹೀಗೆ ಎಲ್ಲಾ ಸಂಬಂಧಗಳು ಪ್ರೀತಿಯಿಂದಲೇ ಬೆಸೆದಿರುವಂಥದ್ದು. ಹೀಗಿದ್ದೂ ಸಂಗಾತಿಗಳ ನಡುವಿನ ಪ್ರೀತಿಯ ವಿನಿಮಯಕ್ಕಾಗಿ ಫೆಬ್ರವರಿ 14ನ್ನು ಪ್ರೇಮಿಗಳ ದಿನವೆಂದು ಆಚರಿಸಲಾಗುತ್ತದೆ. ವಾರಕ್ಕೆ ಮುಂಚಿತವಾಗಿ ರೋಸ್ ಡೇ, ಟೆಡ್ಡೀ ಡೇ, ಪ್ರಪೋಸ್ ಡೇ ಎಂದು ಹಲವು ಸೆಲಬ್ರೇಷನ್ ಮಾಡಲಾಗುತ್ತದೆ. 

ಪ್ರೇಮಿಗಳ ವಾರ ಫೆಬ್ರವರಿ 7 ರಿಂದ ಪ್ರಾರಂಭವಾಗಿದೆ. ಮೊದಲ ದಿನ ರೋಸ್ ಡೇ (Rose Day)ಯಾಗಿರುವ ಕಾರಣ ಪ್ರೀತಿಸುವ ಜೋಡಿಗಳು ಪರಸ್ಪರ ರೋಸ್ ನೀಡಿ ಖುಷಿಪಟ್ಟಿದ್ದಾರೆ. ರೋಸ್ ಡೇಯಂದು ಪ್ರೀತಿ ಪಾತ್ರರಿಗೆ ಗುಲಾಬಿ ಹೂ ನೀಡಿ ಪ್ರೀತಿಯನ್ನು ವ್ಯಕ್ತಪಡಿಸಲಾಗುತ್ತದೆ. ಪ್ರೇಮಿಗಳ ವಾರದ ಎರಡನೇ ದಿನ ಪ್ರಪೋಸ್ ಡೇ (Propose Day). ಫೆಬ್ರವರಿ 8ರಂದು ಪ್ರಪೋಸ್ ಡೇಯನ್ನು ಆಚರಿಸಲಾಗುತ್ತದೆ. ಇದು ಪ್ರೇಮ ನಿವೇದನ ಮಾಡಿಕೊಳ್ಳಲು ಮೀಸಲಾಗಿರುವ ದಿನವಾಗಿದೆ. ಯಾರ ಬಗ್ಗೆಯಾದರೂ ಕ್ರಶ್, ಅಟ್ರ್ಯಾಕ್ಷನ್ ಇದ್ದವರು ಈ ದಿನ ಹೇಳಿಕೊಳ್ಳಬಹುದು. ಈಗಾಗಲೇ ಪ್ರೀತಿಸುತ್ತಿರುವವರು ತಾವೆಷ್ಟು ಪ್ರೀತಿಸುತ್ತಿದ್ದೇವೆಂಬುದನ್ನು ಮತ್ತೊಮ್ಮೆ ಪ್ರಪೋಸ್ ಮಾಡುವ ಮೂಲಕ ವ್ಯಕ್ತಪಡಿಸಬಹುದು.

Tap to resize

Latest Videos

undefined

ಇಂದಿನಿಂದ ಶುರುವಾಗಿದೆ Valentines Week : ಹೂ ಕೊಡುವುದರಿಂದ ಹಿಡಿದು ಹೂ ಮುತ್ತಿನ ತನಕ..

ಪ್ರಪೋಸ್ ಡೇ ದಿನವೇನೋ ಬಂತು. ಆದರೆ ಪ್ರಪೋಸ್ ಮಾಡುವುದೇ ಕಷ್ಟ ಅನ್ನೋದು ಹಲವರ ಸಮಸ್ಯೆ. ಎಷ್ಟು ವರ್ಷಗಳ ಪರಿಚಯವಾದರೂ ಎದುರು ಹೋಗಿ ನಿಂತು ಪ್ರಪೋಸ್ ಮಾಡಲು ಧೈರ್ಯ ಸಾಕಾಗುವುದಿಲ್ಲ. ನೋ ಎನ್ನುತ್ತಾರೆ ಎನ್ನುವ ಭಯ ಬೇರೆ. ಇದೇ ಭಯದಲ್ಲೇ ಹಲವು ವರ್ಷದ ಪ್ರಪೋಸ್ ಡೇಗಳು ವೇಸ್ಟ್ ಆಗಿ ಬಿಡುತ್ತವೆ. 
ಪ್ರಪೋಸ್ ಮಾಡುವುದು ಎಷ್ಟು ಕಷ್ಟವೋ, ಪ್ರಪೋಸ್ ಮಾಡುವಾಗ ನೋ (No) ಎಂದು ಹೇಳುವುದು ಅಷ್ಟೇ ಕಷ್ಟ. ಯಾಕೆಂದರೆ ನೋ ಎಂಬ ಒಂದು ಉತ್ತರದಿಂದ ಪ್ರಪೋಸ್ ಮಾಡಿರುವವರ ಮನಸ್ಸಿಗೆ ಎಷ್ಟು ಘಾಸಿಯಾಗುತ್ತದೆ ಎಂಬುದನ್ನು ಹಲವರು ತಿಳಿದಿರುತ್ತಾರೆ. ಆದ್ರೆ ಇಷ್ಟವಿಲ್ಲ ಎಂದಾಗ ನೋ ಎಂದು ಹೇಳಲಾಗುತ್ತದೆ. ಆದರೆ, ಪ್ರಪೋಸ್ ಮಾಡಿದವರಿಗೆ ನೋವಾಗದಂತೆ ಪ್ರೀತಿಯನ್ನು ನಿರಾಕರಿಸುವುದು ಹೇಗೆ ? ಇಲ್ಲಿದೆ ಕೆಲವೊಂದು ಟಿಪ್ಸ್.

‘ನಾನು ಉತ್ತಮ ಜೋಡಿಯಲ್ಲ’ ಎಂದು ತಿಳಿಸಿ
ನೀವು ಉತ್ತಮ ಬಾಂಧವ್ಯ ಹೊಂದಿರುವ ವ್ಯಕ್ತಿಯೇ ಬಂದು ನಿಮಗೆ ಪ್ರಪೋಸ್ ಮಾಡಿದಾಗ ಮುಖಕ್ಕೆ ಹೊಡೆದಂತೆ ನೋ ಎನ್ನುವುದು ಕಷ್ಟವಾಗುತ್ತದೆ. ಇಂಥಹಾ ಸಂದರ್ಭದಲ್ಲಿ ಪ್ರಪೋಸಲ್‌ನ್ನು ನಯವಾಗಿ ತಿರಸ್ಕರಿಸಿ. ಅವರಿಗೆ ನಿಮಗಿಂತಲೂ ಉತ್ತಮ ಜೋಡಿ ಸಿಗಬಹುದು ಎಂದು ಹೇಳಿ ಮದುವೆಯ ಪ್ರಸ್ತಾಪವನ್ನು ಗೌರವಾನ್ವಿತ ರೀತಿಯಲ್ಲಿ ತಿರಸ್ಕರಿಸಬಹುದು.

Valentines Day: ಗಿಫ್ಟ್ ಕೊಟ್ರೆ ಪ್ರೀತಿ ಹೆಚ್ಚಾಗುತ್ತಾ ?

‘ನೋ’ ಎಂದಿದ್ದಕ್ಕೆ ಭವಿಷ್ಯದಲ್ಲಿ ಖುಷಿಪಡುವಿರಿ ಎಂದು ತಿಳಿಸಿ
ಪ್ರಪೋಸ್ ಮಾಡುವವರು ನಿಮಗೆ ಸ್ಪಲ್ಪ ಆತ್ಮೀಯರಾಗಿದ್ದರೆ ನೀವು ಈ ಮಾತನ್ನು ಬಳಸಬಹುದು. ತಮಾಷೆಯಾಗಿಯೇ, ನಾನು ‘ನೋ’ ಎಂದಿದ್ದಕ್ಕೆ ಭವಿಷ್ಯದಲ್ಲಿ ನೀವು ಖುಷಿಪಡುವಿರಿ ಎಂದು ತಿಳಿಸಿ. ಈ ಮೂಲಕ ನಿಧಾನವಾಗಿ ನೀವ್ಯಾಕೆ ಅವರನ್ನು ಸಂಗಾತಿಯಾಗಿ ಬಯಸುತ್ತಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಿ. ಭವಿಷ್ಯದಲ್ಲಿ ನಿಮಗೆ ಅತ್ಯುತ್ತಮ ಸಂಗಾತಿ ದೊರೆಯುವುದು ಖಂಡಿತ ಎಂಬುದನ್ನು ತಿಳಿಸಿ.

ಮದುವೆಯಲ್ಲಿ ಆಸಕ್ತಿಯಿಲ್ಲ ಎಂದು ತಿಳಿಸಿ
ಪ್ರಪೋಸ್ ಮಾಡಿದ ವ್ಯಕ್ತಿಯು ತುಂಬಾ ಒತ್ತಾಯಿಸುತ್ತಿದ್ದರೆ ಮತ್ತು ನಿಮ್ಮ ನಿರ್ಧಾರವನ್ನು ಅವನಿಗೆ/ಅವಳಿಗೆ ಮನವೊಲಿಸಲು ನೀವು ಮಾಡಿದ ಎಲ್ಲಾ ತಾರ್ಕಿಕ ಪ್ರಯತ್ನಗಳು ವ್ಯರ್ಥವಾಗಿದ್ದರೆ ನೀವು ಈ ಮಾತನ್ನು ಬಳಸಬಹುದು. ಮದುವೆಯಲ್ಲಿ ಹೆಚ್ಚಿನ ಆಸಕ್ತಿಯಿಲ್ಲ ಎಂದು ಹೇಳಬಹುದು ಅಥವಾ ಈಗ ಮದುವೆಯಾಗುವ ಯೋಚನೆ ಮಾಡುತ್ತಿಲ್ಲ ಎನ್ನಬಹುದು. ನೀವು ಮದುವೆಯಲ್ಲಿ ನಿಷ್ಠರಾಗಿರಲು ನಿಖರವಾಗಿ ಯೋಜಿಸುತ್ತಿಲ್ಲ ಎಂದು ಹೇಳುವ ಮೂಲಕ ನೀವು ಅವರನ್ನು ತಡೆಯಬಹುದು. ಆದರೆ ತಿಳಿದುಕೊಳ್ಳಿ, ಇದರಿಂದ ನಿಮ್ಮ ಮೇಲೆ ತಪ್ಪು ಅಭಿಪ್ರಾಯ ಮೂಡುವ ಸಾಧ್ಯತೆಯೂ ಇದೆ.

ಬಹುಶಃ ಎಂದು ಹೇಳುವ ಮೂಲಕ ಸಂಬಂಧವನ್ನು ಕೊನೆಗೊಳಿಸಿ
ನೇರವಾಗಿ ಇಲ್ಲ ಎಂದು ಹೇಳಲು ಕಷ್ಟವಾದಾದಗ ಬಹುಶಃ ಸಾಧ್ಯವಾಗದು ಎಂದು ತಿಳಿಸಿ. ಅಥವಾ ನೀವು ಅವರ ಪ್ರೀತಿಯನ್ನು ಒಪ್ಪುತ್ತಿದ್ದೀರಿ ಅಥವಾ ನಿರಾಕರಿಸುತ್ತಿದ್ದೀರಿ ಎಂಬುದನ್ನು ಸ್ಪಷ್ಟವಾಗಿ ಹೇಳಬೇಡಿ. ಸ್ಪಲ್ಪ ಸಮಯ ನೀಡಿ ಎಂದು ಹೇಳುವ ಮೂಲಕ ಅವರಿಗೆ ನೋ ಎಂಬ ಉತ್ತರದಿಂದ ಸಿಗುವ ಬೇಸರವನ್ನು ಒಂದು ಕ್ಷಣಕ್ಕೆ ಇಲ್ಲವಾಗಿಸಬಹುದು.

click me!