ಅದೇನೋ ಅತೃಪ್ತಿ, ಮತ್ತಷ್ಟು ಬೇಕೆನ್ನುವ ಬಯಕೆ, ಇಡೀ ದಿನ ಸೆಕ್ಸ್ ಬಗ್ಗೆಯೇ ಆಲೋಚನೆ ಮಾಡುವ ಮನಸ್ಸು, ಸದಾ ಉತ್ತೇಜನಗೊಳ್ಳುವ ದೇಹ.. ಇದಕ್ಕೆಲ್ಲ ಒಂದಿಷ್ಟು ಕಾರಣವಿದೆ. ಅದರ ನಿಯಂತ್ರಣ ಅನಿರ್ಯವಾಗಿದೆ.
ಕೆಟ್ಟ ಜೀವನಶೈಲಿ ನಿಮ್ಮ ಲೈಂಗಿಕ ಜೀವನದ ಮೇಲೂ ಪರಿಣಾಮ ಬೀರುತ್ತದೆ. ಕೆಲವರು ಲೈಂಗಿಕ ಜೀವನದ ಮೇಲೆ ಆಸಕ್ತಿ ಕಳೆದುಕೊಳ್ತಾರೆ. ಮತ್ತೆ ಕೆಲವರಿಗೆ ಅತಿ ಉದ್ರೇಕದ ಸ್ಥಿತಿ ನಿರ್ಮಾಣವಾಗುತ್ತದೆ. ಪ್ರತಿ ಕ್ಷಣವೂ ಸೆಕ್ಸ್ ಬಗ್ಗೆ ಆಲೋಚನೆ ಮಾಡುವ ವ್ಯಕ್ತಿಗೆ ಭಾವನೆಗಳನ್ನು ನಿಯಂತ್ರಿಸುವುದು ಬಹಳ ಕಷ್ಟವಾಗುತ್ತದೆ. ಇದು ಸಂಗಾತಿ ಮೇಲೂ ಪರಿಣಾಮ ಬೀರಬಹುದು. ಸಂಭೋಗ ಇಬ್ಬರ ಒಪ್ಪಗೆ ಮೇಲೆ ನಡೆಯಬೇಕೇ ವಿನಃ ಒತ್ತಾಯದ ಮೇಲಲ್ಲ. ಸಂಗಾತಿಯ ಅತಿ ಉದ್ರೇಕ ಅಥವಾ ಉತ್ಸಾಹ ಇನ್ನೊಂದು ಸಂಗಾತಿಗೆ ತೊಂದರೆಯುಂಟು ಮಾಡುವ ಸಾಧ್ಯತೆಯಿರುತ್ತದೆ. ಇದ್ರಿಂದಾಗಿ ದಾಂಪತ್ಯ ಹಾಳಾಗುವ ಅಪಾಯವಿದೆ. ವ್ಯಕ್ತಿಯೊಬ್ಬ ಸೆಕ್ಸ್ ವಿಷ್ಯದಲ್ಲಿ ಅತಿಯಾಗಿ ಹಾಗೂ ನಿರಂತರವಾಗಿ ಉದ್ರೇಕಗೊಳ್ಳಲು ಕಾರಣವೇನು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಯಾವ ಕಾರಣಕ್ಕೆ ಸಮಸ್ಯೆಯಾಗ್ತಿದೆ ಎಂಬುದು ಗೊತ್ತಾದ್ರೆ ಪರಿಹಾರ ಸುಲಭವಾಗುತ್ತದೆ.
ಅತಿ ಉದ್ರೇಕಕ್ಕೆ ಕಾರಣವಾಗುತ್ತೆ ಈ ಸಂಗತಿ :
ಹಾರ್ಮೋನ್ : ಹಾರ್ಮೋನ್ ಪ್ರತಿಯೊಬ್ಬರ ಜೀವನದಲ್ಲಿ ದೊಡ್ಡ ಪಾತ್ರವಹಿಸುತ್ತದೆ. ಸೆಕ್ಸ್ ಲೈಫ್ ಗೆ ಈಸ್ಟ್ರೊಜೆನ್, ಪ್ರೊಜೆಸ್ಟರಾನ್ ಮತ್ತು ಟೆಸ್ಟೋಸ್ಟೆರಾನ್ ಲೈಂಗಿಕ ಜೀವನವನ್ನು ನಿಯಂತ್ರಿಸುತ್ತವೆ. ಇವುಗಳ ಮಟ್ಟ ಸರಿಯಾಗಿರುವುದು ಅಗತ್ಯ. ಇದು ಹೆಚ್ಚಾದ್ರೂ ಕಷ್ಟ. ಕಡಿಮೆಯಾದ್ರೂ ಸಮಸ್ಯೆ. ಅಂಡೋತ್ಪತ್ತಿ ಮೊದಲು ಮತ್ತು ಅಂಡೋತ್ಪತ್ತಿ ಸಮಯದಲ್ಲಿ ಮಹಿಳೆಯರಲ್ಲಿ ಈಸ್ಟ್ರೊಜೆನ್ ಮಟ್ಟ ಹೆಚ್ಚಾದಾಗ ಸೆಕ್ಸ್ ಡ್ರೈವ್ ಕೂಡ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ಮಹಿಳೆ ಹೆಚ್ಚು ಉದ್ರೇಕಗೊಳ್ಳುವ ಸಾಧ್ಯತೆ ಇರುತ್ತದೆ. ಇನ್ನು ಪುರುಷರಲ್ಲಿ ಟೆಸ್ಟೋಸ್ಟೆರಾನ್ ಹೆಚ್ಚಾದಾಗ ಲೈಂಗಿಕ ಬಯಕೆ ಹೆಚ್ಚಾಗುತ್ತದೆ.
ಟೀನೇಜ್ ಮಗಳಿದ್ದರೆ ಈ ವಿಷ್ಯ ಮಾತನಾಡೋದನ್ನು ಮಾತ್ರ ಮರೀಬೇಡಿ!
ವಯಸ್ಸು ಒಂದು ಕಾರಣ : ವಯಸ್ಸಾದಂತೆ ಲೈಂಗಿಕ ಆಸಕ್ತಿ ಕಡಿಮೆಯಾಗುತ್ತದೆ. ಅದೇ ಯೌವನದಲ್ಲಿ ಇದ್ರ ಮೇಲೆ ಆಸಕ್ತಿ ಹೆಚ್ಚಿರುತ್ತದೆ. ಹದಿಹರೆಯದ ಹುಡುಗರಲ್ಲಿ ಟೆಸ್ಟೋಸ್ಟೆರಾನ್ ಉತ್ಪಾದನೆಯು 10 ಪಟ್ಟು ಹೆಚ್ಚಾಗುತ್ತದೆ. ಹಾಗಾಗಿ ಹದಿಹರೆಯದಲ್ಲಿ ಹುಡುಗ್ರು ಹೆಚ್ಚು ಸೆಕ್ಸ್ ಬಯಕೆಯನ್ನು ಹೊಂದಿರುತ್ತಾರೆ.
ಅತಿಯಾದ ವ್ಯಾಯಾಮದಿಂದ ಸಮಸ್ಯೆ : ದೈಹಿಕ ಚಟುವಟಿಕೆ ಹೆಚ್ಚಾದಾಗ ಹಾಗೆ ನಿಮ್ಮ ತೂಕದಲ್ಲಿ ಇಳಿಕೆಯಾದಾಗ್ಲೂ ಸೆಕ್ಸ್ ಡ್ರೈವ್ ಸಾಮಾನ್ಯಕ್ಕಿಂತ ಹೆಚ್ಚಿರುತ್ತದೆ ಎಂದು ತಜ್ಞರು ಹೇಳಿದ್ದಾರೆ. 2018ರಲ್ಲಿ ಈ ಬಗ್ಗೆ ಸಂಶೋಧನೆ ಕೂಡ ನಡೆದಿದೆ. ಹೆಚ್ಚಿನ ಸೆಕ್ಸ್ ಡ್ರೈವ್ ಹಾಗೂ ದೈಹಿಕ ಸಾಮರ್ಥ್ಯದ ನಡುವೆ ಏನು ಸಂಬಂಧವಿದೆ ಎಂಬುದನ್ನು ಪತ್ತೆ ಹಚ್ಚುವ ಪ್ರಯತ್ನ ನಡೆದಿದೆ.
ಏಕಾಂತ ಬಯೋಸೋ ಭಾರತೀಯ ಪ್ರೇಮಿಗಳಿದು ನೆಚ್ಚಿನ ತಾಣಗಳು!
ಉತ್ತೇಜಿತ ಆಹಾರ ಸೇವನೆ : ನೀವು ಸೇವನೆ ಮಾಡುವ ಆಹಾರದಲ್ಲಿ ಕೆಲವೊಂದು ನಿಮ್ಮ ಸೆಕ್ಸ್ ಡ್ರೈವ್ ಹೆಚ್ಚಿಸುವ ಸಾಮರ್ಥ್ಯ ಹೊಂದಿದೆ. ನೀವು ಸ್ಟ್ರಾಬೆರಿ, ಅಂಜೂರದ ಹಣ್ಣು, ಚಾಕೋಲೇಟ್ ನಂತಹ ಆಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡ್ತಿದ್ದರೆ ಅದು ನಿಮ್ಮನ್ನು ಹೆಚ್ಚು ಉತ್ತೇಜನಗೊಳಿಸುತ್ತದೆ.
ಹೈಪರ್ ಸೆಕ್ಸ್ಯಾಲಿಟಿ : ಈ ಮೇಲಿನ ಎಲ್ಲ ಕಾರಣಗಳ ಹೊರತಾಗಿ ಅತಿಯಾದ ಕಾಮಾಸಕ್ತಿ ಕೂಡ ಇದಕ್ಕೆ ಮುಖ್ಯ ಕಾರಣವಾಗುತ್ತದೆ. ಇದೊಂದು ಖಾಯಿಲೆಯಾಗಿದೆ. ವ್ಯಕ್ತಿ ಈ ಖಾಯಿಲೆಯಲ್ಲಿ ಸದಾ ಸೆಕ್ಸ್ ಬಗ್ಗೆ ಆಲೋಚನೆ ಮಾಡ್ತಿರುತ್ತಾನೆ. ಇದೊಂದು ಮಾನಸಿಕ ಖಾಯಿಲೆಯಾಗಿದೆ. ಲೈಂಗಿಕ ಆಲೋಚನೆಗಳು, ಪ್ರಚೋದನೆಗಳಿಗೆ ಸಂಬಂಧಿಸಿದ ಅಸ್ವಸ್ಥತೆಯಾಗಿದೆ.
ಸೆಕ್ಸ್ ಮೇಲಿನ ಅತಿಯಾದ ಆಸಕ್ತಿ ಕಡಿಮೆ ಮಾಡೋದು ಹೇಗೆ? :
• ಅತಿಯಾದ ಉದ್ರೇಕವನ್ನು ನೀವು ನಿಯಂತ್ರಿಸುವುದು ಮುಖ್ಯವಾಗುತ್ತದೆ. ನೀವು ಮಿತಿಮೀರಿದ ಬಯಕೆ ಎದುರಿಸುತ್ತಿದ್ದೀರಿ ಎಂದಾಗ ನಿಮ್ಮ ಮನಸ್ಸನ್ನು ಬೇರೆಡೆ ಹರಿಸಬೇಕು. ಬೇರೆ ಕೆಲಸದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಲು ಪ್ರಯತ್ನಪಡಬೇಕು. ನಿಮ್ಮಿಷ್ಟದ ಹಾಡು ಕೇಳುವುದು, ಆಟ ಆಡುವುದು, ಮನೆ ಕೆಲಸ ಮಾಡುವುದ್ರಲ್ಲಿ ನೀವು ಬ್ಯುಸಿಯಾಗ್ಬೇಕು.
• ಧ್ಯಾನ, ಯೋಗಗಳಿಂದ ಕೂಡ ನೀವು ಇದ್ರ ನಿಯಂತ್ರಣ ಮಾಡಬಹುದು. ಅದಕ್ಕೆ ನಿಯಮಿತ ಅಭ್ಯಾಸ ಮುಖ್ಯವಾಗುತ್ತದೆ.
• ನಿಮ್ಮನ್ನು ಉತ್ತೇಜನಗೊಳಿಸುವ ಆಹಾರದಿಂದ ದೂರ ಇರಬೇಕು.
• ಸಮಸ್ಯೆ ಕೈಮೀರುತ್ತಿದೆ ಎಂದಾದ್ರೆ ನೀವು ಯಾವುದೇ ಸಂಕೋಚಕ್ಕೊಳಗಾಗದೆ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯುವುದು ಮುಖ್ಯ.