ಟ್ರಾನ್ಸ್ಜೆಂಡರ್, ಲಿಂಗ ಬದಲಾವಣೆ, ಸಲಿಂಗ ಇದೆಲ್ಲವನ್ನೂ ಭಾರತ ಮಾತ್ರವಲ್ಲ ವಿದೇಶದಲ್ಲೂ ಅನೇಕರು ಒಪ್ಪಿಕೊಳ್ಳುವುದಿಲ್ಲ. ಬ್ರಾಡ್ ಮೈಂಡೆಂಡ್ ಎಂದುಕೊಳ್ಳುವ ಅನೇಕ ಶ್ರೀಮಂತರೇ ಇದನ್ನು ವಿರೋಧಿಸುತ್ತಾರೆ. ಇದ್ರಲ್ಲಿ ಎಲೋನ್ ಮಸ್ಕ್ ಹೊರತಾಗಿಲ್ಲ.
ತೃತೀಯಲಿಂಗಿ ಮಗಳ ಕಾರಣದಿಂದಾಗಿ ಎಲೋನ್ ಮಸ್ಕ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಪುಸ್ತಕವೊಂದರಲ್ಲಿ ಎಲೋನ್ ಮಸ್ಕ್ ಮಗಳ ಬಗ್ಗೆ ಬರೆಯಲಾಗಿದೆ. ಎಲೋನ್ ಮಸ್ಕ್ ಮಗ ತನ್ನ ಲಿಂಗವನ್ನು ಬದಲಾಯಿಸಿದ ನಂತರ ಈ ಬಗ್ಗೆ ತನ್ನ ಚಿಕ್ಕಮ್ಮನಿಗೆ ಹೇಳಿದ್ದರು ಎಂದು ಪುಸ್ತಕದಲ್ಲಿ ಬರೆಯಲಾಗಿದೆ. ಎಲೋನ್ ಮಸ್ಕ್, ತನ್ನ ತಂದೆಯೊಂದಿಗಿನ ಎಲ್ಲಾ ಸಂಬಂಧಗಳನ್ನು ಕೊನೆಗೊಳಿಸಿದ್ದೇನೆ. ತನ್ನ ಲಿಂಗ ಬದಲಾವಣೆಯ ಬಗ್ಗೆ ಮಸ್ಕ್ ಗೆ ಏನನ್ನೂ ಹೇಳಬಾರದು ಎಂದು ಹೇಳಿದ್ದರಂತೆ.
ಪ್ರಪಂಚದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಎಲೋನ್ ಮಸ್ಕ್ (Elon Musk) ಟ್ರಾನ್ಸ್ಜೆಂಡರ್ ವಿಷ್ಯದಲ್ಲಿ ಭಿನ್ನ ಅಭಿಪ್ರಾಯ ಹೊಂದಿದ್ದಾರೆ. ಅವರು ಟ್ರಾನ್ಸ್ಜೆಂಡರ್ (Transgender) ಸಮುದಾಯವನ್ನು ಒಪ್ಪಿಕೊಳ್ಳುವುದಿಲ್ಲ. ಅವರ ಬಗ್ಗೆ ಈಗಾಗಲೇ ಅನೇಕ ಕಟುವಾದ ಟಿಪ್ಪಣಿಗಳನ್ನು ಎಲೋನ್ ಮಸ್ಕ್ ಮಾಡಿದ್ದಾರೆ. ಇಷ್ಟೇ ಅಲ್ಲ, ಎಲೋನ್ ಮಸ್ಕ್ ಮಗಳ ಜೊತೆಗಿನ ಕೆಟ್ಟ ಸಂಬಂಧಕ್ಕೆ ಮಗಳ ಶಾಲೆಯನ್ನೇ ದೂಷಿಸುತ್ತಾರೆ. ಕ್ಸೇವಿಯರ್ ಅಲೆಕ್ಸಾಂಡರ್ ಓದಿದ ಕ್ಯಾಲಿಫೋರ್ನಿಯಾ (California) ದ ದುಬಾರಿ ಶಾಲೆ ತನ್ನ ಮಗನ ಬ್ರೈನ್ ವಾಶ್ ಮಾಡಿದೆ ಎಂದು ಅವರು ಹೇಳುತ್ತಾರೆ.
ಆತ್ಮರತಿ ಎಷ್ಟು ಕೆಟ್ಟದ್ದು ಗೊತ್ತಾ? ಇವ್ರ ಬಲೆಯಲ್ಲಿ ಸಿಲುಕಿದ್ರೆ ನಿಮ್ಮನ್ನ ಗೋಳಾಡಿಸಿಬಿಡ್ತಾರೆ!
ತಂದೆ ಎಲೋನ್ ಮಸ್ಕ್ ರಿಂದ ದೂರವಾಗಿದ್ದಾರೆ ಮಗನಿಂದ ಮಗಳಾದ ಕ್ಸೇವಿಯರ್ : 2021 ರಲ್ಲಿ ಎಲೋನ್ ಮಸ್ಕ್ ಮಗ ಕ್ಸೇವಿಯರ್ ಅಲೆಕ್ಸಾಂಡರ್ ಮಸ್ಕ್ ತನ್ನ ಹೆಸರು ಮತ್ತು ಲಿಂಗವನ್ನು ಬದಲಾಯಿಸಲು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅವರು ತನ್ನ ಹೆಸರನ್ನು ವಿವಿಯನ್ ಜೆನ್ನಾ ವಿಲ್ಸನ್ ಎಂದು ಬದಲಾಯಿಸಿದರು. ಪುರುಷನಿಂದ ಹುಡುಗಿಯಾಗಿ ಬದಲಾದ ನಂತರ ಲಿಂಗ ಬದಲಾವಣೆ ಮತ್ತು ಹೊಸ ಗುರುತಿಗೆ ಅರ್ಜಿ ಸಲ್ಲಿಸಿದರು. ಅರ್ಜಿಯಲ್ಲಿ, ಅವರು ತಮ್ಮ ತಂದೆಯೊಂದಿಗಿನ ಎಲ್ಲಾ ಸಂಬಂಧಗಳನ್ನು ಕೊನೆಗೊಳಿಸುವುದಾಗಿ ಘೋಷಿಸಿದ್ದರು.
ಯಾವ ಪುಸ್ತಕದಲ್ಲಿದೆ ಈ ವಿಷ್ಯ : ಲೇಖಕ ವಾಲ್ಟರ್ ಐಸಾಕ್ಸನ್ ಅವರು ಮಸ್ಕ್ ಅವರ ಜೀವನಕ್ಕೆ ಸಂಬಂಧಿಸಿದ ಎಲಾನ್ ಮಸ್ಕ್ ಪುಸ್ತಕವನ್ನು ಪ್ರಕಟಿಸಿದ್ದಾರೆ. ಪುಸ್ತಕದಲ್ಲಿ ಈ ಘಟನೆಯನ್ನು ಉಲ್ಲೇಖಿಸಲಾಗಿದೆ. 16 ವರ್ಷದ ವಿಲ್ಸನ್ ಮೊದಲು ಲಿಂಗ ಬದಲಾವಣೆಯ ಬಗ್ಗೆ ತನ್ನ ಚಿಕ್ಕಮ್ಮನಿಗೆ ಹೇಳಿದ್ದರು. ಈ ಬಗ್ಗೆ ತನ್ನ ತಂದೆಗೆ ಏನನ್ನೂ ಹೇಳದಂತೆ ಕೇಳಿಕೊಂಡಿದ್ದರು ಎಂದು ಬರೆಯಲಾಗಿದೆ.
ಮದ್ವೆಗೂ ಮೊದ್ಲು ಏಜ್ ಗ್ಯಾಪ್ ನೋಡ್ಕೊಳ್ಳಿ, ಇಲ್ಲಾಂದ್ರೆ ಇಷ್ಟೆಲ್ಲಾ ತೊಂದ್ರೆಯಾಗುತ್ತೆ!
ಕ್ಸೇವಿಯರ್ ಅಲೆಕ್ಸಾಂಡರ್ ತಾಯಿ ಯಾರು? : ಕ್ಸೇವಿಯರ್ ಅಲೆಕ್ಸಾಂಡರ್ ಅವರ ತಾಯಿಯ ಹೆಸರು ಜಸ್ಟಿನ್ ವಿಲ್ಸನ್. ಅವರು 2008 ರಲ್ಲಿ ಎಲೋನ್ ಮಸ್ಕ್ ಅವರಿಗೆ ವಿಚ್ಛೇದನ ನೀಡಿದ್ದರು. ವಿಚ್ಛೇದನ ಪಡೆದ ಅನೇಕ ವರ್ಷಗಳ ನಂತ್ರ ಮಗ ಕ್ಸೇವಿಯರ್ ತನ್ನ ಲಿಂಗವನ್ನು ಬದಲಾಯಿಸಿದ್ದರು. ಕ್ಸೇವಿಯನ್ ತನ್ನನ್ನು ವಿವಿಯನ್ ಜೆನ್ನಾ ವಿಲ್ಸನ್ ಎಂದು ಹೆಸರಿಸಿಕೊಂಡಿದ್ದಾರೆ. ತಂದೆ ಹೆಸರಿನ ಬದಲು ತಾಯಿಯ ಹೆಸರನ್ನು ಅವರು ಬಳಸಿಕೊಂಡಿದ್ದಾರೆ.
ಮಗನಿಂದ ಮಗಳಾದ ಕ್ಸೇವಿಯರ್ ಬಗ್ಗೆ ಮಸ್ಕ್ ಹೇಳೋದೇನು? : ತನ್ನ ಸಂತಾನದಿಂದ ದೂರವಾದ ನೋವು ಎಲೋನ್ ಮಸ್ಕ್ ಗೆ ಕಾಡ್ತಿದೆ. ಆದ್ರೆ ಕ್ಸೇವಿಯರ್, ಕಮ್ಯೂನಿಸ್ಟ್ ಆಗಲು ಶಾಲೆಯೇ ಕಾರಣವೆಂದು ಮಸ್ಕ್ ದೂರಿದ್ದಾರೆ. ಪ್ರತಿ ವರ್ಷ 50 ಸಾವಿರ ಡಾಲರ್ ಹಣ ನೀಡಿ ವಿದ್ಯೆ ಕಲಿಸಿದ್ದೇನೆ. ಆದ್ರೆ ಶಾಲೆಯಲ್ಲಿ ಅವರನ್ನು ಸಂಪೂರ್ಣ ಬದಲಿಸಿದೆ. ಸಮಾಜವಾದಿ ಚಿಂತನೆಯನ್ನು ಕಮ್ಯೂನಿಸ್ಟ್ ಚಿಂತನೆಯಾಗಿ ಬದಲಿಸಿದೆ. ಕ್ಸೇವಿಯರ್, ಈಗ ಶ್ರೀಮಂತರೆಲ್ಲ ಕೆಟ್ಟವರು ಎಂದು ನಂಬಲು ಶುರು ಮಾಡಿದ್ದಾರೆಂದು ಎಲೋನ್ ಮಸ್ಕ್ ಹೇಳಿದ್ದಾರೆ. ಜೇವಿಯರ್ ಜೊತೆ ಸಂಬಂಧ ಸುಧಾರಿಸಲು ನಾನು ತುಂಬಾ ಪ್ರಯತ್ನಿಸಿದೆ. ಆದರೆ ಶಾಲೆಯು ಅವನನ್ನು ಬ್ರೈನ್ ವಾಶ್ ಮಾಡಿದೆ. ನನ್ನೊಂದಿಗೆ ಸಮಯ ಕಳೆಯುವುದಿಲ್ಲ ಎಂದು ಮಸ್ಕ್ ಹೇಳಿದ್ದಾರೆ.