ಮಕ್ಕಳು ನೋಡ್ತಾ ನೋಡ್ತಾ ದೊಡ್ಡವರಾಗ್ತಾರೆ. ಪಾಲಕರಿಗೆ ಮಕ್ಕಳು ಯಾವಾಗ್ಲೂ ಮಕ್ಕಳೇ. ಆದ್ರೆ ಮಕ್ಕಳು ಮುಂದೆ ಸಕ್ಸಸ್ಫುಲ್ ಜೀವನ ನಡೆಸಬೇಕೆಂದ್ರೆ ಪಾಲಕರು ಒಂದಿಷ್ಟು ತಿಳಿದಿರಬೇಕು. ಮಕ್ಕಳಿಗೆ ಅಗತ್ಯವಿರುವ ವಿಷ್ಯಗಳನ್ನು ಕಲಿಸುವ ಪ್ರಯತ್ನ ನಡೆಸಬೇಕು.
ನಮ್ಮ ಜೀವನಕ್ಕೆ ಮಕ್ಕಳು ಕಾಲಿಡುತ್ತಿದ್ದಂತೆ ನಮ್ಮ ಕಲಿಕೆ ಮತ್ತಷ್ಟು ಹೆಚ್ಚಾಗುತ್ತದೆ. ಹಂತ ಹಂತದಲ್ಲಿ ಮಕ್ಕಳ ಜೊತೆ ನಾವು ಹೊಸ ವಿಷ್ಯಗಳನ್ನು ಕಲಿಯಬೇಕಾಗುತ್ತದೆ. ಜೊತೆಗೆ ಮಕ್ಕಳಿಗೆ ಅನೇಕ ಸಣ್ಣಪುಟ್ಟ ವಿಷ್ಯಗಳನ್ನು ಕಲಿಸುತ್ತ ನಡೆಯಬೇಕಾಗುತ್ತದೆ. ಹಿಂದಿನ ಕಾಲದಲ್ಲಿ ಮನೆಯಲ್ಲಿ ಮಕ್ಕಳ ಸಂಖ್ಯೆ ಬಹಳ ಹೆಚ್ಚಿರುತ್ತಿತ್ತು. ದೊಡ್ಡಕ್ಕ ಸಣ್ಣ ಮಗುವಿನ ತಾಯಿಯಂತೆ ಆರೈಕೆ ಮಾಡ್ತಿದ್ದಳು. ಅಕ್ಕ, ಅಣ್ಣಂದಿರ ನೆರಳಿನಲ್ಲಿ ಬೆಳೆಯುವ ಮಕ್ಕಳು, ಮಾತಿನಿಂದ ಹಿಡಿದು ಎಲ್ಲವನ್ನೂ ಅವರನ್ನು ನೋಡಿ ಕಲಿತು ಬಿಡ್ತಿದ್ದರು. ಹಾಗಾಗಿ ಪಾಲಕರಿಗೆ ಹೆಚ್ಚು ಹೊಣೆ ಇರಲಿಲ್ಲ. ಮಕ್ಕಳಿಗೆ ಸಣ್ಣ ವಿಷ್ಯವನ್ನು ಕಲಿಸುವ ತಲೆನೋವು ಇರಲಿಲ್ಲ.
ಈಗ ಕಾಲ ಬದಲಾಗಿದೆ. ಮನೆಯಲ್ಲಿ ಇರೋದೆ ಒಂದು ಮಗು. ಹೆಚ್ಚೆಂದ್ರೆ ಎರಡು ಮಕ್ಕಳಿ (children)ರುತ್ತವೆ. ಅವರನ್ನು ಪಾಲಕರು ಮುದ್ದಾಗಿ ಬೆಳೆಸ್ತಾರೆ. ಮಕ್ಕಳು ಬಾಲ್ಯದಲ್ಲಿರುವಾಗ ಏನೂ ಮಾಡಿದ್ರೂ ಅದೇನೋ ಖುಷಿ ಪಾಲಕರಿಗೆ. ಆದ್ರೆ ಮಕ್ಕಳು ದೊಡ್ಡವರಾಗ್ತಿದ್ದಂತೆ ಬಾಲ್ಯದಲ್ಲಿ ಮಕ್ಕಳಿಗೆ ಈ ಕೆಲಸಗಳನ್ನು ಕಲಿಸಿದ್ರೆ ಈಗ ತೊಂದರೆ ಪಡಬೇಕಾಗಿರಲಿಲ್ಲ ಎಂಬ ನೋವು ಕಾಡುತ್ತದೆ.
ಬಾಲ್ಯದಲ್ಲಿ ಮಕ್ಕಳ ಬಟ್ಟೆ ಕ್ಲೀನ್ (Clean) ಮಾಡೋದು, ಅವರ ಊಟ ಸಿದ್ದಪಡಿಸೋದು, ಹಾಸಿಗೆ ರೆಡಿ ಮಾಡೋದು ಹೀಗೆ ಎಲ್ಲ ಜವಾಬ್ದಾರಿ ಪಾಲಕರ ಮೇಲಿರುತ್ತದೆ. ಮಕ್ಕಳು ಕಾಲೇಜಿಗೆ ಹೋಗುವಷ್ಟು ದೊಡ್ಡವರಾದ್ಮೇಲೂ ಅದನ್ನೆಲ್ಲ ಪಾಲಕರೇ ಮಾಡ್ಬೇಕೆಂದ್ರೆ ಹೇಗೆ? . ನಮ್ಮಲ್ಲಿ ಅಂಗಡಿಗೆ ಹೋಗಿ ಸಾಮಾನು ತರಲು ಬರದ ಅನೇಕ ಮಕ್ಕಳಿದ್ದಾರೆ. ಕಾಲೇಜು ಮುಗಿಸಿದ್ರೂ ಅವರಿಗೆ ಅಂಗಡಿಗೆ ಹೋಗಿ ಏನು ಸಾಮಾನು ತರಬೇಕು, ಬಸ್ ಎಲ್ಲಿ ಹತ್ತಬೇಕೆಂಬ ಜ್ಞಾನವಿಲ್ಲ.
undefined
ಲಿಂಗ ಬದಲಾಯಿಸಿಕೊಂಡ ಮಗನ ವಿಷ್ಯಕ್ಕೆ ಸುದ್ದಿಯಲ್ಲಿದ್ದಾರೀಗ ಎಲೋನ್ ಮಸ್ಕ್!
ಮಕ್ಕಳು ಶಾಲಾ ಶಿಕ್ಷಣದಲ್ಲಿ ನೂರಕ್ಕೆ ನೂರು ಅಂಕ ತಂದ್ರೆ ಸಾಲದು. ಅವರಿಗೆ ಸಾಮಾನ್ಯ ಜ್ಞಾನದ ಅಗತ್ಯವಿದೆ. ನಿಮ್ಮ ಮಕ್ಕಳು ಹೈಸ್ಕೂಲ್ ಅಥವಾ ಕಾಲೇಜು ಹಂತದಲ್ಲಿದ್ದಾರೆಂದ್ರೆ ಅವರಿಗೆ ಕೆಲವೊಂದು ವಿಷ್ಯವನ್ನು ನೀವು ಅವಶ್ಯವಾಗಿ, ಬಲವಂತವಾಗಿಯಾದ್ರೂ ಕಲಿಸಬೇಕು. ಇಲ್ಲವೆಂದ್ರೆ ನಿಮಗೂ ಕಷ್ಟ, ಮಕ್ಕಳಿಗೂ ಕಷ್ಟ.
ಮಕ್ಕಳಿಗೆ ಪಾಲಕರು ಕಲಿಸಲೇಬೇಕಾದ ಕೆಲ ಕೆಲಸಗಳು :
ಬಟ್ಟೆ ವಾಶಿಂಗ್ : ನಿಮ್ಮ ಮಗ ಅಥವಾ ಮಗಳು ದೊಡ್ಡವರಾಗ್ತಿದ್ದಂತೆ ಅವರ ಬಟ್ಟೆಗಳನ್ನು ವಾಶ್ ಮಾಡಿಸುವ ಅಭ್ಯಾಸ ಮಾಡಿಸಿ. ಒಳ ಉಡುಪುಗಳನ್ನು ಕ್ಲೀನ್ ಮಾಡಿಕೊಳ್ಳುವಂತೆ ಅವರಿಗೆ ಹೇಳಿ. ಉಳಿದ ಬಟ್ಟೆಯನ್ನು ವಾಶಿಂಗ್ ಮಶಿನ್ ಗೆ ಹಾಕಿ ಸ್ವಚ್ಛಗೊಳಿಸೋದು ಹೇಗೆ ಎಂಬುದನ್ನು ಕಲಿಸಿ.
ಆತ್ಮರತಿ ಎಷ್ಟು ಕೆಟ್ಟದ್ದು ಗೊತ್ತಾ? ಇವ್ರ ಬಲೆಯಲ್ಲಿ ಸಿಲುಕಿದ್ರೆ ನಿಮ್ಮನ್ನ ಗೋಳಾಡಿಸಿಬಿಡ್ತಾರೆ!
ಬಾತ್ ರೂಮ್ ಸ್ವಚ್ಛತೆ : ಹೈಸ್ಕೂಲ್ ಅಥವಾ ಕಾಲೇಜು ಅಭ್ಯಾಸಕ್ಕೆ ಬೇರೆ ಊರಿಗೆ ಹೋದಲ್ಲಿ, ಹಾಸ್ಟೆಲ್ ನಲ್ಲಿ ತಂಗಿದ್ದಲ್ಲಿ ಮಕ್ಕಳು ಈ ಕೆಲಸವನ್ನು ಅಗತ್ಯವಾಗಿ ಮಾಡ್ಬೇಕಾಗುತ್ತದೆ. ಮನೆಯಲ್ಲಿ ಪಾಲಕರು ಇದು ಕೀಳು ಕೆಲಸವಲ್ಲ, ಇದ್ರ ಸ್ವಚ್ಛತೆ ಎಷ್ಟು ಮುಖ್ಯ ಎಂಬುದನ್ನು ಮಕ್ಕಳಿಗೆ ತಿಳಿಸುವ ಜೊತೆಗೆ ಪಾಳಿ ಮೇಲೆ ಅವರಿಗೂ ಈ ಕೆಲಸ ಮಾಡಿಸಿ ಅಭ್ಯಾಸ ಮಾಡಬೇಕು.
ಅಡುಗೆ : ಮಕ್ಕಳಿಗೆ ಟೀ, ಕಾಫಿ, ಅನ್ನ ಸೇರಿದಂತೆ ಸಣ್ಣಪುಟ್ಟ ಅಡುಗೆ ಮಾಡೋದನ್ನು ಪಾಲಕರು ಕಲಿಸಿರಬೇಕು.
ದಿನಸಿ ಶಾಪಿಂಗ್ : ದಿನಸಿಯನ್ನು ಎಲ್ಲಿ ಮತ್ತೆ ಹೇಗೆ, ಎಷ್ಟು ತರಬೇಕು ಎಂಬುದು ಮಕ್ಕಳಿಗೆ ಗೊತ್ತಿರಬೇಕು. ಪಾಲಕರು ಮಕ್ಕಳಿಗೆ ಇದನ್ನು ಅಗತ್ಯವಾಗಿ ಕಲಿಸಬೇಕು.
ತುರ್ತು ನಿಧಿ : ನಮಗೆ ಸಿಗದ ವಸ್ತು ಮಕ್ಕಳಿಗೆ ಸಿಗಲಿ ಎನ್ನುವ ಕಾರಣಕ್ಕೆ ಪಾಲಕರು ಹೇಳಿದ್ದೆಲ್ಲವನ್ನೂ ಕೊಡಿಸುತ್ತಾರೆ. ಇದ್ರಿಂದ ಮಕ್ಕಳಿಗೆ ಹಣದ ಮಹತ್ವ ತಿಳಿಯೋದಿಲ್ಲ. ಉಳಿತಾಯದ ಮಹತ್ವ ತಿಳಿಯೋದಿಲ್ಲ. ಮಕ್ಕಳಿಗೆ ಪಾಲಕರಾದವರು ತುರ್ತು ನಿಧಿ ಎಷ್ಟು ಮಹತ್ವ, ಹಣ ಉಳಿತಾಯ ಮಾಡೋದು ಹೇಗೆ ಎಂಬುದನ್ನು ಕಲಿಸಿರಬೇಕು.
ಹಾಸಿಗೆ ಸಿದ್ಧಪಡಿಸುವುದು : ನಿದ್ರೆ ಬರ್ತಿದ್ದಂತೆ ಹಾಸಿಗೆ ಮೇಲೆ ಬೀಳುವ ಮಕ್ಕಳು ಬೆಳಿಗ್ಗೆ ಹಾಸಿಗೆಯನ್ನು ಮಡಚಿಡೋದಾಗ್ಲಿ, ರಾತ್ರಿ ಹಾಸುವ ಕೆಲಸವನ್ನಾಗ್ಲಿ ಮಾಡೋದಿಲ್ಲ. ಇದೆಲ್ಲವೂ ಸಣ್ಣ ಕೆಲಸ ಎನ್ನಿಸಿದ್ರೂ ಅದೇ ಮಕ್ಕಳಿಗೆ ಶಿಸ್ತನ್ನು ಕಲಿಸುತ್ತದೆ.
ಪಾಲಕರಾದವರು ಮಕ್ಕಳ ನಿತ್ಯ ಜೀವನಕ್ಕೆ ಏನೇನು ಅಗತ್ಯವಿದೆ ಎಂಬುದನ್ನು ಪಟ್ಟಿ ಮಾಡಿ, ಅದನ್ನು ಅವರಿಗೆ ತಿಳಿಸುವ, ಕಲಿಸುವ ಕೆಲಸ ಮಾಡಿದ್ರೆ ಮಕ್ಕಳ ಜೀವನ ಮುಂದೆ ಸರಾಗವಾಗಿ ಸಾಗುತ್ತದೆ.