ಮದುವೆಯಾಗುವ ವರನ ವಯಸ್ಸು ವಧುವಿಗಿಂತ ಹೆಚ್ಚಾಗಿರುತ್ತದೆ. ಇದು ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿರುವ ನಿಯಮ. ಆದರೆ ಕಾಲ ಬದಲಾದಂತೆ ಮಹಿಳೆಯರು ತಮಗಿಂತ ಚಿಕ್ಕ ವಯಸ್ಸಿನ ಪುರುಷರನ್ನು ಮದುವೆಯಾಗುತ್ತಿದ್ದಾರೆ. ಇಷ್ಟಕ್ಕೂ ಮಹಿಳೆಯರು ತಮಗಿಂತ ಚಿಕ್ಕ ವಯಸ್ಸಿನ ಪುರುಷರತ್ತ ಆಕರ್ಷಿತರಾಗಲು ಕಾರಣವೇನು?
ಮದುವೆಯಾಗುವ ವರನ ವಯಸ್ಸು ವಧುವಿಗಿಂತ ಹೆಚ್ಚಾಗಿರುತ್ತದೆ. ಇದು ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿರುವ ನಿಯಮ. ಆದರೆ ಕಾಲ ಬದಲಾದಂತೆ ಮಹಿಳೆಯರು ತಮಗಿಂತ ಚಿಕ್ಕ ವಯಸ್ಸಿನ ಪುರುಷರೊಂದಿಗೆ ಸಂಬಂಧ ಬೆಳೆಸಿ ಅವರನ್ನೇ ಮದುವೆಯಾದ ಅನೇಕ ಘಟನೆಗಳು ನಡೆದಿವೆ. ಹೀಗೆ ಮಾಡುವುದರಿಂದ ಸಮಾಜದ ಹಳೆಯ ನಿಯಮವೊಂದು ಮುರಿಯುತ್ತದೆ. ಮಹಿಳೆಯರು ತಮಗಿಂತ ಚಿಕ್ಕ ವಯಸ್ಸಿನ ಪುರುಷರ ಕಡೆಗೆ ಏಕೆ ಆಕರ್ಷಿತರಾಗುತ್ತಾರೆ ಎಂಬ ಪ್ರಶ್ನೆ ಸಹಜ.
ಈ ಬಗ್ಗೆ ಸಂಶೋಧನೆ ಕೂಡ ನಡೆದಿದೆ. ಮಹಿಳೆಯರು (Woman) ತಮಗಿಂತ ಚಿಕ್ಕ ವಯಸ್ಸಿನ ಪುರುಷರತ್ತ (Men) ಆಕರ್ಷಿತರಾಗಲು ಕಾರಣಗಳೇನು ಎಂಬುದನ್ನು ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ. 30 ರಿಂದ 60 ವರ್ಷದೊಳಗಿನ 55 ಮಹಿಳೆಯರ ಮೇಲೆ ಈ ಸಂಶೋಧನೆ ನಡೆಸಲಾಗಿದೆ. ಇದರ ಪ್ರಕಾರ ಈ ಮಹಿಳೆಯರು ಸುಮಾರು 5 ವರ್ಷಗಳ ಕಾಲ ತಮಗಿಂತ ಕಿರಿಯ ಪುರುಷರೊಂದಿಗೆ ಸಂಬಂಧ (Relationship) ಹೊಂದಿದ್ದರು. ಹೆಚ್ಚಿನ ಮಹಿಳೆಯರು ತಮಗಿಂತ ಕಿರಿಯ ಪುರುಷರೊಂದಿಗೆ ಡೇಟಿಂಗ್ ಮಾಡಲು ಬಯಸುತ್ತಾರೆ.
undefined
ಹುಡುಗರು ತಮಗಿಂತ ಹಿರಿಯ ಹುಡುಗಿಯರನ್ನೇ ಇಷ್ಟಪಡುವುದು ಯಾಕೆ?
ಆತ್ಮವಿಶ್ವಾಸ ಹೆಚ್ಚಿಸುವ ಉದ್ದೇಶ
ಏಕೆಂದರೆ ಸಮಾಜದ ಹಳೆಯ ನಿಯಮವನ್ನು ಮುರಿಯಬೇಕು ಎಂಬುದು ಅವರ ಉದ್ದೇಶ. ಮಹಿಳೆಯರು ತಮಗಿಂತ ಚಿಕ್ಕ ವಯಸ್ಸಿನ ಹುಡುಗರೊಂದಿಗೆ ಡೇಟಿಂಗ್ ಮಾಡಿದಾಗ, ಅದು ಅವರ ಆತ್ಮವಿಶ್ವಾಸ (Confidence)ವನ್ನು ಹೆಚ್ಚಿಸುತ್ತದೆ. ಯಾವ ವಯಸ್ಸಿನಲ್ಲಿ ಬೇಕಾದರೂ ಯುವಕರಿಗೆ ಮೋಡಿ ಮಾಡಬಲ್ಲೆ ಎಂಬ ಭಾವನೆ ಅವರಲ್ಲಿ ಮೂಡುತ್ತದೆ. ಚಿಕ್ಕ ವಯಸ್ಸಿನ ಯುವಕರೊಂದಿಗಿನ ಸಂಬಂಧ ಅವರ ಉತ್ಸಾಹವನ್ನು ಹೆಚ್ಚಿಸುತ್ತದೆ.
ಲೈಂಗಿಕ ಜೀವನ ತೃಪ್ತಿಕರವೆಂಬ ನಂಬಿಕೆ
ಇದಲ್ಲದೆ ಕಿರಿಯ ಪುರುಷರೊಂದಿಗೆ ಲೈಂಗಿಕ ಜೀವನವು (Sexual life) ಹೆಚ್ಚು ತೃಪ್ತಿಕರವಾಗಿರುತ್ತದೆ ಎಂದು ಅವರು ನಂಬುತ್ತಾರೆ. ವಯಸ್ಸಾದ ಮಹಿಳೆ ವಿವಾಹಿತರಲ್ಲದಿದ್ದರೆ ಅಥವಾ ಮೊದಲು ಸಂಬಂಧದಲ್ಲಿದ್ದರೆ, ತುಲನಾತ್ಮಕವಾಗಿ ಕಡಿಮೆ ಅನುಭವ ಹೊಂದಿರುವ ವ್ಯಕ್ತಿಯೊಂದಿಗೆ ಅವಳು ಹೆಚ್ಚು ವಿಶ್ವಾಸ ಹೊಂದಿದ್ದಾಳೆ. ಲೈಂಗಿಕ ಜೀವನ ಹೆಚ್ಚು ಆರಾಮದಾಯಕವಾಗಿರಲಿದೆ ಎಂದು ಅಂದುಕೊಳ್ಳುತ್ತಾಳೆ.
ಗರ್ಭಿಣಿಯಾಗಲು ಹೆಚ್ಚು ಅವಕಾಶವಿದೆ ಎಂದ ಆಶಾಭಾವ
ಕಿರಿಯ ಪುರುಷರಲ್ಲಿ ಫಲವತ್ತತೆ ಹೆಚ್ಚಿದೆ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ವಯಸ್ಸಾದ ಮಹಿಳೆ ಗರ್ಭಿಣಿಯಾಗಲು ಬಯಸಿದರೆ, ಕಿರಿಯ ಪುರುಷನಿಂದ ಅದು ಸಂಭವಿಸುವ ಉತ್ತಮ ಅವಕಾಶವಿದೆ ಎಂದು ಅವಳು ನಂಬಬಹುದು. ಆದರೆ ಕಿರಿಯ ಅಥವಾ ಹಿರಿಯ ವಯಸ್ಸಿನ ಮಹಿಳೆಯರು ಯಾರಲ್ಲಿ ಫರ್ಟಿಲಿಟಿ ಹೆಚ್ಚಿರಬಹುದು ಎಂದು ಹೇಳಲು ಸಾಧ್ಯವಿಲ್ಲ.
56 ವರ್ಷದ ಮಹಿಳೆಯೊಂದಿಗೆ ನಿಶ್ಚಿತಾರ್ಥ ಮಾಡ್ಕೊಂಡ 19 ವರ್ಷದ ಯುವಕ !
ಪುರುಷನ ಮೇಲೆ ಅವಲಂಬಿಸಬೇಕಾಗಿಲ್ಲ
ವಯಸ್ಸಾದ ಮಹಿಳೆಯರು ಸ್ಥಿರವಾದ ವೃತ್ತಿಜೀವನವನ್ನು ಹೊಂದಿರುತ್ತಾರೆ ಮತ್ತು ಆರ್ಥಿಕವಾಗಿ ಸುರಕ್ಷಿತವಾಗಿರುತ್ತಾರೆ. ಆದ್ದರಿಂದ, ಅವರು ಸಂಗಾತಿಯನ್ನು ಪಾಲುದಾರನನ್ನು ಆರಿಸಿದಾಗ, ಆರ್ಥಿಕ ಸ್ಥಿತಿಯ ಬಗ್ಗೆ ಗಮನ ಹರಿಸುವುದಿಲ್ಲ. ಬದಲಿಗೆ ಮಾನಸಿಕ ಮತ್ತು ಭಾವನಾತ್ಮಕ ಸೆಕ್ಯುರಿಟಿ ಮಾತ್ರ ಬೇಕಾಗಿರುತ್ತದೆ. ಕಿರಿಯ ಪುರುಷನೊಂದಿಗೆ, ಅವಳು ಸ್ವತಂತ್ರಳಾಗಿರುವುದರಿಂದ ಯಾವುದೇ ಕೆಲಸಕ್ಕೆ ಅವನ ಅನುಮತಿಯನ್ನು ಪಡೆಯುವ ಅಗತ್ಯವಿರುವುದಿಲ್ಲ.
ಸಂಬಂಧದಲ್ಲಿ ಡಾಮಿನೇಟ್ ಮಾಡಲು ಸಾಧ್ಯವಾಗುತ್ತದೆ
ಕಿರಿಯ ಪುರುಷನೊಂದಿಗೆ ಡೇಟಿಂಗ್ ಮಾಡುವುದರಿಂದ ಮಹಿಳೆಯು ಸಂಬಂಧದ ನಿಯಂತ್ರಣವನ್ನು ತನ್ನ ಕೈಯಲ್ಲಿ ಹಿಡಿದಿಟ್ಟುಕೊಳ್ಳಬಹುದು. ಅವಳು ಹೆಚ್ಚು ಜೀವನ ಅನುಭವವನ್ನು ಹೊಂದಿರುವುದರಿಂದ, ಅವಳು ಪ್ರಮುಖ ವಿಷಯಗಳಲ್ಲಿ ಉತ್ತಮವಾಗಿ ಹೇಳಬಹುದು. ಮಹಿಳೆ ಯಾವಾಗಲೂ ಸಂಬಂಧಲ್ಲಿ ತನ್ನ ಮಾತೇ ನಡೆಯಬೇಕು ಎಂದು ಅಂದುಕೊಳ್ಳುತ್ತಾಳೆ. ಕಿರಿಯ ಹುಡುಗನನ್ನು ಮದುವೆಯಾಗುವುದರಿಂದ ಇದು ಸಾಧ್ಯವಾಗುತ್ತದೆ.