Sachin Pilot-Sara Abdullah love story: ಕಾಂಗ್ರೆಸ್ ನಾಯಕ ಮತ್ತು ರಾಜಸ್ಥಾನದ ಮಾಜಿ ಉಪ ಮುಖ್ಯಮಂತ್ರಿ ಮಂಗಳವಾರ ಟೋಂಕ್ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರದಲ್ಲಿ ನೀಡಿರುವ ಅಫಿಡವಿಟ್‌ನಲ್ಲಿ ಪತ್ನಿಯ ಹೆಸರಿನ ಕಾಲಂ ಎದುರು ‘ವಿಚ್ಛೇದಿತ’ ಎಂದು ಬರೆದಿದ್ದಾರೆ. 2004 ರಲ್ಲಿ, ಸಚಿನ್ ಪೈಲಟ್ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರ ಪುತ್ರಿ ಸಾರಾ ಅಬ್ದುಲ್ಲಾ ಅವರನ್ನು ವಿವಾಹವಾಗಿದ್ದರು.
ಬೆಂಗಳೂರು (ಅ.31): ಕಾಂಗ್ರೆಸ್ ನಾಯಕ ಹಾಗೂ ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಪತ್ನಿ ಸಾರಾ ಅವರಿಂದ ಬೇರ್ಪಟ್ಟಿದ್ದಾರೆ. ಸಚಿನ್ ಪೈಲಟ್ ಅವರ ಚುನಾವಣಾ ಅಫಿಡವಿಟ್‌ನಲ್ಲಿ ಇಬ್ಬರ ನಡುವಿನ ವಿಚ್ಛೇದನವು ಬಹಿರಂಗವಾಗಿದೆ. ಸಾರಾ ಮತ್ತು ಸಚಿನ್ ಪೈಲಟ್ ಜನವರಿ 2004 ರಲ್ಲಿ ವಿವಾಹವಾಗಿದ್ದರು.ನವೆಂಬರ್ 25 ರಂದು ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿವೆ. ಮಂಗಳವಾರ ಸಚಿನ್ ಪೈಲಟ್ ಅವರು ಟೋಂಕ್ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ನಾಮಪತ್ರದ ಜೊತೆ ನೀಡಿರುವ ಅಫಿಡವಿಟ್‌ನಲ್ಲಿ ಪತ್ನಿಯ ಹೆಸರಿನ ಕಾಲಂ ಎದುರು ‘ವಿಚ್ಛೇದಿತ’ ಎಂದು ಬರೆದಿದ್ದಾರೆ. ಸಚಿನ್ ಮತ್ತು ಸಾರಾ ಅವರಿಗೆ ಆರನ್ ಮತ್ತು ವಿಹಾನ್ ಹೆಸರಿನ ಇಬ್ಬರು ಗಂಡು ಮಕ್ಕಳಿದ್ದಾರೆ. ಸಾರಾ ಮತ್ತು ಸಚಿನ್ ಜನವರಿ 2004 ರಲ್ಲಿ ಸರಳ ಸಮಾರಂಭದಲ್ಲಿ ವಿವಾಹವಾಗಿದ್ದರು. ಈ ಮದುವೆಗೆ ಕೆಲವೇ ಜನರನ್ನು ಆಹ್ವಾನಿಸಲಾಗಿತ್ತು. ಸಾರಾ ಕುಟುಂಬ ಅಂದರೆ ಅಬ್ದುಲ್ಲಾ ಕುಟುಂಬ ಈ ಮದುವೆಗೆ ಬಹಿಷ್ಕಾರ ಹಾಕಿತ್ತು.
ಸಚಿನ್ ಮತ್ತು ಸಾರಾ ಅವರ ಕುಟುಂಬಗಳು ರಾಜಕೀಯದಲ್ಲಿ ಸಕ್ರಿಯವಾಗಿತ್ತು. ಸಚಿನ್ ಪೈಲಟ್ ಕಾಂಗ್ರೆಸ್ ನಾಯಕ ದಿವಂಗತ ರಾಜೇಶ್ ಪೈಲಟ್ ಅವರ ಪುತ್ರ. ಅದೇ ಸಮಯದಲ್ಲಿ, ಸಾರಾ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರ ಮಗಳು ಮತ್ತು ಒಮರ್ ಅಬ್ದುಲ್ಲಾ ಅವರ ಸಹೋದರಿ. ಸಾರಾ ಅವರ ಅಜ್ಜ ಶೇಖ್ ಅಬ್ದುಲ್ಲಾ ಕೂಡ ಜಮ್ಮು ಕಾಶ್ಮೀರದಲ್ಲಿ ಜನಪ್ರಿಯ ನಾಯಕರಾಗಿದ್ದರು. ಸಚಿನ್ ಹಿಂದೂ ಮತ್ತು ಸಾರಾ ಮುಸ್ಲಿಂ ಆಗಿದ್ದು ಈ ಮದುವೆಗೆ ದೊಡ್ಡ ಅಡ್ಡಿಯಾಗಿತ್ತು. ಉತ್ತರ ಪ್ರದೇಶದ ಶ್ರಹ್ರಾನ್‌ಪುರದಲ್ಲಿ ಜನಿಸಿದ್ದ ಸಚಿನ್ ಪೈಲಟ್, ಶಾಲಾ ಶಿಕ್ಷಣ ಹಾಗೂ ಸೇಂಟ್ ಸ್ಟೀಫನ್ಸ್ ಕಾಲೇಜಿನಿಂದ ಪದವಿ ಪಡೆದ ನಂತರ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ವಾರ್ಟನ್ ಸ್ಕೂಲ್ ಆಫ್ ಬ್ಯುಸಿನೆಸ್‌ನಿಂದ ಎಂಬಿಎ ಪಡೆಯುವ ಸಲುವಾಗಿ ಅಮೆರಿಕಕ್ಕೆ ತೆರಳಿದ್ದರು. ಇನ್ನೊಂದೆಡೆ ಸಾರಾ 1990ರವರೆಗೂ ತಮ್ಮ ಕುಟುಂಬದೊಂದಿಗೆ ಕಾಶ್ಮೀರದಲ್ಲಿಯೇ ನಡೆಸಿದ್ದರು. ಆದರೆ, ಕಣಿವೆಯಲ್ಲಿ ಇದ್ದ ಉದ್ವಿಗ್ನತೆಯ ಕಾರಣದಿಂದಾಗಿ ಫಾರುಖ್ ಅಬ್ದುಲ್ಲಾ ಮಗಳನ್ನು ಪತ್ನಿಯೊಂದಿಗೆ ಲಂಡನ್‌ಗೆ ಕಳಿಸಿದ್ದರು. ಲಂಡನ್‌ನಲ್ಲಿಯೇ ಸಾರಾ ಹಾಗೂ ಸಚಿನ್ ಮೊದಲ ಬಾರಿಗೆ ಭೇಟಿಯಾಗಿದ್ದರು. ಸಚಿನ್ ಮತ್ತು ಸಾರಾ ಅವರ ತಂದೆ ಇಬ್ಬರೂ ಸ್ನೇಹಿತರಾಗಿದ್ದರು. ಪರಸ್ಪಸರ ಕುಟುಂಬದೊಂದಿಗೆ ಪರಿಚಿತರೂ ಆಗಿದ್ದರು. ಆದರೆ, ಎರಡೂ ಕುಟುಂಬಗಳ ಸದಸ್ಯರು ಮಾತ್ರ ಎಂದೂ ಭೇಟಿಯಾಗಿರಲಿಲ್ಲ.
ಈ ಹಂತದಲ್ಲಿ ಸಚಿನ್ ಪೈಲಟ್, ಸಾರಾರನ್ನು ತಮ್ಮ ತಾಯಿ ರಮಾಗೆ ಪರಿಚಯಿಸಿದ್ದರು. ಇನ್ನು ಸಾರಾ ಅಬ್ದುಲ್ಲಾ ತಂದೆ ತಾಯಿಗೆ ಮೊದಲಿನಿಂದಲೂ ಸಚಿನ್ ಎಂದರೆ ಇಷ್ಟವಿತ್ತು. ಇವರಿಬ್ಬರೂ ಸ್ನೇಹಿತರಾಗಿರೋದಕ್ಕೆ ಮನೆಯವರಿಂದ ಯಾವುದೇ ಅಭ್ಯಂತರವಿದ್ದಿರಲಿಲ್ಲ. . ಆದರೆ, ಇಬ್ಬರಿಗೂ ಹೆಚ್ಚು ಸಮಯ ಕಳೆಯುವ ಅವಕಾಶ ಸಿಕ್ಕಿರಲಿಲ್ಲ. ಅಮೆರಿಕ, ಲಂಡನ್ ಎಂದು ತಿರುಗಾಡುತ್ತಿದ್ದ ಸಚಿನ್ ತನ್ನ ಕೋರ್ಸ್ ಮುಗಿಸಿ ಭಾರತಕ್ಕೆ ಮರಳಿದಾಗ ಸಾರಾ ಇಂಗ್ಲೆಂಡ್‌ನಲ್ಲಿಯೇ ಉಳಿದರು. ಇಬ್ಬರೂ ಇಮೇಲ್ ಮತ್ತು ಫೋನ್ ಕರೆಗಳ ಮೂಲಕ ಪರಸ್ಪರ ಸಂಪರ್ಕದಲ್ಲಿದ್ದರು.
ಮದುವೆಗೆ ಬಹಿಷ್ಕಾರ ಹಾಕಿದ್ದ ಫಾರುಕ್ ಅಬ್ದುಲ್ಲಾ ಕುಟುಂಬ: ಸಚಿನ್ ಗುರ್ಜರ್ ಕುಟುಂಬದಿಂದ ಬಂದಿದ್ದರೆ ಸಾರಾ ಸಾಂಪ್ರದಾಯಿಕ ಮುಸ್ಲಿಂ ಕುಟುಂಬದಿಂದ ಬಂದವರು. ಅದೆಷ್ಟೇ ತಿಂಗಳು, ವರ್ಷ ಕಳೆದರು ಮದುವೆಯ ವಿಚಾರವಾಗಿ ಎರಡೂ ಮನೆಯವರ ವಿಚಾರಗಳು ಬದಲಾಗೋದಿಲ್ಲ ಎನ್ನುವುದು ಇಬ್ಬರಿಗೂ ಗೊತ್ತಿತ್ತು. ಎರಡೂ ಮನೆಗಳಲ್ಲಿ ಇದೇ ವಿಚಾರವಾಗಿ ಸಣ್ಣ ಪುಟ್ಟ ಕ್ಲ್ಯಾಶ್‌ಗಳು ನಡೆಯುತ್ತಿದ್ದವು. ಇನ್ನೊಂದೆಡೆ, ಫಾರೂಕ್ ಅಬ್ದುಲ್ಲಾ ಕೂಡ ತಮ್ಮ ಪಕ್ಷದ ಶಾಸಕರ ಮುಂದೆ ಶರಣಾಗುವುದನ್ನು ಬಿಟ್ಟು ಬೇರೆ ದಾರಿಯೇ ಇರಲಿಲ್ಲ. ತಿಂಗಳುಗಟ್ಟಲೆ ಕಾದರೂ ಪರಿಸ್ಥಿತಿ ಬದಲಾಗದಿದ್ದಾಗ, 2004ರ ಜನವರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಾರಾ ಮತ್ತು ಸಚಿನ್ ವಿವಾಹವಾದರು. ಈ ಮದುವೆಗೆ ಕೆಲವೇ ಜನರನ್ನು ಆಹ್ವಾನಿಸಲಾಗಿತ್ತು. ಅಬ್ದುಲ್ಲಾ ಕುಟುಂಬ ಈ ಮದುವೆಗೆ ಬಹಿಷ್ಕಾರ ಹಾಕಿತ್ತು.
ಪತ್ನಿ ಸಾರಾಗೆ ವಿಚ್ಛೇದನ ನೀಡಿರುವ ಸಚಿನ್ ಪೈಲಟ್, ನಾಮಪತ್ರದಿಂದ ಬಯಲಾಯ್ತು ರಹಸ್ಯ!
ಸಾರಾ ಅಬ್ದುಲ್ಲಾ ನಂತರ ಸಾರಾ ಪೈಲಟ್ ಆದರು. ಕಾಲ ಕಳೆದಂತೆ ಫಾರೂಕ್ ಅಬ್ದುಲ್ಲಾ ಅವರ ಮನಸ್ತಾಪವೂ ದೂರವಾಗಿ ಹಿಂದಿನ ಕಹಿ ನೆನಪುಗಳನ್ನು ಮರೆತು ತಂದೆ ಮಗಳು ಮತ್ತೆ ಒಂದಾದರು. ಮದುವೆಯಾದ ಕೆಲವು ತಿಂಗಳ ನಂತರ ಸಚಿನ್ ಪೈಲಟ್ ಕೂಡ ರಾಜಕೀಯ ಪ್ರವೇಶಿಸಿದ್ದರು.
ಸಿಎಂ ಸ್ಥಾನ ತ್ಯಜಿಸಲು ಸಿದ್ಧ ಆದರೆ ಕುರ್ಚಿ ನನ್ನನ್ನು ಬಿಡುತಿಲ್ಲ, ಪೈಲೆಟ್ ಬಣಕ್ಕೆ ಗೆಹ್ಲೋಟ್ ಠಕ್ಕರ್!