ನಂಬಿಕೆ, ಪ್ರೀತಿ, ವಿಶ್ವಾಸ, ಹೊಂದಾಣಿಕೆ ಮಧ್ಯೆ ದಾಂಪತ್ಯ ನಿಂತಿರುತ್ತದೆ. ದಂಪತಿ ದೀರ್ಘ ದಾಂಪತ್ಯದ ಗುಟ್ಟನ್ನು ತಿಳಿದಿರಬೇಕು. ಸದಾ ಸಂಸಾರ ಹಸಿರಾಗಿರಲು ಏನು ಮಾಡ್ಬೇಕು ಎಂಬುದು ಗೊತ್ತಿರಬೇಕು. ಏನು ಮಾಡಿದ್ರೆ ದಾಂಪತ್ಯ ಹಾಳಾಗುತ್ತದೆ ಎಂಬ ಅರಿವಿರಬೇಕು.
ದೀರ್ಘಕಾಲ ಒಟ್ಟಿಗೆ ವಾಸವಾದ ದಂಪತಿ ವಿಚ್ಛೇದನ ತೆಗೆದುಕೊಳ್ತಿರೋದನ್ನು ನೀವು ನೋಡಿರ್ಬಹುದು. ಈಗಿನ ದಿನಗಳಲ್ಲಿ ವಿಚ್ಛೇದನದ ಸಂಖ್ಯೆ ಹೆಚ್ಚಾಗಿದೆ. ವಿಚ್ಛೇದನಕ್ಕೆ ನಾನಾ ವಿಷ್ಯಗಳು ಕಾರಣವಾಗ್ತಿವೆ. ನೋಡಿದ ತಕ್ಷಣ ಅರಳುವ ಪ್ರೀತಿ ನಿಧಾನವಾಗಿ ಬಾಡ್ತಾ ಬರುತ್ತದೆ. ಪರಸ್ಪರ ಆಸಕ್ತಿ ಕಳೆದುಕೊಳ್ತಾರೆ. ಪ್ರೇಮ ವಿವಾಹದಲ್ಲಿ ವಿಚ್ಛೇದನ ಜಾಸ್ತಿ ಆಗಲು ಕಾರಣವೇನು ಎಂಬುದನ್ನು ಸದ್ಗುರು ಹೇಳಿದ್ದಾರೆ.
ವಿವಾಹ (Marriage) ದೀರ್ಘಕಾಲ ಬಾಳಿಕೆ ಬರದೆ ಮುರಿದು ಬೀಳಲು ಏನೆಲ್ಲ ಕಾರಣವಿದೆ ಎಂಬುದನ್ನು ಸದ್ಗುರು ಹೇಳಿದ್ದಾರೆ. ಸದ್ಗುರು ಪ್ರಕಾರ ವಿಚ್ಛೇದನಕ್ಕೆ, ದಂಪತಿ (Couple) ಮಧ್ಯೆ ವಿರಸಕ್ಕೆ ಇವೆಲ್ಲ ಕಾರವಿದೆ.
ಬಾಲಿವುಡ್ ಸೂಪರ್‌ಸ್ಟಾರ್ ಆಗಿದ್ದ ಈ ನಟಿಯ ಮದುವೆ 6 ಬಾರಿ ಮುರಿದು ಬಿದ್ದಿತ್ತು!
ಖುಷಿ (Happiness) ಗಾಗಿ ಅವಲಂಬನೆ : ಸದ್ಗುರು ಹೇಳುವಂತೆ ನಾವು ಸೆಲ್ಪ್ ಸ್ಟಾರ್ಟರ್ (Self Starter)_ ಆಗ್ಬೇಕು. ನಮ್ಮ ಖುಷಿ ಬೇರೆಯವರಿಂದ ನಿರ್ಧಾರ ಆಗ್ಬಾರದು ಎನ್ನುತ್ತಾರೆ. ಅನೇಕ ದಂಪತಿ ಇದನ್ನೇ ಮಾಡ್ತಾರೆ. ಅವರು ತಮ್ಮಲ್ಲಿರುವ ಖುಷಿಯನ್ನು ಮರೆಯುತ್ತಾರೆ. ತಮ್ಮ ಸಂಗಾತಿಯಿಂದ ತಮಗೆ ಖುಷಿ ಸಿಗ್ಬೇಕು ಎಂದುಕೊಳ್ತಾರೆ. ಸಂಗಾತಿಯಿಂದ ಖುಷಿ ಹೊರತೆಗೆಯುವ ಪ್ರಯತ್ನ ಮಾಡ್ತಾರೆ. ಇದು ಮುಂದುವರೆದಾಗ ಪ್ರೇಮ ಸಂಬಂಧ ಆಯಾಸ ಹಾಗೂ ಭಯಾನಕವಾಗಲು ಶುರುವಾಗುತ್ತದೆ ಎನ್ನುತ್ತಾರೆ ಸದ್ಗುರು.
ನಿಮ್ಮ ಆಸೆ – ಆಕಾಂಕ್ಷೆಗಳ ಹೇರುವಿಕೆ : ಸಂತೋಷವಾಗಲಿ ದುಃಖವಾಗಲಿ, ಮೂಲವು ನಿಮ್ಮೊಳಗೆ ಇದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ನೀವು ಏನಾಗಬೇಕು ಎಂಬುದನ್ನು ನೀವು ನಿರ್ಧರಿಸಬೇಕು. ಇದನ್ನೂ ನಿಮ್ಮ ಸಂಗಾತಿಗೆ ಹೊರಿಸಬಾರದು. ನೀವು ಸಂತೋಷದ, ಸ್ವತಂತ್ರ ವ್ಯಕ್ತಿಯಾಗಿದ್ದರೆ ಸಂಗಾತಿ ನಿಮ್ಮೊಂದಿಗೆ ಸದಾ ಇರಲು ಮುಂದಾಗ್ತಾರೆ. ನೀವು ಅಸಂತೃಪ್ತರಾಗಿದ್ದು, ನಿಮ್ಮ ಆಸೆಗಳನ್ನು ಸಂಗಾತಿ ಮೇಲೆ ಹೇರುತ್ತಾ ಅವರಿಗೆ ಹಿಂಸೆ ನೀಡ್ತಿದ್ದರೆ ಅವರು ನಿಮ್ಮಿಂದ ದೂರವಾಗಲು ಪ್ರಯತ್ನಿಸುತ್ತಾರೆ. ಪ್ರೀತಿ ತಾನಾಗಿಯೇ ಸಿಗಬೇಕೇ ವಿನಃ ಬಲವಂತದಿಂದ ಪಡೆಯಬಾರದು. ಬಲವಂತದಿಂದ ಪಡೆದ ಪ್ರೀತಿ, ಆರೈಕೆ, ಗೌರವ ಸ್ವಲ್ಪ ದಿನ ಮಾತ್ರ ಇರಲು ಸಾಧ್ಯ.
ಸಿಂಗಲ್ಸ್‌ಗೆ ಸಿಹಿ ಸುದ್ದಿ: ಶೀಘ್ರದಲ್ಲೇ ಎಲಾನ್ ಮಸ್ಕ್ X ಆ್ಯಪ್‌ನಲ್ಲಿ ಡೇಟಿಂಗ್ ಕೂಡ ಮಾಡ್ಬೋದು!
ಮಧ್ಯ ದಾರಿಯಲ್ಲಿ ಬದಲಾವಣೆ : ಸಾಮಾನ್ಯವಾಗಿ ಒಂದೇ ಆಸಕ್ತಿ, ಗುರಿಗಳನ್ನು ಹೊಂದಿರುವ ವ್ಯಕ್ತಿಗಳು ಹತ್ತಿರವಾಗ್ತಾರೆ. ಅವರಿಬ್ಬರ ಮಧ್ಯೆ ಪ್ರೀತಿ ಶುರುವಾಗುತ್ತದೆ. ಮದುವೆ ಆರಂಭದಲ್ಲಿ ಇಬ್ಬರ ಮಧ್ಯೆ ಇದ್ದ ಆಸಕ್ತಿ, ಗುರಿ, ಮದುವೆ ನಂತ್ರ ಬದಲಾಗ್ತಾ ಬರುತ್ತದೆ. ಒಬ್ಬೊಬ್ಬರು ಒಂದೊಂದು ದಾರಿ ಹಿಡಿಯಲು ಶುರು ಮಾಡ್ತಾರೆ. ಆಗ ಇಬ್ಬರ ಮಧ್ಯೆ ಹೊಂದಾಣಿಕೆ ಕಡಿಮೆ ಆಗುತ್ತದೆ. ಇಬ್ಬರೂ ಬೇರೆ ಬೇರೆ ದಿಕ್ಕಿನಲ್ಲಿ ಸಾಗುವ ಕಾರಣ ಭಾವನೆಗಳಲ್ಲಿ ಬದಲಾವಣೆಯಾಗುತ್ತದೆ. ಇಬ್ಬರು ಹತ್ತಿರವಾಗುವ ಬದಲು ದೂರವಾಗ್ತಾರೆ.
ಮಾತಿಗಿಂತ ಇಲ್ಲಿ ಬರೀ ಮೌನ : ಮಾತು ಸಂಬಂಧವನ್ನು ಬಲಪಡಿಸುವ ಸಾಧನವಾಗಿದೆ. ದಂಪತಿ ತಮ್ಮ ಭಾವನೆಗಳು, ಅಗತ್ಯಗಳು ಮತ್ತು ಕಾಳಜಿಗಳನ್ನು (Caring) ಪರಸ್ಪರ ಹಂಚಿಕೊಳ್ಳಬೇಕು. ಆದ್ರೆ ಇವೆಲ್ಲವನ್ನು ಮಾಡಲು ದಂಪತಿ (Couple) ತೊಂದರೆ ಅನುಭವಿಸಿದಾಗ ಸಂಬಂಧವು ದುರ್ಬಲಗೊಳ್ಳಲು ಪ್ರಾರಂಭವಾಗುತ್ತದೆ. ಇದು ಇಬ್ಬರ ನಡುವೆ ತಪ್ಪು ತಿಳುವಳಿಕೆಗೆ ಕಾರಣವಾಗುತ್ತದೆ. ಇಬ್ಬರು ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಹೋಗಲು ಪ್ರೇರೇಪಿಸುತ್ತದೆ.
ಗಲಾಟೆ ನಂತ್ರ ಹೊಂದಾಣಿಕೆ : ದಂಪತಿ ಮಧ್ಯೆ ಜಗಳವಾಗೋದು ಮಾಮೂಲಿ. ಕೆಲವೊಮ್ಮೆ ಈ ಜಗಳದ ಅವಶ್ಯಕತೆ ಇರುತ್ತದೆ. ಆದ್ರೆ ಜಗಳವಾದಾಗ ಇಬ್ಬರು ಅದನ್ನು ಬಗೆಹರಿಸಿಕೊಳ್ಳುವ ಪ್ರಯತ್ನ ಮಾಡ್ಬೇಕು. ರಾಜಿ ಮಾಡಿಕೊಳ್ಳಬೇಕು. ಅದನ್ನು ಅಲ್ಲಿಗೆ ಬಿಟ್ಟು ಮುಂದುವರೆಯುವ ದಂಪತಿ ದೊಡ್ಡ ಸಮಸ್ಯೆ ಬಂದಾಗ್ಲೂ ಇದನ್ನೇ ಮಾಡ್ತಾರೆ. ಇದು ಇಬ್ಬರ ಮಧ್ಯೆ ದೊಡ್ಡ ಕಂದಕ ನಿರ್ಮಾಣಕ್ಕೆ ಕಾರಣವಾಗಿರುತ್ತದೆ. ಮನಸ್ಸಿನಲ್ಲೇ ಕೋಪ, ನೋವು, ದುಃಖ, ಅನುಮಾನವನ್ನಿಟ್ಟುಕೊಂಡು ಮುಂದುವರೆದ್ರೆ ಪ್ರೀತಿ ಹಳಸಲು ಶುರುವಾಗುತ್ತದೆ.
ನಂಬಿಕೆ (Trust) : ದಾಂಪತ್ಯದಲ್ಲಿ ನಂಬಿಕೆ ಬಹಳ ಮುಖ್ಯ. ಆದ್ರೆ ದಂಪತಿ ಪರಸ್ಪರ ನಂಬಿಕೆ ಕಳೆದುಕೊಂಡಾಗ ಪ್ರೀತಿ ಸತ್ತಂತೆ.