ಬೆಂಗಳೂರು ಯಾಕೆ ಎಲ್ಲರಿಗೂ ಇಷ್ಟವಾಗುತ್ತೆ, ಮಹಿಳೆ ಕೊಟ್ಟಿರೋ ಉತ್ತರ ವೈರಲ್‌

By Vinutha Perla  |  First Published Jun 27, 2023, 9:03 AM IST

ಬೆಂಗಳೂರು ನಗರ ಅದೆಷ್ಟೋ ಮಂದಿಯ ಬಾಳು ಬೆಳಗಿದೆ. ಎಜುಕೇಶನ್‌, ಜಾಬ್ ಅಂತ ಪ್ರತಿನಿತ್ಯ ಈ ಮಹಾನಗರಕ್ಕೆ ಸಾವಿರಾರು ಮಂದಿ ಬಂದು ಸೇರುತ್ತಾರೆ. ಇಷ್ಟಕ್ಕೂ ಎಲ್ಲರಿಗೂ ಈ ನಗರ ಇಷ್ವವಾಗೋದ್ಯಾಕೆ? ಮಹಿಳೆಯ ಟ್ವೀಟ್ ಎಲ್ಲೆಡೆ ವೈರಲ್ ಆಗಿದೆ. 


ಬೆಂಗಳೂರು: 'ಭಾರತದ ಸಿಲಿಕಾನ್ ವ್ಯಾಲಿ' ಅಥವಾ 'ಐಟಿ ಸೆಂಟರ್ ಆಫ್ ಇಂಡಿಯಾ' ಎಂದೂ ಕರೆಯಲ್ಪಡುವ ಬೆಂಗಳೂರು, ವಿಶ್ವದಲ್ಲೇ ಹೆಸರುವಾಸಿಯಾಗಿದೆ. ಇದು ಭಾರತದ 2.5 ಮಿಲಿಯನ್ ಐಟಿ ಉದ್ಯೋಗಿಗಳಲ್ಲಿ 35 ಪ್ರತಿಶತದಷ್ಟು ಜನರಿಗೆ ನೆಲೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಹಲವಾರು ಪಬ್‌ಗಳು ಮತ್ತು ರೋಮಾಂಚಕ ನೈಟ್‌ ಲೈಫ್‌ನಿಂದಾಗಿಯೂ ಬೆಂಗಳೂರನ್ನು 'ಭಾರತದ ಪಬ್ ಕ್ಯಾಪಿಟಲ್' ಎಂದೂ ಕರೆಯಲಾಗುತ್ತದೆ. ರಾಜ್ಯದ ನಾನಾ ಕಡೆಯಿಂದ, ದೇಶದ ವಿವಿಧೆಡೆಯಿಂದ ಅಷ್ಟೇ ಯಾಕೆ ವಿದೇಶದಿಂದಲೂ ಜನರು ಬೆಂಗಳೂರಿಗೆ ಆಗಮಿಸುತ್ತಾರೆ. ಇಲ್ಲಿನ ಜೀವನವನ್ನು ಇಷ್ಟಪಡುತ್ತಾರೆ. 

ಇಷ್ಟಕ್ಕೂ ಜನರು ಬೆಂಗಳೂರನ್ನು ಏಕೆ ಪ್ರೀತಿಸುತ್ತಾರೆ? ಇದರ ಹಿಂದಿರುವ ನಿಜವಾದ ಕಾರಣವೇನು ಈ ಬಗ್ಗೆ ಮಹಿಳೆ (Woman)ಯೊಬ್ಬರು ಮಾಹಿತಿಯನ್ನು ಹೊರ ಹಾಕಿದ್ದಾರೆ. ಸದ್ಯ ಈ ಟ್ವೀಟ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್‌ ಆಗಿದೆ. ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.

Latest Videos

undefined

ಬೆಂಗಳೂರಿನ ಎಂ.ಜಿ. ರಸ್ತೆಯಲ್ಲೂ ಅಂಚೆ ಇಲಾಖೆಯ 'ಪಾರ್ಸೆಲ್ ಆನ್ ವೀಲ್ಸ್' ಸೇವೆ ಆರಂಭ

'ಪೋಷಕರೊಂದಿಗೆ ವಾಸಿಸುವ ವಿಷಯಕ್ಕೆ ಬಂದಾಗ, ಪ್ರತಿಯೊಬ್ಬರೂ ವಿಭಿನ್ನ ದೃಷ್ಟಿಕೋನವನ್ನು ಹೊಂದಿರುತ್ತಾರೆ. ಕೆಲವರು ಅದನ್ನು ಬೆಂಬಲಿಸಿದರೆ ಇನ್ನು ಕೆಲವರು ಸ್ವತಂತ್ರವಾಗಿ ಬದುಕುವುದು ಉತ್ತಮ ಎಂದು ನಂಬುತ್ತಾರೆ, ಇತರರು ತಮ್ಮ ಸ್ವಾತಂತ್ರ್ಯವನ್ನು ಎಲ್ಲಕ್ಕಿಂತ ಹೆಚ್ಚಾಗಿ ಗೌರವಿಸುತ್ತಾರೆ. ಇದೀಗ, 'ವೆನೊನ್ಶ್ಯಾ' ಎಂಬ ಹೆಸರಿನ ಟ್ವಿಟ್ಟರ್ ಬಳಕೆದಾರರು ಈ ಬಗ್ಗೆ ಟ್ವೀಟ್ ಮಾಡಿದ್ದು, ಜನರು ಯಾಕೆ ಬೆಂಗಳೂರನ್ನು ಪ್ರೀತಿ (Love for Bengaluru)ಸುತ್ತಾರೆ ಎಂಬುದನ್ನು ವಿವರಿಸಿದ್ದಾರೆ.

'ನಗರದಲ್ಲಿ ಏಕಾಂಗಿಯಾಗಿ ಅಥವಾ ಪೋಷಕರೊಂದಿಗೆ ವಾಸಿಸುವುದು ಆ ನಗರವನ್ನು ನೀವು ಹೇಗೆ ಗ್ರಹಿಸುತ್ತೀರಿ ಎಂಬುದರ ಮೇಲೆ ನಿಜವಾಗಿಯೂ ಪರಿಣಾಮ ಬೀರುತ್ತದೆ. ಬೆಂಗಳೂರಿಗೆ ತೆರಳುವ ಬಹಳಷ್ಟು ಜನರು ಇದನ್ನು ಪ್ರೀತಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಪ್ರಾಮಾಣಿಕವಾಗಿ ಹೇಳುವುದಾದರೆ ನಗರದಲ್ಲಿ ಕಂಡುಕೊಳ್ಳುವ ಹೊಸ ಸ್ವಾತಂತ್ರ್ಯವು ಅಮೂಲ್ಯವಾದುದು' ಎಂದು ಟ್ವೀಟ್ ಮಾಡಿದ್ದಾರೆ. ಹೀಗಾಗಿ, ಉದ್ಯೋಗ (Job) ಅರಸಿ ಬೆಂಗಳೂರಿಗೆ ಬರುವ ಅನೇಕರು ಆ ಸ್ಥಳದ ಬಗ್ಗೆ ತಕ್ಷಣ ಪ್ರೀತಿಯಲ್ಲಿ ಬೀಳುತ್ತಾರೆ ಎಂದು ಉಲ್ಲೇಖಿಸಿದ್ದಾರೆ. ವೈರಲ್ ಆಗಿರುವ ಈ ಟ್ವೀಟ್‌ ಇಲ್ಲಿಯವರೆಗೆ 30.1k ವೀಕ್ಷಣೆಗಳು, 648 ಲೈಕ್ಸ್‌ ಮತ್ತು 38 ರೀಟ್ವೀಟ್‌ ಗಳಿಸಿದೆ. ಜನರು ಆನ್‌ಲೈನ್‌ನಲ್ಲಿ ಈ ಬಗ್ಗೆ ನಾನಾ ರೀತಿಯಲ್ಲಿ ಚರ್ಚೆ ಮಾಡುತ್ತಿದ್ದಾರೆ.

Bengaluru: ಮೆಟ್ರೋದೊಳಗೆ ಲೌಡ್‌ ಸ್ಪೀಕರ್‌ ಸಂಗೀತ ನಿಷೇಧ: ಬಿಎಂಆರ್‌ಸಿಎಲ್‌ ಸೂಚನೆ

ವೈರಲ್ ಆಗಿರುವ ಟ್ವೀಟ್‌ಗೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಟ್ವಿಟ್ಟರ್ ಬಳಕೆದಾರರೊಬ್ಬರು, 'ಬೆಂಗಳೂರಿನ ಬಹುಪಾಲು (ಹಳೆಯ ಅಧಿಕೃತ ಪ್ರದೇಶಗಳನ್ನು ಹೊರತುಪಡಿಸಿ) ಏರಿಯಾಗಳು ಪಬ್‌ಗಳು, ಸ್ಟಾರ್ಟ್‌ಅಪ್‌ಗಳು, ಕೆಟ್ಟದಾದ ಮೂಲಸೌಕರ್ಯ, ಅಧಿಕ ಬಾಡಿಗೆಗಳು ಮತ್ತು ಹೆಚ್ಚಿನ ಜೀವನ ವೆಚ್ಚದಿಂದ ತುಂಬಿದೆ ಎಂದು ನೀವು ತಿಳಿದುಕೊಳ್ಳುವವರೆಗೂ ಎಲ್ಲವೂ ಒಳ್ಳೆಯದು ಎಂದು ತೋರುತ್ತದೆ. ಆದರೂ ನಾನು ಈ ನಗರವನ್ನು ಇಷ್ಟಪಡುತ್ತೇನೆ' ಎಂದಿದ್ದಾರೆ. ಇನ್ನೊಬ್ಬ ವ್ಯಕ್ತಿ, 'ಬೆಂಗಳೂರು ಎನರ್ಜಿ ಬೂಸ್ಟರ್ ಆಗಿದೆ' ಎಂದು ಕಾಮೆಂಟಿಸಿದ್ದಾರೆ.

Living alone or with parents in a city really affects how you perceive that city. And I think that's why a lot of people who move to Bangalore fall in love with it. The new found independence honestly is priceless

— Venonshya (@bunonjam)
click me!