ಪ್ರೀತಿ ಮಾಡಿದ್ಮೇಲೆ ಮದುವೆಯಾಗ್ಬೇಕು ಅನ್ನೋದು ಪ್ರೇಮಿಗಳ ಅಲಿಖಿತ ನಿಯಮ. ಹಾಗಂತ ಎಲ್ಲರಿಗೂ ಇದು ಸಾಧ್ಯವಿಲ್ಲ. ಕುಟುಂಬಸ್ಥರ ವಿರೋಧದಿಂದ ಮಾತ್ರವಲ್ಲ ಕೆಲವು ಬಾರಿ ಬೇರೆ ಕಾರಣವೂ ಪ್ರೀತಿಯ ಮದುವೆಗೆ ಅಡ್ಡಿಯಾಗುತ್ತೆ.
ಪ್ರತಿಯೊಬ್ಬರ ಜೀವನದಲ್ಲಿ ಪ್ರೀತಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಪ್ರೀತಿ ಇಲ್ಲದೆ ಜೀವನ ನಡೆಸೋದು ಬಹಳ ಕಠಿಣ. ಪ್ರೀತಿಯಲ್ಲಿ ಬೀಳೋದು ಎಷ್ಟು ಕಷ್ಟವೋ ಆ ಪ್ರೀತಿಯ ಬಂಧದಿಂದ ಹೊರಗೆ ಬರೋದು ಕೂಡ ಅಷ್ಟೇ ಕಠಿಣ. ಸಾಮಾನ್ಯವಾಗಿ ಪ್ರೀತಿಸಿದ ವ್ಯಕ್ತಿಯನ್ನೇ ಮದುವೆಯಾಗಿ ಸುಂದರ ದಾಂಪತ್ಯ ಜೀವನ ನಡೆಸಬೇಕೆಂದು ಜನರು ಕನಸು ಕಾಣ್ತಾರೆ. ಪ್ರೀತಿಯಿಂದ ಒಂದು ಹೆಜ್ಜೆ ಮುಂದೆ ಹೋಗಿ ಮದುವೆಯಾಗಲು ನಿರ್ಧರಿಸುತ್ತಾರೆ.
ಎಲ್ಲರಿಗೂ ಪ್ರೀತಿ (Love) ಸಿದ ವ್ಯಕ್ತಿಯನ್ನೇ ಮದುವೆ (Marriage) ಯಾಗಲು ಸಾಧ್ಯವಿಲ್ಲ. ಪರಸ್ಪರ ಪ್ರೀತಿಯಿದ್ದರೂ ಅವರು ಮದುವೆಯಾಗುವುದು ಕಷ್ಟವಾಗುತ್ತದೆ. ಒಬ್ಬ ಸಂಗಾತಿ (Partner) ಮದುವೆಗೆ ಸಿದ್ಧವಿದ್ದು ಇನ್ನೊಬ್ಬರು ಸಿದ್ಧವಿರದೆ ಹೋಗಬಹುದು. ಹಾಗಂತ, ಮದುವೆಗೆ ಒಲ್ಲೆ ಎಂದ ವ್ಯಕ್ತಿ ಕೆಟ್ಟವರು ಎಂದಲ್ಲ. ಇದ್ರಲ್ಲಿ ಯಾರದ್ದು ಸರಿ, ಯಾರದ್ದು ತಪ್ಪು ಎಂಬುದನ್ನು ಹೇಳೋದು ಕಷ್ಟವಾಗುತ್ತದೆ. ಪ್ರೀತಿಸಿದ ವ್ಯಕ್ತಿಯನ್ನು ಬಿಟ್ಟು ಬೇರೊಬ್ಬರ ಜೊತೆ ಮದುವೆಯಾಗಲು ನಾನಾ ಕಾರಣವಿದೆ. ಜೀವನ ನಡೆಸಲು ಪ್ರೀತಿಯೊಂದೇ ಮುಖ್ಯವಲ್ಲ. ಪ್ರೀತಿಸಿದ ವ್ಯಕ್ತಿ ನಿಮ್ಮನ್ನು ಬಿಟ್ಟು ಬೇರೊಬ್ಬರ ಜೊತೆ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ರೆ ಅದನ್ನು ಸ್ವೀಕರಿಸಿ, ಸತ್ಯವನ್ನು ಒಪ್ಪಿಕೊಳ್ಳುವುದು ಮುಖ್ಯ. ಈ ಬಂಧನದಿಂದ ಬಿಡುಗಡೆ ಹೊಂದುವ ಮೊದಲು ಕೆಲವೊಂದನ್ನು ತಿಳಿದಿರಬೇಕು.
undefined
ಫ್ಲರ್ಟ್ ಮಾಡೋದೇ ತಪ್ಪು, ಅದರಲ್ಲೂ ಈ ತಪ್ಪು ಮಾತ್ರ ಮಾಡ್ಲೇ ಬೇಡಿ!
ಮದುವೆಗೆ ಪ್ರೀತಿಯೊಂದೇ ಸಾಲೋದಿಲ್ಲ : ಪ್ರೀತಿಸಿದ ಮೇಲೆ ಅವರನ್ನೇ ಮದುವೆಯಾಗುವ ಕನಸು ಕಾಣೋದು ಸಹಜ. ಆದ್ರೆ ಜೀವನ ನಡೆಸಲು ಪ್ರೀತಿ ಮಾತ್ರ ಮುಖ್ಯವಲ್ಲ, ಪ್ರೀತಿಯಿಂದ ಹೊಟ್ಟೆ ತುಂಬಲು ಸಾಧ್ಯವಿಲ್ಲ ಎಂಬುದನ್ನು ಜನರು ತಿಳಿಯಬೇಕು. ಪ್ರೀತಿಸಿದ್ದೇವೆ ಎನ್ನುವ ಕಾರಣಕ್ಕೆ ಕೆಲವರು ಮದುವೆಯೇನೋ ಆಗ್ತಾರೆ ಆಮೇಲೆ ಅದ್ರಿಂದ ತೊಂದರೆ ಅನುಭವಿಸುತ್ತಾರೆ. ಪ್ರೀತಿ ಜೊತೆ ಒಂದು ಸುಂದರ ಸಂಸಾರ ನಡೆಸಲು ಆರ್ಥಿಕ ಸ್ಥಿತಿ, ಕುಟುಂಬಸ್ಥರ ಹೊಂದಾಣಿಕೆ, ಪರಸ್ಪರ ನಂಬಿಕೆ, ವಿಶ್ವಾಸ ಹಾಗೂ ಗೌರವ, ಇಬ್ಬರ ಮಾನಸಿಕ ಸ್ಥಿತಿ ಸೇರಿದಂತೆ ಅನೇಕ ಸಂಗತಿ ಅಗತ್ಯವಿರುತ್ತದೆ.
ಸಂಗಾತಿ ಜೊತೆ ಮನಸ್ಸು ಬಿಚ್ಚಿ ಮಾತನಾಡಿ : ಸಂಗಾತಿ ಜೊತೆ ಮನಸ್ಸು ಬಿಚ್ಚಿ ಮಾತನಾಡೋದು ಮುಖ್ಯವಾಗುತ್ತದೆ. ನೀವು ಸಂಬಂಧವನ್ನು ಮುಂದುವರೆಸಲು ನಿರ್ಧರಿಸಿದ್ದರೆ ಅದ್ರ ಬಗ್ಗೆ ಮಾತನಾಡಬೇಕು. ಮದುವೆ ಬಗ್ಗೆ ಮಾತುಕತೆ ನಡೆಸಬೇಕು. ಸಂಗಾತಿ ನಿಮ್ಮ ಹಾಗೆಯೇ ನಿಮ್ಮ ಸಂಬಂಧವನ್ನು ಮುಂದುವರೆಸಲು, ಮದುವೆಯಾಗಲು ಒಪ್ಪುತ್ತಾರಾ ಎಂಬುದನ್ನು ತಿಳಿದುಕೊಳ್ಳಿ. ಒಂದ್ವೇಳೆ ಅವರು ಅದಕ್ಕೆ ಒಪ್ಪದೆ ಹೋದಲ್ಲಿ ನೀವು ಸಂಬಂಧ ಮುರಿದುಕೊಂಡು ಬೇರೆ ದಾರಿ ನೋಡಿಕೊಳ್ಳುವುದು ಯೋಗ್ಯ.
ಇವರು ಬೆಕ್ಕು-ನಾಯಿಯಂತೆ ಕಚ್ಚಾಡೋ ಗಂಡ-ಹೆಂಡತಿ; ಇದು ಯಾವ ರಾಶಿಯವರ ದೋಷ ಗೊತ್ತಾ?
ಸಮಯ ಹಾಳು ಮಾಡ್ಬೇಡಿ : ಪ್ರೀತಿ ಓಕೆ, ಮದುವೆ ಬೇಡ ಎನ್ನುವ ಸಂಗಾತಿ ನಿಮ್ಮವರಾಗಿದ್ದರೆ ನೀವು ಇದೇ ಸಂಬಂಧದಲ್ಲಿ ಸಮಯ ಹಾಳು ಮಾಡ್ಬೇಡಿ. ಮದುವೆಯಾಗದೇ ಸುಮ್ಮನೆ ಸಂಬಂಧ ಬೆಳೆಸುವವರ ಜೊತೆ ಕಾಲಹರಣ ಮಾಡೋದ್ರಿಂದ ಲಾಭವಿಲ್ಲ. ನೀವಿಬ್ಬರೂ ಪರಸ್ಪರರ ಭಾವನೆಯನ್ನು ಗೌರವಿಸಿ, ಸಂಬಂಧದಿಂದ ಹೊರಗೆ ಬನ್ನಿ. ಸಂಬಂಧದಿಂದ ಬೇರ್ಪಡುವುದು ಅಂದ್ರೆ ಸಂಗಾತಿ ಮೇಲೆ ಕೋಪಮಾಡಿಕೊಳ್ಳುವುದು, ಜಗಳವಾಡುವುದು ಎಂದರ್ಥವಲ್ಲ. ನೀವು ಆರೋಗ್ಯಕರವಾಗಿಯೇ ಸಂಬಂಧದಿಂದ ಹೊರಗೆ ಬರಬಹುದು. ಹಾಗೆ ಮಾಡಿದಲ್ಲಿ ಇಬ್ಬರಿಗೂ ಒಳ್ಳೆಯದು. ಅವ್ರ ಬಗ್ಗೆ ಗೌರವ ಸದಾ ಇರುವಂತೆ ನೋಡಿಕೊಳ್ಳಿ.
ಆಪ್ತರ ಜೊತೆ ಸಮಾಲೋಚನೆ : ನೋವನ್ನು ಮನಸ್ಸಿನಲ್ಲಿಟ್ಟುಕೊಂಡು ಕೊರಗಿದ್ರೆ ಸಮಸ್ಯೆ ಹೆಚ್ಚಾಗುತ್ತದೆ. ಆಪ್ತರ ಜೊತೆ ಹಂಚಿಕೊಂಡ್ರೆ ಮನಸ್ಸು ಹಗುರವಾಗುತ್ತದೆ. ಹಾಗಾಗಿ ನಿಮ್ಮ ಈ ಸಮಸ್ಯೆಯನ್ನು ನೀವು ಆಪ್ತರ ಮುಂದೆ ತೆರೆದಿಡಿ. ಮದುವೆ ಹಾಗೂ ಸಂಬಂಧದಿಂದ ಹೊರಬರುವ ಗೊಂದಲಕ್ಕೆ ಅವರಿಂದ ಸೂಕ್ತ ಉತ್ತರ ಸಿಗಬಹುದು. ಸಂಬಂಧದಿಂದ ಹೊರಬರುವ ನಿರ್ಧಾರ ಮಾಡಿದ್ಮೇಲೆ ಅದ್ರಿಂದ ಹಿಂದೆ ಸರಿಯಬೇಡಿ. ಹಾಗೆ ಮನಸ್ಸನ್ನು ಅದಕ್ಕೆ ಹದಗೊಳಿಸಿ. ವ್ಯಾಯಾಮ, ಹವ್ಯಾಸದ ಜೊತೆ ಅಗತ್ಯವಿದ್ರೆ ತಜ್ಞರನ್ನು ಭೇಟಿಯಾಗಿ ಕೌನ್ಸಿಲಿಂಗ್ ಪಡೆದು ನೀವು ಮತ್ತೆ ಹೊಸ ಜೀವನ ಶುರು ಮಾಡಬಹುದು.