Relationship Tips: ಪ್ರೀತಿ ಮಾಡು ತಪ್ಪೇನಿಲ್ಲ, ಆದ್ರೆ ಮತ್ತೆ ಮತ್ತೆ ಲವ್ವಲ್ಲಿ ಬೀಳೋದು ಸರಿನಾ ?

Suvarna News   | Asianet News
Published : Mar 10, 2022, 06:45 PM IST
Relationship Tips: ಪ್ರೀತಿ ಮಾಡು ತಪ್ಪೇನಿಲ್ಲ, ಆದ್ರೆ ಮತ್ತೆ ಮತ್ತೆ ಲವ್ವಲ್ಲಿ ಬೀಳೋದು ಸರಿನಾ ?

ಸಾರಾಂಶ

ಪ್ರೀತಿ (Love) ಮಾಡೋದು ತಪ್ಪೇನಲ್ಲ. ಆದ್ರೆ ಮತ್ತೆ ಮತ್ತೆ ಪ್ರೀತಿಲಿ ಬೀಳೋದು ಎಷ್ಟು ಸರಿ. ಇವತ್ತಿನ ದಿನಗಳಲ್ಲಿ ಎಲ್ಲಾ ವಸ್ತುಗಳಿಗೆ ವ್ಯಾಲಿಡಿಟಿ ಕಡಿಮೆಯಾಗಿರುವ ಹಾಗೆಯೇ ಸಂಬಂಧ (Relationship) ಗಳೂ ವ್ಯಾಲಿಡಿಟಿ ಕಳೆದುಕೊಳ್ಳುತ್ತಿದೆ. ಅದಕ್ಕೇನು ಕಾರಣ ?

ಪ್ರೀತಿ (Love) ಪ್ರಪಂಚದ ಅತ್ಯಂತ ಸುಂದರವಾದ ಭಾವನೆಗಳಲ್ಲಿ ಒಂದಾಗಿದೆ.  ಪ್ರೀತಿಯೆಂಬ ಭಾವನೆ ಮಮತೆ, ಸಾಂತ್ವನ, ಕರುಣೆ, ಮಮಕಾರ ಎಲ್ಲವನ್ನೂ ಒಳಗೊಂಡಿರುತ್ತದೆ. ಪ್ರೀತಿ ಮನುಷ್ಯರನ್ನು ಯಾವಾಗಲೂ ಖುಷಿಯಾಗಿರುವಂತೆ ಮಾಡುತ್ತದೆ. ಹೀಗಾಗಿ ಹೆಚ್ಚಿನವರು ಪ್ರೀತಿಯಲ್ಲಿದ್ದಾಗ ಅತ್ಯಂತ ಹೆಚ್ಚು ಖುಷಿಯಾಗಿರುತ್ತಾರೆ. ಆದರೆ ಕೆಲವರ ಪ್ರೀತಿಗೆ ಹೆಚ್ಚು ವ್ಯಾಲಿಡಿಟಿ ಇಲ್ಲ. ಕೆಲವೇ ದಿನಗಳ, ಕೆಲವೇ ತಿಂಗಳು ಹೀಗೆ ಬೇಗನೆ ಪ್ರೀತಿ ಛಾರ್ಮ್ ಕಳೆದುಕೊಂಡು ಬಿಡುತ್ತದೆ. ಹೊಸ ಪ್ರೀತಿಗಾಗಿ ಹಾತೊರೆಯುವಂತೆ ಮಾಡುತ್ತದೆ.

ಪ್ರೀತಿ ಮಾಡು ತಪ್ಪೇನಿಲ್ಲ ಅನ್ನೋ ಹಾಡನ್ನು ನೀವು ಕೇಳಿರಬಹುದು. ಅದಕ್ಕೇ ಇರ್ಬೇಕು ಅದೆಷ್ಟೋ ಮಂದಿ ಮತ್ತೆ ಮತ್ತೆ ಪ್ರೀತಿಸುತ್ತಲೇ ಇರುತ್ತಾರೆ. ಒಂದೇ ಸಂಬಂಧದಲ್ಲಿ ಪ್ರಾಮಾಣಿಕವಾಗಿರದೆ, ಪರ್ಯಾಯವಾಗಿ ಬೇರೆ ಬೇರೆ ಸಂಬಂಧಗಳನ್ನು ಹುಡುಕಿಕೊಳ್ಳುತ್ತಾರೆ. ಪ್ರೀತಿಸಿ ಮದುವೆಯಾದವರು ಸಹ ದೂರವಾಗುತ್ತಾರೆ. ಮನೆಯಲ್ಲಿ ಮುದ್ದಾದ ಹೆಂಡ್ತಿ-ಮಕ್ಕಳಿದ್ದರೂ ಮತ್ಯಾರದ್ದೋ ಸೆರಗು ಹಿಡಿದು ಹೋಗುತ್ತಾರೆ. ಮಹಿಳೆಯರೂ ಅಷ್ಟೇ ಕಟ್ಟಿಕೊಂಡ ಗಂಡನನ್ನು ಬಿಟ್ಟು ಪರಪುರುಷನ ತೆಕ್ಕೆಗೆ ಜಾರುತ್ತಾರೆ. ಅನೈತಕ ಸಂಬಂಧ ಎಂಬುದು ಇವತ್ತಿನ ದಿನದಲ್ಲಿ ಎಷ್ಟು ಸಾಮಾನ್ಯವಾಗಿ ಹೋಗಿದೆಯೆಂದರೆ ಅದನ್ನು ಯಾರೂ ತಪ್ಪೆಂದು ಪರಿಗಣಿಸುತ್ತಿಲ್ಲ.

Cheating Partner : ಒಂದೇ ಬಾರಿ ಇಬ್ಬರ ಜೊತೆ ಲವ್ವಿಡವ್ವಿ, ಸಂಗಾತಿ ಗುಟ್ಟು ಹೀಗೆ ರಟ್ಟು

ಇವತ್ತಿನ ಕಾಲದಲ್ಲಿ ಎಲ್ಲಾ ರೀತಿಯ ವಸ್ತುಗಳಿಗೂ ಆಯುಷ್ಯ ಕಡಿಮೆ. ಮೊದ ಮೊದಲು ಚೆನ್ನಾಗಿ ಕಂಡಿದ್ದೆಲ್ಲಾ ಮತ್ತೆ ಮತ್ತೆ ಹಿಂಸೆಯೆನಿಸತೊಡಗುತ್ತದೆ. ಹಾಗೆಯೇ ಸಂಬಂಧಗಳು ಸಹ ಹಾಗೆಯೇ ಅತಿ ಬೇಗನೆ ಎಕ್ಸ್ಪಯರಿ ಆಗಿ ಬಿಡುತ್ತೇವೆ. ಮೊದ ಮೊದಲು ಚೆನ್ನಾಗಿ ಕಂಡಿದ್ದೆಲ್ಲಾ ಮತ್ತೆ ಮತ್ತೆ ಹಿಂಸೆಯೆನಿಸತೊಡಗುತ್ತದೆ. ಸಂಬಂಧಗಳ ವಿಷಯದಲ್ಲೂ ಇದೇ ಆಗುತ್ತದೆ. ಆರಂಭದಲ್ಲಿ ಚೆನ್ನಾಗಿರುವ ಪ್ರೀತಿ ಮತ್ತೆ ಮತ್ತೆ ಬೋರೆನಿಸುವುದು ಯಾಕೆ ?

ಒಬ್ಬರ ಮೇಲೆ ಪ್ರೀತಿ ಮೂಡಲು ಕಾರಣಗಳೇ ಬೇಕಿಲ್ಲ. ರೂಪ, ಗುಣ, ಅಂತಸ್ತು ಹೀಗೆ ಹಲವು ಕಾರಣಗಳಿಗೆ ಪ್ರೀತಿಯಾಗಿ ಬಿಡುತ್ತದೆ. ಅದೇ ರೀತಿ ಪ್ರೀತಿ ಇಲ್ಲದಾಗಲು ಸಹ ಕಾರಣ ಬೇಕಿಲ್ಲ. ಕಾರಣವಿಲ್ಲದೆಯೇ ಒಬ್ಬರ ಮೇಲಿರುವ ಪ್ರೀತಿಯೂ ಹೋಗಿ ಬಿಡುತ್ತದೆ. ಕೆಲವೊಬ್ಬರು ಪ್ರೀತಿಸಿ ಇನ್ನು ಏಳೇಳು ಜನ್ಮಕ್ಕೂ ನೀನೆ ನನ್ನ ಗಂಡ, ನೀನೆ ನನ್ನ ಹೆಂಡ್ತಿ ಎಂದವರು ಈ ಜನುಮದಲ್ಲೇ ಮತ್ತೆ ಬೇರೆ ಹುಡುಗಿಯರ ಬೆನ್ನು ಬಿದ್ದಿರುತ್ತಾರೆ. ಒತ್ತಡದ ಜೀವನಶೈಲಿ, ಸಮಯಾವಾಕಾಶದ ಕೊರತೆ ಒಟ್ನಲ್ಲಿ ಇವತ್ತಿನ ದಿನಗಳಲ್ಲಿ ಪ್ರೀತಿಯಲ್ಲಿ ಪ್ರಾಮಾಣಿಕವಾಗಿರಲು ಹೆಚ್ಚಿನವರಿಗೆ ಸಾಧ್ಯವಾಗುವುದಿಲ್ಲ.

60 ಸಾವಿರ ನೀಡಿ ಆನ್‌ಲೈನ್‌ನಲ್ಲಿ ಬಾಯ್‌ಫ್ರೆಂಡ್‌ ಖರೀದಿಸಿದ ಮಹಿಳೆ

ನಿಜವಾದ ಪ್ರೀತಿ ಒಂದು ಭಾವನೆಯಲ್ಲ, ಅದು ಒಂದು ಕ್ರಿಯೆ. ಇದು ಒಂದು ಆಯ್ಕೆಯಾಗಿದೆ. ಸಂಬಂಧವನ್ನು ನಿರ್ಮಿಸುವುದು ಸವಾಲಿನದು ಮತ್ತು ಇದು ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ ಎಂದು ಮನಶ್ಶಾಸ್ತ್ರಜ್ಞ ನಿಕೋಲ್ ಲೆಪೆರಾ ಬರೆದಿದ್ದಾರೆ. ಪ್ರಾಮಾಣಿಕ, ಮುಕ್ತ ಮತ್ತು ಅಧಿಕೃತ ಸಂಬಂಧವನ್ನು ಹೊಂದಲು, ನಾವು ಸಂವಹನವನ್ನು ಪ್ರಾರಂಭಿಸಬೇಕು, ನಮ್ಮನ್ನು ತಡೆಹಿಡಿಯುವ ಸಮಸ್ಯೆಗಳನ್ನು ಪರಿಹರಿಸಬೇಕು ಮತ್ತು ಅತ್ಯಂತ ಮುಖ್ಯವಾಗಿ, ಪ್ರಾಮಾಣಿಕತೆ, ಕ್ಷಮೆ ಮತ್ತು ಸಹಾನುಭೂತಿಯನ್ನು ಅಭ್ಯಾಸ ಮಾಡಿಕೊಳ್ಳಬೇಕು ಎನ್ನುತ್ತಾರೆ.

ಪ್ರೀತಿ ಮಾಡುವಾಗ ಪರಸ್ಪರ ಒಬ್ಬರಿಗೆ ಇನ್ನೊಬ್ಬರ ಮೇಲೆ ಗೌರವ (Respect) ಇರುವುದು ಮುಖ್ಯ. ವ್ಯಕ್ತಿಯನ್ನು ಇದ್ದಂತೆಯೇ ಪ್ರೀತಿಸಿ. ಸ್ವಭಾವಗಳನ್ನು ಬದಲಿಸಲು ಒತ್ತಾಯ ಮಾಡುವುದು ಇಬ್ಬರ ನಡುವೆ ಅಂತರ ಮೂಡಲು ಕಾರಣವಾಗುತ್ತದೆ. ಯಾವೊಬ್ಬ ವ್ಯಕ್ತಿಯೂ ಪರಿಪೂರ್ಣರಲ್ಲ. ಎಲ್ಲರಿಗೂ ಒಂದಲ್ಲಾ ಒಂದು ರೀತಿಯ ಸಮಸ್ಯೆಗಳಿರುತ್ತದೆ. ಈಕೆ ನಾನಂದುಕೊಂಡಂತೆ ಇಲ್ಲ ಎಂದು ಮತ್ತೊಬ್ಬಳನ್ನು ಹುಡುಕಿಕೊಳ್ಳುವುದು ತಾತ್ಕಾಲಿಕ ಪರಿಹಾರವಷ್ಟೇ. 

ಪ್ರೀತಿಯನ್ನು ಯಾವತ್ತೂ ಗೌರವಿಸಿ. ಮತ್ತೆ ಮತ್ತೆ ಪ್ರೀತಿಯಲ್ಲಿ ಬೀಳುವುದು ಎಲ್ಲಾ ರೀತಿಯ ಸಂಬಂಧ (Relationship)ಗಳನ್ನು ದುರ್ಬಲಗೊಳಿಸುತ್ತದೆಯಷ್ಟೇ. ಹೊರತು ಅದರಿಂದ ಮತ್ತೇನು ಪ್ರಯೋಜನವಿಲ್ಲ. ಪ್ರೀತಿಯೆಂಬುದು ಪವಿತ್ರವಾಗಿರಲಿ. ಮತ್ತೆ ಮತ್ತೆ ಪ್ರೀತಿಸುವವರು ಜೀವನದಲ್ಲಿ ಯಾವುದೇ ಸಂಬಂಧವನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಿಲ್ಲ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೋಸ ಮಾಡುವ ಗಂಡನನ್ನು ಕಂಡು ಹಿಡಿಯೋದು ಹೇಗೆ?
ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!