Cheating Partner : ಒಂದೇ ಬಾರಿ ಇಬ್ಬರ ಜೊತೆ ಲವ್ವಿಡವ್ವಿ, ಸಂಗಾತಿ ಗುಟ್ಟು ಹೀಗೆ ರಟ್ಟು

By Suvarna News  |  First Published Mar 9, 2022, 4:51 PM IST

ಮೊದಲಿದ್ದ ಪ್ರೀತಿಯ ಭಾಷ್ಯ ಈಗ ಬದಲಾಗಿದೆ. ಪ್ರೀತಿ ಅನೇಕರಿಗೆ ಟೈಂ ಪಾಸ್ ಆಗಿದೆ. ಸಂಗಾತಿ ಜೊತೆಗಿರುವಾಗ್ಲೇ ಇನ್ನೊಬ್ಬರ ಸನಿಹ ಬಯಸುವ ಜನರಿದ್ದಾರೆ. ನಿಮ್ಮ ಸಂಗಾತಿಯಲ್ಲೂ ಈ ಸ್ವಭಾವವಿದ್ಯಾ ಎಂಬುದನ್ನು ಸುಲಭವಾಗಿ ಪತ್ತೆ ಮಾಡಿ. 
 


ಪ್ರೀತಿ (Love)ಯೊಂದು ಬಂಧ (Bond). ಅದರ ಬಲೆಯಲ್ಲಿ ಬಿದ್ಮೇಲೆ ಹೊರಗೆ ಬರುವುದು ಕಷ್ಟ. ಹಾಗಾಗಿ ಕೆಲವರು ಪ್ರೀತಿಯ ಬಂಧನದಲ್ಲಿ ಬಂಧಿಯಾಗಲು ಇಚ್ಛಿಸುವುದಿಲ್ಲ. ಅವರಿಗೆ ಪ್ರೀತಿ ಕೇವಲ ಟೈಂ ಪಾಸ್ (Time pass) ಆಗಿರುತ್ತದೆ. ಅವರು ಇದನ್ನು ಎಂದಿಗೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಪ್ರೀತಿಸುವ ವ್ಯಕ್ತಿಯನ್ನು ಅವರು ಹಗುರವಾಗಿ ತೆಗೆದುಕೊಳ್ಳುವ ಜೊತೆಗೆ ಒಂದೇ ಬಾರಿ ಎರಡೆರಡು ಸಂಬಂಧದಲ್ಲಿ ಬೀಳಲೂ ಇಷ್ಟಪಡ್ತಾರೆ. ಎರಡು ಜನರೊಂದಿಗೆ ಸಂಬಂಧದಲ್ಲಿದ್ದು ಅದನ್ನು ರಹಸ್ಯವಾಗಿಡುತ್ತಾರೆ. ಆದ್ರೆ ಇದ್ರ ಬಗ್ಗೆ ಪಶ್ಚಾತಾಪವಿರುವುದಿಲ್ಲ. ಮುಕ್ತ ಸಂಬಂಧವೆಂದು ಭಾವಿಸುವ ಅವರು ಇಬ್ಬರ ಜೊತೆಯೂ ಸಹಜವಾಗಿ ವರ್ತಿಸುತ್ತಾರೆ. ಅಷ್ಟು ಮಾತ್ರವಲ್ಲ, ತಮ್ಮ ಸಂಗಾತಿ ಬೇರೆಯವರ ಜೊತೆ ಸಂಬಂಧ ಬೆಳೆಸಿದ್ರೆ ಅದನ್ನೂ ಸ್ವಾಗತಿಸುವ ಅನೇಕರಿದ್ದಾರೆ.

ನಿಮ್ಮ ಸಂಗಾತಿಯೂ ಹಾಗೇ ಇರಬಹುದು. ಕೆಲವೊಮ್ಮೆ ಅವರ ವರ್ತನೆ ಮೂಲಕವೇ ನಿಮ್ಮ ಸಂಗಾತಿಯ ಈ ರಹಸ್ಯವನ್ನು ನೀವು ಬಯಲು ಮಾಡಬಹುದು. ಅನೇಕ ಬಾರಿ ನಮಗೆ ಅಸಹಜವೆನ್ನಿಸುವ ಮಾತುಗಳನ್ನು ತಮಾಷೆ ರೂಪದಲ್ಲಿ ಸಂಗಾತಿ ಹೇಳಿರುತ್ತಾರೆ. ಅದನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲವಾದ್ರೂ ಅಸುರಕ್ಷತೆ ಎಲ್ಲೋ ಕಾಡಲು ಶುರುವಾಗುತ್ತದೆ. ನಿಮ್ಮ ಸಂಗಾತಿ ಕೂಡ ಪದೇ ಪದೇ ಅಂತ ಮಾತುಗಳನ್ನು ಆಡ್ತಿದ್ದರೆ ಎಚ್ಚೆತ್ತುಕೊಳ್ಳಿ. ಅವರು ಮುಕ್ತ ಸಂಬಂಧ ಹೊಂದಿದ್ದಾರೆಯೇ ಎಂಬುದನ್ನು ಕೆಲ ಟಿಪ್ಸ್ ಮೂಲಕ ತಿಳಿದುಕೊಳ್ಳಿ.

Tap to resize

Latest Videos

ತಮಾಷೆ ಮಾತು : ತಮಾಷೆಯಾಗಿಯೇ ಅನೇಕರು ತಮ್ಮ ಮನಸ್ಸಿನ ಮಾತನ್ನು ಹೊರಗೆ ಹಾಕಿರ್ತಾರೆ. ನಿಮ್ಮ ಸಂಗಾತಿ ಕೂಡ ನಿಮ್ಮ ಜೊತೆ ಕಮಿಟ್ ಆಗಿದ್ದರೂ ಇನ್ನೊಬ್ಬರ ಜೊತೆ ಸಂಬಂಧ ಬೆಳೆಸುವ ಮಾತುಗಳನ್ನು ಪದೇ ಪದೇ ಹೇಳ್ತಿದ್ದರೆ ಸ್ವಲ್ಪ ಅಲರ್ಟ್ ಆಗಿದೆ. ಇನ್ನೊಬ್ಬರ ಜೊತೆ ನಾನು ಸಂಬಂಧ ಬೆಳೆಸಿದ್ರೆ ನೀನು ಏನು ಮಾಡ್ತೀಯಾ? ಇನ್ನೊಬ್ಬರ ಜೊತೆ ಫೋನ್ ನಲ್ಲಿ ಬ್ಯುಸಿಯಿದ್ದೆ? ಅವರು ನನಗೆ ಪ್ರಪೋಸ್ ಮಾಡುವ ಪ್ರಯತ್ನ ನಡೆಸಿದ್ರು, ಹೀಗೆ ತಮಾಷೆಯಲ್ಲಿಯೇ ಭಾವನೆ ಹೇಳಬಹುದು. ಅವರು ಕಮಿಟ್ ಆಗುವ ಬದಲು ಮುಕ್ತ ಸಂಬಂಧವನ್ನು ನಿಮ್ಮಿಂದ ಬಯಸುತ್ತಿರಬಹುದು. ಇದನ್ನು ಸರಿಯಾಗಿ ಅರ್ಧಮಾಡಿಕೊಳ್ಳಿ. 

Samudrika Shastra: ಈ 'ಲಕ್ಷಣಗಳಲ್ಲಿ' ಅರ್ಧದಷ್ಟು ಗುಣವಿದ್ದರೂ ಆತನನ್ನು ಕಣ್ಣು ಮುಚ್ಚಿ ವಿವಾಹವಾಗಿ!

ಲೈಂಗಿಕ ಫ್ಯಾಂಟಸಿ : ಪ್ರತಿಯೊಬ್ಬರೂ ತಮ್ಮ ಕಲ್ಪನೆಯನ್ನು ಸಂಗಾತಿ ಮುಂದೆ ಹೇಳಿಕೊಳ್ತಾರೆ. ಆದ್ರೆ ನಿಮ್ಮ ಸಂಗಾತಿ ಮಾತಿನಲ್ಲಿ ಅಥವಾ ಕಲ್ಪನೆಯಲ್ಲಿ ಮೂವರ ವಿಷ್ಯ ಬಂದ್ರೆ ಅದು ನಾರ್ಮಲ್ ಅಲ್ಲ. ಮೂರು ಜನರ ಸಂಬಂಧ ಇಲ್ಲವೆ ಲೈಂಗಿಕ ಕ್ರಿಯೆ ಬಗ್ಗೆ ಅವರು ಮಾತನಾಡಿದ್ರೆ ಇದು ಅವರ ಮನಸ್ಸಿನ ಮಾತನ್ನು ಸ್ಪಷ್ಟಪಡಿಸುತ್ತದೆ. ಸಂಗಾತಿ ಇಂಥಹದ್ದನ್ನು ಇಷ್ಟಪಡ್ತಿದ್ದಾರೆ ಎಂಬ ಸೂಚನೆ ನೀಡುತ್ತದೆ. 

ಜೊತೆಗಿದ್ದರೂ ಬೇರೆಯವರ ಬಗ್ಗೆ ಗಮನ : ನಿಜವಾಗಿ ಪ್ರೀತಿಸುವವರು ಬೇರೆಯವರ ಮೇಲೆ ಆಸಕ್ತಿ ಹೊಂದಿರುವುದಿಲ್ಲ. ತಮಾಷೆಗಾಗಿ ಪ್ರೀತಿಸುವವರು ಎಲ್ಲರನ್ನೂ ಗಮನಿಸುತ್ತಾರೆ. ನೀವು ಅವರ ಜೊತೆಗಿದ್ದರೂ ಚೆಂದದ ವ್ಯಕ್ತಿ ಹಾದು ಹೋದಾಗ ಅವರ ಗಮನ ಎಲ್ಲಿಗೆ ಹೋಗುತ್ತಿದ್ದರೆ ಸ್ವಲ್ಪ ಜಾಗರೂಕರಾಗಿ. ನೀವು ಅನೇಕ ಬಾರಿ ಈ ವಿಷ್ಯವನ್ನು ಅವರಿಗೆ ಹೇಳಿದ್ದು,ಅವರು ಅದನ್ನು ತಿದ್ದಿಕೊಳ್ಳುವ ಪ್ರಯತ್ನ ಮಾಡದೆ ಹೋದಲ್ಲಿ ಅಥವಾ ಮೂರನೇ ವ್ಯಕ್ತಿ ಬಗ್ಗೆ ನಿಮ್ಮ ಮುಂದೆಯೇ ಮಾತನಾಡುತ್ತಿದ್ದರೆ ಸಂಗಾತಿ ಬದಲಾಗಿದ್ದಾರೆ ಎಂದೇ ಅರ್ಥ.

60 ಸಾವಿರ ನೀಡಿ ಆನ್‌ಲೈನ್‌ನಲ್ಲಿ ಬಾಯ್‌ಫ್ರೆಂಡ್‌ ಖರೀದಿಸಿದ ಮಹಿಳೆ

ಕಾಣದ ಅಸೂಯೆ : ಪ್ರೀತಿಯಲ್ಲಿ ಅಸೂಯೆಯಿರುತ್ತದೆ. ನಾನು ಪ್ರೀತಿಸುವ ವ್ಯಕ್ತಿಯನ್ನು ಬೇರೆಯವರು ಪ್ರೀತಿಸಬಾರದು,ಮಾತನಾಡಿಸಬಾರದು,ನೋಡಬಾರದು ಹೀಗೆ ಬೇರೆ ಬೇರೆ ಭಾವನೆಯನ್ನು ಜನರು ಹೊಂದಿರುತ್ತಾರೆ. ಪ್ರೀತಿಸುವ ವ್ಯಕ್ತಿ ಇನ್ನೊಬ್ಬರ ಜೊತೆ ಸಲುಗೆಯಿಂದ ಮಾತನಾಡಿದರೆ ಇವರಿಗೆ ಅಸೂಯೆಯಾಗುತ್ತದೆ. ಕೋಪ ಬರುತ್ತದೆ. ಆದ್ರೆ ನೀವು ಇತರರೊಂದಿಗೆ ಮಾತನಾಡುವುದನ್ನು ನೋಡಿದ ನಂತರ ಅಥವಾ ಬೇರೆಯವರು ನಿಮ್ಮ ಹತ್ತಿರ ಬರುತ್ತಿರುವುದನ್ನು ನೋಡಿದ ನಂತರವೂ ನಿಮ್ಮ ಸಂಗಾತಿ ಯಾವುದೇ ಪ್ರತಿಕ್ರಿಯೆ ನೀಡದೆ, ಅದನ್ನು ಮತ್ತಷ್ಟು ಪ್ರೋತ್ಸಾಹಿಸಿದರೆ ಅದು ಸರಿಯಲ್ಲ. ನೀವು ಬೇರೆಯವರನ್ನು ಪ್ರೀತಿಸಿದ್ರೆ ತಾವೂ ಇನ್ನೊಬ್ಬರನ್ನು ಪ್ರೀತಿಸಬಹುದು ಎಂದು ಆಲೋಚನೆ ಅವರ ಮನಸ್ಸಿನಲ್ಲಿ ಬಂದಿರಬಹುದು ಎಚ್ಚರ.
 

click me!