
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Bollywood actress Shilpa Shetty)ಯಂತ ಸೊಂಟ, ತೆಳ್ಳನೆ, ಬೆಳ್ಳಗಿನ ಮೈಕಟ್ಟು, ಝೀರೋ ಫಿಗರ್.. ಸದ್ಯ ಹುಡುಗಿಯರ ಕನಸು. ಊಟ ಬಿಟ್ಟು, ಡಯಟ್ (Diet) ಮಾಡಿ ಹುಡುಗಿಯರು ತಮ್ಮ ತೂಕವನ್ನು ಮೆಂಟೇನ್ ಮಾಡ್ತಾರೆ. ಈ ಮೈಕಟ್ಟಿಗೆ ಹುಡುಗ ಮನಸೋಲ್ತಾನೆ ಎನ್ನುವ ನಂಬಿಕೆ ಅವರಲ್ಲಿ ಬಲವಾಗಿರುತ್ತೆ. ಸಂಗಾತಿ ಆಯ್ಕೆಯಲ್ಲಿ ಪ್ರತಿಯೊಬ್ಬರ ಛಾಯ್ಸ್ ಬೇರೇನೇ ಇರುತ್ತದೆ. ಅದ್ರಲ್ಲೂ ಹುಡುಗ್ರು ತಮ್ಮ ಸಂಗಾತಿ ಆಯ್ಕೆ ಮಾಡ್ಕೊಳ್ಳುವಾಗ ನಾನಾ ಎಂಗಲ್ ನಲ್ಲಿ ಆಲೋಚನೆ ಮಾಡ್ತಾರೆ. ಬಹುತೇಕ ಹುಡುಗ್ರಿಗೆ ತೆಳ್ಳಗಿರುವ ಹುಡುಗಿಗಿಂತ ದಪ್ಪಗಿರುವ ಹುಡುಗಿ ಹೆಚ್ಚು ಇಷ್ಟವಾಗ್ತಾಳೆ. ಈ ಬಗ್ಗೆ ಸರ್ವೆಯೊಂದು ನಡೆದಿದೆ. ಅದ್ರಲ್ಲಿ ಇದಕ್ಕೆ ಕಾರಣ ಏನು ಅನ್ನೋದನ್ನು ಹುಡುಗ್ರು ಹೇಳಿದ್ದಾರೆ.
ಈ ಕಾರಣಕ್ಕೆ ದಪ್ಪ ಹುಡುಗಿಯರನ್ನು ಮದುವೆ ಆಗ್ತಾರೆ ಹುಡುಗ್ರು:
• ಸರ್ವೆ ಪ್ರಕಾರ, ತೆಳ್ಳಗಿರುವ ಹುಡುಗಿಗಿಂತ ದಪ್ಪಗಿರುವ ಹುಡುಗಿ ಜೊತೆ ಹುಡುಗ್ರು ಶೇಕಡಾ 10ರಷ್ಟು ಹೆಚ್ಚು ಖುಷಿಯಾಗಿರ್ತಾರೆ. ಆಹಾರ, ಊಟದ ವಿಷ್ಯ ಬಂದಾಗ, ದಪ್ಪಿಗಿರೋ ಹುಡುಗಿಯರು ತಮ್ಮ ಸಂಗಾತಿಗೆ ಯಾವ್ದೇ ರೂಲ್ಸ್ ಹಾಕೋದಿಲ್ಲ. ಅದನ್ನು ತಿನ್ನಬೇಡ, ಇದನ್ನ ತಿನ್ನಬೇಡ ಅನ್ನೋದಿಲ್ಲ. ಜಿಮ್ ಗೆ ಹೋಗು, ತೂಕ ಇಳಿಸ್ಕೋ ಅಂತ ಹಿಂಸೆ ನೀಡೋದಿಲ್ಲ. ತಮ್ಮಿಷ್ಟದಂತೆ ಹುಡುಗ್ರು ತಿಂದುಂಡು ಆರಾಮವಾಗಿರ್ತಾರೆ, ತೆಳ್ಳಗಿನ ಹುಡುಗಿಗಿಂತ ದಪ್ಪಗಿನ ಹುಡುಗಿ ಬಾಳ ಸಂಗಾತಿ ಆದ್ರೆ ಹೆಚ್ಚು ಸ್ವಾತಂತ್ರ್ಯ ಅವರಿಗೆ ಸಿಗುತ್ತೆ.
19ರ ಹರೆಯದ ಈ ನಟಿ ಮುಂದೆ ತುಂಬಾ ಡಲ್ ಆದ್ರು ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ, ಯಾರೀ ಹೊಸ ಚೆಲುವೆ?
• ದಪ್ಪಗಿನ ಹುಡುಗಿಯರು ಹೆಚ್ಚು ಪಾಸಿಟಿವ್ ಆಗಿರ್ತಾರೆ. ಸದಾ ಖುಷಿಯಾಗಿರ್ತಾರೆ ಎಂದು ಸರ್ವೆ ಹೇಳುತ್ತೆ. ಅವ್ರ ಜೊತೆ ಇರೋ ಹುಡುಗ್ರು ಕೂಡ ಆರೋಗ್ಯವಾಗಿರೋ ಜೊತೆಗೆ ತಾಜಾತನವನ್ನು ಸದಾ ಅನುಭವಿಸ್ತಾರೆ. ದಪ್ಪಗಿರುವ ಹುಡುಗಿಯರು ಸಂಗಾತಿಯಿಂದ ಹೆಚ್ಚು ನಿರೀಕ್ಷೆ ಮಾಡೋದಿಲ್ಲ. ದಪ್ಪಗಿರುವ ಹುಡುಗಿಯನ್ನು ಮೆಚ್ಚಿಸೋದು ಸುಲಭ. ಆದ್ರೆ ತೆಳ್ಳಗಿರುವ ಹುಡುಗಿಯರನ್ನು ಮೆಚ್ಚಿಸೋದು ಕಷ್ಟ. ನಮ್ಮಂತೆ ನಮ್ಮ ಸಂಗಾತಿ ಇರ್ಬೇಕು ಎನ್ನುವ ಆಸೆಯಲ್ಲಿ ಹುಡುಗ್ರ ಜೀವನವನ್ನು ಸಂಕಷ್ಟಕ್ಕೆ ತಳ್ತಾರೆ ತೆಳ್ಳಗಿರುವ ಹುಡುಗಿಯರು ಎಂದು ಸರ್ವೆ ಹೇಳಿದೆ.
ಕಣ್ಣೀರು ಒರೆಸಲು ಬೇಕಾಗಿದ್ದಾರೆ ಸುಂದರ ಯುವಕರು! ದಿನಕ್ಕೆ 5 ಸಾವಿರ ರೂ: ಇಲ್ಲಿದೆ ಫುಲ್
• ಸರ್ವೆ ಪ್ರಕಾರ, ದಪ್ಪಗಿರುವ ಹುಡುಗಿಯರು ತಮ್ಮ ಭಾವನೆಯನ್ನು ಸಂಗಾತಿ ಮುಂದೆ ಬಿಚ್ಚಿಡ್ತಾರೆ. ಯಾವುದನ್ನೂ ಮುಚ್ಚಿಡುವ ಪ್ರಯತ್ನ ಮಾಡೋದಿಲ್ಲ. ಆತುರಕ್ಕೆ ಬಿದ್ದು ಯಾವುದೇ ನಿರ್ಧಾರ ತೆಗೆದುಕೊಳ್ಳೋದಿಲ್ಲ. ದೊಡ್ಡ ಸಮಸ್ಯೆಯನ್ನು ಚಿಕ್ಕದಾಗಿ ಪರಿಗಣಿಸಿ, ನಗ್ತಾ ನಗ್ತಾ ಇದ್ರಿಂದ ಹೊರಗೆ ಬರ್ತಾರೆ ಈ ಹುಡುಗಿಯರು. ಹಾಗಾಗಿ ಅವ್ರ ಮುಂದೆ ಮನಸ್ಸು ಬಿಚ್ಚಿ ಮಾತನಾಡಲು ಹುಡುಗ್ರು ಹೆದ್ರೋದಿಲ್ಲ. ಆದ್ರೆ ತೆಳ್ಳಗಿನ ಹುಡುಗಿ ಮುಂದೆ ಮಾತನಾಡುವ ಮೊದಲು, ನೂರು ಬಾರಿ ಆಲೋಚನೆ ಮಾಡ್ತಾರೆ ಹುಡುಗ್ರು.
• ದಪ್ಪಗಿರುವ ಹುಡುಗಿಯರ ದೇಹ ಹುಡುಗ್ರನ್ನು ಆಕರ್ಷಿಸುತ್ತೆ. ಬೇಗ ಅವ್ರು ಬೋರ್ ಆಗೋದಿಲ್ಲ. ರೋಮ್ಯಾನ್ಸ್ ನಲ್ಲೂ ಹೊಸದನ್ನು ಅವರು ನಿರೀಕ್ಷೆ ಮಾಡ್ತಾರೆ. ಆದ್ರೆ ತೆಳ್ಳಗಿನ ಹುಡುಗಿಯರು ಬೇಗ ಬೋರ್ ಆಗ್ತಾರೆ. ಹಾಗಾಗಿಯೇ ಮದುವೆ ವಿಷ್ಯ ಬಂದಾಗ ಹುಡುಗಿ ತುಂಬಾ ತೆಳ್ಳಗಿದ್ದಾಳೆ ಎಂಬ ಕಾರಣ ಹೇಳಿ ಅನೇಕ ಹುಡುಗರು ಮದುವೆ ನಿರಾಕರಿಸ್ತಾರೆ.
• ಸರ್ವೆ ಪ್ರಕಾರ ದಪ್ಪಗಿರುವ ಹುಡುಗಿಯರನ್ನು ಹಗ್ ಮಾಡುವಾಗ ಹುಡುಗ್ರ ಭಾವನೆ ಬೇರೆ ಇರುತ್ತೆ. ಟೆಡ್ಡಿ ಬೇರ್ ಹಗ್ ಮಾಡಿದ ಅನುಭವ ಅವರಿಗೆ ಆಗುತ್ತೆ. ತೆಳ್ಳಗಿರುವ ಹುಡುಗಿಯನ್ನು ಹಗ್ ಮಾಡಿದಾಗ ಆಗುವಂತೆ ಯಾವುದೇ ಮೂಳೆ ಅವರಿಗೆ ಟಚ್ ಆಗೋದಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.