
ಯಾರ ಊಹೆಗೂ ನಿಲುಕದ, ವಿಜ್ಞಾನ, ವೈದ್ಯಕೀಯ ಲೋಕಕ್ಕೂ ಸವಾಲು ಎನ್ನಿಸುವ ಹಲವಾರು ಘಟನೆಗಳು ನಡೆಯುತ್ತಲೇ ಇರುತ್ತವೆ. ಅದೇ ಇನ್ನೊಂದೆಡೆ, ಇಂತು ತಂತ್ರಜ್ಞಾನ ಎಷ್ಟು ಮುಂದುವರೆದಿದೆ ಎಂದರೆ ಅಸಾಧ್ಯ ಎನ್ನುವಂಥ ಘಟನೆಗಳಿಗೂ ವೈದ್ಯಲೋಕ ಸಾಕ್ಷಿಯಾಗುತ್ತಲೇ ಇವೆ. ಇಂಥದ್ದೇ ಒಂದು ಕುತೂಹಲದ ಘಟನೆ ನಡೆದಿದೆ. 61 ವರ್ಷದ ಕ್ರಿಸ್ಟೀನ್ ಕೇಸಿ ಎಂಬ ಅಜ್ಜಿ ತನ್ನ ಮಗಳ ಮಗುವಿಗೆ ತಾಯಿ ಆಗಿದ್ದಾಳೆ. ಮಗು ಹೆತ್ತ ಕಾರಣ, ಈಕೆ ಅಮ್ಮ ಆದರೆ ಅದು ಮಗಳ ಮಗುವಾದ್ದರಿಂದ ಈಕೆ ಆ ಮಗುವಿಗೆ ಅಜ್ಜಿಯೂ ಹೌದು! ಇನ್ನೂ ಕುತೂಹಲ ಎಂದರೆ 10 ವರ್ಷಗಳ ಹಿಂದೆಯೇ ಮುಟ್ಟು ನಿಂತಿತ್ತು ಈಕೆಗೆ. ಆದರೂ ಮಗಳಿಗಾಗಿ ಮಗುವನ್ನು ಹೆರುವ ಸಾಹಸ ಮಾಡಿ ಯಶ ಕಂಡಿದ್ದಾಳೆ ಈ ಅಮ್ಮ!
ಫಲವತ್ತತೆ ಸಮಸ್ಯೆಗಳಿಂದಾಗಿ ಕ್ರಿಸ್ಟೀನ್ ಕೇಸಿ ಮಗಳು ಸಾರಾ ಕೊನೆಲ್ ಗೆ ಸ್ವಂತ ಮಗುವನ್ನು ಹೊಂದಲು ಸಾಧ್ಯವಾಗಲಿಲ್ಲ. ಅವಳು ಮಗುವನ್ನು ದತ್ತು ಪಡೆಯಲು ಬಯಸಲಿಲ್ಲ. ಬಾಡಿಗೆ ತಾಯಿ ಮೂಲಕ ಮಗು ಪಡೆಯುವ ಕಾರ್ಯವೂ ಫಲ ಕೊಟ್ಟಿರಲಿಲ್ಲ. ಅವಳ ತಾಯಿ. ತನ್ನ ಮಗಳ ಮಗುವನ್ನು ಗರ್ಭದಲ್ಲಿ ಧರಿಸುವ ಮೂಲಕ, 61 ವರ್ಷದ ಕ್ರಿಸ್ಟಿನ್ ಕೇಸಿ ತಾಂತ್ರಿಕವಾಗಿ ತನ್ನ ಸ್ವಂತ ಮೊಮ್ಮಗನಿಗೆ ಅಮ್ಮ ಆಗಿದ್ದಾಳೆ. ಈ ಕಲ್ಪನೆಯು ವಿಲಕ್ಷಣವಾಗಿ ಕಾಣಿಸಬಹುದು, ಆದರೆ ನೀವು ಭಾವಿಸುವಷ್ಟು ಅಸುರಕ್ಷಿತವಲ್ಲ - ಅಥವಾ ಅಸಾಮಾನ್ಯವೂ ಅಲ್ಲ.
ಸ್ನೇಹಿತನ ಮದ್ವೆಯಾಗಿ ಕೊನೆಯುಸಿರೆಳೆದ 10 ವರ್ಷದ ಬಾಲಕಿ! ಈಕೆಯ ಕಣ್ಣೀರ ಕಥೆ ಕೇಳಿ...
ಸಾರಾ ಕೊನೆಲ್ ಕುರಿತು ಹೇಳುವುದಾದರೆ, ಈಕೆ 35 ನೇ ವಯಸ್ಸಿನಲ್ಲಿ ಮಗುವನ್ನು ಹೊಂದಲು ನಿರ್ಧರಿಸಿದಳು. ಆದರೆ ಅವರು ಇನ್ನು ಮುಂದೆ ಅಂಡೋತ್ಪತ್ತಿ ಮಾಡುತ್ತಿರಲಿಲ್ಲ. ಬಂಜೆತನದ ಚಿಕಿತ್ಸೆಯ ನಂತರ, ಆಕೆ ಗರ್ಭಿಣಿಯಾದಳು. ಆದರೆ ಸತ್ತ ಅವಳಿ ಮಕ್ಕಳಿಗೆ ಜನ್ಮ ನೀಡಿದಳು. ನಂತರದ ಗರ್ಭಧಾರಣೆಯು ಗರ್ಭಪಾತದಲ್ಲಿ ಕೊನೆಗೊಂಡಿತು. ಅದೇ ಸಮಯಕ್ಕೆ ಕ್ರಿಸ್ಟೀನ್ಗೆ ಮೆನೋಪಾಸ್ ಕೂಡ ಆಗಿಹೋಗಿತ್ತು. ತನ್ನದೇ ಮಗುವನ್ನು ಬಯಸಿದ್ದ ಮಗಳು ಸಾರಾ ನಿರಾಸೆಯಿಂದ ಖಿನ್ನತೆಗೆ ಜಾರಿದ್ದಾಗ ಈ ಅಮ್ಮ ಮಗಳ ಮಗುವನ್ನು ಹೆರುವ ನಿರ್ಧಾರಕ್ಕೆ ಬಂದಳು.
ಕೇಸಿ ತಾನು ಗರ್ಭಧರಿಸಲು ಸಹಕಾರಿಯಾಗುವಂಥ ಹಾರ್ಮೋನುಗಳನ್ನು ಇಂಜೆಕ್ಟ್ ಮಾಡಿಸಿಕೊಂಡಳು. ಎರಡನೇ ಸುತ್ತಿನ ಇನ್ ವಿಟ್ರೊ ಫಲೀಕರಣದಲ್ಲಿ ಆಕೆ ಗರ್ಭಿಣಿಯಾಗಲು ಸಾಧ್ಯವಾಯಿತು. ಮಗಳ ಅಂಡಾಣು ಮತ್ತು ಅಳಿಯನ ವೀರ್ಯಾಣು ಸಂಗ್ರಹಿಸಿ ಗರ್ಭಧಾರಣೆ ಮಾಡಿಸಲಾಯಿತು. ಗರ್ಭಧಾರಣೆಯು ಸಾಮಾನ್ಯವಾಗಿ ನಡೆಯಿತು ಮತ್ತು ಸಿ-ಸೆಕ್ಷನ್ ಪ್ರಕ್ರಿಯೆಯು ಸರಾಗವಾಗಿ ನಡೆಯಿತು. "ಶಸ್ತ್ರಚಿಕಿತ್ಸೆಯು ಜಟಿಲವಾಗಿರಲಿಲ್ಲ, ಮತ್ತು ಈ ಹೆರಿಗೆಯ ಭಾವನಾತ್ಮಕ ಸಂದರ್ಭವು ತುಂಬಾ ಆಳವಾಗಿತ್ತು" ಎನ್ನುತ್ತಾರೆ ವೈದ್ಯರು. ಜನನದ ನಂತರ ಕೇಸಿ ಕೆಲವು ಮೂತ್ರಪಿಂಡದ ತೊಂದರೆಗಳನ್ನು ಅನುಭವಿಸಿದರು, ಆದರೆ ಬೇಗನೆ ಚೇತರಿಸಿಕೊಂಡರು. ಈ ರೀತಿ ಮಗಳ ಮಗುವಿಗೆ ಅಮ್ಮನಾದ ಅಜ್ಜಿಯಂದಿರ ಘಟನೆಗಳು ನಡೆಯುತ್ತಲೇ ಇರುತ್ತವೆ ಎನ್ನುತ್ತಾರೆ ವೈದ್ಯರು.
ಪರೀಕ್ಷೆ ಇದೆ ಅನ್ನೋದೇ ಮರೆತ ಯುವಕ ಲೇಟಾಗಿದ್ದಕ್ಕೆ ಮಾಡಿದ್ದೇನು ನೋಡಿ! ಭೇಷ್ ಭೇಷ್ ಎಂದ ನೆಟ್ಟಿಗರು
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.