ಮಾನ್ಸೂನ್ ಸೀಸನ್ ತುಂಬಾ ರೋಮ್ಯಾಂಟಿಕ್ ಆಗಿದೆ. ಮಳೆಗಾಲದಲ್ಲಿ ಪ್ರೀತಿ ಅರಳುತ್ತದೆ ಎಂದು ಕವಿಗಳೇ ವರ್ಣಿಸುತ್ತಾರೆ. ಆದರೆ ಈ ಋತುವಿನಲ್ಲಿ ಗಂಡ-ಹೆಂಡತಿ ಜೊತೆಗಿರಬಾರದು, ದೈಹಿಕ ಸಂಬಂಧ ಮಾಡಬಾರದು ಎನ್ನಲಾಗುತ್ತದೆ. ಇದಕ್ಕೆ ನಿರ್ಧಿಷ್ಟ ಕಾರಣವೂ ಇದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಭಾರತೀಯ ಸಂಸ್ಕೃತಿಯಲ್ಲಿ ಎಲ್ಲಾ ಸಂಪ್ರದಾಯಗಳಿಗೂ, ಆಚರಣೆಗಳಿಗೂ ನಿರ್ಧಿಷ್ಟವಾದ ಕಾರಣವಿರುತ್ತದೆ. ಹಾಗೆಯೇ ಆಷಾಢ ಮಾಸವನ್ನು ಶೂನ್ಯ ಮಾಸ, ಅಮಂಗಳಕರ ಮಾಸವೆಂದು ಕರೆಯುತ್ತಾರೆ. ಈ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ನಡೆಸುವುದಿಲ್ಲ. ಆಷಾಢದಲ್ಲಿ ಹೊಸದಾಗಿ ಮದುವೆಯಾದ ಹೆಣ್ಣು ಅತ್ತೆಯ ಮನೆಯಲ್ಲಿ ಇರಬಾರದು ತನ್ನ ತವರಿಗೆ ಹೋಗಬೇಕು ಎಂಬ ನಂಬಿಕೆ ಇದೆ. ಹಾಗಾಗಿ ಈ ಸೊಸೆಯನ್ನು ಆಷಾಢ ಮುಗಿಯುವರೆಗೂ ತವರುಮನೆಗೆ ಕಳುಹಿಸುವ ಸಂಪ್ರದಾಯ ನಮ್ಮಲಿದೆ. ಆದರೆ ಆಷಾಢ ಮಾಸದಲ್ಲಿ ಗಂಡ-ಹೆಂಡತಿ ಜೊತೆಗಿರಬಾರದು ಅನ್ನೋದ್ಯಾಕೆ? ಸಾಂಪ್ರದಾಯಿಕ ಆಚರಣೆಯಲ್ಲಿ ನವ ವಧು ಯಾಕೆ ಗಂಡನ ಮನೆಯಲ್ಲಿ ಇರಬಾರದು ಇಲ್ಲಿದೆ ನೋಡಿ ಕಾರಣ.
ಮಾನ್ಸೂನ್ ಸೀಸನ್ ತುಂಬಾ ರೋಮ್ಯಾಂಟಿಕ್ ಆಗಿದೆ. ಮಳೆಗಾಲದಲ್ಲಿ (Monsoon) ಪ್ರೀತಿ ಅರಳುತ್ತದೆ ಎಂದು ಕವಿಗಳೇ ವರ್ಣಿಸುತ್ತಾರೆ. ಆದರೆ ಈ ಋತುವಿನಲ್ಲಿ ಗಂಡ-ಹೆಂಡತಿ (Husband-wife) ಜೊತೆಗಿರಬಾರದು, ದೈಹಿಕ ಸಂಬಂಧ (Physical relationship) ಮಾಡಬಾರದು ಎನ್ನಲಾಗುತ್ತದೆ. ಇದಕ್ಕೆ ನಿರ್ಧಿಷ್ಟ ಕಾರಣವೂ ಇದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಆಷಾಢ ಮಾಸದಲ್ಲಿ ವಿಷ್ಣು ಪೂಜೆ ಮಾಡಿ; ನಿಮ್ಮ ಇಷ್ಟಾರ್ಥ ಈಡೇರಿಸಿಕೊಳ್ಳಿ..!
ಆಷಾಢ ಮಾಸವನ್ನು ಅತ್ಯಂತ ಧಾರ್ಮಿಕ ತಿಂಗಳು ಎಂದು ಪರಿಗಣಿಸಲಾಗುತ್ತದೆ. ಈ ಮಾಸದಲ್ಲಿ ಶಿವನ ಭಕ್ತಿಯ ಜೊತೆಗೆ ಅನೇಕ ಧಾರ್ಮಿಕ ಆಚರಣೆಗಳು ಸಹ ನಡೆಯುತ್ತವೆ. ಜನರು ಉಪವಾಸವನ್ನು ಇಟ್ಟುಕೊಳ್ಳುತ್ತಾರೆ ಮತ್ತು ಪೂಜೆ, ಧ್ಯಾನ ಮಾಡುತ್ತಾರೆ. ಯಾವುದೇ ಧಾರ್ಮಿಕ ಆಚರಣೆಗಳ ಮೊದಲು, ದೈಹಿಕ ಸಂಬಂಧಗಳನ್ನು ನಿಷೇಧಿಸಲಾಗಿದೆ. ಹೀಗಾಗಿ ಈ ತಿಂಗಳು ಗಂಡ-ಹೆಂಡತಿ ಜೊತೆಗಿರಬಾರದು ಎನ್ನುತ್ತಾರೆ. ಇದಲ್ಲದೆ, ಋತುಮಾನದಿಂದಾಗಿ ದಂಪತಿಗಳ ದೈಹಿಕ ಸಂಬಂಧಗಳು ಹಾಳಾಗುತ್ತವೆ. ಸೆಂಟ್ರಲ್ ಯುರೋಪಿಯನ್ ಜರ್ನಲ್ ಆಫ್ ಯುರಾಲಜಿ ವರದಿಯು ಋತುಮಾನದ ರೂಪಾಂತರಗಳ ಕಾರಣದಿಂದಾಗಿ, ಪುರುಷರಲ್ಲಿ ಲೈಂಗಿಕ ವ್ಯತ್ಯಾಸಗಳು ಮತ್ತು ಮಹಿಳೆಯರಲ್ಲಿ ಹಾರ್ಮೋನ್ ಮಟ್ಟಗಳು ವ್ಯತ್ಯಾಸವಾಗುತ್ತವೆ ಎಂದು ಹೇಳಿದೆ.
ಮಳೆಗಾಲದಲ್ಲಿ ದೈಹಿಕ ಸಂಬಂಧ ಮಾಡಬಾರದು ಯಾಕೆ?
ಮಳೆಗಾಲದಲ್ಲಿ ತೇವಾಂಶ, ಜಿಗುಟಾದ ಮತ್ತು ಕೊಳೆಯಿಂದಾಗಿ ಎಲ್ಲರೂ ಅಸಮಾಧಾನಗೊಳ್ಳುತ್ತೇವೆ. ಇದಲ್ಲದೇ ಮುಂಗಾರು ಮಳೆಯಲ್ಲಿ ಕ್ರಿಮಿಕೀಟಗಳ ಸಮಸ್ಯೆ ಹಾಗೂ ಬೆವರಿನ ದುರ್ವಾಸನೆಯ ಸಮಸ್ಯೆಯನ್ನು ಸಹ ತರುತ್ತದೆ. ಮಾನ್ಸೂನ್‌ನಲ್ಲಿಯೂ ಜನರು SAD (ಸೀಸನಲ್ ಅಫೆಕ್ಟಿವ್ ಡಿಸಾರ್ಡರ್) ಗೆ ಒಳಗಾಗುತ್ತಾರೆ ಎಂದು ವರದಿಗಳು ಹೇಳುತ್ತವೆ. ಇದರಿಂದ ದೇಹದ ಆಂತರಿಕ ಗಡಿಯಾರವೂ ತೊಂದರೆಗೊಳಗಾಗುತ್ತದೆ.
ಆಷಾಢ ಮಾಸದಲ್ಲಿ ಮರೆತೂ ಈ ಕೆಲಸಗಳನ್ನು ಮಾಡಬೇಡಿ!
ಮನೆಯಿಂದ ಹೆಚ್ಚು ಹೊರಗೆ ಹೋಗದಿರುವುದು, ಸೂರ್ಯನ ಬೆಳಕು ದೇಹಕ್ಕೆ ಸಂಪೂರ್ಣವಾಗಿ ಸಿಗದಿರುವುದು, ಜನರೊಂದಿಗೆ ಹೆಚ್ಚು ಬೆರೆಯದಿರುವುದು ಇತ್ಯಾದಿ ಎಲ್ಲವೂ ಇದರಿಂದ ನಡೆಯುತ್ತದೆ. ಮಾನ್ಸೂನ್ ಮತ್ತು ಚಳಿಗಾಲದ ಎರಡು ಋತುಗಳಲ್ಲಿ ಜನರು ಖಿನ್ನತೆಯ (Anxiety) ವಾತಾವರಣದಿಂದ ತೊಂದರೆಗೊಳಗಾಗುತ್ತಾರೆ. ಅಂತಹ ಸಮಯದಲ್ಲಿ, ಆಸಕ್ತಿಯ ನಷ್ಟವು ಉಂಟಾಗುತ್ತದೆ. ದೇಹವು ಸೂರ್ಯನ ಬೆಳಕನ್ನು ಪಡೆದರೆ, ನಂತರ ಮೆಲಟೋನಿನ್, ಸಿರೊಟೋನಿನ್, ನ್ಯೂರೋಟ್ರಾನ್ಸ್ಮಿಟರ್ಗಳು ಇತ್ಯಾದಿಗಳೆಲ್ಲವೂ ಮನಸ್ಥಿತಿಯನ್ನು ಸರಿಪಡಿಸುತ್ತವೆ. ಋತುಮಾನವು ನಿದ್ರೆಯ ಚಕ್ರದ ಮೇಲೆ ಸಹ ಪರಿಣಾಮ ಬೀರುತ್ತದೆ ಮತ್ತು ಇದರಿಂದಾಗಿ ಸಮಸ್ಯೆ ಹೆಚ್ಚಾಗುತ್ತದೆ.
ಮಹಿಳೆಯರಲ್ಲಿ ಆರೋಗ್ಯ ಸಮಸ್ಯೆ
ಮಾನ್ಸೂನ್ ಸಮಯದಲ್ಲಿ ನೈರ್ಮಲ್ಯ ಸಮಸ್ಯೆಗಳು ಸಹ ಪ್ರಮುಖ ಸಮಸ್ಯೆಯಾಗಿ ಪರಿಣಮಿಸುತ್ತವೆ. ವರದಿಯು ಮಹಿಳೆಯರಲ್ಲಿ (Women) UTI ಸಮಸ್ಯೆಯು ಈ ರೀತಿಯ ಹವಾಮಾನದಲ್ಲಿ ಅಗತ್ಯಕ್ಕಿಂತ ಹೆಚ್ಚು ಹೆಚ್ಚಾಗುತ್ತದೆ ಎಂದು ತಿಳಿಸುತ್ತದೆ. ಪರಿಸರದಲ್ಲಿ ತೇವಾಂಶ ಹೆಚ್ಚಾಗುವ ಕಾರಣ ಮೂತ್ರನಾಳದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಮಾತ್ರವಲ್ಲ ಮಳೆ ನೀರು ಬ್ಯಾಕ್ಟಿರೀಯಾಗಳ ಸಮಸ್ಯೆಯನ್ನು ತರುತ್ತದೆ. ಇದರಿಂದ ರೋಗ-ರುಜಿನಗಳು ಹರಡುವ ಸಾಧ್ಯತೆ ಹೆಚ್ಚು. ಹೀಗಾಗಿ ಮಳೆಯ ಸಮಯದಲ್ಲಿ ಲೈಂಗಿಕ ಸಂಬಂಧವನ್ನು ಹೊಂದುವುದು ಸರಿಯಲ್ಲವೆಂದು ನಿರ್ಧರಿಸುತ್ತಾರೆ.