2 ಟೊಮ್ಯಾಟೋ ಹಾಕಿದ್ದಕ್ಕೆ ಓಡಿಹೋದ ಪತ್ನಿ, ಅರ್ಧ ಕೆಜಿ ಟೊಮ್ಯಾಟೋ ಕೊಟ್ಟು ಕರೆದುಕೊಂಡು ಬಂದ ಪತಿ!

By BK Ashwin  |  First Published Jul 15, 2023, 6:07 PM IST

ಕರ್ರಿಯಲ್ಲಿ 2 ಟೊಮ್ಯಾಟೋ ಸೇರಿಸಿದ ಕಾರಣಕ್ಕೆ ಮಹಿಳೆಯೊಬ್ಬರು ಪತಿಯಿಂದ ಹೊರನಡೆದ ಒಂದು ದಿನದ ನಂತರ ಮಧ್ಯ ಪ್ರದೇಶದ ಶಾಹದೋಲ್ ಜಿಲ್ಲೆಯಲ್ಲಿ, ದಂಪತಿ ಮತ್ತೆ ಒಂದಾಗಿದ್ದಾರೆ.


ಭೋಪಾಲ್ (ಜುಲೈ 15, 2023): ಟೊಮ್ಯಾಟೋ ಕರ್ರಿಯಲ್ಲಿ ಎರಡು ಹೆಚ್ಚುವರಿ ಟೊಮ್ಯಾಟೊ ಸೇರಿಸಿದ ಕಾರಣಕ್ಕೆ ಮಹಿಳೆಯೊಬ್ಬರು ಪತಿಯಿಂದ ಹೊರನಡೆದ ಘಟನೆ ಇತ್ತೀಚೆಗೆ ನಡೆದಿತ್ತು. ಇದನ್ನು ನೀವು ಓದಿರಬಹುದು. ಈಗ, ಆ ಪತಿ ಮತ್ತೆ ಒಂದಾಗಿದ್ದಾರೆ. ಪೊಲೀಸರು, ದಂಪತಿಯನ್ನು ಒಂದಾಗಿಸಲು ಪಾತ್ರ ವಹಿಸಿದ್ದರೂ, ಟೊಮ್ಯಾಟೋ ಮೂಲಕವೇ ಪತಿ - ಪತ್ನಿ ಮತ್ತೆ ಒಂದಾಗಿದ್ದಾರೆ. 

ಕರ್ರಿಯಲ್ಲಿ ಎರಡು ಹೆಚ್ಚುವರಿ ಟೊಮ್ಯಾಟೋ ಸೇರಿಸಿದ ಕಾರಣಕ್ಕೆ ಮಹಿಳೆಯೊಬ್ಬರು ಪತಿಯಿಂದ ಹೊರನಡೆದ ಒಂದು ದಿನದ ನಂತರ ಮಧ್ಯ ಪ್ರದೇಶದ ಶಾಹದೋಲ್ ಜಿಲ್ಲೆಯಲ್ಲಿ, ದಂಪತಿ ಮತ್ತೆ ಒಂದಾಗಿದ್ದಾರೆ. ಪೊಲೀಸರು ಈ ಪ್ರಕರಣದಲ್ಲಿ ಮಧ್ಯವರ್ತಿಗಳಾಗಿ , ಬೇರ್ಪಟ್ಟ ಇವರನ್ನು ಮತ್ತೆ ಒಂದಾಗಿಸಿದ್ದಾರೆ. 

Tap to resize

Latest Videos

ಇದನ್ನು ಓದಿ: ನನಗಾಗಿ ಕಾಯ್ಬೇಡ, ಇನ್ನೊಂದು ಮದ್ವೆಯಾಗು: ಪತ್ನಿಗೆ ಸಂದೇಶ ನೀಡಿದ ಹಂತಕ!

ಇನ್ನು, ತನ್ನ ತಪ್ಪಿನ ಪ್ರಾಯಶ್ಚಿತ್ತವಾಗಿ, ಸಂಜೀವ್ ವರ್ಮಾ ತಮ್ಮ ಪತ್ನಿ ಆರತಿಗೆ ಅರ್ಧ ಕಿಲೋ ಟೊಮ್ಯಾಟೋವನ್ನು  ಧನಪುರಿ ಪೊಲೀಸ್ ಠಾಣೆಯಲ್ಲಿ ಉಡುಗೊರೆಯಾಗಿ ನೀಡಿದರು. ಮತ್ತು ಪತ್ನಿಯ ಅನುಮತಿ ಇಲ್ಲದೆ ಅವುಗಳನ್ನು ಅಡುಗೆ ಬಳಸಲ್ಲ ಎಂದೂ ಪ್ರತಿಜ್ಞೆ ಮಾಡಿದ್ದಾರೆ. ಧನ್‌ಪುರಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ದಂಪತಿಗೆ ಒಟ್ಟಿಗೆ ಇರುವಂತೆ ಸಲಹೆ ನೀಡಿದರು ಮತ್ತು ಪರಸ್ಪರರ ಸಣ್ಣ ತಪ್ಪುಗಳನ್ನು ನಿರ್ಲಕ್ಷಿಸುವಂತೆ ಹೇಳಿದರು (ಟೊಮ್ಯಾಟೊಗಳನ್ನು ವಿರೋಧಿಸಲು ಸಾಧ್ಯವಾಗದಂತಹ). 

ಟೊಮ್ಯಾಟೋದಿಂದ ನಾವು ಮತ್ತೆಂದೂ ದೂರವಾಗುವುದಿಲ್ಲ ಎಂದು ಪತಿ ಪ್ರತಿಜ್ಞೆ ಮಾಡಿದ್ದಾನೆ ಎಂದೂ ತಿಳಿದುಬಂದಿದೆ. ದಂಪತಿ ಢಾಬಾ ನಡೆಸುತ್ತಿದ್ದು, ಗುರುವಾರದಂದು ಎರಡು ಟೊಮ್ಯಾಟೋಗಳನ್ನು ಕರಿಯಲ್ಲಿ ಬಳಸಿದ್ದನ್ನು ಕಂಡು ಆರತಿ ಕೋಪಗೊಂಡಿದ್ದಾಳೆ. ಟೊಮ್ಯಾಟೋ ತುಂಬಾ ದುಬಾರಿಯಾಗಿದ್ದು, ಅದನ್ನು ವ್ಯರ್ಥ ಮಾಡಬೇಡಿ ಎಂದು ಪತ್ನಿ ಸ್ಪಷ್ಟವಾಗಿ ಹೇಳಿದ್ದಾಳೆ. ಇದು ದಂಪತಿ ನಡುವೆ ಜಗಳಕ್ಕೆ ಕಾರಣವಾಯಿತು ಮತ್ತು ಆಕೆ ತಮ್ಮ ಮಗಳೊಂದಿಗೂ ಹೇಳದೆ ತರಾತುರಿಯಲ್ಲಿ ಮನೆ ಬಿಟ್ಟು ಹೋಗಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಸಮ್ಮತಿ ಸೆಕ್ಸ್‌ಗೆ ಒಪ್ಪಿಗೆ ವಯಸ್ಸು 16 ಆಗಿರ್ಬೇಕು: 17 ವರ್ಷದ ಹುಡುಗನ ವಿರುದ್ಧ ಎಫ್‌ಐಆರ್ ರದ್ದು ಮಾಡಿದ ಹೈಕೋರ್ಟ್‌

ಪತ್ನಿ ಮನೆ ಬಿಟ್ಟು ಹೋಗಿದ್ದು ಗೊತ್ತಾದ ಬಳಿಕ ಪತಿ ಸಂಜೀವ್‌ ಪೊಲೀಸರ ಬಳಿ ಹೋಗಿ, ಹೆಂಡತಿಯನ್ನು ಹುಡುಕಿ ಒಡುವಂತೆ ಮನವಿ ಮಾಡಿದ್ದ. ಪೊಲೀಸರು ಕೆಲವೇ ಗಂಟೆಗಳಲ್ಲಿ ಆಕೆಯ ಸಹೋದರಿಯ ಮನೆಯಲ್ಲಿ ಅವಳನ್ನು ಪತ್ತೆ ಮಾಡಿದರು. ಸಾಕಷ್ಟು ಮನವೊಲಿಕೆಯ ನಂತರ ಆರತಿಯನ್ನು ಸಮಾಧಾನಪಡಿಸಲಾಯಿತು ಎಂದು ಮೂಲಗಳು ತಿಳಿಸಿವೆ.. ಹಾಗೂ,  ಆಕೆಯ ಪತಿ ತೀವ್ರವಾಗಿ ಕ್ಷಮೆಯಾಚಿಸಿದ್ದಾರೆ ಎಂದೂ ತಿಳಿದುಬಂದಿದೆ. ಅಲ್ಲದೆ, ಪತ್ನಿಯನ್ನು ಸಂಪರ್ಕಿಸದೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ ಎಂದು ಪತಿ ಭರವಸೆ ನೀಡಿದ್ದು ಮತ್ತು ಟೊಮ್ಯಾಟೋಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ದಂಪತಿ ಒಂದಾಗಿದ್ದಾರೆ. 

ಇದನ್ನೂ ಓದಿ: ಇಸ್ಲಾಂನಲ್ಲಿ ವಿವಾಹಪೂರ್ವ ಲೈಂಗಿಕತೆ, ಚುಂಬನ, ಸ್ಪರ್ಶ ನಿಷಿದ್ಧ: ಹೈಕೋರ್ಟ್‌ ಆದೇಶ

click me!