ಪ್ರೀತಿ ಹುಟ್ಟಲು ಕಾರಣಗಳು ಬೇಕಿಲ್ಲ. ಜಾತಿ-ಧರ್ಮ, ಜಾಗ, ದೇಶ, ಬಣ್ಣ, ಇದಕ್ಕೆ ಯಾವುದೂ ಅಡ್ಡಿಯಾಗುವುದಿಲ್ಲ. ಹಾಗೆಯೇ ಈ ಲವ್‌ಸ್ಟೋರಿಯೂ ತುಂಬಾ ಡಿಫರೆಂಟ್ ಆಗಿದೆ. ಇದು ಜೈಲಿನಲ್ಲೇ ಭೇಟಿಯಾಗಿ ಪೆರೋಲ್‌ನಲ್ಲಿ ಮದುವೆಯಾದ ಕೈದಿಗಳ ಅಪರೂಪದ ಪ್ರೇಮಕಥೆ.
ಪಶ್ಚಿಮ ಬಂಗಾಳ: ಜೈಲು ಅಂದರೆ ಭಯ, ಹಿಂಸೆ, ಕ್ರೂರತೆ, ಭೀಕರತೆಯೇ ನೆನಪಾಗುತ್ತದೆ. ಯಾಕೆಂದರೆ ತಪ್ಪು ಮಾಡಿ ಹೋದವರೇ ಅಲ್ಲಿರುವುದು. ಕೆಲವೊಮ್ಮೆ ಪರಿಸ್ಥಿತಿಯ ಕೈಗೊಂಬೆಗಳಾಗಿ ತಪ್ಪು ಮಾಡಿದವರೂ ಇರಬಹುದು. ಆದರೂ ಜೈಲೆಂದರೆ ಸಾಮಾನ್ಯವಾಗಿ ಎಲ್ಲರಲ್ಲೂ ಭಯ ಹುಟ್ಟುತ್ತದೆ. ಆದರೆ ಇಂಥಾ ಜೈಲಿನಲ್ಲೂ ಪ್ರೀತಿ, ದಯೆ ಎಲ್ಲವೂ ಇದೆ ಎಂಬುದನ್ನು ಈ ಘಟನೆ ಸಾಬೀತುಪಡಿಸಿದೆ. ಪ್ರೀತಿ ಹುಟ್ಟಲು ಕಾರಣಗಳು ಬೇಕಿಲ್ಲ. ಜಾತಿ-ಧರ್ಮ, ಜಾಗ, ದೇಶ, ಬಣ್ಣ, ಇದಕ್ಕೆ ಯಾವುದೂ ಅಡ್ಡಿಯಾಗುವುದಿಲ್ಲ. ಹಾಗೆಯೇ ಈ ಲವ್‌ಸ್ಟೋರಿಯೂ ತುಂಬಾ ಡಿಫರೆಂಟ್ ಆಗಿದೆ. ಇದು ಜೈಲಿನಲ್ಲೇ ಭೇಟಿಯಾಗಿ ಪೆರೋಲ್‌ನಲ್ಲಿ ಮದುವೆಯಾದ ಕೈದಿಗಳ ಅಪರೂಪದ ಪ್ರೇಮಕಥೆ.
ಸಾಮಾನ್ಯವಾಗಿ ಕಾಲೇಜ್, ಬಸ್‌ಸ್ಟ್ಯಾಂಡ್, ಆಫೀಸ್, ಪಾರ್ಕ್ ಮೊದಲಾದೆಡೆ ಪ್ರೀತಿ (LoVE)ಯಾಗುವುದರ ಬಗ್ಗೆ ನೀವು ಕೇಳಿರಬಹುದು. ಆದರೆ ಈ ಪ್ರೀತಿ ಹುಟ್ಟಿದ್ದು ಅಲ್ಲೆಲ್ಲಿಯೂ ಅಲ್ಲ, ಬದಲಿಗೆ ಜೈಲಿನಲ್ಲಿ. ಅಸ್ಸಾಂ ಮೂಲದ ಅಬ್ದುಲ್ ಹಸೀಮ್ ಮತ್ತು ಪಶ್ಚಿಮ ಬಂಗಾಳದವರಾಗಿರುವ ಶಹನಾರಾ ಖಾತುನ್ ಮೊದಲು ಭೇಟಿಯಾದದ್ದೇ ಜೈಲಿನಲ್ಲಿ.
Viral News: ಇಬ್ಬರು ಹುಡುಗಿಯರು ಪತಿ – ಪತ್ನಿಯಾದ ಕಥೆ: 11 ವರ್ಷದ ನಂತ್ರ ಗೊತ್ತಾಗಿತ್ತು ಸತ್ಯ!
ಕೊಲೆ ಪ್ರಕರಣದ ಆರೋಪಿಗಳಿಗೆ ಜೈಲಿನಲ್ಲೇ ಲವ್ವಾಯ್ತು
ಹೌದು, ಕೊಲೆ ಪ್ರಕರಣದ ಇಬ್ಬರು ಆರೋಪಿಗಳು ಜೈಲಿನಲ್ಲಿ ಪರಸ್ಪರ ಪ್ರೀತಿಸಿ, ಪೆರೋಲ್‌ನಲ್ಲಿ ಹೊರ ಬಂದು ಮದುವೆಯಾದ (Marriage) ಅಪರೂಪದ ಘಟನೆ ಪಶ್ಚಿಮ ಬಂಗಾಳದ ಬರ್ಧಮಾನ್ ಜಿಲ್ಲಾ ಸುಧಾರಣಾ ಕೇಂದ್ರದಲ್ಲಿ ನಡೆದಿದೆ. ಅಬ್ದುಲ್ ಹಸೀಮ್ ಮತ್ತು ಶಹನಾರಾ ಖಾತುನ್ ಪ್ರತ್ಯೇಕ ಕೊಲೆ ಪ್ರಕರಣದಲ್ಲಿ ಅಪರಾಧಿಗಳಾಗಿ ಪೂರ್ವ ಬರ್ಧಮಾನ್ ಜಿಲ್ಲೆಯ ಜಿಲ್ಲಾ ಜೈಲಿನಲ್ಲಿ ಶಿಕ್ಷೆ (Punishment) ಅನುಭವಿಸುತ್ತಿದ್ದಾರೆ. ಒಂದೇ ಜೈಲಿನಲ್ಲಿದ್ದ ಇಬ್ಬರ ನಡುವೆ ಸ್ನೇಹ ಬೆಳೆದಿದೆ. ದಿನಕಳೆದಂತೆ ಈ ಸ್ನೇಹವೇ ಪ್ರೀತಿಗೆ ತಿರುಗಿದೆ. ಜೈಲಿನಲ್ಲಿ ಶುರುವಾದ ಈ ಪ್ರೇಮದ ವಿಚಾರವನ್ನು ಇಬ್ಬರೂ ತಮ್ಮ ಮನೆಯವರ ಬಳಿ ಹೇಳಿಕೊಂಡಿದ್ದಾರೆ
ಮನೆಮಂದಿ ಇಬ್ಬರಿಗೂ ಮದುವೆ ಮಾಡಿಸಲುನಿರ್ಧಾರ ಮಾಡಿದ್ದು, ಈ ಹಿನ್ನೆಲೆಯಲ್ಲಿ ಪೆರೋಲ್ ಅಬ್ದುಲ್ ಹಾಗೂ ಶಹನಾರಾ ಇಬ್ಬರೂ 5 ದಿನಗಳಿಗಾಗಿ ಜೈಲಿನಿಂದ ಹೊರಗೆ ಬಂದಿದ್ದಾರೆ. ಪೂರ್ವ ಬರ್ಧಮಾನ್‌ನ ಮಾಂಟೇಶ್ವರ ಬ್ಲಾಕ್‌ನ ಕುಸುಮ್‌ಗ್ರಾಮ್‌ನಲ್ಲಿ ಮುಸ್ಲಿಂ ಸಂಪ್ರದಾಯದ ಪ್ರಕಾರ ಕುಟುಂಬದ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ.
ಹನಿಮೂನ್ ಮೂಡ್‌ನಲ್ಲಿದ್ದ ಹುಡುಗ ರಾತ್ರಿ ಬೆಳಗಾಗುವಷ್ಟರಲ್ಲಿ ಅಣ್ಣನಾಗಿ ಹೋದ!
ಉತ್ತಮವಾಗಿ ಜೀವನ ನಡೆಸುತ್ತೇವೆಂದ ನೂತನ ದಂಪತಿ
'ನಮ್ಮಿಬ್ಬರನ್ನೂ ಬರ್ಧಮಾನ್ ಸುಧಾರಣಾ ಕೇಂದ್ರದಲ್ಲಿದ್ದೆವು. ಅಲ್ಲಿ ಪರಸ್ಪರ ಪರಿಚಯವಾದೆವು. ನಂತರ ನಾವು ನಿಧಾನವಾಗಿ ಮಾತನಾಡಲು ಪ್ರಾರಂಭಿಸಿದೆವು, ನಮ್ಮ ಸಂಬಂಧವು ಮುಂದುವರೆಯಿತು. ನಾವು ನಮ್ಮ ಜೀವನದ (ಳಿfಎ) ಕತ್ತಲೆಯಿಂದ ಹೊರಬಂದು ನಮ್ಮ ಜೀವನವನ್ನು ಚೆನ್ನಾಗಿ ಬದುಕಲು ಬಯಸುತ್ತೇವೆ. ಮುಂದೆ ಯಾವುದೇ ಅಪರಾಧಗಳಿಗೆ ಸಿಲುಕಬಾರದೆಂದುಕೊಂಡಿದ್ದೇವೆ' ಎಂದು ವರ ಅಬ್ದುಲ್ ಹಸೀಮ್ ಹೇಳಿದ್ದಾರೆ. 'ಜೈಲಿನಿಂದ ಹೊರಬಂದ ನಂತರ, ನಾನು ನನ್ನ ಜೀವನವನ್ನು ಚೆನ್ನಾಗಿ ಜೀವಿಸಲು ಮತ್ತು ಎಲ್ಲರಂತೆ ಕುಟುಂಬ ಜೀವನವನ್ನು ಆರಂಭಿಸಲು ಬಯಸುತ್ತೇನೆ' ಎಂದು ವಧು ಸಹನಾರಾ ಖಾತುನ್ ಹೇಳಿದ್ದಾರೆ.
ಕೊಲೆ ಪ್ರಕರಣದಲ್ಲಿ ಅಬ್ದುಲ್ ಹಸೀಮ್ ಅವರಿಗೆ 8 ವರ್ಷ ಶಿಕ್ಷೆಯನ್ನು ವಿಧಿಸಲಾಗಿದ್ದು, ಶಹನಾರಾ ಖಾತುನ್ ಅವರಿಗೆ 6 ವರ್ಷ ಶಿಕ್ಷೆಯನ್ನು ವಿಧಿಸಲಾಗಿದೆ. ಪೆರೋಲ್ ಅವಧಿ ಮುಗಿಯಲು ಇನ್ನು ಸ್ವಲ್ಪವೇ ಸಮಯವಿದೆ. ಆ ಬಳಿಕ ನವ ದಂಪತಿ ಮತ್ತೆ ಜೈಲಿಗೆ ಹೋಗಬೇಕಿದೆ. ಕೆಲವೊಬ್ಬರು ಮದುವೆಗೆ ಅನುಮತಿ ನೀಡಿದ ಜೈಲು ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ರೆ, ಇನ್ನು ಕೆಲವರು ಶಿಕ್ಷೆ ನೀಡಬೇಕಾದ ಜೈಲಿನಲ್ಲೇ ಇಂಥಾ ಘಟನೆಗಳು ನಡೆಯೋದು ಸರಿಯಲ್ಲ ಎಂದಿದ್ದಾರೆ.