ಖರ್ಚುವೆಚ್ಚ ತಗ್ಗಿಸಿದ ವಿವಾಹದ ಹೊಸ ಟ್ರೆಂಡ್, ಮಧ್ಯಮ ವರ್ಗಕ್ಕಿದು ವರ!

By Suvarna News  |  First Published Jun 3, 2020, 12:56 PM IST

ಈ ಲಾಕ್‌ಡೌನ್ ವ್ಯವಸ್ಥೆಯಲ್ಲಿ ಆನ್‌ಲೈನ್ ಹಾಗೂ ಪ್ರೈವೇಟ್ ವೆಡ್ಡಿಂಗ್‌ಗಳು ಟ್ರೆಂಡ್ ಆಗುತ್ತಿವೆ. ಇದನ್ನು ಈ ಸಂದರ್ಭ ನಮಗೆ ಕಲಿಸಿದ ಪಾಠವಾಗಿ ತೆಗೆದುಕೊಂಡು, ಕೊರೋನಾ ಲಾಕ್‌ಡೌನ್ ಮುಗಿದ ಬಳಿಕವೂ ಈ ಸರಳ ವಿವಾಹಗಳನ್ನು ಮುಂದುವರಿಸಿಕೊಂಡು ಹೋಗುವ ಪರಿಪಾಠ ಬೆಳೆಸಿಕೊಳ್ಳಬೇಕು. 


ಕಳೆದ ವರ್ಷ, ಅದರ ಹಿಂದಿನ ವರ್ಷ, ಅದಕ್ಕೂ ಮುನ್ನದ ಮದುವೆ ಸಮಾರಂಭಗಳನ್ನು ನೆನೆಸಿಕೊಳ್ಳಿ. ಹಣವೆಂಬುದು ಹೊಳೆಯಂತೆ ಹರಿದುಹೋಗುತ್ತಿತ್ತು. ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ಜನರ ವಿವಾಹವಾದರೂ ಜನರಿಗೆ ಅದನ್ನು ಸಾಧ್ಯವಾದಷ್ಟು ಹಿಗ್ಗಿಸಿ, ಮೆರೆಸಿ, ವಿಜೃಂಭಣೆಯಿಂದ ನಡೆಸಬೇಕು. ಜೀವಮಾನವಿಡೀ ಕಷ್ಟಪಟ್ಟು ಕೂಡಿಟ್ಟದ್ದನ್ನೆಲ್ಲ ಒಂದೇ ವಾರದಲ್ಲಿ ಹುಡಿಗರೆವ ಹಪಹಪಿ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಶುರುವಾದದ್ದು ಡೆಸ್ಟಿನೇಶನ್ ವೆಡ್ಡಿಂಗ್. ನೆಂಟರಿಷ್ಟರನ್ನೆಲ್ಲ ಫ್ಲೈಟ್ ಹತ್ತಿಸಿ, ಟ್ರಾವೆಲಿಂಗ್ ಮಜಾ ಕೊಟ್ಟು, ದೊಡ್ಡ ಹೋಟೆಲ್‌ಗಳಲ್ಲಿ ಉಳಿಸಿ ದೂರದ ಚೆಂದದ ಸ್ಥಳವನ್ನು ಮತ್ತಷ್ಟು ಸ್ವರ್ಗಸದೃಶವಾಗಿಸಿ ಮದುವೆ ಮಾಡುವುದು. ಒಟ್ಟಿನಲ್ಲಿ ಹೆಡ್ಲೈನಿನಲ್ಲಿರುವ ಆಸೆ. 

ಇವುಗಳಲ್ಲಿ ಅರ್ಧಕ್ಕೂ ಹೆಚ್ಚು ಗುಣಗಳು ಅವನಲ್ಲಿದ್ದರೆ ಕಣ್ಣು ಮುಚ್ಚಿ ಕ ...

ಆದರೆ ವರ್ಷ ಒಂದರಲ್ಲಿ ಎಲ್ಲ ತಲೆ ಕೆಳಗಾಗಿರುವುದು ಎಂಥ ವಿಪರ್ಯಾಸ ನೋಡಿ. ಈಗ ಆಡಂಬರ ಹೋಗಲಿ, ಕನಿಷ್ಠ ಅಗತ್ಯಗಳು ಸಿಕ್ಕಿ ವಧುವರರ ಅಪ್ಪ ಅಮ್ಮಂದಿರಾದರೂ ವಿವಾಹಕ್ಕೆ ಉಪಸ್ಥಿತರಾಗಲು ವ್ಯವಸ್ಥೆ ಮಾಡಿಕೊಂಡರೆ ಅದೇ ಅದೃಷ್ಟ ಎಂದುಕೊಂಡು ವಿವಾಹ ಮಾಡುವಂತಾಗಿದೆ. ಜನರನ್ನು ತುಂಬಿಸಿ ಜನಬಲ, ಹಣಬಲ ತೋರಿಸುತ್ತಿದ್ದವರೆಲ್ಲ, ಈಗ ಯಾರೂ ಬರುವುದು ಬೇಡಪ್ಪಾ- ಯಾರಿಗೆ ಬೇಕು ಕಾಯಿಲೆ ಉಸಾಬರಿ ಎಂದುಕೊಂಡು ಇರುವ ನಾಲ್ಕು ಜನರ ಮಧ್ಯೆಯೇ ವಿವಾಹ ನೆರವೇರಿಸುತ್ತಿದ್ದಾರೆ. ಈ ಲಾಕ್‌ಡೌನ್ ವ್ಯವಸ್ಥೆಯಲ್ಲಿ ಆನ್‌ಲೈನ್ ಹಾಗೂ ಪ್ರೈವೇಟ್ ವೆಡ್ಡಿಂಗ್‌ಗಳು ಟ್ರೆಂಡ್ ಆಗುತ್ತಿವೆ. ಇದನ್ನು ಈ ಸಂದರ್ಭ ನಮಗೆ ಕಲಿಸಿದ ಪಾಠವಾಗಿ ತೆಗೆದುಕೊಂಡು, ಕೊರೋನಾ ಲಾಕ್‌ಡೌನ್ ಮುಗಿದ ಬಳಿಕವೂ ಈ ಸರಳ ವಿವಾಹಗಳನ್ನು ಮುಂದುವರಿಸಿಕೊಂಡು ಹೋಗುವ ಪರಿಪಾಠ ಬೆಳೆಸಿಕೊಳ್ಳಬೇಕು. ಏಕೆಂದರೆ, 

Latest Videos

undefined

ಸಮಾರಂಭಕ್ಕಿಂತ ನಂತರದ ಬದುಕು ಮುಖ್ಯ
ಹಣಕಾಸಿನ ಕುರಿತು ಎಚ್ಚರದ ನಿರ್ವಹಣೆಯನ್ನು ಈ ಲಾಕ್‌ಡೌನ್ ನಮಗೆ ಕಲಿಸಿದೆ. ಎಲ್ಲೆಡೆ ಶೇರುವ್ಯವಹಾರ ಕುಸಿದಿರಲು, ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲೇ ದಿನಗಳು ಮುಂದೆ ಓಡುತ್ತಿರಲು- ಹಣದ ಸೇವಿಂಗ್ಸ್ ಹಾಗೂ ಕನಿಷ್ಠ ಅಗತ್ಯಗಳಿಗೆ ಮಾತ್ರ ಬಳಸುವುದನ್ನು ನಾವು ಕರಗತ ಮಾಡಿಕೊಳ್ಳುತ್ತಿದ್ದೇವೆ. ವಿವಾಹಕ್ಕೂ ಅಷ್ಟೇ 15ರಿಂದ ಕೋಟಿಯವರೆಗೂ ಖರ್ಚು ಮಾಡುತ್ತಿದ್ದವರಿಗೆ ಈಗ ನಾಲ್ಕೈದು ಸಾವಿರಗಳಲ್ಲಿಯೂ ವಿವಾಹ ಪೂರೈಸಬಹುದೆಂಬುದು ಅರ್ಥವಾಗಿದೆ. ಇಷ್ಟು ಕಡಿಮೆ ಹಣದಲ್ಲಿ ವಿವಾಹ ಮುಗಿಸಿದರೆ, ಉಳಿದಂತೆ ಮಕ್ಕಳ ಮದುವೆಗಾಗಿ ಉಳಿಸಿಕೊಂಡು ಬಂದ ಹಣವನ್ನು ಅವರ ಭವಿಷ್ಯಕ್ಕೆ ಭದ್ರಠೇವಣಿಯಾಗಿ ಉಡುಗೊರೆ ಕೊಡಬಹುದಲ್ಲವೇ? ವಿವಾಹ ಹೇಗಾಯಿತು ಎಂಬುದಕ್ಕಿಂತ ಆನಂತರದ ಬದುಕೇ ಮುಖ್ಯ. ಹಾಗಾಗಿ, ಸಮಾರಂಭಕ್ಕೆ ಮಾಡುವ ಖರ್ಚನ್ನು ಅವರ ಬದುಕಿಗೆ ನೀಡಬಹುದು. ಇಲ್ಲವೇ, ವಯಸ್ಸಾದ ಪೋಷಕರು, ಮಕ್ಕಳಿಗಾಗಿ ತಮ್ಮೆಲ್ಲ ಕನಸುಗಳನ್ನು ಗಂಟು ಕಟ್ಟಿಟ್ಟು ಹಣ ಉಳಿಸಿರುತ್ತಾರೆ. ಅವರೀಗ ತಮ್ಮ ನಿವೃತ್ತ ಜೀವನಕ್ಕೆ, ಕನಸುಗಳ ಸಾಕಾರಕ್ಕೆ ಬಳಸಿಕೊಳ್ಳಬಹುದು. 

ಡೆಸ್ಟಿನೇಶನ್ ವೆಡ್ಡಿಂಗ್ ಸುರಕ್ಷಿತವಲ್ಲ
ಡೆಸ್ಟಿನೇಶನ್ ವೆಡ್ಡಿಂಗ್‌ಗಳಿಗೆ ಹೊಳೆಯಂತೆ ಸಾಗರದಂತೆ ಹಣ ಹರಿಸಬೇಕು. ಆದರೆ, ಈಗ ಕೊರೋನಾ ಸೃಷ್ಟಿಸಿರುವ ವಾತಾವರಣದಲ್ಲಿ ಮನೆಯಿಂದ ಹೊರ ಹೋಗುವುದೇ ಸುರಕ್ಷಿತವಲ್ಲ ಎಂದಿರುವಾಗ ದೂರದ ಇಟಲಿ, ಸ್ವಿಟ್ಜರ್‌ಲೆಂಡ್, ಗೋವಾ, ಕೇರಳ, ರಾಜಸ್ಥಾನಕ್ಕೆ ಹೋಗಿ ವಿವಾಹ ಮಾಡುವ ಕನಸು ದಡ್ಡತನದ ನಿರ್ಧಾರವಾಗುತ್ತದೆ. ಟ್ರಾವೆಲಿಂಗ್ ಆಗಲೀ, ಹೋಟೆಲ್‌ಗಳಲ್ಲಿ ಉಳಿಯುವುದಾಗಲೀ ಸೇಫ್ ಅಲ್ಲ ಎಂದಾದಾಗ ಡೆಸ್ಟಿನೇಶನ್ ವೆಡ್ಡಿಂಗ್ ಎಂಬ ವಿಚಾರವನ್ನೇ ಬದಿಗೆ ಹಾಕೋಣ. ಇದು ಇನ್ನೂ ವರ್ಷಗಳ ಕಾಲ ಸಂಪೂರ್ಣ ಸುಸ್ಥಿತಿಗೆ ಬರುವುದು ಅನುಮಾನವೇ. ನಿಮ್ಮ ಬಳಿ ನಿಜಕ್ಕೂ ಹಣ ಹೆಚ್ಚಾಗಿದೆ ಎಂದರೆ ಅದನ್ನು ಪರಿಚಯದವರ, ಅಪರಿಚಿತರ ಸಹಾಯಕ್ಕೆ, ಇತರೆ ಒಳ್ಳೆ ಕಾರ್ಯಗಳಿಗೆ ಬಳಸಬಹುದು. ಅಥವಾ ಸೇವ್ ಮಾಡಬಹುದು.

ಮಾಸ್ಕ್ ಮಹಿಮೆ; ಲಿಪ್‌ಸ್ಟಿಕ್‌ಗೆ ಬೈಬೈ, ಕಾಜಲ್‌ಗೆ ಜೈಜೈ

ಜನ ಸೇರಿಸುವುದು ಈಗ ಅಪಾಯಕಾರಿ
ವಿವಾಹ ಸಮಾರಂಭಕ್ಕೆ ಒಂದಿಷ್ಟು ಸಾವಿರ ಜನರನ್ನು ಸೇರಿಸಿ ಅವರಿಗೆ ಒಂದು ದಿನ ಭೂರಿ ಭೋಜನ ಹಾಕಿಸಿ ಜನಬಲ ತೋರಿಸುವುದು ಇಂದಿನ ಮಟ್ಟಿಗೆ ಸಾಧ್ಯಾವೂ ಇಲ್ಲ, ಅದು ಸಾಧುವೂ ಅಲ್ಲ. ಇದನ್ನೇ ಮುಂದುವರಿಸಿಕೊಂಡು ಹೋಗಬಹುದು. ನಿಜಕ್ಕೂ ಆ ಸಾವಿರ ಜನರು ನಮ್ಮ ಬದುಕಿಗೆ ಅಷ್ಟೊಂದು ಹತ್ತಿರವೇ ಎಂಬ ಪ್ರಶ್ನೆ ಕೇಳಿಕೊಳ್ಳುವುದು ಉತ್ತಮ. ಇದರ ಬದಲು ಪ್ರತಿ ದಿನ ಹತ್ತಿಪ್ಪತ್ತು ಅಶಕ್ತರಿಗೆ ಊಟದ ವ್ಯವಸ್ಥೆ ಮಾಡುವುದು ಉತ್ತಮವಲ್ಲವೇ? ಸೋಷ್ಯಲ್ ಡಿಸ್ಟೆನ್ಸಿಂಗ್ ಅಜೆಂಡಾ ಆಗಿರುವ ಈಗ ತೀರಾ ಮನಸ್ಸಿಗೆ ಹತ್ತಿರವಾದವರು ವಿವಾಹದಲ್ಲಿ ಕಣ್ಣೆದುರು ಇದ್ದರೆ ಸಾಕಲ್ಲವೇ? 

ವಿವಾಹಗಳು ಸರಳವಾದಷ್ಟೂ ಹೆತ್ತವರ ಒತ್ತಡ ತಗ್ಗುತ್ತದೆ, ಹೆಣ್ಣು ಮಗು ಹುಟ್ಟಿದಾಗ ಈಗಿಗಿಂತಾ ಹೆಚ್ಚು ಆಪ್ತವಾಗಿ ಸಂತೋಷದಿಂದ ಕುಟುಂಬಕ್ಕೆ ಬರ ಮಾಡಿಕೊಳ್ಳುವುದು ಸಾಧ್ಯವಾಗುತ್ತದೆ. ಭ್ರೂಣಹತ್ಯೆಗೆ ತಡೆ ಬೀಳುತ್ತದೆ. ಎಲ್ಲರೂ ಸರಳ ವಿವಾಹವನ್ನೇ ಮಾಡುವಾಗ ಹೋಲಿಸಿ ನೋಡುವ ಪ್ರಮೇಯವಾಗಲೀ, ಅದು ತರುವ ಸ್ಫರ್ಧೆಯಾಗಲೀ ಇರುವುದಿಲ್ಲ. ಹಾಗಾಗಿ ಸರಳ ವಿವಾಹ ನಡೆಸಿ, ಸಂತೋಷವಾಗಿರುವಂತೆ ಜೋಡಿಗಳಿಗೆ ಹರಸಿ. 
 

click me!