ಫ್ರಾನ್ಸ್‌ನ (France) ರಾಜಧಾನಿ ಪ್ಯಾರಿಸ್‌ನ್ನು (Paris) ಪ್ರೀತಿಯ ನಗರ ಎಂದು ಕರೆಯಲಾಗುತ್ತದೆ. ಅದೇ ಸಮಯದಲ್ಲಿ, ಫ್ರಾನ್ಸ್‌ನ ಪುರುಷರ ವಿಷಯಕ್ಕೆ ಬಂದಾಗ, ಅವರು ವಿಶ್ವದ ಅತ್ಯಂತ ರೋಮ್ಯಾಂಟಿಕ್ (Romantic) ಎಂದು ಪರಿಗಣಿಸಲಾಗುತ್ತದೆ. ಅದು ಯಾಕಾಗಿ ?
ಆಯಾ ದೇಶಗಳು (Country) ಕೆಲವೊಂದು ವಿಚಾರಕ್ಕೆ ಪ್ರಸಿದ್ದಿ ಹೊಂದಿರುತ್ತವೆ. ಹಾಗೆಯೇ ಫ್ರಾನ್ಸ್‌ನ (France) ಪುರುಷರನ್ನು ವಿಶ್ವದ ಅತ್ಯಂತ ರೋಮ್ಯಾಂಟಿಕ್ (Romantic) ಎ<ದಿ ಬಣ್ಣಿಸಲಾಗುತ್ತದೆ. ನಿರ್ದಿಷ್ಟ ದೇಶದ ಜನರನ್ನು ವಿಶ್ವದ ಅತ್ಯಂತ ರೋಮ್ಯಾಂಟಿಕ್ ಎಂದು ಪರಿಗಣಿಸುವುದು ಮೊದಲಿನಿಂದಲೇ ರೂಢಿಯಲ್ಲಿದೆ. ಫ್ರಾನ್ಸ್‌ನ ಜನರು ಪ್ರೀತಿ, ಪ್ರಣಯ ಮತ್ತು ಅನ್ಯೋನ್ಯತೆಯಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಪರಿಗಣಿಸಲಾಗಿದೆ. ಅದರಲ್ಲೂ ಫ್ರಾನ್ಸ್ ನ ರಾಜಧಾನಿ ಪ್ಯಾರಿಸ್ (Paris) ಅನ್ನು ಸಿಟಿ ಆಫ್ ಲವ್ ಎಂದು ಕರೆಯುತ್ತಾರೆ. ಮಾತ್ರವಲ್ಲ ಫ್ರಾನ್ಸ್‌ನ ಪುರುಷರನ್ನು (Men) ವಿಶ್ವದ ಅತ್ಯಂತ ರೋಮ್ಯಾಂಟಿಕ್ ಹುಡುಗರು ಎಂದು ಪರಿಗಣಿಸಲಾಗುತ್ತದೆ. ಇದಕ್ಕೆ ಕೆಲವು ಕಾರಣಗಳಿವೆ. ಅದೇನೆಂದು ನೋಡೋಣ.
ಫ್ರೆಂಚ್ ಉಚ್ಚಾರಣೆಯು ಸೆಕ್ಸಿಯೆಸ್ಟ್ ಆಗಿದೆ
ಪ್ಯಾರಿಸ್ ಅನ್ನು ಪ್ರಪಂಚದಾದ್ಯಂತ ಪ್ರಣಯದ ರಾಜಧಾನಿಯಾಗಿ ನೋಡಲಾಗುತ್ತದೆ. ಸಮೀಕ್ಷೆಗಳ ಪ್ರಕಾರ, ಫ್ರೆಂಚ್ ಉಚ್ಚಾರಣೆಯು ಸೆಕ್ಸಿಯೆಸ್ಟ್ ಆಗಿದೆ, ಫ್ರೆಂಚ್ ಭಾಷೆ ಪ್ರೀತಿಯ ಭಾಷೆಯಾಗಿದೆ ಫ್ರಾನ್ಸ್ ತನ್ನ ಇಂದ್ರಿಯತೆಗೆ ಹೆಸರುವಾಸಿಯಾಗಿದೆ. ಇಲ್ಲಿ ಕಾಮಪ್ರಚೋದಕ ಪ್ರೀತಿಯನ್ನು ಆರೋಗ್ಯಕರವಾಗಿ ವ್ಯಕ್ತಪಡಿಸಲಾಗುತ್ತದೆ. ಇತರ ದೇಶಗಳು ಅದನ್ನು ಪರಿಗಣಿಸಿದಂತೆ ಸೆಕ್ಸ್‌ನ್ನು ಕೊಳಕು ಎಂದು ಪರಿಗಣಿಸಿಲ್ಲ. ಬದಲಾಗಿ, ಪ್ರೀತಿಯ ಆರೋಗ್ಯಕರ ಅಭಿವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ.
ಫ್ರೆಂಚ್ ಫ್ರೈಸ್ ಪರಿಮಳವೇ ಪ್ರೇರಣೆ... ಅಲೂಗಡ್ಡೆಯಿಂದ ಫರ್‌ಫ್ಯೂಮ್ ತಯಾರಿಸಿದ ಅಮೆರಿಕಾದ ಸಂಸ್ಥೆ
ಸಂಗಾತಿ ಏನು ಬಯಸುತ್ತಾರೆ ಎಂಬುದು ಅವರಿಗೆ ತಿಳಿದಿದೆ
ಮಹಿಳೆಗೆ ಯಾವಾಗ ಏನು ಬೇಕು ಎಂಬುದು ಫ್ರಾನ್ಸ್‌ನ ಹುಡುಗರಿಗೆ ಚೆನ್ನಾಗಿ ತಿಳಿದಿದೆ. ಇಂಥವರು ತಮ್ಮ ಸಂಗಾತಿಯ ಮನಸ್ಥಿತಿ ಮತ್ತು ಆದ್ಯತೆಗಳ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ಅವರು ಯಾವಾಗಲೂ ಹುಡುಗಿಯ ಹೃದಯವನ್ನು ಗೆಲ್ಲಲು ಪ್ರಯತ್ನಿಸುತ್ತಾರೆ. ಹುಡುಗಿಯರಿಗೆ ಸರ್‌ಪ್ರೈಸ್ ನೀಡುವುದು, ಗಿಫ್ಟ್‌ಗಳನ್ನು ನೀಡುವ ಬಗ್ಗೆ ವಿಶೇಷ ಮುತುವರ್ಜಿ ವಹಿಸುತ್ತಾರೆ.
ಫ್ರೆಂಚ್ ಕಿಸ್ ಮತ್ತು ಅತ್ಯುತ್ತಮ ಪ್ರೇಮಿ ಕೌಶಲ್ಯಗಳು
ಫ್ರೆಂಚ್ ಕಿಸ್ ಅತ್ಯಂತ ರೋಮ್ಯಾಂಟಿಕ್ ಕಿಸ್ ಶೈಲಿಯಾಗಿದೆ. ಪ್ರತಿ ಪ್ರೇಮಿ ತನ್ನ ಸಂಗಾತಿಯೊಂದಿಗೆ ಫ್ರೆಂಚ್ ಚುಂಬನವನ್ನು ಪ್ರಯತ್ನಿಸುತ್ತಾನೆ. ಈ ಕಿಸ್ಸಿಂಗ್ ಸ್ಟೈಲ್ ಕೇವಲ ಫ್ರೆಂಚ್‌ನಲ್ಲಿ ಮಾತ್ರವಲ್ಲ, ಪ್ರಪಂಚದ ವಿವಿಧ ದೇಶಗಳಲ್ಲೂ ಪ್ರಸಿದ್ಧಿಯಾಗಿದೆ. ಲೈಂಗಿಕ ಜೀವನದಲ್ಲಿ ಫ್ರಂಚ್ ಕಿಸ್ ಅತ್ಯದ್ಭುತ ಮಾದರಿಯೆಂದು ಪರಿಗಣಿಸಲ್ಪಟ್ಟಿದೆ. ಫ್ರೆಂಚ್‌ನ ಮಂದಿ ಇದನ್ನು ಇನ್ನಷ್ಟು ಅದ್ಭುತವಾಗಿ ಮಾಡಬಲ್ಲರು. ಹೀಗಾಗಿ ಇವರನ್ನು ಅತ್ಯಂತ ರೋಮ್ಯಾಂಟಿಕ್ ಪುರುಷರು ಎಂದು ಪರಿಗಣಿಸಲಾಗುತ್ತದೆ.
ಸ್ಟೀರಿಯೊಟೈಪ್ ಅನ್ನು ಅನುಸರಿಸುತ್ತಿಲ್ಲ
ಸೆಕ್ಸ್ ಲೈಫ್‌ನಲ್ಲಿ ಪುರುಷರು ಹೀಗೆಯೇ ಮಾಡಬೇಕೆಂದು ಸಮಾಜನ ನಿರೀಕ್ಷಿಸುತ್ತದೆ. ಹಲವೆಡೆ ಜನರು ಅನುಸರಿಸುತ್ತಾರೆ ಕೂಡಾ. ಆದ್ರೆ ಫ್ರೆಂಚ್‌ನ ಪುರುಷರು ಈ ಸ್ಟೀರಿಯೋಟೈಪ್‌ನ್ನು ಅನುಸರಿಸುವುದಿಲ್ಲ. ಮಹಿಳೆಯರು ಏನು ಮಾಡಬೇಕೆಂದು ನಿರೀಕ್ಷಿಸುತ್ತಾರೋ ಅದರ ಪ್ರಕಾರ ವರ್ತಿಸುತ್ತಾರೆ. ಹುಡುಗಿಯರ ಮನಸ್ಸಿಗೆ ಮೆಚ್ಚಿಗೆಯಾವುವಂತೆ ಪ್ರೀತಿ ಮಾಡುತ್ತಾರೆ, ಹೆಚ್ಚು ಕಾಳಜಿ ವಹಿಸುತ್ತಾರೆ. ಫ್ರಾನ್ಸ್‌ನ ಪುರುಷರು ಮಹಿಳೆಯರನ್ನು ಕೇವಲ ವಸ್ತುಗಳಂತೆ ನೋಡುವುದಿಲ್ಲ, ಬದಲಾಗಿ ದೇವತೆಗಳಂತೆ ಗೌರವಿಸುತ್ತಾರೆ.
Food Secrets: ಹೆಸರಿನಲ್ಲಷ್ಟೇ ಫ್ರೆಂಚ್..ಆದ್ರೆ ಇವು ಫ್ರೆಂಚ್ ಫುಡ್ ಅಲ್ಲ !
ಮಹಿಳೆಯರನ್ನು ಗೌರವಿಸುವುದು
ಫ್ರೆಂಚ್ ಪುರುಷರು ತಮ್ಮ ಮಹಿಳೆಗೆ ಯಾವುದರಿಂದಲೂ ನೋವಾಗದಂತೆ ನೋಡಿಕೊಳ್ಳುತ್ತಾರೆ. ಆದ್ದರಿಂದ ಅವರು ತಮ್ಮ ಗೌರವದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ಅವರು 'ಲೇಡೀಸ್ ಫಸ್ಟ್' ಅನ್ನು ನಂಬುತ್ತಾರೆ ಮತ್ತು ಅದಕ್ಕೆ ಅಂಟಿಕೊಳ್ಳುತ್ತಾರೆ. ಹೆಂಗಸರು ಕಾರಿನ ಬಾಗಿಲು ತೆರೆಯಲು, ಭೇಟಿಯಾದಾಗ ಅವರ ಕೈಗಳಿಗೆ ಮುತ್ತಿಡಲು ಅಥವಾ ಅವರನ್ನು ಸರಳವಾಗಿ ಹೊಗಳಲು, ಫ್ರೆಂಚ್ ಪುರುಷರು ಹಿಂಜರಿಯುವುದಿಲ್ಲ. ಅಥವಾ ಮಹಿಳೆಯ ಕೆಲಸ ಮಾಡುವುದರಿಂದ ನಮಗೆ ಅವಮಾನ ಎಂದು ಅಂದುಕೊಳ್ಳುವುದಿಲ್ಲ.