
ಒಬ್ಬಳ ಜೊತೆ ಪ್ರೀತಿ (Love), ಇನ್ನೊಬ್ಬಳ ಜೊತೆ ಮದುವೆ (Marriage). ನಂತ್ರ ಇಬ್ಬರ ಜೊತೆಯೂ ಸಂಸಾರ (family) … ಟಿವಿ ಧಾರಾವಾಹಿಗಳಲ್ಲಿ ಇತ್ತೀಚಿನ ದಿನಗಳಲ್ಲಿ ಇಂಥ ಕಥೆಗಳು ಸಾಮಾನ್ಯ. ಸಿನಿಮಾಗಳಲ್ಲೂ ನಾವು ಒಬ್ಬರು ಒಂದೇ ಬಾರಿ ಇಬ್ಬರನ್ನು ಮದುವೆಯಾಗಿರುವುದನ್ನು ನೋಡಬಹುದು. ಆದ್ರೆ ನಿಜ ಜೀವನದಲ್ಲಿ ಇಂಥ ವಿಲಕ್ಷಣ ಘಟನೆಗಳು ಅತೀ ವಿರಳ. ಸಾಮಾನ್ಯವಾಗಿ ತನ್ನ ಪತಿಯನ್ನು ಹಂಚಿಕೊಳ್ಳಲು ಯಾವುದೇ ಮಹಿಳೆ ಇಷ್ಟಪಡುವುದಿಲ್ಲ. ಅಪರೂಪಕ್ಕೆ ಎನ್ನುವಂತೆ ಕೆಲವೇ ಕೆಲವು ಮಹಿಳೆಯರು ಪತಿಯ ಎರಡನೇ ಪತ್ನಿಯನ್ನು ಒಪ್ಪಿಕೊಳ್ತಾರೆ. ಎರಡು – ಮೂರು ಹೆಂಡತಿಯರನ್ನು ಹೊಂದುವುದು ಭಾರತದಲ್ಲಿ ಅಪರಾಧ. ಆದ್ರೆ ಮಧ್ಯಪ್ರದೇಶದ ಅಲಿರಾಜ್‌ಪುರದಲ್ಲಿ ನಡೆದ ಮದುವೆಯೊಂದು ಈಗ ಎಲ್ಲರ ಗಮನ ಸೆಳೆದಿದೆ. ನಾನ್‌ಪುರ ಗ್ರಾಮದಲ್ಲಿ ನಡೆದ ವಿಚಿತ್ರ ಮದುವೆಯನ್ನು ಕಂಡು ಜನರು ಅಚ್ಚರಿಗೊಂಡಿದ್ದಾರೆ. ಅಷ್ಟಕ್ಕೂ ಅಲ್ಲಿ ನಡೆದ ಮದುವೆ ವಿಶೇಷವೇನು ಎಂಬುದನ್ನು ನಾವಿಂದು ಹೇಳ್ತೇವೆ.
ಮೂವರ ಜೊತೆ ಸಪ್ತಪದಿ : ಮಧ್ಯಪ್ರದೇಶದ ಅಲಿರಾಜ್ ಪುರ ಬುಡಕಟ್ಟು ಜನಾಂಗದ ಪ್ರಾಬಲ್ಯವಿರುವ ಪ್ರದೇಶ. ನಾನ್ ಪುರ ಗ್ರಾಮದಲ್ಲಿ ಬುಡಕಟ್ಟು ಜನಾಂಗದ ಸಂಖ್ಯೆ ಹೆಚ್ಚಿದೆ. ಇಲ್ಲಿ ವರನೊಬ್ಬ ಒಂದೇ ಮಂಟಪದಲ್ಲಿ ಒಬ್ಬರಲ್ಲ, ಇಬ್ಬರಲ್ಲ ಮೂವರು ವಧುಗಳ ಜೊತೆ ವಿವಾಹವಾಗಿದ್ದಾನೆ. ಸಮರ್ಥ ಮೌರ್ಯ ಹೆಸರಿನ ವ್ಯಕ್ತಿಯೇ ಒಂದೇ ಬಾರಿ ಮೂವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವ್ಯಕ್ತಿ. ಈ ಮದುವೆ ನೋಡಲು ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.
ಪೋರ್ನೋಗ್ರಫಿ ಕೋರ್ಸ್, ವಿದ್ಯಾರ್ಥಿಗಳು ಜೊತೆಯಲ್ಲೇ ಕುಳಿತು ಅಶ್ಲೀಲ ಸಿನಿಮಾ ನೋಡ್ಬೋದು !
ಮೂವರು ಹುಡುಗಿಯರ ಪ್ರೀತಿಗೆ ಬಿದ್ದಿದ್ದ ಸಮರ್ಥ ಮೌರ್ಯ : ಸಮರ್ಥ ಮೌರ್ಯ ಮದುವೆ ಅರೆಂಜ್ ಮ್ಯಾರೇಜ್ ಅಲ್ಲ. ಸಮರ್ಥ ವಿವಿಧ ಸಮಯಗಳಲ್ಲಿ ಮೂವರು ಹುಡುಗಿಯರ ಪ್ರೀತಿಗೆ ಬಿದ್ದಿದ್ದ. ಅವರನ್ನು ಓಡಿಸಿಕೊಂಡು ಬಂದಿದ್ದ. ಮೂವರು ಹುಡುಗಿಯರೂ ಸಮರ್ಥ ಮನೆಯಲ್ಲಿಯೇ ವಾಸವಾಗಿದ್ದರು. ಈ ಮೂವರ ಜೊತೆ ಸಮರ್ಥ ಲಿವ್ ಇನ್ ರಿಲೇಶನ್ಶಿಪ್ ನಲ್ಲಿದ್ದ.
ಮಕ್ಕಳ ಮುಂದೆ ನಡೆದ ಮದುವೆ : ಮೂವರು ಹುಡುಗಿರ ಜೊತೆ ಲಿವ್ ಇನ್ ರಿಲೇಶನ್ಶಿಪ್ ನಲ್ಲಿದ್ದ ಸಮರ್ಥ ಒಂದೆರಡು ವರ್ಷಗಳಿಂದ ಬಾಳ್ವೆ ಮಾಡ್ತಿಲ್ಲ. ನಾಲ್ಕು ಮಂದಿ ಒಟ್ಟಿಗೆ ಜೀವನ ಶುರು ಮಾಡಿ ಈಗಾಗಲೇ 15 ವರ್ಷ ಕಳೆದಿದೆ. ಮೂವರು ಪ್ರೇಮಿಗಳಿಂದ ಸಮರ್ಥ್ ಆರು ಮಂದಿ ಮಕ್ಕಳನ್ನು ಪಡೆದಿದ್ದಾನೆ. ಮಕ್ಕಳ ಮುಂದೆಯೇ ಈಗ ಈತನ ಮದುವೆ ನಡೆದಿದೆ. ಬುಡಕಟ್ಟು ಜನಾಂಗದ ಪದ್ಧತಿಯಂತೆ ಮದುವೆ ನಡೆದಿದೆ.
ಮದುವೆ ಹಿಂದಿದೆ ವಿಶಿಷ್ಠ ಕಾರಣ : ಬುಡಕಟ್ಟು ಜನಾಂಗದ ನಂಬಿಕೆಗಳು ಮತ್ತು ಸಂಪ್ರದಾಯಗಳ ಪ್ರಕಾರ, ಒಬ್ಬ ವ್ಯಕ್ತಿ ಸಂಪ್ರದಾಯಗಳ ಪ್ರಕಾರ, ಮದುವೆಯಾಗದೆ ಹೋದ್ರೆ, ಕುಟುಂಬದ ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗುವಂತಿಲ್ಲ. ಇದೇ ಕಾರಣಕ್ಕೆ ಸಮರ್ಥ್, ಮೂವರು ಗೆಳತಿಯರೊಂದಿಗೆ 15 ವರ್ಷಗಳ ಕಾಲ ಲಿವ್-ಇನ್‌ನಲ್ಲಿ ವಾಸಿಸಿದ ನಂತರ ವಿವಾಹವಾಗುವ ನಿರ್ಧಾರ ತೆಗೆದುಕೊಂಡಿದ್ದಾನೆ.
Relationship Tips: ಲೈಂಗಿಕ ಕ್ರಿಯೆಗೂ ಮುನ್ನ ಈ ಪ್ರಶ್ನೆ ಕೇಳಲೇಬೇಕಂತೆ
ಲಿವ್ ಇನ್ ಗೆ ಬುಡಕಟ್ಟು ಜನಾಂಗದಲ್ಲಿದೆ ಒಪ್ಪಿಗೆ : ಲಿವ್ ಇನ್ ರಿಲೇಶನ್ಶಿಪ್ ಇತ್ತೀಚಿಗೆ ಪ್ರಸಿದ್ಧಿಗೆ ಬಂದಿದೆ ಎಂದು ನಾವಂದುಕೊಂಡಿದ್ದೇವೆ. ಆದ್ರೆ ಬುಡಕಟ್ಟು ಜನಾಂಗದಲ್ಲಿ ಇದು ಹಿಂದಿನಿಂದಲೂ ಇದೆ. ಕೆಲ ಬುಡಕಟ್ಟು ಜನಾಂಗದಲ್ಲಿ ಲಿವ್ ಇನ್ ರಿಲೇಶನ್ಶಿಪ್ ಅಪರಾಧವಲ್ಲ. ಲಿವ್ ಇನ್ ನಲ್ಲಿರಲು ಹಾಗೂ ಮಕ್ಕಳನ್ನು ಪಡೆಯಲು ಒಪ್ಪಿಗೆ ಸಿಗುತ್ತದೆ. ಆದ್ರೆ ಮದುವೆಯಾಗದೆ ಬೇರೆಯವರ ಮದುವೆ ಹಾಗೂ ಬೇರೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತಿಲ್ಲ. ಮೊದಲು ಸಮರ್ಥ್ ಆರ್ಥಿಕ ಸ್ಥಿತಿ ಸರಿಯಾಗಿರಲಿಲ್ಲವಂತೆ. ಆದ್ರೆ ಈ ಮೂವರು ಗೆಳತಿಯರು ಆತನ ಬಾಳಲ್ಲಿ ಬಂದ್ಮೇಲೆ ಆರ್ಥಿಕ ಸ್ಥಿತಿ ಸುಧಾರಿಸಿತ್ತಂತೆ. ಹಾಗಾಗಿ ಮೂವರನ್ನೂ ಮದುವೆಯಾಗುವ ನಿರ್ಧಾರಕ್ಕೆ ಸಮರ್ಥ್ ಬಂದಿದ್ದಾನೆ. ಅಷ್ಟೇ ಅಲ್ಲ ಸಮರ್ಥ್, ಮದುವೆ ಕಾರ್ಡ್ ಕೂಡ ತಯಾರಿಸಿದ್ದ. ಅದ್ರಲ್ಲಿ ಮೂವರು ಪತ್ನಿಯರ ಹೆಸರು ಹಾಕಿದ್ದ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.