
ಅಮೆರಿಕಾದ ಬೋಸ್ಟನ್‌ನಲ್ಲಿ ನಡೆದ ಕ್ಲೌಡ್ ಪ್ಲೇ ಕನ್ಸರ್ಟ್ ವೇಳೆ ಕಿಸ್ ಕ್ಯಾಮ್ ಮೂಲಕ ಖಗೋಳ ವಿಜ್ಞಾನ ಸಂಸ್ಥೆ ಆಸ್ಟೋನೊಮರ್ ಸಿಇಒ ಆಂಡಿ ಬೈರಾನ್ ಹಾಗೂ ಸಂಸ್ಥೆಯ ಹೆಚ್‌ಆರ್ ಕ್ರಿಸ್ಟಿನ್ ಕ್ಯಾಬೋಟ್ ಅವರ ಅನೈತಿಕ ಸಂಬಂಧವನ್ನು ಕಿಸ್ ಕ್ಯಾಮ್ ಮೂಲಕ ಸೆರೆ ಹಿಡಿದು ಪ್ರಪಂಚದೆಲ್ಲೆಡೆ ಬಯಲು ಮಾಡಿದವರು ಒಬ್ಬರು ಮಹಿಳೆ ಎಂಬುದು ತಿಳಿದು ಬಂದಿದೆ.
ಕ್ಲೌಡ್ ಪ್ಲೇ ಕನ್ಸರ್ಟ್ ವೇಳೆ ಕಿಸ್ ಕ್ಯಾಮ್ ಮೂಲಕ ಆಂಡಿ ಬೈರನ್ ಹಾಗೂ ಹೆಚ್ ಆರ್ ಕ್ರಿಸ್ಟಿನ್ ಕ್ಯಾಬೋಟ್ ಲವ್ವಿಡವ್ವಿ ಸೆರೆ ಹಿಡಿದಿದ್ದು, 28 ವರ್ಷದ ಕ್ಲೌಡ್ ಪ್ಲೇ ಫ್ಯಾನ್ ಗ್ರೇಸ್ ಸ್ಪ್ರಿಂಗೇರ್(Grace Springer) ಎಂಬುದು ತಿಳಿದಿದೆ. ಈ ವೀಡಿಯೋ ಪ್ರಪಂಚದ ವಿವಿಧ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಮೂಲಕ ಭಾರಿ ಹಲ್‌ಚಲ್ ಸೃಷ್ಟಿಸಿತ್ತು. 50 ಮಿಲಿಯನ್‌ಗೂ ಹೆಚ್ಚು ಜನ ಈ ವೀಡಿಯೋ ವೀಕ್ಷಿಸಿದ್ದರು. ಆಸ್ಟೋನಾಮರ್ ಸಂಸ್ಥೆಯ ಸಿಇಒ ಜೊತೆ ಸಂಸ್ಥೆಯ ಮುಖ್ಯ ಹೆಚ್‌ಆರ್ ಅವರೇ ಸಿಕ್ಕಿಬಿದ್ದಿದ್ದರಿಂದ ಇದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟ್ರೋಲ್ ಹಾಗೂ ಮೀಮ್ಸ್‌ನ ಹಬ್ಬದ ಸೃಷ್ಟಿಗೆ ಕಾರಣವಾಗಿತ್ತು.
ಘಟನೆಗೆ ಸಂಬಂಧಿಸಿದಂತೆ ಈಗ ವೀಡಿಯೋ ಸೆರೆ ಹಿಡಿದ ಗ್ರೇಸ್ ಸ್ಟ್ರಿಂಗೇರ್ ಪ್ರತಿಕ್ರಿಯೆ ನೀಡಿದ್ದು, ಅವರ ಹೇಳಿಕೆಯೂ ಈಗ ಭಾರಿ ವೈರಲ್ ಆಗುತ್ತಿದೆ. ಹಾಗಾದರೆ ಅವರು ಹೇಳಿದ್ದೇನು ಅಂತ ನೋಡೋಣ. ನನಗೆ ಅವರು ಯಾರು ಎಂಬುದೇ ಗೊತ್ತಿರಲಿಲ್ಲ, ಆದರೆ ಮೂರ್ಖತನದ ಆಟ ಆಡುವವರಿಗೆ ಮೂರ್ಖತನದ ಉಡುಗೊರೆಯೇ ಸಿಗುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ ಎಂದು ಅವರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.
ನನಗೆ ಅವರು ಯಾರು ಎಂಬುದು ಗೊತ್ತಿರಲಿಲ್ಲ, ಆದರೆ ಕಿಸ್ ಕ್ಯಾಮ್‌ನಲ್ಲಿ ಸೆರೆಯಾಗುತ್ತಿದ್ದಂತೆ ಅವರ ವರ್ತನೆ ಆಸಕ್ತಿಕರವಾಗಿದೆ ಎನಿಸಿತು. ಹೀಗಾಗಿ ಅದನ್ನು ಪೋಸ್ಟ್ ಮಾಡಲು ಮುಂದಾದೆ. ಆದರೆ ಈ ರೀತಿ ಅದು ವೈರಲ್ ಆಗುತ್ತೆ ಎಂಬ ಐಡಿಯಾ ಇರಲಿಲ್ಲ ಎಂದು ಅವರು ಹೇಳಿದ್ದಾರೆ. ಆದರೆ ಈ ವೀಡಿಯೋದಿಂದ ಅವರ ಜೀವನ ತಲೆಕೆಳಗಾದ ಬಗ್ಗೆ ನನಗೆ ಬೇಸರವಿದೆ. ಆದರೆ ಯಾರು ಮೂರ್ಖತನದ ಆಟ ಆಡುತ್ತಾರೋ ಅವರಿಗೆ ಮೂರ್ಖತನದ ಉಡುಗೊರೆಯೇ ಸಿಗುತ್ತದೆ ಎಂಬುದು ನನ್ನ ಅಭಿಪ್ರಾಯ. ಮೋಸ ಮಾಡಿದ ವ್ಯಕ್ತಿಗಳ ಸಂಗಾತಿಗಳು ಈ ಆಘಾತದಿಂದ ಹೊರಬಂದು ಖುಷಿಯಿಂದ ಬದುಕುತ್ತಾರೆ ಎಂದು ನಾನು ಭಾವಿಸುತ್ತೇನೆ ಭವಿಷ್ಯ ಅವರ ಮುಂದೆಯೇ ಇದೆ ಎಂದು ಗ್ರೇಸ್ ಸ್ಟ್ರಿಂಗೇರ್ ಹೇಳಿದ್ದಾರೆ.
ಕ್ಲೌಡ್ ಪ್ಲೇ ಕನ್ಸರ್ಟ್‌ನ ಕಿಸ್ ಕ್ಯಾಮ್‌ನಲ್ಲಿ ಇಬ್ಬರು ಸೆರೆಯಾಗುತ್ತಿರುವುದರ ಅರಿವಾಗುತ್ತಿದ್ದಂತೆ ಇಬ್ಬರು ಮುಖ ಮುಚ್ಚಿಕೊಂಡಿದ್ದರು. ಇವರಿಬ್ಬರು ಬೇರೆ ಬೇರೆಯವರನ್ನು ಮದುವೆಯಾಗಿದ್ದ ಕಾರಣ ಇವರ ರೋಮ್ಯಾನ್ಸ್ ಭಾರಿ ವೈರಲ್ ಆಗಿದೆ. ಇತ್ತ ಇವರಿಬ್ಬರ ರೋಮ್ಸಾನ್ಸ್ ನೋಡಿದ ಕ್ಲೌಡ್ ಪ್ಲೇ ಸಿಂಗರ್ ಕ್ರಿಸ್ ಮಾರ್ಟಿನ್ ಇವರಿಬರತ್ತ ನೋಡಿ, (ಲುಕ್ ಎಟ್ ದಿಸ್ ಟು) ಎಂದು ಉದ್ಘರಿಸಿದ್ದರು.
ಘಟನೆಯ ಬಳಿಕ ಮೆಗ್ಗನ್ ಕೆರ್ರಿಗನ್ ಅವರು ತಮ್ಮ ಹೆಸರಿನ ಜೊತೆಗಿದ್ದ ಗಂಡನ ಹೆಸರಿನ ಸರ್‌ನೇಮ್ ಬೈರನ್ ಅನ್ನು ಅಳಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಜನ ಅವರಿಗೆ ಅನುಕಂಪ ತೋರಿದ್ದರು. ಘಟನೆಯ ಬಳಿಕ ಸಂಸ್ಥೆಯ ಸಿಇಒ ಸ್ಥಾನಕ್ಕೆ ಆಂಡಿ ಬೈರನ್ ರಾಜೀನಾಮೆ ನೀಡಿದ್ದಾರೆ. ಹಾಗೆಯೇ ಹೊಸ ಸಿಇಒಗಾಗಿ ಸಂಸ್ಥೆಯ ಬೋರ್ಡ್ ಹುಡುಕಾಟ ನಡೆಸುತ್ತಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.