ಈ ಸಂಜೆ ಯಾಕಾಗಿದೆ? ವಿರಹ ಗೀತೆ ಹೇಳಿದ ತೇಜಸ್ವಿ ಸೂರ್ಯ; ಆಷಾಢ ಯಾಕಿದೆ ಎಂದ ಫ್ಯಾನ್ಸ್

Published : Jul 21, 2025, 11:50 AM ISTUpdated : Jul 21, 2025, 12:03 PM IST
 tejasvisurya

ಸಾರಾಂಶ

ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು 'ಗೆಳೆಯ' ಚಿತ್ರದ 'ಈ ಸಂಜೆ ಯಾಕಾಗಿದೆ' ಹಾಡನ್ನು ಹಾಡುವ ಮೂಲಕ ಪತ್ನಿ ಶಿವಶ್ರೀ ಅವರನ್ನು ನೆನೆದಿದ್ದಾರೆ.

ಬೆಂಗಳೂರು: ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಈ ಸಂಜೆ ಯಾಕಾಗಿದೆ ಎಂದು ಹಾಡು ಹೇಳುತ್ತಾ ಪತ್ನಿ ಶಿವಶ್ರೀ ಅವರರನ್ನು ಮಿಸ್ ಮಾಡಿಕೊಂಡಿದ್ದಾರೆ. ಸ್ವತಃ ತೇಜಸ್ವಿ ಸೂರ್ಯ ಅವರೇ, ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೋ ಶೇರ್ ಮಾಡಿಕೊಂಡು, ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದುಕೊಂಡು ಪತ್ನಿ ಶಿವಶ್ರೀ ಅವರಿಗೆ ಟ್ಯಾಗ್ ಸಹ ಮಾಡಿ ಈ ಹಾಡು ನಿಮಗಾಗಿ ಎಂದು ಹೇಳಿಕೊಂಡಿದ್ದಾರೆ. ಭಾನುವಾರ ಖಾಸಗಿ ಕಾರ್ಯಕ್ರಮವೊಂದರಲ್ಲಿ ತೇಜಸ್ವಿ ಸೂರ್ಯ ಭಾಗಿಯಾಗಿದ್ದರು. ಈ ವೇಳೆ ಪ್ರೇಕ್ಷಕರ ಒತ್ತಾಯದ ಮೇರೆಗೆ ಕನ್ನಡದ 'ಗೆಳೆಯ' ಸಿನಿಮಾದ ಈ ಸಂಜೆ ಯಾಕಾಗಿದೆ ಎಂದು ಹಾಡು ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಸಂಸದರ ವಿರಹ ಗೀತೆ

ತೇಜಸ್ವಿ ಸೂರ್ಯ ಮಡದಿ ಶಿವಶ್ರೀ ಉತ್ತಮ ಗಾಯಕಿ ಅನ್ನೋ ವಿಚಾರ ಇಡೀ ದೇಶಕ್ಕೆ ಗೊತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ ಶಿವಶ್ರೀ ಹಾಡಿನ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡಿದ್ದರು. ಇದೀಗ ಪತ್ನಿಗಾಗಿ ತೇಜಸ್ವಿ ಸೂರ್ಯ, ವಿರಹ ಗೀತೆಯನ್ನು ಹೇಳಿದ್ದಾರೆ. ತೇಜಸ್ವಿ ಸೂರ್ಯ ಅವರ ಈ ಪೋಸ್ಟ್‌ಗೆ ಬಹುತೇಕರು ತಮಾಷೆಯಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವರು ರಾಜಕೀಯದಿಂದ ಹೊರ ಬಂದು ಪೂರ್ಣಪ್ರಮಾಣ ಕಲಾವಿದರಾಗಿ ಎಂದು ಸಲಹೆಯನ್ನು ನೀಡಿದ್ದಾರೆ.

ಪತಿಯ ಪೋಸ್ಟ್‌ಗೆ ಶಿವಶ್ರೀ ಪ್ರತಿಕ್ರಿಯೆ

ತೇಜಸ್ವಿ ಸೂರ್ಯ ವಿಡಿಯೋಗೆ ಪ್ರತಿಕ್ರಿಯಿಸಿರುವ ಶಿವಶ್ರೀ, ಬ್ಯೂಟಿಫುಲ್. ನಾನು ಸಹ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಕಮೆಂಟ್ ಮಾಡಿದ್ದಾರೆ. ಇತ್ತೀಚೆಗಷ್ಟೇ ತೇಜಸ್ವಿ ಸೂರ್ಯ ಮತ್ತು ಶಿವಶ್ರೀ ದಂಪತಿ ಮನೆಗೆ ಮುದ್ದಾದ ಕರು ಬರಮಾಡಿಕೊಂಡಿದ್ದರು. ಶಿವಶ್ರೀ ಹಾಡು ಹೇಳುವ ಮೂಲಕ ಕರುವನ್ನು ಸ್ವಾಗತಿಸಿಕೊಂಡಿದ್ದರು.

ವಿಡಿಯೋಗೆ ನೆಟ್ಟಿಗರ ಕಮೆಂಟ್ ಏನು?

ಸಂಸದರ ವಿಡಿಯೋಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು, ತುಂಬಾ ಸೊಗಸಾಗಿ ಹಾಡು ಹೇಳಿದ್ದೀರಿ. ಸೂಪರ್ ಹಾಡುಗಾರಿಕೆ ಸರ್. ಬಹುಮುಖ ಪ್ರತಿಭೆಯುಳ್ಳ ಸಂಸದರು ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಒಂದಿಷ್ಟು ಜನರು, ಆಷಾಢ ಮಾಸದ ವಿರಹ, ಸರ್ ಡೋಂಟ್ ವರಿ, ಆಷಾಢ ಮುಗಿಯುತ್ತಿದೆ. ಆಷಾಡ ಇನ್ನೇನು ಮುಗಿತಿದೆ sir ಇನ್ನ ಜಾಸ್ತಿ ದಿನ ಇರಲ್ಲ ಬಿಡಿ ವಿರಹ ವೇದನೆ. ಆಷಾಢ ಯಾಕ್ ಆಗಿದೆ ನೀನ್ಇಲ್ಲದೆ. ಆಷಾಢ ಸಕ್ ಆಗಿದೆ. ನಿಮ್ಮ ಈ ಪ್ರತಿಭೆಯಲ್ಲಿ ಶಿವಶ್ರೀ ಅವರ ಕೈ ಕಾಣಿಸುತ್ತಿದೆ ಎಂದು ಕಮೆಂಟ್ ಮಾಡಿದ್ದಾರೆ.

ಮಾರ್ಚ್ 6ರಂದು ತೇಜಸ್ವಿ ಸೂರ್ಯ ಮತ್ತು ಶಿವಶ್ರೀ ಸ್ಕಂದಪ್ರಸಾದ್ ಮದುವೆ ಬೆಂಗಳೂರಿನ ಹೊರವಲಯದಲ್ಲಿ ಕರ್ನಾಟಕ ಮತ್ತು ತಮಿಳುನಾಡು ಸಂಪ್ರದಾಯದಂತೆ ನಡೆದಿತ್ತು. ಮಾರ್ಚ್ 11ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆರತಕ್ಷತೆ ಆಯೋಜಿಸಿದ್ದರು. ಆರತಕ್ಷತೆಗೆ ಸಿಎಂ ಸಿದ್ದರಾಮಯ್ಯ, ಕೇಂದ್ರ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ರಾಜಕೀಯ ಗಣ್ಯರು ಭಾಗಿಯಾಗಿದ್ದರು.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಈ ಸುಂದರ ದೇಶದಲ್ಲಿ ಬಾಡಿಗೆಗೆ ಸಿಗ್ತಾನೆ ಗಂಡ, ಗಂಟೆಗೆ ಇಷ್ಟಿದೆ ಸಂಬಳ!
ಮದುವೆ ಮುಂದೂಡಿಕೆ ಆದ 12 ದಿನಗಳ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ಮೊದಲ ಪೋಸ್ಟ್‌ ಮಾಡಿದ ಸ್ಮೃತಿ, ಕೈಯಲ್ಲಿದ್ದ ರಿಂಗ್‌ ಮಾಯ!