ಈ ಕಂಪನಿಯಲ್ಲಿ ಕಚೇರಿ ಟೈಮ್‌ನಲ್ಲೇ ಡೇಟಿಂಗ್ ಅನುಮತಿ, ಸ್ಯಾಲರಿ ಜೊತೆ ಹೆಚ್ಚುವರಿ ಭತ್ಯೆ ಸೌಲಭ್ಯ!

By Chethan Kumar  |  First Published Sep 3, 2024, 5:14 PM IST

ವೃತ್ತಿಯಲ್ಲಿರುವ ಎಲ್ಲರೂ ಸಿಕ್ ಲೀವ್, ಕ್ಯಾಶ್ಯುಯೆಲ್ ಲೀವ್, ಪ್ರಿವಿಲೇಜ್ ಲೀವ್ ಸೇರಿದಂತೆ ಹಲವು ರಜೆಗಳನ್ನು ನೀಡುವ ಕೇಳಿರುತ್ತೀರಿ. ಆದರೆ ಈ ಕಂಪನಿಯಲ್ಲಿ ಟಿಂಡರ್ ಲೀವ್ ಜಾರಿಯಲ್ಲಿದೆ. ಕಚೇರಿ ಸಮಯದಲ್ಲೇ ಆಪ್ತರ ಜೊತೆ ಡೇಟಿಂಗ್ ಹೋಗಲು ಅವಕಾಶವಿದೆ. ಇದಕ್ಕೆ ಕಂಪನಿ ಭತ್ಯೆಯನ್ನೂ ನೀಡಲಿದೆ. ಸ್ಯಾಲರಿಯಲ್ಲಿ ಯಾವುದೇ ಕಡಿತ ಇಲ್ಲ. 
 


ಬ್ಯಾಂಗ್‌ಕಾಕ್(ಸೆ.03)  ಕಚೇರಿ ಸಮಯದಲ್ಲಿ ಒಂದಿಷ್ಟು ಹರಟೆ ಹೊಡೆದರೂ ವಾರ್ನಿಂಗ್ ಸಿಗುವ ಕಾಲ. ಆದರೆ ಈ ಕಂಪನಿಯಲ್ಲಿ ಮಾತ್ರ ನೀವು ಆಪ್ತರ ಜೊತೆ ಡೇಟಿಂಗ್ ಹೋಗಲು ಬಯಸಿದರೆ ಕಂಪನಿ ನಿಮಗೆ ಟಿಕೆಟ್, ಉಳಿದುಕೊಳ್ಳಲು ಹೊಟೆಲ್ ವ್ಯವಸ್ಥೆ ಮಾಡಿಕೊಡಲಿದೆ. ಜೊತೆಗೆ ಸ್ಯಾಲರಿಯಲ್ಲಿ ಯಾವುದೇ ಕಡಿತ ಇಲ್ಲ. ಇದೀಗ ಈ ಕಂಪನಿ ಸೇರಿಕೊಳ್ಳಲು ಜನ ಕ್ಯೂ ನಿಲ್ಲುತ್ತಿದ್ದಾರೆ. ಹೌದು ವೈಟ್‌ಲೈನ್ ಗ್ರೂಪ್ ಕಂಪನಿ ಇದೀಗ ಉದ್ಯೋಗಿಗಳಿಗೆ 6 ತಿಂಗಳ ವಿಶೇಷ ಸೌಲಭ್ಯ ನೀಡುತ್ತಿದೆ. ಈ ಸೌಲಭ್ಯದಲ್ಲಿ ಉದ್ಯೋಗಿಗಳು ತಾವು ಸಂಗಾತಿಗಳನ್ನು ಹುಡುಕಿ ಅವರ ಜೊತೆ ಡೇಟಿಂಗ್ ತೆರಳಲು ಕಂಪನಿ ಅವಕಾಶ ಮಾಡಿಕೊಡುತ್ತಿದೆ.

ವೈಟ್‌ಲೈನ್ ಗ್ರೂಪ್ ಥಾಯ್ಲೆಂಡ್ ಮಾರ್ಕೆಟಿಂಗ್ ಕಂಪನಿ. ಜುಲೈನಿಂದ ಈ ಟಿಂಡರ್ ಲೀವ್ ವ್ಯವಸ್ಥೆ ಜಾರಿ ಮಾಡಲಾಗಿದೆ. ಒಂಟಿಯಾಗಿರುವ, ಸಂಗಾತಿ ಇಲ್ಲದೆ ಇರುವ ಉದ್ಯೋಗಿಗಳು ಟಿಂಡರ್ ಮೂಲಕಸಂಗಾತಿಗಳನ್ನು ಹುಡುಕಿಕೊಂಡರೆ, ಅಥವಾ ಇತರ ಮೂಲಗಳಿಂದ ಸಂಗಾತಿಗಳನ್ನು ಹುಡುಕಿ ಅವರ ಜೊತೆ ಡೇಟಿಂಗ್ ಹೋಗಲು ಬಯಸಿದ್ದರೆ ಈ ಕಂಪನಿ ಅವಕಾಶ ನೀಡುತ್ತದೆ. 6 ತಿಂಗಳ ಸೌಲಭ್ಯ ಈ ಕಂಪನಿಯಲ್ಲಿದೆ.

Tap to resize

Latest Videos

undefined

ಇನ್‌ಸ್ಟಾ ಇನ್‌ಫ್ಲುಯೆನ್ಸರ್ ಜೊತೆ ಹಾರ್ದಿಕ್ ಪಾಂಡ್ಯ ಡೇಟಿಂಗ್? ವೈರಲ್ ವಿಡಿಯೋ ಸೃಷ್ಟಿಸಿದ ಅನುಮಾನ!

ಡೇಟಿಂಗ್ ಹೋಗಲು ಟಿಕೆಟ್, ಹೊಟೆಲ್ ಬಿಲ್ ಸೇರಿದಂತೆ ಇತರ ಭತ್ಯೆಗಳನ್ನು ಕಂಪನಿ ನೀಡುತ್ತದೆ. ಬರೋಬ್ಬರಿ 6 ತಿಂಗಳವರೆಗೆ ಈ ಸೌಲಭ್ಯ ಬಳಸಿಕೊಳ್ಳಬಹುದು. ಈ 6 ತಿಂಗಳಲ್ಲಿ ನೀವು ಎಷ್ಟೇ ರಜೆ ಹಾಕಿದರೂ ಸ್ಯಾಲರಿಯಲ್ಲಿ ಯಾವುದೇ ಕಡಿತವಾಗಲ್ಲ. ಸಂಪೂರ್ಣ ಸ್ಯಾಲರಿ ನಿಮ್ಮ ಖಾತೆಗೆ ಜಮೆ ಆಗಲಿದೆ. ಪ್ರೀತಿ, ಸಂಗಾತಿ, ಆಪ್ತರಿದ್ದರೆ ಜೀವನ ಖುಷಿಯಾಗಿ ಕಳೆಯಲು ಸಾಧ್ಯ. ಈ ಖುಷಿ ಇದ್ದರೆ ಮಾತ್ರ ಕಚೇರಿಯಲ್ಲಿ ಕೆಲಸ ಮಾಡಲು ಸಾಧ್ಯ ಎಂದು ವೈಟ್‌ಲೈನ್ ಗ್ರೂಪ್ ಹೇಳಿದೆ.

ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಂಗಾತಿಗಳು ಡೇಟ್‌ಗೆ ಕರೆದರೆ ಅಯ್ಯೋ ಕೆಲಸ ಎಂದು ಕೊರಗಬೇಕಿಲ್ಲ. ಟಿಂಡರ್ ಲೀವ್ ಅಪ್ಲೈ ಮಾಡಿದರೆ ಸಾಕು, ಉಳಿದಿದ್ದೆಲ್ಲವೂ ಕಂಪನಿ ನೋಡಿಕೊಳ್ಳಲಿದೆ. ಈ ಟಿಂಡರ್ ರಜೆ ಜಾರಿಗೆ ಮಾಡುವ ಮೊದಲು ಹಲವು ಅಧ್ಯಯವನ್ನು ಕಂಪನಿ ಮಾಡಿದೆ. ಈ ವೇಳೆ ಸಂಗಾತಿ ಜೊತೆ ಡೇಟಿಂಗ್ ಮಾಡುತ್ತಿರುವ, ಸಂಗಾತಿಯೊಂದಿಗೆ ಕಮಿಟ್ ಆಗಿರುವ ವ್ಯಕ್ತಿಗಳು ಹೆಚ್ಚು ಖುಷಿಯಿಂದ ಕೆಲಸ ಮಾಡುತ್ತಾರೆ ಅನ್ನೋ ವರದಿ ಬಂದಿದೆ. ಹೀಗಾಗಿ ಟಿಂಡರ್ ರಜೆ ಜಾರಿಗೆ ತರಲಾಗಿದೆ. ಆದರೆ ಟಿಂಡರ್ ರಜೆ ಪಡೆದು ಡೇಟ್ ಮಾಡಿ ಕೊನೆಗೆ ಬ್ರೇಕ್ ಆಪ್ ಆದರೆ ಮತ್ತೆ ಹೊಸ ಡೇಟಿಂಗ್ ಮಾಡಲು ಅವಕಾಶವಿದೆಯಾ ಅನ್ನೋ ಕುರಿತು ಈ ಕಂಪನಿ ಸ್ಪಷ್ಟಪಡಿಸಿಲ್ಲ.

ಡೇಟ್‌ ನಿರಾಕರಿಸಿದ ಹುಡುಗಿ, ಹುಡುಗನ ಬಂಧನಕ್ಕೆ ಬಂದವರು ಹುಡುಗಿ ಅರೆಸ್ಟ್‌ ಮಾಡಿದ್ರು! ಲವ್ ಸ್ಟೋರಿಗೆ ಟ್ವಿಸ್ಟ್
 

click me!