ಮದುವೆಯಾದ್ರೂ ಪರವಾಗಿಲ್ಲ, ಮುದುಕನಾದ್ರೂ ಓಕೆ : ಬಾಯ್‌ಫ್ರೆಂಡ್ ಹುಡುಕಾಟದಲ್ಲಿ ಮಾದಕ ಚೆಲುವೆ!

Published : Sep 03, 2024, 01:34 PM IST
ಮದುವೆಯಾದ್ರೂ ಪರವಾಗಿಲ್ಲ, ಮುದುಕನಾದ್ರೂ ಓಕೆ : ಬಾಯ್‌ಫ್ರೆಂಡ್ ಹುಡುಕಾಟದಲ್ಲಿ ಮಾದಕ ಚೆಲುವೆ!

ಸಾರಾಂಶ

30 ವರ್ಷದ ಯುವತಿಯೊಬ್ಬರು ಸಿಂಗಲ್ ಆಗಿರುವುದರಿಂದ ಡೇಟಿಂಗ್ ಕಷ್ಟ ಎಂದು ಹೇಳಿಕೊಂಡಿದ್ದಾಳೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ  ಹಂಚಿಕೊಂಡಿರುವ  ವಿಡಿಯೋ ವೈರಲ್ ಆಗಿದೆ.  ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ನಾವು ಎಲ್ಲರಂತೆ ಪ್ರಿಯಕರ/ಪ್ರೇಯಸಿ ಜೊತೆ ಸುತ್ತಾಡಬೇಕು. ಡೇಟಿಂಗ್ ಹೋಗಬೇಕು ಅಂತೆಲ್ಲಾ ಆಸೆಪಡ್ತಾರೆ. ಆದ್ರೆ ಅವರ ಜೀವನದಲ್ಲಿ ಗರ್ಲ್‌ ಫ್ರೆಂಡ್, ಬಾಯ್‌ ಫ್ರೆಂಡ್ ಗಳೇ ಇರಲ್ಲ. ಇದನ್ನು ಗಮನಿಸಿಯೇ ಹಲವು ಡೇಟಿಂಗ್ ಆಪ್‌ಗಳು ಬಂದಿವೆ. ಇಲ್ಲಿ ನೀವು ಅಪರಿಚಿತರ ಜೊತೆಯಲ್ಲಿ ಡೇಟ್‌ಗೆ ಹೋಗಬಹದು. 30 ವರ್ಷದ ಯುವತಿ, ನಾನು ಇನ್ನು ಸಿಂಗಲ್. ಹಾಗಾಗಿ ಒಳ್ಳೆಯ ಪಾರ್ಟನರ್‌ ಹುಡುಕಾಟದಲ್ಲಿದ್ದೇನೆ ಎಂದು ಹೇಳಿಕೊಂಡಿದ್ದಾಳೆ. ಆಸ್ಟೇಲಿಯಾದ ಫರ್ಥ್ ನಿವಾಸಿಯಾಗಿರುವ ಡೈಶಾ ಡೇಲ್ ಎಂಬ ಯುವತಿ ಬಾಯ್‌ಫ್ರೆಂಡ್ ಹುಡುಕಾಟದಲ್ಲಿದ್ದಾಳೆ.  ವಯಸ್ಸು ಆಗ್ತಿದೆ, ಯಾರೂ ಲೈಫ್ ಪಾರ್ಟನರ್ ಇಲ್ಲವಾ ಎಂದು ಜನರು ನನಗೆ ಟಾಂಗ್ ಕೊಡುತ್ತಿರುತ್ತಾರೆ ಎಂದು ಡೈಶಾ  ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾಳೆ. ಡೈಶಾ ಇನ್‌ಸ್ಟಾಗ್ರ್ರಾಂದಲ್ಲಿ ಆಕ್ಟಿವ್ ಆಗಿದ್ದು, ರೀಲ್ಸ್ ಮತ್ತು ಫೋಟೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾಳೆ.

ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಪೋಸ್ಟ್ ಮಾಡಿಕೊಂಡಿರುವ ಡೈಶಾ, 30ನೇ ವಯಸ್ಸಿನಲ್ಲಿ ಒಂಟಿಯಾಗಿರುವ ಕಾರಣ, ಯಾರು ನನ್ನ ಜೊತೆ ಡೇಟ್ ಮಾಡಲ್ಲ ಎಂದಿದ್ದಾಳೆ. ಅಡಲ್ಟ್ ಕಂಟೆಂಟ್ ಕ್ರಿಯೇಟರ್ ಆಗಿರುವ ಡೈಶಾ ಇದೀಗ ಜೀವನ ಸಂಗಾತಿಯ ಹುಡುಕಾಟದಲ್ಲಿದ್ದಾಳೆ. ನನ್ನ ವಯಸ್ಸಿನ ಕಾರಣ ಯಾರೂ ನನ್ನ ಜೊತೆ ಡೇಟ್‌ಗೆ ಬರಲ್ಲ. ನಾನಿನ್ನೂ ಸಿಂಗಲ್ ಅಂದ್ರೆ ಯಾರೂ ನಂಬಲ್ಲ. ಕೆಲವರು ನನ್ನ ವಯಸ್ಸನ್ನ ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಾರೆ ಎಂದು ಡೈಶಾ ಹೇಳಿಕೊಂಡಿದ್ದಾಳೆ. 

ಕೆಲ ವಿವಾಹಹಿತ ಪುರುಷರು ಮತ್ತು ಯುವಕರು ಬರುತ್ತಾರೆ. ಆದ್ರೆ ಯಾರೂ ಸಂಬಂಧವನ್ನು ಮುಂದುವರಿಸಲು ಇಷ್ಟಪಡಲ್ಲ. ಕೇವಲ ನನ್ನ ಜೊತೆ ಟೈಂ ಪಾಸ್ ಮಾಡಲು ಬರುತ್ತಾರೆ ಎಂದು ಹೇಳಿಕೊಂಡಿರುವ ವಿಡಿಯೋವನ್ನು ಡೈಶಾ ಶೇರ್ ಮಾಡಿಕೊಂಡಿದ್ದಾಳೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದ ಎಲ್ಲಾ ಪ್ಲಾಟ್‌ಫಾರಂಗಳಲ್ಲಿ ವೈರಲ್ ಆಗುತ್ತಿದೆ. ಹುಡುಗನಿಗೆ ಡೈಶಾ ಯಾವುದೇ ಕಂಡೀಷನ್‌ಗಳನ್ನು ಹಾಕಿಲ್ಲ.ಕೆಲವರು ತಮ್ಮದೇ ಆದ ಅಭಿಪ್ರಾಯಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಕಾಂಡೋಮ್ ಬಳಕೆ ಬಗ್ಗೆ ಮಹತ್ವದ ಸರ್ವೇ ನಡೆಸಿದ ಎಚ್ಚರಿಕೆ ಸಂದೇಶ ಕೊಟ್ಟ ವಿಶ್ವ ಆರೋಗ್ಯ ಸಂಸ್ಥೆ!

ನೀವು ಹೇಳಿದ ಮಾತು ತುಂಬಾ ಸತ್ಯ. ನನಗೀಗ 54 ವರ್ಷ. ನಿಮ್ಮ ಮಾತುಗಳನ್ನು ನಾನು  ಖಂಡಿತವಾಗಿ ಒಪ್ಪಿಕೊಳ್ಳುತ್ತೇನೆ ಎಂದು ಓರ್ವ ಬಳಕೆದಾರ ಕಮೆಂಟ್ ಮಾಡಿದ್ದಾನೆ. ವಯಸ್ಸು ಆಗುತ್ತಿದ್ದಂತೆ ಜನರು ಸಿಂಗಲ್ ಆಗಿರಲು ಇಷ್ಟಪಡಲ್ಲ. ತಮ್ಮದೇ ಆದ ಸಂಸಾರವನ್ನು ಕಟ್ಟಿಕೊಳ್ಳಲು ಬಯಸುತ್ತಾರೆ. ಅದೇ ರೀತಿ ಡೈಶಾ ಸಹ ಬಯಸುತ್ತಿರಬಹುದು. ಆಕೆಗೆ ಒಳ್ಳೆಯ ಜೀವನ ಸಂಗಾತಿ ಸಿಗಲಿ ಎಂದ ನಾವೆಲ್ಲರೂ ಹಾರೈಸೋಣ. ಯಾರಾದರೂ ಇಲ್ಲಿಯೇ ಅಪ್ಲಿಕೇಶನ್ ಹಾಕಬಹುದು ಎಂದು ಬಳಕೆದಾರರು ಕಮೆಂಟ್ ಮಾಡಿದ್ದಾರೆ. 

ಡೈಶಾ ಡೇಲ್ ಇನ್‌ಸ್ಟಾಗ್ರಾಂನಲ್ಲಿ ಅಪಾರ ಸಂಖ್ಯೆಯಲ್ಲಿ ಫಾಲೋವರ್ಸ್ ಗಳನ್ನು ಹೊಂದಿದ್ದು, ಅತಿ ಹೆಚ್ಚು ಅಡಲ್ಟ್ ಕಂಟೆಂಟ್ ಅಪ್ಲೋಡ್ ಮಾಡುತ್ತಿರುತ್ತಾಳೆ. ಇತ್ತೀಚೆಗೆ ಓರ್ವನ ಜೊತೆ ಡೇಟ್‌ಗೆ ಹೋಗಿದ್ದ ಡೈಶಾ, ಆತನೊಂದಿಗೆ ಅಡಲ್ಟ್ ವಿಷಯಗಳ ಬಗ್ಗೆಯೇ ಮಾತನಾಡಿದ್ದಳು. ಜೊತೆಯಾಗಿ ಕಳೆದ ಖಾಸಗಿ ಕ್ಷಣಗಳನ್ನು ರೆಕಾರ್ಡ್ ಮಾಡಿಕೊಳ್ಳಲಾ ಎಂದು ಡೈಶಾ ಕೇಳಿದ್ದಳು. ಈ ಹಿಂದೆಯೂ ಡೈಶಾ ಡೇಲ್ ತನ್ನ ವಿಚಿತ್ರ ಹೇಳಿಕೆಗಳಿಂದಲೇ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದಳು.

ಹೋಟೆಲ್‌ನಲ್ಲಿ ಪುರುಷನ ಖಾಸಗಿ ಭಾಗಕ್ಕೆ ಕಚ್ಚಿದ ಚೇಳು; ನನ್ನ ಜೀವನವೇ ಹಾಳಾಯ್ತು ಅಂತ ಕಣ್ಣೀರಿಟ್ಟ ಪತ್ನಿ!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರೀಲ್ಸ್‌ ನೋಡಿ ನೋಡಿ, ಗಂಡ ಮಕ್ಕಳ ಬಿಟ್ಟು ಸೋಶಿಯಲ್ ಮೀಡಿಯಾ ಗೆಳೆಯನಿಗಾಗಿ ಬಸ್ ಹತ್ತಿದ ಮಹಿಳೆ
ಕುಬೇರನ ಸಂಪತ್ತು ತರುವ ಡಿಫರೆಂಟ್‌ ಹೆಸರು ನಿಮ್ಮ ಮಗನಿಗೂ ಇಡಬಹುದು!