
ಪ್ರೇಮಿಗಳ ನಡುವೆ ಜಗಳ, ಕೋಪ- ತಾಪ, ಮುನಿಸು ಎಲ್ಲವೂ ಮಾಮೂಲು. ಎಷ್ಟೋ ಬಾರಿ ಮಾಡಿದ ತಪ್ಪನ್ನು ಕ್ಷಮಿಸುವಂತೆ ಪ್ರೇಮಿಗಳು ಪರಸ್ಪರ ಕೇಳಿಕೊಳ್ಳಲು ವಿಶಿಷ್ಟ ರೀತಿಯ ಮಾರ್ಗವನ್ನು ಅನುಸರಿಸುವುದು ಉಂಟು. ಅದರಲ್ಲಿಯೂ ಪ್ರೇಮಿ ತನ್ನ ಪ್ರೇಯಸಿಗೆ ಕ್ಷಮೆ ಕೇಳಲು ಒಳ್ಳೊಳ್ಳೆ ಉಡುಗೊರೆ ತರುವುದು, ಬಣ್ಣ ಬಣ್ಣದ ಮಾತುಗಳಿಂದ ಮೋಡಿ ಮಾಡುವುದು ಎಲ್ಲವೂ ನಡೆದೇ ಇರುತ್ತದೆ. ಅವುಗಳಂತೆಯೇ ಪ್ರಿಯಕರನ (Lovers) ಮನವೊಲಿಸಲು ಪ್ರಿಯತಮೆ ಹಲವು ವಿಧಾನಗಳನ್ನು ಅನುಸಿರುವುದು ಇದೆ. ಆದರೆ ಇವೆಲ್ಲವುಗಳಿಗಿಂತಲೂ ಭಿನ್ನವಾದ ಕ್ಷಮೆ ಕೋರಿಕೆ ವಿಚಾರವೊಂದು ಸಾಮಾಜಿಕ ಜಾತಲಾಣದಲ್ಲಿ ಸಕತ್ ವೈರಲ್ ಆಗಿದ್ದು, ಇದನ್ನು ನೋಡಿದವರು ಬಿದ್ದೂ ಬಿದ್ದೂ ನಗುವಂತಾಗಿದೆ. ಅಷ್ಟಕ್ಕೂ ಇದು ನಡೆದಿರುವುದು ಉತ್ತರ ಪ್ರದೇಶದ ನೋಯ್ಡಾದಲ್ಲಿ.
ತನ್ನ ಬಗ್ಗೆ ಮುನಿಸಿಕೊಂಡಿರುವ ಗೆಳೆಯನನ್ನು ಸಮಾಧಾನಪಡಿಸಲು ಗೆಳತಿ ಒಂದು ಕುತೂಹಲದ ಮಾರ್ಗ ಕಂಡುಕೊಂಡಿದ್ದಾಳೆ. ಅದೇನೆಂದರೆ, ನಡುರಸ್ತೆಯಲ್ಲಿ ಜಾಹೀರಾತು ಫಲಕ ಹಾಕಿದ್ದಾಳೆ. ಇದರ ಮೇಲೆ 'I am sorry Sanju' ಎಂದು ಬರೆಯಲಾಗಿದೆ. ಈ ಐ ಆಮ್ ಸಾರಿ ಸಂಜು' ಎಂಬ ವಿಲಕ್ಷಣ ಕ್ಷಮಾಪಣೆಯ ಫಲಕ ಜನರ ಕೇಂದ್ರಬಿಂದುವಾಗಿದೆ. ಜಾಹೀರಾತು ಫಲಕವು ಟ್ವಿಟ್ಟರ್ (Twitter) ಬಳಕೆದಾರರನ್ನು ರಂಜಿಸಿದೆ. ಕೆಳಗಡೆ ನಿನ್ನ ಸುಷ್ ಎಂದು ಬರೆಯಲಾಗಿದೆ. ಸಂಜು ಯಾರು ಮತ್ತು ಕ್ಷಮೆಯಾಚಿಸಲು ಅವರು ಏನು ಮಾಡಿದರು ಎಂದು ಲೆಕ್ಕಾಚಾರ ಮಾಡಲು ಪ್ರಯತ್ನಿಸುತ್ತಿದ್ದಾರೆ. ಅಷ್ಟೇ ಅಲ್ಲ ಫಲಕದಲ್ಲಿ ಗೆಳತಿ ತನ್ನ ಹೃದಯದ ಗುಟ್ಟನ್ನೂ ಬಹಿರಂಗ ಪಡಿಸಿದ್ದಾಳೆ. ನಾನು ನಿನ್ನನ್ನು ಎಂದಿಗೂ ನೋಯಿಸುವುದಿಲ್ಲ ಎಂದು ಹೋರ್ಡಿಂಗ್‌ನಲ್ಲಿ ಬರೆದಿದ್ದಾಳೆ.
ವಿಶೇಷವೆಂದರೆ ಗೆಳತಿ ತನ್ನ ಬಾಲ್ಯದ ಚಿತ್ರವನ್ನು ಹೋರ್ಡಿಂಗ್‌ನಲ್ಲಿ (Hoarding) ಹಾಕಿದ್ದಾಳೆ. ಈ ಜಾಹೀರಾತು ಫಲಕವು ನೋಯ್ಡಾದ ಜನನಿಬಿಡ ರಸ್ತೆಯಲ್ಲಿದೆ ಮತ್ತು "ನನ್ನನ್ನು ಕ್ಷಮಿಸಿ ಸಂಜು" ಎಂಬ ಪದಗಳೊಂದಿಗೆ ಇಬ್ಬರು ಮಕ್ಕಳ ಫೋಟೋವನ್ನು ಹಾಕಲಾಗಿದೆ. ನಾನು ನಿನ್ನನ್ನು ಇನ್ನೆಂದಿಗೂ ನೋಯಿಸುವುದಿಲ್ಲ, ನಿನ್ನ ಸುಶ್” ಎಂದು ಕೆಳಗೆ ಬರೆಯಲಾಗಿದೆ. ನೋಯ್ಡಾ ಸೆಕ್ಟರ್ 125 ಓಖ್ಲಾ ಪಕ್ಷಿಧಾಮದ ಸುತ್ತ ಈ ಹೋರ್ಡಿಂಗ್ ಅಳವಡಿಸಲಾಗಿದೆ. ಆದರೆ ನೋಯ್ಡಾ ಪ್ರಾಧಿಕಾರದಿಂದ ಈ ಬಗ್ಗೆ ಇದುವರೆಗೆ ಯಾವುದೇ ಹೇಳಿಕೆ ಹೊರಬಿದ್ದಿಲ್ಲ. ಹಾಗೆಯೇ ಹೋರ್ಡಿಂಗ್ ಹಾಕಿದ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಹಲವು ದಿನಗಳಿಂದ ಜಾಹೀರಾತು ಫಲಕ ಎದ್ದಿದ್ದು, ಟ್ವಿಟರ್ ಬಳಕೆದಾರರ ಗಮನ ಸೆಳೆದಿದೆ. ಕೆಲವು ಬಳಕೆದಾರರು ಬಿಲ್‌ಬೋರ್ಡ್‌ನಿಂದ ವಿನೋದಗೊಂಡಿದ್ದಾರೆ. ಸಂಜು ಯಾರು ಮತ್ತು ಕ್ಷಮೆಯಾಚನೆಗೆ ಅರ್ಹರಾಗಲು ಅವರು ಏನು ಮಾಡಿದರು ಎಂದು ಲೆಕ್ಕಾಚಾರ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇನ್ನು ಕೆಲವರು ಈ ಜಾಹೀರಾತು ಫಲಕವು ನಿಜವಾದ ಕ್ಷಮೆಯಾಚನೆಯೇ ಅಥವಾ ತಮಾಷೆಯೇ ಎಂದು ಆಶ್ಚರ್ಯ ಪಡುತ್ತಿದ್ದಾರೆ.
ಇದಕ್ಕೆ ಥಹರೇವಾರಿ ಕಮೆಂಟ್ಗಳು ಬರುತ್ತಿವೆ. 'ನನ್ನ ಬಗ್ಗೆ ಇಂತಹ ಪ್ರೀತಿಯನ್ನು ವ್ಯಕ್ತಪಡಿಸಿದ ಆಕೆ ಯಾರು? ಎಂದು ಒಬ್ಬ ತಮಾಷೆ ಮಾಡಿದರೆ, ಈ ಸಂಜು ಯಾರೆಂದು ಹುಡುಕಬೇಕು ಎಂದಿದ್ದಾನೆ ಇನ್ನೊಬ್ಬ, ನನ್ನ ಹೆಸರು ಕೂಡ ಸಂಜುನೇ, ಆದರೆ ಸುಷ್ (Sush) ಯಾರೆಂದು ಗೊತ್ತಿಲ್ಲ ಎಂದು ತಮಾಷೆ ಮಾಡಿದ್ದಾನೆ. 2018 ರಲ್ಲಿ ಮಹಾರಾಷ್ಟ್ರದ ಪುಣೆ ನಗರದ ಪಿಂಪ್ರಿ ಚಿಂಚ್‌ವಾಡ್‌ನ ಬೀದಿಗಳಲ್ಲಿ 'ಶಿವ ಐ ಆಮ್ ಸಾರಿ' ಎಂದು ಬರೆದ ಹೋರ್ಡಿಂಗ್‌ಗಳು ಕಂಡುಬಂದಿದ್ದವು. ಅದೇ ರೀತಿ 2016ರಲ್ಲಿ 'ಸೋನಂ ಗುಪ್ತಾ ಬೇವಫಾ ಹೈ' ಎಂಬ ಸಂದೇಶವಿರುವ 10 ರೂಪಾಯಿ ನೋಟಿನ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಹೀಗೆ ಫಲಕಗಳು, ನೋಟುಗಳ ಮೇಲೆ ಬರೆಯುವ ಹೃದಯದ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್ ಆಗುತ್ತಲೇ ಇರುತ್ತವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.