Friendship Day: ಎಲ್ಲರನ್ನೂ ಒಂದಾಗಿಸುವ ಸ್ನೇಹಕ್ಕೆಲ್ಲಿ ಜಾತಿ, ಧರ್ಮದ ಬೇಲಿ?

By Suvarna News  |  First Published Jul 22, 2023, 2:47 PM IST

ಸ್ನೇಹಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಪ್ರತಿಯೊಬ್ಬರ ಜೀವನದಲ್ಲೂ ಗೆಳೆಯರಿರ್ತಾರೆ. ಈ ಗೆಳೆತನವನ್ನು ಸಂಭ್ರಮಿಸಲು ದಿನವೊಂದಿದೆ. ವಿಶ್ವ ಮಟ್ಟದಲ್ಲಿ ಸ್ನೇಹಿತರ ದಿನ ಆಚರಣೆ ಯಾವಾಗ ಎನ್ನುವ ಮಾಹಿತಿ ಇಲ್ಲಿದೆ.
 


ಪ್ರೀತಿ, ಪ್ರೇಮ, ಮಮತೆ, ಕಾಳಜಿ ಎಲ್ಲವಲ್ಲೂ ತೋರಿಸುವ ಒಂದೇ ಒಂದು ಸಂಬಂಧ ಎಂದರೆ ಅದು ಸ್ನೇಹ. ಸ್ನೇಹ ಅತ್ಯಂತ ಪರಿಶುದ್ಧವಾಗಿರುತ್ತದೆ. ಪರಿಶುದ್ಧ ಈ ಸ್ನೇಹದ ದಿನವನ್ನು ಪ್ರಪಂಚದಾದ್ಯಂತ ಜುಲೈ 30 ರಂದು ಆಚರಿಸಲಾಗುತ್ತದೆ. ಸ್ನೇಹಕ್ಕೆ ಯಾವುದೇ ಜಾತಿ ಭೇದದ ಹಂಗು ಇರುವುದಿಲ್ಲ. ಸ್ನೇಹದ ಮೂಲಕವೇ ಇಂದು ಅನೇಕ ಸಮುದಾಯಗಳು ಒಂದಾಗಿವೆ.

ಫ್ರೆಂಡ್ ಶಿಪ್ ಡೇ (Friendship Day) ಆಚರಣೆಯ ಮೂಲ ಉದ್ದೇಶ: ಫ್ರೆಂಡ್‌ಶಿಪ್ ಆಚರಣೆಯ ಮೂಲಕ ಜನರಲ್ಲಿ ಸಮನ್ವಯ, ತಿಳುವಳಿಕೆ, ಸಹಕಾರದ ಮೂಲ ಕಲ್ಪನೆಯನ್ನು ಮೂಡಿಸುವುದೇ ಮೂಲ ಉದ್ದೇಶವಾಗಿದೆ. ಈ ಮೂಲಕ ಜನರನ್ನು ಜಾತಿ, ಧರ್ಮ, ಭಾಷೆ, ರಾಜಕೀಯ ಮುಂತಾದವುಗಳ ಆಧಾರದ ಮೇಲೆ ಪ್ರತ್ಯೇಕಿಸಬಾರದು ಎಂದು ಅವರಿಗೆ ಮನವರಿಕೆ ಮಾಡಿಕೊಡುವುದಾಗಿದೆ.

Latest Videos

undefined

Zodiac Sign: ಹೆಂಡ್ತಿಯನ್ನು ಸದಾ ರೇಗಿಸ್ತಾರಲ್ಲ, ಆ ಗಂಡಸರ ರಾಶಿ ಇವು!

ಸ್ನೇಹದ ಹೆಸರಿನಲ್ಲಿ ಬೇರೆ ಬೇರೆ ಜಾತಿಯ ಜನರು ಒಂದಾಗಿರುವ ಅನೇಕ ಉದಾಹರಣೆಗಳನ್ನು ನಾವು ನಿತ್ಯದ ಜೀವನದಲ್ಲಿ ನೋಡುತ್ತೇವೆ. ಒಬ್ಬ ಹಿಂದು, ಮುಸ್ಲಿಂ ಅಥವಾ ಕ್ರಿಶ್ಚಿಯನ್ ಧರ್ಮದವನೊಂದಿಗೆ ಸ್ನೇಹವನ್ನು ಹೊಂದಿರುತ್ತಾನೆ. ಇದು ಅವರಲ್ಲಿ ಜಾತಿ ಮತದ ಬೇಧವನ್ನು ತೊಡೆದುಹಾಕುತ್ತದೆ. ಪರಸ್ಪರ ಸಹಾಯ, ಸಹಕಾರದ ಗುಣಗಳು ಗೆಳೆತನದಿಂದಲೇ ಹುಟ್ಟುತ್ತದೆ.

ಗೆಳೆಯ ಗೆಳತಿಯರು ಫ್ರೆಂಡ್ ಶಿಪ್ ಬ್ಯಾಂಡ್ (Band) ಗಳನ್ನು ಪರಸ್ಪರ ಕಟ್ಟಿಕೊಳ್ಳುವ ಮೂಲಕ ಫ್ರೆಂಡ್ ಶಿಪ್ ಡೇ ಸೆಲೆಬ್ರೇಷನ್ ನಡೆಯುತ್ತದೆ. ಒಬ್ಬ ಒಳ್ಳೆಯ ಸ್ನೇಹಿತನಾದವನು ತನ್ನ ಗೆಳೆಯನ ಎಲ್ಲ ಕಷ್ಟ ನೋವುಗಳಿಗೆ ಹೆಗಲಾಗಿರುತ್ತಾನೆ. ಹಾಗೆಯೇ ಉತ್ತಮ ಸ್ನೇಹಿತ ಒಳ್ಳೆಯ ಮಾರ್ಗದರ್ಶಕನೂ ಹೌದು. ತನ್ನ ಸ್ನೇಹಿತ ಕೆಟ್ಟ ಕೆಲಸವನ್ನು ಮಾಡಿದಾಗ ಆತನಿಗೆ ತಪ್ಪಿನ ಅರಿವನ್ನು ಮಾಡಿಸುವುದು ಕೂಡ ಒಳ್ಳೆ ಸ್ನೇಹಿತನ ಕರ್ತವ್ಯವಾಗಿರುತ್ತದೆ. 

ಬಣ್ಣ ಕಳೆದು ಕೊಂಡ ದಾಂಪತ್ಯಕ್ಕೆ ರೀ ಪೇಂಟಿಂಗ್ ಮಾಡೋದು ಹೇಗೆ? ಅಂಥವರಿಗೆ ಟಿಪ್ಸ್ ಇಲ್ಲಿವೆ

ಸ್ನೇಹ ಜನರನ್ನು ಒಂದುಗೂಡಿಸುತ್ತದೆ : ಈಗಿನ ಯುವಜನತೆ ಫ್ರೆಂಡ್ ಶೀಪ್ ಡೇ ಯನ್ನು ಬಹಳ ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡ್ತಾರೆ. ಕಾಫಿ ಹ್ಯಾಂಗ್ ಔಟ್, ಸಂಗೀತ ಕಚೇರಿ, ಪಾರ್ಟಿ ಅಥವಾ ಮಾಲ್ ಗಳಿಗೆ ಹೋಗುವುದು ಅಥವಾ ಸ್ನೇಹಿತರ ಜೊತೆ ಊಟ ಮಾಡುವುದರ ಮೂಲಕ ಸ್ನೇಹ ದಿನವನ್ನು ಸೆಲೆಬ್ರೇಟ್ ಮಾಡುತ್ತಾರೆ. ಇಂತಹ ಸಣ್ಣ ಆಚರಣೆಗಳೇ ಜನರನ್ನು ಒಂದುಗೂಡಿಸುತ್ತದೆ.

ಎಲ್ಲೆಲ್ಲಿ ಯಾವಾಗ ಸ್ನೇಹ ದಿನವನ್ನು ಆಚರಿಸುತ್ತಾರೆ : 1958 ರಲ್ಲಿ ಅಂತರಾಷ್ಟ್ರೀಯ ನಾಗರಿಕ ಸಂಸ್ಥೆ ವರ್ಲ್ಡ್ ಫ್ರೆಂಡ್ ಶಿಪ್ ಕ್ರುಸೇಡ್ ಮೊದಲ ಬಾರಿಗೆ ಸ್ನೇಹ ದಿನಾಚರಣೆಯ ಕುರಿತು ವಿಷಯ ಪ್ರಸ್ತಾಪಿಸಿತು. ನಂತರ ಭಾರತದಲ್ಲಿ ಇದನ್ನು ಆಗಸ್ಟ್ ತಿಂಗಳ ಮೊದಲ ಭಾನುವಾರ ಆಚರಿಸಲಾಗುತ್ತದೆ. ಸ್ಪೇನ್ ನಲ್ಲಿ ಫ್ರೆಂಡ್ ಶಿಪ್ ಡೇ ಯನ್ನು ಜುಲೈ 20 ರಂದು, ಬೊಲಿವಿಯಾದಲ್ಲಿ ಜುಲೈ 23 ರಂದು ಮತ್ತು ಫಿನ್ ಲ್ಯಾಂಡ್ ನಲ್ಲಿ ಫೆಬ್ರವರಿ 14 ರಂದು ಫ್ರೆಂಡ್ ಶಿಪ್ ಡೇ ಆಚರಿಸಲಾಗುತ್ತದೆ.

ಇನ್ನೇನು ಫ್ರೆಂಡ್ ಶಿಪ್ ಡೇ ಗೆ ಕೆಲವೇ ದಿನಗಳು ಬಾಕಿ ಇದೆ. ಎಲ್ಲ ಸ್ನೇಹಿತರು ಕೂಡ ತಮ್ಮ ಸ್ನೇಹ ದಿನದ ಆಚರಣೆಯನ್ನು ಹೇಗೆ ಮಾಡಬೇಕೆಂದು ಪ್ಲಾನ್ ಮಾಡಿರ್ತಾರೆ. ಹಾಗೆಯೇ ಯಾವುದೋ ಒಂದು ತಪ್ಪು ಕಲ್ಪನೆಯಿಂದ ಬೇರೆಯಾದ ಸ್ನೇಹಿತರು ಕೂಡ ಈ ಸಂದರ್ಭದಲ್ಲಿ ಹಿಂದಿನದೆಲ್ಲವನ್ನೂ ಮರೆತು ಮತ್ತೆ ಗೆಳೆತನವನ್ನು ಹೊಸದಾಗಿ ಆರಂಭಿಸಲು ಕೂಡ ಫ್ರೆಂಡ್ ಶಿಪ್ ಡೇ ಒಳ್ಳೆಯ ದಿನವಾಗಿದೆ. ಏಕೆಂದರೆ ಒಬ್ಬ ಒಳ್ಳೆಯ ಸ್ನೇಹಿತನನ್ನು ಕಳೆದುಕೊಳ್ಳುವುದು ಬಹಳ ಸುಲಭ. ಅದೇ ಸ್ನೇಹವನ್ನು ಸಂಪಾದಿಸುವುದು ಬಹಳ ಕಷ್ಟ.
 

click me!