Personality Tips: ಒತ್ತಡದಲ್ಲೂ ಕೂಲ್‌ ಆಗಿರ್ಬೇಕಾ? ಈ ಗುಣಗಳನ್ನ ಬೆಳೆಸ್ಕೊಳಿ

By Suvarna News  |  First Published Jul 21, 2023, 4:33 PM IST

ಒತ್ತಡದ ಸನ್ನಿವೇಶಗಳಲ್ಲಿ ಮನಸ್ಸಿನ ಶಾಂತಿ ರಕ್ಷಿಸಿಕೊಳ್ಳುವುದು ಎಲ್ಲರಿಂದಲೂ ಸಾಧ್ಯವಿಲ್ಲ. ಇದಕ್ಕೆ ಕೆಲವು ಗುಣಗಳನ್ನು ಹೊಂದಿರಬೇಕಾಗುತ್ತದೆ. ಯಾವುದೇ ಸಂದರ್ಭದಲ್ಲೂ ಕೂಲ್‌ ಆಗಿರುವವರು ಈ ಗುಣಗಳು ಸಾಮಾನ್ಯವಾಗಿ ಇದ್ದೇ ಇರುತ್ತವೆ.
 


ಒತ್ತಡದ ಸಮಯದಲ್ಲೂ ಮನಸ್ಸಿನ ಶಾಂತಿಯನ್ನು ಕಾಪಾಡಿಕೊಳ್ಳುವುದು ಸವಾಲಿನ ಕೆಲಸ. ಒತ್ತಡ ಉಂಟಾದಾಗ ಬಹಳಷ್ಟು ಜನ ಸಿಡಿಮಿಡಿ ಪ್ರದರ್ಶಿಸುತ್ತಾರೆ. ಬಾಹ್ಯ ಒತ್ತಡವನ್ನು ಮನೆಯಲ್ಲಿ ತೋರ್ಪಡಿಸಿಕೊಳ್ಳುತ್ತಾರೆ. ಕೋಪಿಸಿಕೊಳ್ಳಬಹುದು, ಮಕ್ಕಳ ಮೇಲೆ ರೇಗಬಹುದು. ಅಥವಾ ತೀವ್ರ ಹತಾಶೆ, ನಿರಾಶೆ ವ್ಯಕ್ತಪಡಿಸಬಹುದು. ಒತ್ತಡದ ಸನ್ನಿವೇಶದಲ್ಲಿ ಸಮಾಧಾನ ತಂದುಕೊಂಡು ವಿವೇಚನೆಯಿಂದ ವರ್ತಿಸುವುದು ಕೆಲವೇ ಜನರಿಂದ ಮಾತ್ರ ಸಾಧ್ಯ. ಕೆಲವು ಸನ್ನಿವೇಶಗಳಲ್ಲಿ ತಕ್ಷಣದ ಪ್ರತಿಕ್ರಿಯೆ ನೀಡುತ್ತ ಹೋದರೆ ಪರಿಸ್ಥಿತಿ ಇನ್ನಷ್ಟು ಗಂಭೀರಕ್ಕೆ ತಿರುಗುತ್ತದೆ. ಬದಲಿಗೆ ಸುಮ್ಮನಿದ್ದು ಅವಲೋಕಿಸುವುದು ಸೂಕ್ತ. ಇದಕ್ಕೆ ಸಾಕಷ್ಟು ಪ್ರಬುದ್ಧ ಮನಸ್ಥಿತಿ ಬೇಕಾಗುತ್ತದೆ. ಇನ್ನು ಕೆಲವು ಜನ ಎಂಥದ್ದೇ ಒತ್ತಡದಲ್ಲೂ ದೇವರ ಮೇಲೆ ಭಾರ ಹಾಕಿ ಸುಮ್ಮನಿದ್ದುಬಿಡುತ್ತಾರೆ. ಗೊಂದಲ ಸನ್ನಿವೇಶಗಳಲ್ಲಿ ಹೆಚ್ಚು ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ. ಒಂದು ರೀತಿಯ ವಿರಕ್ತ ಮನಸ್ಥಿತಿ ಅವರಲ್ಲಿರುತ್ತದೆ. ಇದೂ ಸಹ ಅವರು ಮನಸ್ಸನ್ನು ಕೆಡಿಸಿಕೊಳ್ಳದಿರಲು ನೆರವಾಗುತ್ತದೆ. ಬಿಕ್ಕಟ್ಟಿನ ಸಮಯದಲ್ಲೂ ಶಾಂತತೆ ಕಾಪಾಡಿಕೊಳ್ಳುವ ಮಂದಿಯಲ್ಲಿ ಸಾಮಾನ್ಯವಾಗಿ ಕೆಲವು ಗುಣಗಳನ್ನು ಕಾಣಬಹುದು.

•    ಮಿದುಳಿಗೆ ಶಾಂತಿ (Keep Brain Cool) ನೀಡುವುದು ಹೇಗೆಂದು ಗೊತ್ತಿರುತ್ತದೆ
ಒತ್ತಡವನ್ನು (Stress) ಎದುರಿಸುತ್ತಿರುವ ಸಮಯಗಳಲ್ಲಿ ಮನಸ್ಸಿನ ನೆಮ್ಮದಿಯನ್ನು ಮತ್ತಷ್ಟು ಹಾಳು ಮಾಡುವ ಸೋಷಿಯಲ್‌ ಮೀಡಿಯಾ (Social Media), ಟಿವಿ, ಅನಾರೋಗ್ಯಕರ ಆಹಾರ (Unhealthy Eating) ಸೇವನೆ ಪದ್ಧತಿಯನ್ನು ಕೈಬಿಡುವುದು ಭಾರೀ ಉತ್ತಮ. ಮನಸ್ಸಿನ ಶಾಂತಿ ಕಾಪಾಡಿಕೊಳ್ಳುವ ಜನರಲ್ಲಿ ಈ ಗುಣ ಧಾರಾಳವಾಗಿರುತ್ತದೆ. ಮಾನಸಿಕ ಕ್ಷೇಮಕ್ಕಾಗಿ ಏನು ಮಾಡಬೇಕು ಎನ್ನುವುದು ಅವರಿಗೆ ತಿಳಿದಿರುತ್ತದೆ. ಆ ಸಮಯದಲ್ಲಿ ಮನಸ್ಸಿಗೆ ಅಗತ್ಯ ವಿಶ್ರಾಂತಿಯನ್ನೂ ಅವರು ನೀಡುತ್ತಾರೆ.

Latest Videos

undefined

Personality Tips:ಬದಲಾವಣೆ ಒಪಿಕ್ಕೊಳ್ಳಬಹುದು ಅಂದ್ರೆ ಈ ಗುಣಗಳಿರುತ್ತೆ ನಿಮ್ಮಲ್ಲಿ!

•    ಚರ್ಚೆಗೆ (Discuss) ಮುಂದಾಗುವುದು
ಸಮಸ್ಯೆ ಸೃಷ್ಟಿಸುವಂತಹ ವಿಚಾರಗಳ ಬಗ್ಗೆ ಪ್ರಶ್ನಿಸುವುದು, ಚರ್ಚೆ ಮಾಡುವುದು ಉತ್ತಮ ಮಾರ್ಗ. ಇದರಿಂದ ಯಾವುದು ನಿಮಗೆ ಅಹಿತವೆನಿಸುತ್ತದೆಯೋ ಅದನ್ನು ಹಿತವಾಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಸಮಸ್ಯೆ (Problem) ಬಗ್ಗೆ ಏನಾದರೂ ಯೋಚನೆ ಮಾಡುತ್ತಿರುವ ಬದಲು ಅದಕ್ಕೆ ಸಂಬಂಧಪಟ್ಟರೊಂದಿಗೆ ಚರ್ಚಿಸುವುದು ಭಾರೀ ಒಳ್ಳೆಯದು. ಕಂಫರ್ಟ್‌ (Comfort) ವಲಯದಿಂದ ಹೊರತಾಗಿಯೂ ಯೋಚನೆ ಮಾಡಿದಾಗ ಇದು ಸಾಧ್ಯವಾಗುತ್ತದೆ. ಚರ್ಚೆ ನಡೆಸುವ ಕ್ರಿಯೆಯು ಹೊಂದಾಣಿಕೆಯ (Adjustment) ಮನಸ್ಥಿತಿ (Mentality) ಹೊಂದಿರುವುದನ್ನು ಸೂಚಿಸುತ್ತದೆ. ನಿರೀಕ್ಷೆಗಳ (Expectations) ಭಾರ ಕಡಿಮೆ ಆಗುತ್ತದೆ.

•    ತಮ್ಮ ಮೌಲ್ಯಗಳ (Values) ಪ್ರತಿನಿಧಿ
ಕೆಲವರು ಯಾರೊಂದಿಗೂ ತಮ್ಮನ್ನು ಹೋಲಿಕೆ (Compare) ಮಾಡಿಕೊಳ್ಳುವುದಿಲ್ಲ. ತಮ್ಮ ಹಾದಿ ತಮಗೆ ಎಂಬಂತೆ ಇರುತ್ತಾರೆ. ತಮ್ಮ ಮೌಲ್ಯಗಳನ್ನು ನಂಬಿಕೊಂಡು ಬಂದಿರುತ್ತಾರೆ. ಇಂಥವರಲ್ಲಿ ಗೊಂದಲ ಕಡಿಮೆ. ಹೀಗಾಗಿ, ಒತ್ತಡದ (Stressful) ಸನ್ನಿವೇಶಗಳು ಇವರನ್ನು ಕಾಡುವುದು ಸಹ ಕಡಿಮೆ. ನಾವು ನಮ್ಮನ್ನು ಅರಿತಾಗ ಇದು ಸಾಧ್ಯವಾಗುತ್ತದೆ. ತಾವು ಯಾವುದಕ್ಕೆ ಮೌಲ್ಯ ನೀಡುತ್ತೇವೋ ಅದರಂತೆ ಸಾಗುವುದು, ಅದಕ್ಕೆ ತಕ್ಕಂತೆ ನಿರ್ಧಾರ ಕೈಗೊಳ್ಳುವ ಮೂಲಕ ಜೀವನದ ಹಲವು ಒತ್ತಡದ ಹಂತಗಳನ್ನು ಇವರು ದಾಟುತ್ತಾರೆ. ಇವರಲ್ಲಿ ಇತರರು ಏನು ಹೇಳುತ್ತಾರೆ, ತಮ್ಮನ್ನು ಯಾರಾದರೂ ಬೆಂಬಲಿಸುತ್ತಾರೋ ಇಲ್ಲವೋ ಎನ್ನುವ ಪ್ರಶ್ನೆಗಳಿಗೆ ಆಸ್ಪದ ಇರುವುದಿಲ್ಲ.

Personality Tips: ಭಾರೀ ಬದಲಾವಣೆಗೆ ನಿಮ್ ಮನಸ್ಸು ಸಿದ್ಧವಾಗಿದ್ಯಾ? ಅದನ್ನ ಅರಿಯೋದು ಹೇಗೆ?

•    ತಾಳ್ಮೆಯ (Patience) ಅಭ್ಯಾಸ
“ನನಗೆ ಬಹುಬೇಗ ಕೋಪ (Angry) ಬಂದುಬಿಡುತ್ತದೆ. ತಕ್ಷಣ ಕೋಪ ಮಾಡಿಕೊಳ್ಳುವುದಷ್ಟೆ. ಬಹುಬೇಗ ಅದನ್ನು ಮರೆತುಬಿಡುತ್ತೇನೆʼ ಎಂದು ಹಲವು ತಮ್ಮ ಕೋಪವನ್ನು ಸಮರ್ಥಿಸಿಕೊಳ್ಳುತ್ತಾರೆ. ಆದರೆ, ಅದರಿಂದಾಗುವ ಅನಾಹುತ ಆಗುತ್ತಿರುತ್ತದೆ. ತಾಳ್ಮೆಯಿಂದ ಇರುವುದನ್ನು ಅಭ್ಯಾಸ ಮಾಡಿಕೊಳ್ಳುವುದೂ ಒಂದು ಕಲೆ. ಅದನ್ನು ರೂಢಿಸಿಕೊಂಡವರು ಮನಸ್ಸಿನ ಶಾಂತಿ ಕಾಪಾಡಿಕೊಳ್ಳಬಲ್ಲರು. ಜೀವನದಲ್ಲಿ ಪ್ರಗತಿ ಬೇಕೆಂದರೆ ತಾಳ್ಮೆ ಅಗತ್ಯ. ಅದೊಂದು ಉನ್ನತ ಮೌಲ್ಯ.

•    ಕ್ರಿಯಾಶೀಲತೆ (Creative)
ಸದಾಕಾಲ ಯಾವುದಾದರೊಂದು ಕಾರ್ಯದಲ್ಲಿ ಭಾಗಿಯಾಗುವುದು ಮನಸ್ಸಿನ ಶಾಂತತೆ ಕಾಪಾಡಿಕೊಳ್ಳುವವರ ಲಕ್ಷಣ. ಕ್ರಿಯಾಶೀಲತೆಯಿಂದ ಯೋಚಿಸುವ ಮೂಲಕ ವಿವಿಧ ಕೆಲಸಗಳಲ್ಲಿ ಭಾಗಿಯಾಗುತ್ತಾರೆ. ಇದರಿಂದ ಮೋಜೂ ದೊರೆಯುತ್ತದೆ, ಮನಸ್ಸು ಎಂಗೇಜ್‌ ಆಗಿರುತ್ತದೆ.   
 

click me!