ಲವ್‌ ಅಂದ್ರೆ ನಿಮ್ಗೆ ಇಷ್ಟಾನ, ಕಷ್ಟಾನ, ಭಯಾನ; ಫೋಟೋ ನೋಡಿ ನಿಮ್ ಮನಸ್ಥಿತಿ ತಿಳ್ಕೊಳ್ಳಿ

By Vinutha Perla  |  First Published Jul 11, 2023, 3:09 PM IST

ವ್ಯಕ್ತಿತ್ವ ಅನ್ನೋದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಾ ಹೋಗುತ್ತದೆ. ಅದರಲ್ಲೂ ಸಂಬಂಧಗಳ ವಿಚಾರಕ್ಕೆ ಬಂದಾಗ ಎಲ್ಲರಲ್ಲೂ ಭಿನ್ನ ಸ್ವಭಾವ ಕಾಣಿಸಬಹುದು. ಈ ಫೋಟೋ ನೋಡಿ ನಿಮ್ಮ ಥಿಂಕಿಂಗ್‌ ಸ್ಟೈಲ್ ಬಗ್ಗೆ ಮತ್ತು ನಿಮ್ಮ ಪರ್ಸನಾಲಿಟಿಯ ಬಗ್ಗೆ ತಿಳ್ಕೊಳ್ಳಿ.


ಮನುಷ್ಯನ ಗುಣ, ಸ್ವಭಾವ, ಮಾತು ಎಲ್ಲವೂ ವ್ಯಕ್ತಿತ್ವವನ್ನು ನಿರ್ಧರಿಸುತ್ತೆ. ಆದರೆ ಈ ಪರ್ಸನಾಲಿಟಿ ಎಂಬುದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಾ ಹೋಗುತ್ತದೆ. ಒಬ್ಬರ ಸ್ವಭಾವ ಇನ್ನೊಬ್ಬರಿಗೆ ಇರುವುದಿಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ನಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಬಹುಶಃ ನಾವು ನಾವೇ ಸ್ಪಷ್ಟವಾಗಿ ತಿಳಿದುಕೊಳ್ಳುವುದು ಕಷ್ಟ. ಇನ್ನೊಬ್ಬರ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಸಹ ನಾವು ನಿರ್ಧರಿಸುವುದು ಕಷ್ಟ. ಥಟ್ಟಂತ ಈ ಇಮೇಜ್ ನೋಡಿದಾಗ ನಿಮಗೇನ್ ಕಾಣಿಸುತ್ತೆ. ಅದೇ ನಿಮ್ಮ ವ್ಯಕ್ತಿತ್ವದ ಕುರಿತಾಗಿ ಹಲವು ವಿಚಾರಗಳನ್ನು ತಿಳಿಸುತ್ತೆ. ಈ ಫೋಟೋ ನೋಡಿ ನಿಮ್ಮ ಥಿಂಕಿಂಗ್‌ ಸ್ಟೈಲ್ ಬಗ್ಗೆ ಟೆಸ್ಟ್ ಮಾಡಿ ಮತ್ತು ನಿಮ್ಮ ಪರ್ಸನಾಲಿಟಿಯ ಬಗ್ಗೆ ತಿಳ್ಕೊಳ್ಳಿ.

ಆಪ್ಟಿಕಲ್ ಭ್ರಮೆಗಳು ಸಾಮಾನ್ಯವಾಗಿ ನಮ್ಮ ಗಮನವನ್ನು ಸೆಳೆಯುತ್ತವೆ. ಆದರೆ ಅವು ನಮ್ಮ ಕಣ್ಣುಗಳನ್ನು ಮಾತ್ರ ಮೋಸಗೊಳಿಸುತ್ತವೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ಚಿತ್ರದ (Photo) ಆಚೆಗೆ ಏನಿದೆ ಎಂಬುದು ನಿಜವಾಗಿಯೂ ಮುಖ್ಯವಾಗಿದೆ. ನೀವು ನೋಡುತ್ತಿರುವ ಚಿತ್ರವು ನಿಮ್ಮ ಗುಪ್ತ ದೌರ್ಬಲ್ಯಗಳ ಬಗ್ಗೆ ಆಸಕ್ತಿದಾಯಕ ವಿಷಯಗಳನ್ನು (Interesting facts) ಬಹಿರಂಗಪಡಿಸಬಹುದು. 

Tap to resize

Latest Videos

Optical Illusion: ಫೋಟೋದಲ್ಲಿ ನಿಮಗೇನು ಕಾಣುತ್ತೆ ಅನ್ನೋದು ನಿಮ್ ವ್ಯಕ್ತಿತ್ವದ ಬಗ್ಗೆ ಹೇಳುತ್ತೆ!

ಸಂಬಂಧಗಳ ಕುರಿತು ನಿಮ್ಮ ಮನಸ್ಥಿತಿಯನ್ನು ಬಹಿರಂಗಪಡಿಸುವ ಫೋಟೋ
ಇಲ್ಲಿ ನೀಡಿರುವ ವರ್ಣಚಿತ್ರವು 20ನೇ ಶತಮಾನದ ಆರಂಭದಲ್ಲಿ ಹೊರಹೊಮ್ಮಿದ ಅತಿವಾಸ್ತವಿಕವಾದ ಕಲೆಗೆ ಉತ್ತಮ ಉದಾಹರಣೆಯಾಗಿದೆ. ಇದು ಹಲವಾರು ವಿಚಾರಗಳನ್ನು ಪ್ರತಿನಿಧಿಸುತ್ತದೆ. ಕಲ್ಪನೆ, ಉಪಪ್ರಜ್ಞೆ ಮನಸ್ಸಿನ ಕ್ಷೇತ್ರಗಳನ್ನು ಪರಿಶೋಧಿಸುತ್ತದೆ. ಈ ಭ್ರಮೆಯ ಬಗ್ಗೆ ಆಸಕ್ತಿದಾಯಕ ವಿಷಯವೆಂದರೆ ಈ ಚಿತ್ರ ನಿಮ್ಮ ಸಂಬಂಧಗಳಲ್ಲಿನ (Relationship) ದೋಷಗಳನ್ನು ಬಹಿರಂಗಪಡಿಸುತ್ತದೆ. 'ವಿಷನ್ ಇನ್ ದಿ ಮೌಂಟೇನ್ಸ್' ಎಂಬ ಕಲಾಕೃತಿಯನ್ನು ಉಕ್ರೇನಿಯನ್ ಕಲಾವಿದ ಒಲೆಗ್ ಶುಪ್ಲಿಯಾಕ್ ಅವರು 2012 ರಲ್ಲಿ ರಚಿಸಿದ್ದಾರೆ.

ಚಿತ್ರದಲ್ಲಿ ಹೂಡಿ ಮನುಷ್ಯ, ಜಾಕೆಟ್‌ನಲ್ಲಿರುವ ವ್ಯಕ್ತಿ, ಮೊನಾಲಿಸಾ ಮುಖ, ಗಡ್ಡಧಾರಿ ಮತ್ತು ಬಂಡೆಯ ಮೇಲೆ ಕುಳಿತ ವ್ಯಕ್ತಿ ಸೇರಿದಂತೆ ವಿವಿಧ ಗುಪ್ತ ಪಾತ್ರಗಳಿಂದ ತುಂಬಿದ ಪರ್ವತ ಭೂದೃಶ್ಯವನ್ನು ನೀವು ನೋಡಬಹುದು. ಇದರಲ್ಲಿ ಮೊತ್ತ ಮೊದಲಿಗೆ ನೀವೇನು ಕಾಣುತ್ತೀರಿ ಎಂಬುದು ನಿಮ್ಮ ವ್ಯಕ್ತಿತ್ವವನ್ನು (Personality) ತಿಳಿಸುತ್ತೆ.

Personality Tips: ಬದಲಾವಣೆ ಬೇಕಾದ್ರೆ ನಿಮಗೆ ನೀವೇ ಇಂತಹ ಕ್ಷಮೆಗಳನ್ನ ಕೊಟ್ಕೊಬೇಡಿ

ನೀವು ಮೊದಲು ಏನನ್ನು ನೋಡಿದ್ದೀರಿ?
ಚಿತ್ರವನ್ನು ನೋಡಿದ ತಕ್ಷಣ ನಿಮಗೇನು ಕಾಣುತ್ತದೆ ಎಂಬುದು ನಿಮ್ಮ ವ್ಯಕ್ತಿತ್ವವನ್ನು ತಿಳಿಸುತ್ತದೆ. ನೀವು ಚಿತ್ರದಲ್ಲಿ ಗಡ್ಡಧಾರಿ ವ್ಯಕ್ತಿಯನ್ನು ಮೊದಲು ನೋಡಿದರೆ, ಇದು ನಿಮಗೆ ಸಂಬಂಧದ ಕುರಿತಾಗಿ ಕಡಿಮೆ ನಂಬಿಕೆಯಿದೆ ಎಂಬುದನ್ನು ಸೂಚಿಸುತ್ತದೆ. ಚಿತ್ರದಲ್ಲಿ ಜಾಕೆಟ್‌ನಲ್ಲಿರುವ ವ್ಯಕ್ತಿಯನ್ನು ಮೊದಲು ಗುರುತಿಸುವುದು ಸಂಬಂಧದ ಕುರಿತಾಗಿ ಭಯವನ್ನು (Fear) ಸೂಚಿಸುತ್ತದೆ. ಮೊನಾಲಿಸಾಳ ಮುಖವನ್ನು ಮೊದಲು ನೋಡುವುದು ಎಂದರೆ ನೀವು ಜೀವನದ ಬಗ್ಗೆ ಪ್ರಣಯಭರಿತ ನೋಟವನ್ನು ಹೊಂದಿದ್ದೀರಿ, ಸೌಂದರ್ಯವನ್ನು (Beauty) ಮೆಚ್ಚುತ್ತೀರಿ. ಆದರೆ ಸಂಬಂಧದ ಸಮಸ್ಯೆಗಳನ್ನು ತಪ್ಪಿಸುತ್ತೀರಿ ಎಂಬುದಾಗಿ ಹೇಳುತ್ತದೆ.

ಹೂಡಿಯಲ್ಲಿರುವ ಮನುಷ್ಯನನ್ನು ನೀವು ಮೊದಲು ಗಮನಿಸಿದರೆ, ನಿಮಗೆ ಹೆಚ್ಚು ಕೋಪ ಇದೆ ಎಂದರ್ಥ. ಹೀಗಾಗಿಯೇ ನೀವು ಯಾವಾಗಲೂ ಸಿಟ್ಟು ಕಡಿಮೆಯಾದ ನಂತರ ಮಾತ್ರ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಿ. ಬಂಡೆಯ ಮೇಲೆ ಕುಳಿತಿರುವ ವ್ಯಕ್ತಿಯನ್ನು ಗುರುತಿಸುವ ತೀಕ್ಷ್ಣ ಕಣ್ಣುಗಳಿರುವವರಿಗೆ, ಇದು ತಮ್ಮನ್ನು ಪ್ರತ್ಯೇಕಿಸಿಕೊಳ್ಳುವ ಪ್ರವೃತ್ತಿಯನ್ನು ಸೂಚಿಸುತ್ತದೆ. ನೀವು ಸುತ್ತಲು ಎಷ್ಟೇ ಜನರಿದ್ದರೂ ಒಂಟಿಯಾಗಿರಲು ಇಷ್ಟಪಡುತ್ತೀರಿ. ಏಕಾಂಗಿಯಾಗಿ ಸಮಯ ಕಳೆಯುವುದು ಮುಖ್ಯವಾಗಿದ್ದರೂ, ಪ್ರೀತಿಪಾತ್ರರ ಜೊತೆ ಸಮಯ ಕಳೆಯುವುದು ಸಹ ಮೌಲ್ಯಯುತವಾಗಿದೆ.

ಚಿತ್ರಕಲೆಗೆ ಸಂಬಂಧಿಸಿದಂತೆ ಚರ್ಚಿಸಲಾದ ಮುಖ್ಯ ವ್ಯಕ್ತಿತ್ವ ಪ್ರಕಾರಗಳು ಇವು. ನೀವು ಬೇರೆ ಯಾವುದೇ ವಿಚಾರಗಳನ್ನು ಗಮನಿಸಿದ್ದೀರಾ? ಕೆಳಗಿನ ಕಾಮೆಂಟ್‌ಗಳ ವಿಭಾಗದಲ್ಲಿ ನಮಗೆ ತಿಳಿಸಿ. 

click me!