Viral Video : ಇಷ್ಟೊಂದು ವೀವ್ಸ್ ಪಡೆದಿರೋ ಈ ವಿಡಿಯೋದಲ್ಲಿ ಅಂಥದ್ದೇನಿದೆ?

By Suvarna News  |  First Published Jul 11, 2023, 12:39 PM IST

ಸಾಮಾಜಿಕ ಜಾಲತಾಣದಲ್ಲಿ ಡಾನ್ಸ್ ವಿಡಿಯೋಗಳು ಈಗಿನ ದಿನಗಳಲ್ಲಿ ಹೆಚ್ಚಾಗ್ತಿದೆ. ಮಳೆಯಲ್ಲಿ ಜನರು ಸಿಗ್ಗು ಬಿಟ್ಟು ಕುಣಿಯುತ್ತಿದ್ದಾರೆ. ಈಗ ಮುದ್ದಾಗಿರೋ ಜೋಡಿಯ ವಿಡಿಯೋ ಒಂದು ವೈರಲ್ ಆಗಿದ್ದು, ಅವರನ್ನು ನೋಡಿದ್ರೆ ಕರೀನಾ, ಶಾಹಿದ್ ನೆನಪಾಗುತ್ತೆ.
 


ಮಳೆ ಹಾಗೂ ರೋಮ್ಯಾನ್ಸ್ ಮಧ್ಯೆ ಬಿಡಿಸಲಾಗ ಬಂಧವಿದೆ. ಮಳೆಯಲ್ಲಿ ಜೊತೆಯಲ್ಲಿ ಪ್ರಣಯ ಪಕ್ಷಿಗಳು ಹಾಡಿ, ಕುಣಿಯುತ್ತ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸ್ತಾರೆ. ಜಿಟಿ ಜಿಟಿ ಮಳೆಯಿರಲಿ, ಮೊದಲ ವರ್ಷಧಾರೆಯಿರಲಿ ಇಲ್ಲ ಧಾರಾಕಾರವಾಗಿ ಮಳೆ ಬೀಳ್ತಿರಲಿ, ಮಳೆಯನ್ನಿಷ್ಟಪಡುವ ಜೋಡಿ ಈ ಮಳೆಯಲ್ಲೇ ತಮ್ಮ ಪ್ರೀತಿ ವ್ಯಕ್ತಪಡಿಸಲು ಮುಂದಾಗ್ತಾರೆ. ಬರೀ ಸಿನಿಮಾಗಳಲ್ಲಿ ಮಾತ್ರವಲ್ಲ ನಿಜ ಜೀವನದಲ್ಲೂ ಮಳೆ ಬರ್ತಿದ್ದಂತೆ ರಸ್ತೆಗಿಳಿದು ಡಾನ್ಸ್ ಮಾಡುವ ಜೋಡಿಯನ್ನು ನಾವು ನೋಡ್ಬಹುದು. ಈಗ ಮತ್ತೊಂದು ಜೋಡಿ ಮಳೆಯಲ್ಲಿ ಡಾನ್ಸ್ ಮಾಡಿದ ವಿಡಿಯೋ ವೈರಲ್ ಆಗಿದೆ.

ಬಾಲಿವುಡ್ (Bollywood), ಸ್ಯಾಂಡಲ್ವುಡ್ ಸೇರಿದಂತೆ ಭಾರತದ ಎಲ್ಲ ಭಾಷೆಯ ಬಹುತೇಕ ಸಿನಿಮಾಗಳಲ್ಲಿ ಮಳೆಯಲ್ಲೊಂದು ಹಾಡಿರೋದು ಕಾಮನ್. ಮಳೆ (Rain) ಯಲ್ಲಿ ಮಾಡಿದ ಡಾನ್ಸ್ (Dance), ಹಾಡು ಸೂಪರ್ ಹಿಟ್. ಇದ್ರಲ್ಲಿ ಎರಡು ಮಾತಿಲ್ಲ. ಮಳೆ ಮಧ್ಯೆ ಡಾನ್ಸ್ ಮಾಡಿ ಮನಸ್ಸು ಗೆದ್ದ ಜೋಡಿಯಲ್ಲಿ ಕರೀನಾ ಕಪೂರ್ ಹಾಗೂ ಶಾಹಿದ್ ಕಪೂರ್ ಸೇರಿದ್ದಾರೆ. ಅಭಿಮಾನಿಗಳ ಮನಸ್ಸು ಕದಿಯುವಲ್ಲಿ ಯಶಸ್ವಿಯಾಗಿದ್ದ ಸಿನಿಮಾ  ಜಬ್ ವಿ ಮೆಟ್. ಇದ್ರಲ್ಲಿ ತುಮ್ ಸೇ ಹಿ ಹಾಡಿಗೆ ಕರೀನಾ ಹಾಗೂ ಶಾಹಿದ್ ಕಪೂರ್ ಮಳೆಯಲ್ಲಿ ರೋಮ್ಯಾನ್ಸ್ ಮಾಡಿದ್ದರು. ಈಗ ಕರಿನಾ – ಶಾಹಿದ್ ಡಾನ್ಸ್  ಅನುಸರಿಸಿದ ಜೋಡಿಯೊಂದು ತುಮ್ ಸೇ ಹಿ ಸಾಂಗ್ ಗೆ ಡಾನ್ಸ್ ಮಾಡಿದೆ. ರಸ್ತೆ ಪಕ್ಕದಲ್ಲಿ ಮಳೆ ಬರ್ತಿರೋದನ್ನು ಲೆಕ್ಕಿಸದೆ ಈ ಜೋಡಿ ಹೆಜ್ಜೆ ಹಾಕಿದೆ. ಇದನ್ನು ತುಮ್ ಸೇ ಹಿ ಸಾಂಗ್ ಮರುಸೃಷ್ಟಿ ಎನ್ನಬಹುದು. ಅನು @TheLostFirsbee ಹೆಸರಿನ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ದಿಸ್ ಔರ್ ನಥಿಂಕ್, ದೃಷ್ಟಿ ತಾಗದಿರಲಿ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಜುಲೈ 7ರಂದು ಪೋಸ್ಟ್ ಆದ ಈ ವಿಡಿಯೋಕ್ಕೆ ಈವರೆಗೆ 223.3 ಕೆ ವೀವ್ಸ್ ಸಿಕ್ಕಿದೆ. 555 ಬಾರಿ ರೀ ಟ್ವಿಟ್ ಮಾಡಲಾಗಿದೆ. ಮೂರು ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದು, ಅನೇಕರು ಕಮೆಂಟ್ ಮಾಡಿದ್ದಾರೆ. 

Tap to resize

Latest Videos

ಗಟ್ಟಿಮೇಳದ ಬಾಯ್ ಬಡ್ಕಿ ಅಮೂಲ್ಯನಂತಹ ಹೆಂಡತಿಯ ಬಾಯಿ ಮುಚ್ತಾರೆ ಈ ಚಾಣಾಕ್ಷರು..!

ವಿಡಿಯೋದಲ್ಲಿ ನೋಡುವಂತೆ ಡಾನ್ಸ್ ಮಾಡ್ತಿರುವವರ ಹಿಂದೆ ಅನೇಕ ವಾಹನಗಳು ಹಾದು ಹೋಗುತ್ತಿದೆ. ಜೋಡಿ, ಪಾದಚಾರಿ ಮಾರ್ಗದಲ್ಲಿ ನೃತ್ಯ ಮಾಡುತ್ತಿದ್ದಾರೆ. ತುಮ್ ಸೆ ಹಿ ಹಾಡಿಗೆ ಡಾನ್ಸ್ ಮಾಡ್ತಿರುವ ಜೋಡಿ ನಗ್ತಿರೋದನ್ನು ನೀವು ಕಾಣಬಹುದು. ಸುಂದರ ಹಾಡಿಗೆ ಅಧ್ಬುತವಾಗಿ ಡಾನ್ಸ್ ಮಾಡಿರೋ ಕಾರಣ ವಿಡಿಯೋವನ್ನು ಇಷ್ಟೊಂದು ಬಾರಿ ವೀಕ್ಷಣೆ ಮಾಡಲಾಗಿದೆ.

ವಿಡಿಯೋ ನೋಡಿದ ಕೆಲವರು ಹೊಟ್ಟೆ ಉರಿದುಕೊಂಡಿದ್ದಾರೆ. ಅವರ ಬಳಿ ಏನಿದ್ಯೋ ಅದು ನನಗೆ ಬೇಕು ಎಂದು ಒಬ್ಬರು ಕಮೆಂಟ್ ಮಾಡಿದ್ರೆ ಮತ್ತೊಬ್ಬರು ಎಷ್ಟು ಮುದ್ದಾಗಿದೆ, ನಾನು ಅಳ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಡಾನ್ಸ್ ಮಾಡಿದೋರು ಬೆಸ್ಟ್ ಫ್ರೆಂಡ್, ಗರ್ಲ್ ಫ್ರೆಂಡ್, ಬಾಯ್ ಫ್ರೆಂಡ್ ಅಲ್ಲ ಅಂತ ಇನ್ನೊಬ್ಬರು ಬರೆದ್ರೆ, ಡಾನ್ಸ್ ಮಾಡಿದ ಹುಡುಗಿ ಕೂಡ ಇದನ್ನೇ ಹೇಳಿದ್ದಾಳೆ. ನಾನು ಮತ್ತು ನನ್ನ ಫ್ರೆಂಡ್ ಜೊತೆಯಾಗಿ ಡಾನ್ಸ್ ಮಾಡಿದ್ದೇವೆ ಎಂದು ಆಕೆ ಕಮೆಂಟ್ ಮಾಡಿದ್ದಾಳೆ.

ಸುದೀರ್ಘ 58 ಗಂಟೆ ಚುಂಬಿಸಿ ಗಿನ್ನಿಸ್‌ ವಿಶ್ವ ದಾಖಲೆ ಬರೆದಿದ್ದ ಜೋಡಿ, ಆ ನಂತ್ರ ಸ್ಪರ್ಧೆ ನಡೀತಿಲ್ಲ ಯಾಕೆ?

ಇನ್ನು ಕೆಲವರಿಗೆ ಡಾನ್ಸ್ ಇಷ್ಟವಾಗಿದ್ರೂ ಮಾಡಿದ ಜಾಗ ಇಷ್ಟವಾದಂತೆ ಕಾಣ್ತಿಲ್ಲ. ಫುಟ್ಬಾತ್ ಮೇಲೆ ಡಾನ್ಸ್ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಭಾರತದ ಫುಟ್ಬಾತ್ ಗಳು ಡಾನ್ಸ್ ಮಾಡೋ ಜಾಗ ಅಂತಾ ಮತ್ತೆ ಕೆಲವರು ಹೇಳಿದ್ದಾರೆ. 
ಬಾಲಿವುಡ್ ಹಾಡನ್ನು ಮರುಸೃಷ್ಟಿಸುವ ಅನೇಕ ವಿಡಿಯೋಗಳು ಈಗ ಕಾಣ ಸಿಗ್ತಿವೆ. ಕೆಲ ದಿನಗಳ ಹಿಂದೆ ರಿಮ್‌ಜಿಮ್ ಗಿರೇ ಸಾವನ್ ಹಾಡನ್ನು ಹಿರಿಯ ಜೋಡಿಯೊಂದು ಮರುಸೃಷ್ಟಿ ಮಾಡಿತ್ತು. 
 

This Or Nothing 😭😭❤️
Najar na lge 🧿 pic.twitter.com/OkG6S5dEjG

— Anu. (@theLostFirsbee)
click me!