ಬದಲಾದ ಜೀವನಶೈಲಿ, ಈಗಿನ ವಾತಾವರಣ ಸಂತಾನಕ್ಕೆ ದೊಡ್ಡ ಅಡ್ಡಿಯಾಗಿದೆ. ಸಂತಾನವಿಲ್ಲ ದಂಪತಿ ದಾನಿಗಳ ಮೊರೆ ಹೋಗ್ತಾರೆ. ಆದ್ರೆ ಈ ದಾನಿ ಯಾರಾಗ್ತಾರೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ಸಂಭೋಗದ ಬಗ್ಗೆ ಜನರು ತಿಳಿದುಕೊಳ್ಳೋದು ಸಾಕಷ್ಟಿದೆ. ಅನೇಕರಿಗೆ ಸೆಕ್ಸ್‌ಗೆ ಸಂಬಂಧಿಸಿದಂತೆ ಅನೇಕ ಪ್ರಶ್ನೆಗಳಿರುತ್ತವೆ. ಅದಕ್ಕೆ ಉತ್ತರ ಸಿಗದೆ ಅವರೂ ಗೊಂದಲಕ್ಕೀಡಾಗುತ್ತಾರೆ. ಈಗ್ಲೂ ನಮ್ಮ ದೇಶದಲ್ಲಿ ಮುತ್ತಿಟ್ಟರೆ ಗರ್ಭಧಾರಣೆಯಾಗುತ್ತೆ ಎಂದು ನಂಬುವ ಕೆಲ ಜನರಿದ್ದಾರೆ. ಮಹಿಳೆಯರನ್ನು ಕಾಡುವ ಮತ್ತೊಂದು ಪ್ರಶ್ನೆ ಅಂದ್ರೆ ವೀರ್ಯ ಹೊಕ್ಕಳಿಗೆ ಹೋದ್ರೆ ಗರ್ಭಧಾರಣೆಯಾಗುತ್ತಾ ಎನ್ನುವುದು. ನಾವಿಂದು ಹೊಕ್ಕಳಿಗೆ ವೀರ್ಯ ಬಿದ್ರೆ ಏನಾಗುತ್ತೆ ಹಾಗೂ ಯಾರು ವೀರ್ಯ ದಾನ ಮಾಡಬಹುದು ಎಂಬ ಮಾಹಿತಿಯನ್ನು ನಿಮಗೆ ನೀಡ್ತೇವೆ.
ನೈಸರ್ಗಿಕವಾಗಿ ಸಂಭೋಗ (Intercourse) ಬೆಳೆಸುವ ದಂಪತಿಗೆ ಈ ಪ್ರಶ್ನೆ ಕಾಡೋದು ಹೆಚ್ಚು. ಕಾಂಡೋಮ್ ಬಳಸದೆ ವೀರ್ಯ (Sperm) ವನ್ನು ಹೊರ ಚೆಲ್ಲಿದಾಗ ಸಂಗಾತಿ ಹೊಕ್ಕಳಿನ ಮೇಲೆ ಇದು ಬೀಳುವ ಸಾಧ್ಯತೆ ಇರುತ್ತದೆ. ಹೊಕ್ಕಳಿನ ಮೇಲೆ ಬಿದ್ದ ವೀರ್ಯದಿಂದ ಗರ್ಭಧಾರಣೆಯಾಗುತ್ತಾ ಇಲ್ಲ ಇದ್ರಿಂದ ಮತ್ತೇನಾದ್ರೂ ಸಮಸ್ಯೆಯಿದ್ಯಾ ಎಂಬ ಭಯ ಕಾಡುತ್ತದೆ. ತಜ್ಞರ ಪ್ರಕಾರ, ವೀರ್ಯವನ್ನು ನೋಡಲು ಸಾಧ್ಯವಿಲ್ಲ, ಏಕೆಂದರೆ ಅವು ಸೂಕ್ಷ್ಮದರ್ಶಕವಾಗಿವೆ. ನಿಮ್ಮ ಹೊಕ್ಕಳಿಗೆ ಹೋದ್ರೆ ಏನೂ ಆಗೋಲ್ಲ. ಕ್ಲೀನ್ ಮಾಡಿಕೊಳ್ಳಿ. ನೀವು ಒರೆಸಿಕೊಳ್ಳದಿದಿದ್ರೆ ತಾನಾಗೇ ಒಣಗುತ್ತದೆ. ವೀರ್ಯ ಕೋಶಗಳು ಸಾಯುತ್ತವೆ. ವೀರ್ಯ ಬಿದ್ದಾಗ ಸೋಫಿನಿಂದ ತೊಳೆದುಕೊಂಡಲ್ಲಿ ಜಿಡ್ಡು ಇರೋದಿಲ್ಲ. ನಿಮಗೆ ಇದರಿಂದ ಕಿರಿಕಿರಿಯೂ ಆಗೋಲ್ಲ.
Sex Life : ಬೇಗ ಮಕ್ಕಳನ್ನು ಪಡೆಯೋ ಒತ್ತಡದಲ್ಲಿ ಸೆಕ್ಸ್ ಲೈಫ್ ಹಾಳು ಮಾಡಿಕೊಳ್ತಾರೆ!
ಹೊಕ್ಕಳಿಗೆ ವೀರ್ಯ ಹೋದ್ರೆ ಗರ್ಭಧಾರಣೆ (Pregnancy) ಯಾಗದೆ ಇರಬಹುದು ಆದ್ರೆ ಹೊಟ್ಟೆ ಮೇಲೆ ವೀರ್ಯ ಬೀಳುವ ಮೊದಲೇ ಯೋನಿಯಲ್ಲಿ ಇದು ಸೇರಿದ್ದರೆ ಗರ್ಭಧಾರಣೆ ಅಪಾಯವಿರುತ್ತದೆ. ಹಾಗಾಗಿ ಪ್ರತಿ ಬಾರಿ ಕಾಂಡೋಮ್ ಧರಿಸಿ ಶಾರೀರಿಕ ಸಂಬಂಧ ಬೆಳೆಸುವುದು ಎಲ್ಲ ರೀತಿಯಲ್ಲೂ ಸುರಕ್ಷಿತ ಎನ್ನುತ್ತಾರೆ ತಜ್ಞರು. ಇನ್ನು ವೀರ್ಯವನ್ನು ಯಾರು ದಾನ ಮಾಡಬಹುದು ಎಂಬ ವಿಷ್ಯಕ್ಕೆ ಬರೋದಾದ್ರೆ, ಫಲವತ್ತಾದ ವೀರ್ಯವನ್ನು ಹೊಂದಿರುವ ಪುರುಷ ತನ್ನ ವೀರ್ಯವನ್ನು ಸಂತಾನಹೀನ ದಂಪತಿಗೆ ದಾನ ಮಾಡಬಹುದು.
ಪ್ರತಿಯೊಬ್ಬರೂ ವೀರ್ಯವನ್ನು ದಾನ ಮಾಡಲು ಸಾಧ್ಯವಿಲ್ಲ. ವೀರ್ಯ ದಾನ ಮಾಡುವ ಮೊದಲು ಯಾವುದೇ ಅಪಾಯಗಳಿವೆಯೇ ಎಂದು ಪರೀಕ್ಷಿಸಬೇಕು. ವೀರ್ಯ ದಾನಿಗಳು ಸಂಪೂರ್ಣ ವೈದ್ಯಕೀಯ ತಪಾಸಣೆಗೆ ಒಳಗಾಗಬೇಕಾಗುತ್ತದೆ.
Sex and Love: ಕೆಲವರು ಸೆಕ್ಸ್‌ನಲ್ಲೇ ಪ್ರೀತಿ ಹುಡುಕುತ್ತಾರೆ! ಯಾಕೆ ಹೀಗೆ?
1. ಹೆಚ್ಚಿನ ವೀರ್ಯ ಬ್ಯಾಂಕ್‌ಗಳು 18 ರಿಂದ 39 ವರ್ಷದೊಳಗಿನ ದಾನಿಗಳಿಗೆ ಆದ್ಯತೆ ನೀಡುತ್ತವೆ. ಕೆಲವು ವೀರ್ಯ ಬ್ಯಾಂಕುಗಳು 34 ವರ್ಷಗಳ ಗರಿಷ್ಠ ವಯಸ್ಸಿನ ಮಿತಿಯನ್ನು ನಿಗದಿಪಡಿಸುತ್ತವೆ.
2. ವೀರ್ಯ ದಾನಿಗಳ ಆರೋಗ್ಯ ತಪಾಸಣೆ ವೇಳೆ ದಾನಿಗಳ ಮಾನಸಿಕ ಸಾಮರ್ಥ್ಯವನ್ನು ಸಹ ಗಮನಿಸುತ್ತಾರೆ.
3. ದಾನಿಯ ಆರೋಗ್ಯದ ಜೊತೆ ಕುಟುಂಬದ ಇತಿಹಾಸ ಕೂಡ ಮಹತ್ವ ಪಡೆಯುತ್ತದೆ. ಆನುವಂಶಿಕ ಅಸ್ವಸ್ಥತೆಯನ್ನು ಹೊಂದಿದ್ದರೆ ಆ ವ್ಯಕ್ತಿಯು ವೀರ್ಯವನ್ನು ದಾನವಾಗಿ ಪಡೆಯಲು ಸಾಧ್ಯವಿಲ್ಲ.
4. ವೀರ್ಯ ದಾನಿಗಳು ವೀರ್ಯದ ಗುಣಮಟ್ಟದ ಪರೀಕ್ಷೆಗಳಿಗೆ ಒಳಗಾಗಬೇಕಾಗುತ್ತದೆ. ವೀರ್ಯದ ಸಂಖ್ಯೆಯು ಪ್ರತಿ ಮಿಲಿಲೀಟರ್ ವೀರ್ಯಕ್ಕೆ 15 ಮಿಲಿಯನ್ ಮೀರಬೇಕು. ವೀರ್ಯದ ರಚನೆ, ಆಕಾರವು ಸಾಮಾನ್ಯವಾಗಿರಬೇಕು ಮತ್ತು ಶೇಕಡಾ 40 ಕ್ಕಿಂತ ಹೆಚ್ಚು ವೀರ್ಯವು ಚಲನಶೀಲವಾಗಿರಬೇಕು.
5. ದಾನಿಯ ರಕ್ತದ ಮಾದರಿ ಮತ್ತು ಮೂತ್ರದ ಮಾದರಿಯನ್ನು ಪರೀಕ್ಷಿಸಲಾಗುತ್ತದೆ. ವ್ಯಕ್ತಿಯು ಯಾವುದೇ ಸಾಂಕ್ರಾಮಿಕ ಅಥವಾ ಏಡ್ಸ್, ಹೆಪಟೈಟಿಸ್ B2C ಸೇರಿದಂತೆ ಕೆಲ ಖಾಯಿಲೆ ಹೊಂದಿದ್ದರೆ ಆತನಿಂದ ವೀರ್ಯ ಪಡೆಯಲು ಸಾಧ್ಯವಿಲ್ಲ.
6. ಧೂಮಪಾನ, ಮದ್ಯಪಾನ ಸೇರಿದಂತೆ ಎಲ್ಲ ಚಟಗಳ ಬಗ್ಗೆ ಮಾಹಿತಿ ನೀಡಬೇಕಾಗುತ್ತದೆ. ಅಲ್ಲದೆ ದಾನಿಯು ತನ್ನ ಲೈಂಗಿಕ ಜೀವನದ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಬೇಕು. ಹವ್ಯಾಸ, ಶಿಕ್ಷಣ ಸೇರಿದಂತೆ ಆಸಕ್ತಿಯ ಬಗ್ಗೆಯೂ ಮಾಹಿತಿ ನೀಡಬೇಕು. ಕೆಲ ಆಡಿಯೋ ಹಾಗೂ ವಿಡಿಯೋ ಕ್ಲಿಪ್ ಗಳನ್ನು ನೀಡಬೇಕಾಗುತ್ತದೆ.