
ಅಪ್ಪ ಹಾಗೂ ಮಗಳ ನಡುವಿನ ಪ್ರೀತಿ ಅಮೋಘವಾದುದು, ಮದುವೆಯಾದರೂ ಯಾರ ಮಾತು ಕೇಳದ ಗುಂಡರ ಗೋವಿಯಂತೆ ತಿರುಗುವ ಗಂಡೊಬ್ಬ ಮಗಳು ಹುಟ್ಟುತ್ತಿದ್ದಂತೆ ಸೌಮ್ಯ ಸ್ವಭಾವದ ಅಪ್ಪನಾಗುತ್ತಾನೆ (ಎಲ್ಲರಲ್ಲ). ಯಾರ ಮಾತು ಕೇಳದ ಆತ ಮಗಳ ಪ್ರತಿ ಹೂಂಕಾರಕ್ಕೂ ಹೂವಾಗುತ್ತಾನೆ. ಅನೇಕರು ಮಗಳು ಹುಟ್ಟಿದಾಗ ನನ್ನ ತಾಯಿಯೇ ಮತ್ತೆ ಹುಟ್ಟಿದಳು ಎಂದು ಸಂಭ್ರಮಿಸಿದ ಅಪ್ಪಂದಿರಿದ್ದಾರೆ. ಇಂತಹ ಮಗಳನ್ನು ಮದುವೆ ಮಾಡಿ ಇನ್ನೊಬ್ಬರ ಕೈಗೆ ಇಡುವುದೆಂದರೆ ಅಪ್ಪಂದಿರಿಗೆ ಎಲ್ಲಿಲ್ಲದ ಸಂಕಟ.ನನ್ನ ಮಗಳನ್ನು ಮದುವೆ ಮಾಡಿ ಕೊಡುವ ವೇಳೆ ಜೋರಾಗಿ ಅತ್ತಿದ್ದೆ ಎಂದು ಹೇಳಿಕೊಂಡವರಿದ್ದಾರೆ. ಮನೆಯಲ್ಲೇ ತನ್ನ ಕಷ್ಟ ಸುಖ ಕೇಳುತ್ತಾ ಆಟವಾಡುತ್ತಾ ಬೆಳೆದ ಮಗಳು ಸಣ್ಣಪುಟ್ಟದಕ್ಕೆಲ್ಲಾ ಅಳುವ ಮಗಳು ಮದುವೆಯಾಗುವಷ್ಟು ದೊಡ್ಡವಳಾದಳು ಎಂಬುವುದನ್ನು ನಂಬುವುದಕ್ಕೆ ಆಗುತ್ತಿಲ್ಲ ಎಂದು ಮನಸ್ಸಿಲ್ಲದ ಮನಸ್ಸಿನಿಂದ ಮಗಳಿಗೆ ಮದುವೆ ಮಾಡಿಸಲು ವಧು ಹುಡುಕುವ ಅಪ್ಪನನ್ನು ನೀವು ನೋಡಿರಬಹುದು. ಅಪ್ಪನ ಈ ಭಾವುಕತೆ ಬಹುತೇಕರಿಗೆ ಗಣನೆಗೆ ಬಾರದೇ ಹೋಗಿರಬಹುದು. ಆದರೆ ಅಪ್ಪನೊಳಗೊಂದು ಮನಸ್ಸಿದೆ ಆತನೂ ಭಾವಜೀವಿಯೇ ಆದರೆ ಎಲ್ಲವನ್ನೂ ಹೆಣ್ಣುಮಕ್ಕಳಂತೆ ಮನಬಿಚ್ಚಿ ಹೇಳಲಾರ ಅಷ್ಟೇ ಎಂಬುದು ಅಪ್ಪನ ಅರ್ಥ ಮಾಡಿಕೊಂಡ ಅನೇಕರಿಗೆ ಗೊತ್ತು. ಅದೇ ರೀತಿ ಇಲ್ಲೊಬ್ಬ ಅಪ್ಪ ಮಗಳನ್ನು ಅಳಿಯನಿಗೆ ಧಾರೆ ಎರೆದುಕೊಡುವ ವೇಳೆ ಹೇಳಿದ ಮಾತು ವೈರಲ್ ಆಗಿದ್ದು, ಅನೇಕರನ್ನು ಕಣ್ಣೀರಾಕುವಂತೆ ಮಾಡಿದೆ.
ಮಗಳನ್ನು ಮದುವೆಯಾಗುತ್ತಿರುವ ಅಳಿಯನಿಗೆ ಅಪ್ಪ ಹೇಳಿದ್ದೇನು?
ಒಂದು ದಿನ ನಿನ್ನ ಹೃದಯದಲ್ಲಿ ಏನಾದರೂ ಬದಲಾಗಿ ನೀನು ನನ್ನ ಮಗಳನ್ನು ಪ್ರೀತಿಸುವುದನ್ನು ನಿಲ್ಲಿಸಿದರೆ ಆಕೆಗೆ ನೋವು ಮಾಡಬೇಡ, ಅವಳನ್ನು ಮತ್ತೆ ನನ್ನ ಬಳಿ ಕರೆದುಕೊಂಡು ಬಂದು ನೀಡು, ಆಕೆಯನ್ನು ನನಗೆ ಮರಳಿಸು ಆಕೆಗೇನು ಮಾಡಬೇಡ ಎಂದು ತಂದೆ ಒತ್ತರಿಸಿ ಬರುತ್ತಿರುವ ಅಳುವನ್ನು ನಿಯಂತ್ರಿಸಿಕೊಂಡು ಬಹಳ ಗದ್ಗದಿತ ಕಂಠದಿಂದ ಅಳಿಯನಿಗೆ ಹೇಳುತ್ತಿದ್ದರೆ, ಅಳಿಯ ಹಾಗೇನು ಆಗದು ಎಂದು ಅಳಿಯ ಹೇಳುತ್ತಾ ಮಾವನನ್ನು ಸಮಾಧಾನ ಮಾಡುತ್ತಾನೆ. ನನ್ನ ಅಮೂಲ್ಯ ಮಗಳು ಈಗ ನಿನ್ನವಳು ಎಂದು ಎಂದು ಮಾವ ಹೇಳುತ್ತಾ ಮಗಳ ಕೈಯನ್ನು ಅಳಿಯನ ಕೈಗಿಡುತ್ತಾ ಭಾವುಕನಾಗುತ್ತಾನೆ. ಈ ವೇಳೆ ಅಳಿಯ ಮಗಳು ಕೂಡ ಭಾವುಕರಾಗಿದ್ದು, ಮಾವ ಅಳಿಯ ಮಗಳು ಮೂವರು ಪರಸ್ಪರ ಗಟ್ಟಿಯಾಗಿ ತಬ್ಬಿಕೊಂಡು ಭಾವುಕರಾಗುತ್ತಾರೆ. ಇತ್ತ ಮದುವೆಗೆ ಆಗಮಿಸಿದ ಅತಿಥಿಗಳು ಕೂಡ ಮಾವನ ಮಾತು ಕೇಳಿ ಭಾವುಕರಾಗಿದ್ದು, ಕಣ್ಣೀರು ಒರೆಸಿಕೊಳ್ಳುತ್ತಿರುವ ವೀಡಿಯೋ ವೈರಲ್ ಆಗಿದೆ.
ಮಗಳ ಮೊದಲ ಪಿರಿಯಡ್ಸ್‌ನ್ನು ಕೇಕ್ ಕತ್ತರಿಸಿ ಸಂಭ್ರಮಿಸಿದ ಅಪ್ಪ, ಫ್ಯಾಮಿಲಿಗೆ ಗ್ರ್ಯಾಂಡ್ ಪಾರ್ಟಿ!
ಈ ವೀಡಿಯೋ ನೋಡಿದ ಅನೇಕರು ಭಾವುಕರಾಗಿದ್ದು, ಅಪ್ಪನ ಪ್ರೀತಿಗೆ ಎಣೆ ಇಲ್ಲ ಎಂದು ಮೆಚ್ಚುಗೆ ಸೂಚಿಸಿದ್ದಾರೆ. ನಿನಗೆ ಬೇಡವಾದರೆ ನನಗೆ ನನ್ನ ಮಗಳ ವಾಪಸ್ ಮರಳಿಸು ಎಂಬ ತಂದೆಯ ಮಾತು ತಂದೆಯ ಮಾತು ಕೇಳಿ ಭಾವುಕನಾದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇಂತಹ ಅಪ್ಪನನ್ನು ಪಡೆದ ಆಕೆಯೇ ಧನ್ಯ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ. ತಮ್ಮ ಮಗಳನ್ನು ಮದುವೆ ಮಾಡಿಕೊಡುವ ಪ್ರತಿಯೊಬ್ಬ ಅಪ್ಪನೂ ಅಳಿಯನಿಗೆ ಈ ವಿಚಾರ ಹೇಳಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಆದರೆ ಕೆಲವರು ತಂದೆಯ ಈ ಪ್ರೀತಿಯ ಬಗ್ಗೆ ಕೊಂಕಾಡಿದ್ದು, ಇಂತಹ ಓವರ್ ಪ್ರಟೆಕ್ಟಿವ್ ತಂದೆಯರಿಂದಲೇ ಅನೇಕ ಜೋಡಿ ದೂರಾಗುತ್ತಿದ್ದಾರೆ ಎಂದು ಬೈದಿದ್ದಾರೆ. ಈ ಪ್ರಪಂಚದಲ್ಲಿ ಕನಿಷ್ಟ ಕೆಲವರಾದರೂ ಅಪ್ಪಂದಿರ ಪ್ರೀತಿ ತೋರಿಸುತ್ತಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಅಪಘಾತಕ್ಕೆ ಬಲಿಯಾದ ತಂದೆಯ ಶವದ ಪಕ್ಕದಲ್ಲೇ ಮಲಗಿದ 3 ವರ್ಷದ ಮಗ: ಕಾಡಲ್ಲಿ ಅಳುತ್ತಲೇ ರಾತ್ರಿ ಕಳೆದ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.