Sex Life : ಬೇಗ ಮಕ್ಕಳನ್ನು ಪಡೆಯೋ ಒತ್ತಡದಲ್ಲಿ ಸೆಕ್ಸ್ ಲೈಫ್ ಹಾಳು ಮಾಡಿಕೊಳ್ತಾರೆ!

ಮದುವೆ, ಸಂಭೋಗ, ಮಕ್ಕಳು ಎಲ್ಲವೂ ಜೀವನದಲ್ಲಿ ಮುಖ್ಯ. ಹಾಗಂತ ಒಂದಕ್ಕಾಗಿ ಇಡೀ ಜೀವನ ಹಾಳು ಮಾಡಿಕೊಳ್ಳುವುದು ಸರಿಯಲ್ಲ. ಸೆಕ್ಸ್ ಹಾಗೂ ಗರ್ಭಧಾರಣೆ ಈ ಎರಡರ ಮಧ್ಯೆ ಒತ್ತಡ ಬಂದ್ರೆ ಜೀವನ ಕಷ್ಟವಾಗುತ್ತದೆ.

How The Stress Of Getting Pregnant Can Affect Sex Life roo

ಮದುವೆಯಾದ ತಕ್ಷಣ ಮಧುಮಕ್ಕಳನ್ನು ಹರಸುವ ದೊಡ್ಡವರು ಹೇಳುವ ಮೊದಲ ಮಾತು, ಬೇಗ ಸಂತಾನ ಪ್ರಾಪ್ತಿಯಾಗ್ಲಿ ಎಂದು. ಮದುವೆಯಾದ ನಾಲ್ಕೈದು ತಿಂಗಳಲ್ಲೇ, ಇನ್ನೂ ಮಕ್ಕಳ ಪ್ಲಾನ್ ಶುರು ಆಗ್ಲಿಲ್ವಾ ಅಂತಾ ಕೇಳೋಕೆ ಶುರು ಮಾಡ್ತಾರೆ. ಈಗಿನ ಕಾಲದಲ್ಲಿ ಮಕ್ಕಳನ್ನು ಪಡೆಯೋಕೆ ಸಾಕಷ್ಟು ಸಮಸ್ಯೆಯನ್ನು ಎದುರಿಸಬೇಕು, ತಡವಾದ್ರೆ ಮತ್ತಷ್ಟು ಕಷ್ಟವಾಗ್ಬಹುದು, ಮದುವೆಯಾದ ವರ್ಷದೊಳಗೆ ಮಕ್ಕಳನ್ನು ಮಾಡಿಕೊಳ್ಳಿ ಎಂಬುದು ದೊಡ್ಡವರ ಸಲಹೆ. 

ಮನೆಯ ಹಿರಿಯರು, ಆಪ್ತರು ಒಳ್ಳೆ ಉದ್ದೇಶವನ್ನಿಟ್ಟುಕೊಂಡೇ ಈ ಮಾತನ್ನು ಹೇಳಿರ್ತಾರೆ. ಆದ್ರೆ ಅನೇಕ ಬಾರಿ ಈ ವಿಷಯ ಒತ್ತಡ (Stress) ವನ್ನು ಉಂಟು ಮಾಡುತ್ತದೆ. ಅದರಲ್ಲೂ ಹುಡುಗಿಯರು ಈ ಒತ್ತಡವನ್ನು ಹೆಚ್ಚು ಎದುರಿಸುತ್ತಾರೆ. ದಂಪತಿ (Couple)ಮಕ್ಕಳನ್ನು ಪಡೆಯಲು ಮಾನಸಿಕವಾಗಿ ಸಿದ್ಧವಾಗಿರುವುದಿಲ್ಲ. ಆದ್ರೂ ಗರ್ಭ ಧರಿಸುವ ಪ್ರಯತ್ನ ನಡೆಸುತ್ತಿರುತ್ತಾರೆ. ಸರಿಯಾದ ಸಮಯದಲ್ಲಿ ಸರಿಯಾದ ಸ್ಥಾನದಲ್ಲಿ ಲೈಂಗಿಕತೆ ಹೊಂದುವುದು ಒಂದು ಕೆಲಸದಂತೆ ಆಗುತ್ತದೆ. ಪಾಲುದಾರರ ನಡುವೆ ಲೈಂಗಿಕತೆ (Sex) ಉತ್ಸಾಹವನ್ನು ಹೆಚ್ಚಿಸುವ ಬದಲು ಉತ್ಸಾಹವನ್ನು ಕುಗ್ಗಿಸುವ ಕೆಲಸ ಮಾಡುತ್ತದೆ. ಇದರ ಪರಿಣಾಮ ಅವರ ಜೀವನದಲ್ಲಿ ದೀರ್ಘಕಾಲ ಉಳಿಯುತ್ತದೆ. 

SEX AND LOVE: ಕೆಲವರು ಸೆಕ್ಸ್‌ನಲ್ಲೇ ಪ್ರೀತಿ ಹುಡುಕುತ್ತಾರೆ! ಯಾಕೆ ಹೀಗೆ?

ಗರ್ಭಧರಿಸಲು ಸಂಭೋಗ ನಡೆಸುವುದು ಒತ್ತಡಕ್ಕೆ ಕಾರಣ : ಮೊದಲೇ ಹೇಳಿದಂತೆ ಇಲ್ಲಿ ಸಂಭೋಗ ಸುಖಕ್ಕಿಂತ ಗರ್ಭಧಾರಣೆ ಮುಖ್ಯವಾಗುತ್ತೆ. ಗರ್ಭಧರಿಸಲೆಂದೇ ದಂಪತಿ ಸಂಭೋಗ ಬೆಳೆಸಲು ಮುಂದಾಗುತ್ತಾರೆ. ಇದು ಇಬ್ಬರ ಒತ್ತಡವನ್ನು ಹೆಚ್ಚಿಸುತ್ತದೆ. ಎರಡರಿಂದ ಮೂರು ಬಾರಿ ಗರ್ಭಿಣಿಯಾಗಲು ಸಾಧ್ಯವಾಗದೆ ಹೋದರೆ ದಂಪತಿ ವೈದ್ಯರನ್ನು ಭೇಟಿಯಾಗಲು ಮುಂದಾಗುತ್ತಾರೆ. ವೈದ್ಯರು ಸಮಯೋಚಿತ ಲೈಂಗಿಕತೆಗೆ ಸಲಹೆ ನೀಡುತ್ತಾರೆ.  ನಿರ್ದಿಷ್ಟ ಸಮಯದಲ್ಲಿ ಸಂಭೋಗ ಬೆಳೆಸಿದ್ರೆ ಗರ್ಭಧರಿಸುವ ಸಾಧ್ಯತೆ ಹೆಚ್ಚು ಎಂದು ದಪತಿಗೆ ವೈದ್ಯರು ಸಲಹೆ ನೀಡುತ್ತಾರೆ. ವೈದ್ಯರ ಸಲಹೆ ಪಾಲಿಸಿ, ಮಕ್ಕಳನ್ನು ಪಡೆಯಲೇಬೇಕು ಎನ್ನುವ ಒತ್ತಡಕ್ಕೆ ಬೀಳುವ ದಂಪತಿ ತಮಗೆ ಇಷ್ಟವಿಲ್ಲದಿದ್ದರೂ ಸಹ ಸಂಭೋಗ ಬೆಳೆಸಲು ಮುಂದಾಗುತ್ತಾರೆ. ಇದು ತುಂಬಾ ಕೆಟ್ಟ ಅನುಭವ ಎನ್ನಬಹುದು. ಇಲ್ಲಿ ಇಬ್ಬರಿಗೂ ಆಸಕ್ತಿ ಇರೋದಿಲ್ಲವಾದ್ದರಿಂದ ಸಂಭೋಗ ಸುಖ ಸಿಗೋದಿಲ್ಲ. ಒತ್ತಡದಲ್ಲಿಯೇ ಒಂದಾಗುವ ಕಾರಣ ಗರ್ಭಧಾರಣೆ ಕೂಡ ಸಾಧ್ಯವಾಗೋದಿಲ್ಲ.

ಗರ್ಭಧಾರಣೆಯ ಒತ್ತಡದಿದ ಲೈಂಗಿಕ ಜೀವನ ಹಾಳು : ಗರ್ಭಿಣಿಯಾಗಬೇಕೆಂಬ ಬಯಕೆಯು ಸೆಕ್ಸ್ ಬಗ್ಗೆ ನಿಮಗಿದ್ದ ಭಾವನೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಸಂಭೋಗದ ವೇಳೆ ಸಿಗುವ ಸುಖಕ್ಕಿಂತ ಗರ್ಭಧರಿಸಬಹುದೇ ಎಂಬ ಆಲೋಚನೆಯೇ ಮನಸ್ಸಿನಲ್ಲಿ ತುಂಬಿರುವ ಕಾರಣ ಸೆಕ್ಸ್ ಮೇಲಿನ ಆಸಕ್ತಿ ಕಾಲಾನಂತರದಲ್ಲಿ ಕಡಿಮೆಯಾಗುತ್ತದೆ. ಕೊನೆಯಲ್ಲಿ ಲೈಂಗಿಕತೆಯಲ್ಲಿ ನಿರಾಸಕ್ತಿ ಮತ್ತು ಅತೃಪ್ತ ಲೈಂಗಿಕ ಜೀವನಕ್ಕೆ ದಾರಿಮಾಡಿ ಕೊಡುತ್ತದೆ.

ಫಿಸಿಕಲ್ ಬ್ಯೂಟಿ ಜೊತೆ ಲೈಂಗಿಕ ಸುಖ ಕನೆಕ್ಟ್ ಆಗಿರುತ್ತಾ?

ಸಮಯದ ಪ್ರಕಾರ ಸೆಕ್ಸ್ ನಿಂದ ಆಗುವ ಅಡ್ಡಪರಿಣಾಮ : ವೈದ್ಯರು ಹೇಳಿದಂತೆ ಆ ಸಮಯಕ್ಕೆ ಮಾತ್ರ ಸಂಭೋಗ ಬೆಳೆಸಲು ಸಂಗಾತಿಗಳು ಮುಂದಾದ್ರೆ ಅದು ಪುರುಷರ ಮೇಲೂ ಪರಿಣಾಮ ಬೀರುತ್ತದೆ. ಸಂಶೋಧನೆ ಒಂದರ ಪ್ರಕಾರ, ಆರು ತಿಂಗಳ ಕಾಲ ಸಂಭೋಗದ ನಂತರ, ಹತ್ತು ಪುರುಷರಲ್ಲಿ ನಾಲ್ವರು ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ ಅಥವಾ ದುರ್ಬಲತೆಯಿಂದ ಬಳಲುತ್ತಾರೆ. ಹತ್ತರಲ್ಲಿ ಒಬ್ಬರು ವಿವಾಹೇತರ ಸಂಬಂಧ ಶುರು ಮಾಡ್ತಾರೆ. ಗರ್ಭಧಾರಣೆ ಪದೇ ಪದೇ ವಿಫಲವಾದಾಗ ಸಂಗಾತಿ ಮಧ್ಯೆ ಭಾವನಾತ್ಮಕ ಅಂತರ ಹೆಚ್ಚಾಗುತ್ತದೆ. ಇಬ್ಬರ ಮಧ್ಯೆ ಯಾವುದೇ ಆಸಕ್ತಿ ಇರೋದಿಲ್ಲ. ಅಂತಿಮ ಗುರಿ ಮಗುವಾಗಿರುವ ಕಾರಣ ಉಳಿದ ಸಂತೋಷ, ಜೀವನದ ಸುಖವನ್ನು ದಂಪತಿ ಕಳೆದುಕೊಳ್ಳುತ್ತಾರೆ. ಮಕ್ಕಳನ್ನು ಪಡೆಯಲು ಪ್ಲಾನ್ ಮಾಡುವ ಮೊದಲು ಇವೆಲ್ಲವನ್ನು ತಿಳಿದಿರಬೇಕು. ಬೇರೆಯವರ ಮಾತಿಗೆ ಮಣಿಯುವ ಬದಲು ನೀವಿಬ್ಬರೇ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಿ. 
 

Latest Videos
Follow Us:
Download App:
  • android
  • ios