ನೋಡೋಕೆ ಶೂ ಚೆನ್ನಾಗಿದ್ರೂ ಅದ್ರ ಬೆಲೆ ನೋಡಿ ನಾವು ಖರೀದಿ ಮಾಡುತ್ತೇವೆ. ಬರೀ ಒಂದು ಶೂಗೆ 4 ಲಕ್ಷ ರೂಪಾಯಿ ಅಂದ್ರೆ ಶಾಕ್ ಆಗೇ ಆಗುತ್ತೆ. ಮಗ ನೀಡಿದ ಶೂ ಬೆಲೆ ಕೇಳಿದ ಈ ತಂದೆಯೂ ದಿಗ್ಬ್ರಮೆಗೊಂಡಿದ್ದಾನೆ.
ಮನೆಗೆ ಮಕ್ಕಳು ಯಾವುದೇ ವಸ್ತುವನ್ನು ತರಲಿ, ಮೊದಲು ಪಾಲಕರು ಅದನ್ನು ಮೆಚ್ಚಿಕೊಳ್ಳುತ್ತಾರೆ. ನಂತ್ರ ಅದ್ರ ಬೆಲೆ ಕೇಳ್ತಾರೆ. ವಸ್ತು ಅವರು ಊಹಿಸಿದ್ದಕ್ಕಿಂತ ಹೆಚ್ಚು ಬೆಲೆಯನ್ನು ಹೊಂದಿದ್ದರೆ ಮಕ್ಕಳಿಗೆ ಬೈಗುಳದ ಮಳೆ ಬೀಳುತ್ತದೆ. ಇಷ್ಟೊಂದು ಹಣ ನೀಡಿ ಇದನ್ನು ಖರೀದಿಸುವ ಅವಶ್ಯಕತೆ ಏನಿತ್ತು ?. ಇದ್ರಲ್ಲಿ ನಾಲ್ಕೈದು ವಸ್ತುಗಳು ಬರ್ತಿದ್ದವು, ನಿಮಗೆ ಹಣದ ಬೆಲೆ ತಿಳಿದಿಲ್ಲ.. ಹೀಗೆ ಕೋಪದಲ್ಲಿ ಮಾತಿನ ಯುದ್ಧ ನಡೆಯುತ್ತದೆ. ಇದು ಬಹುತೇಕ ಭಾರತದ ಎಲ್ಲ ಮನೆಯಲ್ಲೂ ನಡೆಯುವ ಘಟನೆ. ಅದು ಜನಪ್ರಿಯ ಯೂಟ್ಯೂಬರ್ ಮತ್ತು ವ್ಲಾಗರ್ ಯದುಪ್ರಿಯಮ್ ಮೆಹ್ತಾ ಮನೆಯಲ್ಲೂ ನಡೆದಿದೆ. ಅದನ್ನು ಅವರು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಲ್ಲದೆ, ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ತಂದೆ ಹಾಗೂ ಮಗನ ಮಧ್ಯೆ ನಡೆದ ಈ ಕ್ಯೂಟ್ ಸಂಭಾಷಣೆ ಇನ್ಸ್ಟಾ ಬಳಕೆದಾರರಿಗೆ ಇಷ್ಟವಾಗಿದೆ.
ಯದುಪ್ರಿಯಮ್ ಮೆಹ್ತಾ (Yadupriyam Mehta) ಅವರ ಹೊಸ ಶೂ (Shoes) ನೋಡಿದ ತಂದೆ ಆರಂಭದಲ್ಲಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ನಂತ್ರ ಅದ್ರ ಬೆಲೆ ಕೇಳುತ್ತಾರೆ. ಬೆಲೆ ಕೇಳ್ತಿದ್ದತೆ ಅವರ ಮುಖದ ರಿಯಾಕ್ಷನ್ ಬದಲಾಗುತ್ತದೆ. ಜೋಡಿ ಶೂ ಬೆಲೆ 4 ಲಕ್ಷ ರೂಪಾಯಿ ಎನ್ನುತ್ತಿದ್ದಂತೆ ಅಲ್ಲಿನ ವಾತಾವರಣ ಬದಲಾಗೋದನ್ನು ನೀವು ನೋಡ್ಬಹುದು. ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮನರಂಜನಾ ವಿಷಯವನ್ನು ಯದುಪ್ರಿಯಮ್ ಮೆಹ್ತಾ ಪೋಸ್ಟ್ (Post) ಮಾಡ್ತಾರೆ. ಅವರು ತಮ್ಮ ಜೀವನದಲ್ಲಿ ನಡೆಯುವ ತುಣುಕುಗಳನ್ನು ತಮ್ಮ ಅನುಯಾಯಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಈಗ ಹಂಚಿಕೊಂಡಿರುವ ವಿಡಿಯೋ ಯದುಪ್ರಿಯಮ್ ಮೆಹ್ತಾ ಮತ್ತು ಅವರ ತಂದೆ ಇಬ್ಬರನ್ನೂ ನಗೆಗಡಲಲ್ಲಿ ತೇಲಿಸಿದೆ.
ಇನ್ಮುಂದೆ ಕೈಲಾಸ ಯಾತ್ರೆ ಬಹಳ ಸುಲಭ: ಚೀನಾ, ನೇಪಾಳಕ್ಕೆ ಹೋಗ್ದೆ ಉತ್ತರಾಖಂಡದಿಂದ್ಲೇ ಪ್ರಯಾಣಿಸಿ!
ಇನ್ಸ್ಟಾಗ್ರಾಮ್ ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡ ಯದುಪ್ರಿಯಮ್ ಮೆಹ್ತಾ, ``ಪಾಪಾ ಕಾ ರಿಯಾಕ್ಷನ್ ಆನ್ 4 ಲಕ್ಷ ಕೆ ಶೂಸ್!! ಬಚ್ ಗಯಾ ಆಜ್ ತೋ" [ 4 ಲಕ್ಷ ರೂಪಾಯಿ ಶೂಗಳಿಗೆ ತಂದೆಯ ಪ್ರತಿಕ್ರಿಯೆ. ಇಂದು ಬಚಾವ್ ಆದೆ] ಎಂದು ಶೀರ್ಷಿಕೆ ಹಾಕಿದ್ದಾರೆ. ವಿಡಿಯೋ ಆರಂಭದಲ್ಲಿ ಮೆಹ್ತಾ ಶೋವನ್ನು ಹಿಡಿದು ತಂದೆ ಬಳಿ ಬರ್ತಾರೆ. ನಾನು ಶೂ ಖರೀದಿ ಮಾಡಿದ್ದೇನೆ ನೋಡಿ ಎನ್ನುತ್ತಾರೆ. ಶೂ ಬಾಕ್ಸ್ ತೆಗೆದ ಮೆಹ್ತಾ ತಂದೆ ಖುಷಿಯಿಂದ ಅದನ್ನು ತೆಗೆಯುತ್ತಾರೆ. ಶೂ ಡಿಸೈನ್ ಅವರಿಗೆ ಇಷ್ಟವಾಗುತ್ತದೆ. ಈ ಶೂ ಉಡುಗೊರೆಯನ್ನು ಅವರು ಇಷ್ಟಪಡುತ್ತಾರೆ. ಚಂಕಿ ಡಂಕಿ ಸ್ನೀಕರ್ ನೋಡಿದ ತಂದೆ ಎಷ್ಟು ದಿನಗಳಿಂದ ಇದನ್ನು ಖರೀದಿಸಬೇಕು ಎಂದುಕೊಂಡಿದ್ದೇ ಎನ್ನುತ್ತಾರೆ. ಸಂತೋಷದಿಂದ ಸ್ನೀಕರ್ ನೋಡ್ತಾರೆ. ನಂತರ ಇದ್ರ ಬೆಲೆ ಎಷ್ಟು ಎಂದು ಕೇಳ್ತಾರೆ.
ಅವನೆಂದರೆ ಆಕಾಶದಷ್ಟು ಪ್ರೀತಿ ಅಂದುಕೊಂಡಿದ್ದೆ, ಆದರೆ ಅವನು ಆಕಾಶದಷ್ಟು ದೂರ
ಇದಕ್ಕೆ ಮೆಹ್ತಾ 4 ಲಕ್ಷ ರೂಪಾಯಿ ಎನ್ನುತ್ತಾರೆ. ಮೆಹ್ತಾ ನಾಲ್ಕು ಲಕ್ಷ ಎನ್ನುತ್ತಿದ್ದಂತೆ ತಂದೆ ರಿಯಾಕ್ಷನ್ ಬದಲಾಗುತ್ತದೆ. ಇಷ್ಟೊಂದು ಹಣ, ಶೂಗೆ ನೀಡಿದ್ಯಾ?. ನಿನಗೆ ಹುಚ್ಚು ಹಿಡಿದಿದೆಯಾ ಎಂದು ಪ್ರಶ್ನೆ ಮಾಡುತ್ತಾರೆ. ಅಲ್ಲದೆ ಶೂವನ್ನು ವಾಪಸ್ ಬಾಕ್ಸಿಗೆ ಹಾಕ್ತಾರೆ. ಆಗ್ಲೂ ಅವರ ಮುಖದಲ್ಲಿ ಅಚ್ಚರಿ ಇರೋದನ್ನು ನೀವು ನೋಡ್ಬಹುದು. ನಂತ್ರ ಮಗನಿಗೆ ಕೈ ಮುಗಿತಾರೆ. ಇದನ್ನು ನೋಡಿದ ಮೆಹ್ತಾ ನಗ್ತಾರೆ. ಇನ್ಸ್ಟಾಗ್ರಾಮ್ ನಲ್ಲಿ ಇದಕ್ಕೆ ಸಾಕಷ್ಟು ಕಮೆಂಟ್ ಬಂದಿದೆ. ನನ್ನ ತಂದೆಯೂ ಇದೇ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂದು ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೊಬ್ಬರು ತಂದೆ ಮಗನ ಹಾಸ್ಯವನ್ನು ಇಷ್ಟಪಟ್ಟಿದ್ದಾರೆ. ಸರೋಜಿನಿಯಲ್ಲಿ 500 ರೂಪಾಯಿಗೆ ಶೂ ಸಿಗ್ತಿತ್ತು ಎಂದು ಇನ್ನೊಬ್ಬರು ಕಾಲೆಳೆದಿದ್ದಾರೆ. ಚುಂಕಿ ಡುಂಕಿ (Chunky Dunky) ಶೂ ಖರೀದಿ ಮಾಡೋದು ನನ್ನ ಕನಸು ಎಂದು ಇನ್ನೊಬ್ಬರು ಆಸೆ ವ್ಯಕ್ತಪಡಿಸಿದ್ದಾರೆ.