Parenting Tips: ಖಾಸಗಿ ಅಂಗ ಸ್ಪರ್ಶಿಸುವ ಮಕ್ಕಳ ಹವ್ಯಾಸ ಹೀಗೆ ಓಡಿಸಿ

By Suvarna NewsFirst Published Jul 13, 2022, 5:01 PM IST
Highlights

ಸಾರ್ವಜನಿಕ ಪ್ರದೇಶದಲ್ಲಿ ಹೇಗಿರಬೇಕೆಂಬುದು ಪಾಲಕರಿಗೆ ತಿಳಿದಿರುತ್ತದೆ. ಆದ್ರೆ ಮಕ್ಕಳಿಗೆ ಇದ್ರ ಬಗ್ಗೆ ಜ್ಞಾನವಿರೋದಿಲ್ಲ. ಎಲ್ಲರ ಮುಂದೆ ಜೋರಾಗಿ ಅಳುವ ಮಕ್ಕಳು, ಖಾಸಗಿ ಅಂಗ ಸ್ಪರ್ಶಿಸಲು ನಾಚಿಕೆಪಟ್ಟುಕೊಳ್ಳೋದಿಲ್ಲ. ಆದ್ರೆ ಇದು ಪಾಲಕರ ಮುಜುಗರಕ್ಕೆ ಕಾರಣವಾಗುತ್ತದೆ.  
 

ಮಕ್ಕಳು ಯಾವ ಸಂದರ್ಭದಲ್ಲಿ ಏನು ಮಾಡ್ತಾರೆ ಎಂಬುದು ಗೊತ್ತಾಗೋದಿಲ್ಲ. ಸಾರ್ವಜನಿಕರ ಎದುರು ಮುಜುಗರವನ್ನುಂಟು ಮಾಡುವ ವರ್ತನೆಯನ್ನು ಮಕ್ಕಳು ಮಾಡ್ತಾರೆ. ಬೇರೆ ಮನೆಗಳಿಗೆ ಹೋದಾಗ ಸಿಕ್ಕಾಪಟ್ಟೆ ತಿನ್ನುವ ಮಕ್ಕಳು ಮನೆಗೆ ಬಂದಾಗ ಆಹಾರ ಸೇವನೆ ಮಾಡೋದಿಲ್ಲ. ಮನೆಯಲ್ಲಿ ಹಾಲು ಬೇಡ ಎನ್ನುವ ಮಕ್ಕಳು, ಬೇರೆಯವರ ಮನೆಯಲ್ಲಿ ಹಾಲು ಕುಡಿತಾರೆ. ಹಾಗೆ ಸಾರ್ವಜನಿಕ ಪ್ರದೇಶದಲ್ಲಿ ಖಾಸಗಿ ಅಂಗವನ್ನು ಮುಟ್ಟುವ ಅಭ್ಯಾಸ ಅನೇಕ ಮಕ್ಕಳಿಗಿರುತ್ತದೆ. ಪಾಲಕರು ಹೊಡೆದ್ರೂ, ನಿಂದಿಸಿದ್ರೂ ಮಕ್ಕಳು ಈ ಅಭ್ಯಾಸವನ್ನು ಬಿಡೋದಿಲ್ಲ. ನೀವು ಮಕ್ಕಳಿಗೆ ಬೈದ್ರೆ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ. ಮಕ್ಕಳ ಮಾನಸಿಕ ಆರೋಗ್ಯದ ಮೇಲೂ ಇದು ಪರಿಣಾಮ ಬೀರಬಹುದು. ಮಕ್ಕಳು ಖಾಸಗಿ ಅಂಗವನ್ನು ಸ್ಪರ್ಶಿಸಿದಾಗ ಪಾಲಕರು ಬೈದ್ರೆ ಖಾಸಗಿ ಅಂಗದ ಬಗ್ಗೆ ಮಕ್ಕಳು ತಪ್ಪು ತಿಳಿಯುತ್ತಾರೆ. ಇದು ಸ್ಪರ್ಶಿಸದ ಅಂಗವೆಂದು ಅವರು ಅಂದುಕೊಳ್ತಾರೆ. ಹಾಗೆ ಪಾಲಕರಿಗೆ ನಮಗಿಂತ ಸಮಾಜದಲ್ಲಿ ಮರ್ಯಾದೆ ಮುಖ್ಯ ಎಂಬ ಭಾವನೆಗೂ ಬರ್ತಾರೆ. ಪ್ರತಿಯೊಬ್ಬ ಪೋಷಕರು ತಮ್ಮ ಮಗುವಿಗೆ ದೇಹದ ಎಲ್ಲಾ ಭಾಗಗಳ ಬಗ್ಗೆ ತಿಳಿಸಬೇಕು. ಅನೇಕ ಪಾಲಕರು ದೇಹದ ಅಂಗಕ್ಕೆ ತಮ್ಮದೆ ಹೆಸರಿಡುತ್ತಾರೆ. ಆದ್ರೆ ಅದಕ್ಕೆ ಬೇರೆ ಹೆಸರನ್ನು ಹೇಳದೆ, ನಿಜವಾದ ಹೆಸರಿನಿಂದಲೇ ಮಕ್ಕಳಿಗೆ ಅಂಗಗಳ ಪರಿಚಯ ಮಾಡಬೇಕು. ಹಾಗೆ ಮಕ್ಕಳು, ಪದೇ ಪದೇ ಖಾಸಗಿ ಅಂಗವನ್ನು ಸ್ಪರ್ಶಿಸುತ್ತಿದ್ದರೆ ಅದನ್ನು ಹೇಗೆ ಬಿಡಿಸಬೇಕೆನ್ನುವ ಚಿಂತೆ ಕಾಡುವುದು ಸಹಜ. ನಾವಿಂದು ಅದ್ರ ಬಗ್ಗೆ  ಹೇಳ್ತೇವೆ.

ಪ್ರೀತಿಯಿಂದ ವಿವರಿಸಿ : ಚಿಕ್ಕ ಮಕ್ಕಳು ಖಾಸಗಿ ಅಂಗವನ್ನು ಸ್ಪರ್ಶಿಸಲು ಪ್ರಾರಂಭಿಸಿದಾಗ ಅದು ತಪ್ಪು ಎಂಬುದನ್ನು ನೀವು ಪ್ರೀತಿಯಿಂದ ವಿವರಿಸಬೇಕು. ಮಕ್ಕಳ ವರ್ತನೆಯನ್ನು ಖಂಡಿಸಬಾರದು. ಮಗು ಏಕೆ ಹೀಗೆ ಮಾಡ್ತಿದೆ ಎಂಬುದನ್ನು ಪತ್ತೆ ಮಾಡ್ಬೇಕು. ಸಾರ್ವಜನಿಕ ಪ್ರದೇಶದಲ್ಲಿ ಖಾಸಗಿ ಅಂಗ ಸ್ಪರ್ಶಿಸುತ್ತಿದ್ದಂತೆ ಗದರಿಸುವ ಬದಲು, ಸಾರ್ವಜನಿಕ ಪ್ರದೇಶದಲ್ಲಿ ಖಾಸಗಿ ಅಂಗಗಳನ್ನು ಸ್ಪರ್ಶಿಸುವುದು ಒಳ್ಳೆಯ ಅಭ್ಯಾಸವಲ್ಲ ಎಂದು ಪೋಷಕರು ತಮ್ಮ ಮಗುವಿಗೆ ಉದಾಹರಣೆಗಳನ್ನು ನೀಡುವ ಮೂಲಕ ವಿವರಿಸಿದರೆ, ಮಗುವಿಗೆ ಈ ವಿಷಯವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಮಕ್ಕಳು ಭಯಕ್ಕಿಂತ ಪ್ರೀತಿಯಿಂದ ಹೇಳಿದ ಮಾತುಗಳನ್ನು ಕೇಳ್ತಾರೆ. ಹಾಗೆಯೇ ಕಥೆ ರೂಪದಲ್ಲಿ ನೀವು ವಿಷ್ಯವನ್ನು ಅವರಿಗೆ ತಲುಪಿಸುವುದು ಸುಲಭ.

ಇದನ್ನೂ ಓದಿ: Clean Hand: ತರಾತುರಿಯಲ್ಲಿ ಕೈ ತೊಳೆಯೋವಾಗ ಮಕ್ಕಳು ಮಾಡ್ತಾರೆ ಈ ತಪ್ಪು

ಮಗುವಿನ ಈ ವರ್ತನೆಗೆ ಕಾರಣ ತಿಳಿಯಿರಿ :  ಮಗು ಖಾಸಗಿ ಅಂಗವನ್ನು ಸ್ಪರ್ಶಿಸಲು ಕಾರಣವೇನು ಎಂಬುದನ್ನು ನೀವು ತಿಳಿಯಬೇಕು. ಅಭ್ಯಾಸದಿಂದ ಮಗು ಸ್ಪರ್ಶಿಸುತ್ತಿದೆಯೋ ಅಥವಾ ಯಾವುದಾದ್ರೂ ಮಾನಸಿಕ ಖಾಯಿಲೆಯಿದೆಯೇ ಎಂಬುದನ್ನು ಪತ್ತೆ ಮಾಡ್ಬೇಕು. ಮಗು ಅನೇಕ ಕಾರಣಕ್ಕೆ ಭಯಕ್ಕೊಳಗಾಗುತ್ತದೆ. ಅಸುರಕ್ಷಿತ ಭಾವ ಎದುರಿಸುತ್ತದೆ. ಒತ್ತಡಕ್ಕೆ ಒಳಗಾಗುತ್ತದೆ. ಆ ಭಯ, ಆತಂಕದಿಂದ ಹೊರಬರಲು ಇಂಥ ಅಭ್ಯಾಸಗಳನ್ನು ಶುರು ಮಾಡುತ್ತದೆ. ಖಾಸಗಿ ಅಂಗ ಸ್ಪರ್ಶಿಸಿಕೊಂಡಾಗ ಅದಕ್ಕೆ ಧೈರ್ಯ ಬರಬಹುದು. ಇಲ್ಲವೆ ಸುರಕ್ಷಿತ ಎನ್ನಿಸಬಹುದು. ಆದ್ರೆ ಇದ್ಯಾವುದೂ ಶಾಶ್ವತವಲ್ಲ. ಕಾಲ ಕಾಲಕ್ಕೆ ಮಕ್ಕಳ ಅಭ್ಯಾಸ ಬದಲಾಗುತ್ತಿರುತ್ತದೆ.

ಇದನ್ನೂ ಓದಿ: Parenting Tips: ಇಂಜೆಕ್ಷನ್ ನೋಡ್ತಿದ್ದಂತೆ ಮಗು ಅಳುತ್ತಾ? ಇಲ್ಲಿದೆ ಉಪಾಯ

ಮಕ್ಕಳ ಕೆಟ್ಟ ಅಭ್ಯಾಸ ಬಿಡಿಸೋದು ಹೇಗೆ ? : ಬೈದರೆ, ಹೊಡೆದ್ರೆ ಮಕ್ಕಳು ಈ ಅಭ್ಯಾಸ ಬಿಡುವುದಿಲ್ಲ ಎಂಬುದನ್ನು ಪೋಷಕರು ಯಾವಾಗ್ಲೂ ತಿಳಿದಿರಬೇಕು. ಹಾಗೆ ಮಕ್ಕಳನ್ನು ಸದಾ ಬ್ಯುಸಿಯಾಗಿಡಬೇಕು. ಅವರ ಗಮನವನ್ನು ಬೇರೆಡೆ ಸೆಳೆಯಬೇಕು. ಮಗುವಿಗೆ ಹೊಸ ಹವ್ಯಾಸವನ್ನು ಕಲಿಸುವ ಮೂಲಕ ಅಥವಾ ಸಂಗೀತವನ್ನು ಕೇಳುವ ಮೂಲಕ ಅಥವಾ ಅವನೊಂದಿಗೆ ಮಾತನಾಡುವ ಮೂಲಕ ಈ ಅಭ್ಯಾಸದಿಂದ ಹೊರಬರಲು ನೆರವಾಗಬೇಕು. ಒಂದ್ವೇಳೆ ಈ ಎಲ್ಲ ವಿಧಾನ ನಂತ್ರವೂ ಮಕ್ಕಳ ಸ್ಥಿತಿ ಸುಧಾರಿಸಿಲ್ಲವೆಂದ್ರೆ ಮಕ್ಕಳ ತಜ್ಞರ ಸಹಾಯಪಡೆಯಬೇಕು. 

click me!