ಸಡಿಲಗೊಂಡ ಯೋನಿ, ಸೆಕ್ಸ್‌ನಲ್ಲಿ ಖುಷಿಯಿಲ್ಲ ಅಂತಾನೆ ಗಂಡು!

By Suvarna News  |  First Published Oct 1, 2020, 4:45 PM IST

ನಿನ್ನ ಯೋನಿ ತುಂಬಾ ಸಡಿಲವಾಗಿದೆ. ಮೊದಲಿನ ಥರ ಸೆಕ್ಸ್ ಮಾಡುವಾಗ ಸುಖ ಸಿಗುತ್ತಿಲ್ಲ ಅಂತಾರೆ ನನ್ನ ಗಂಡ. ಇದು ಮಗು ಹೆತ್ತ ಯಾವುದೇ ಮಹಿಳೆಗೆ ಕಾಮನ್ ಅಲ್ವಾ? ನನ್ನ ಬಳಿ ಸಾಕಷ್ಟು ತೃಪ್ತಿ ಸಿಗದೆ ಹೋದರೆ ನನ್ನ ಗಂಡ ಬೇರೆ ಹೆಣ್ಣಿನ ಬಳಿ ಹೋಗುವ ಸಾಧ್ಯತೆ ಇದೆಯಾ?


ಪ್ರಶ್ನೆ: ನಾನು ವಿವಾಹಿತೆ. ವಯಸ್ಸು ಮೂವತ್ತು. ಮೂರು ವರ್ಷದ ಹಿಂದೆ ಮದುವೆ ಆಯಿತು. ಎಂಟು ತಿಂಗಳ ಮಗುವಿದೆ. ಗರ್ಭಿಣಿ ಆಗೋಕೆ ಮೊದಲು ನಾವಿಬ್ಬರೂ ಸೆಕ್ಸ್ ಅನ್ನು ತುಂಬಾ ಎಂಜಾಯ್ ಮಾಡ್ತಾ ಇದ್ದೆವು. ಈಗಲೂ ಆಗಾಗ ಸೆಕ್ಸ್ ನಡೆಸುತ್ತೇವೆ. ಆದರೆ, ನಿನ್ನ ಯೋನಿ ತುಂಬಾ ಸಡಿಲವಾಗಿದೆ. ಮೊದಲಿನ ಥರ ಸೆಕ್ಸ್ ಮಾಡುವಾಗ ಸುಖ ಸಿಗುತ್ತಿಲ್ಲ ಅಂತಾರೆ ನನ್ನ ಗಂಡ. ಇದು ನಿಜವೂ ಹೌದು. ನನ್ನ ಅಂಗ ಸಡಿಲವಾಗಿರುವುದು ನನ್ನ ಗಮನಕ್ಕೇ ಬರುತ್ತಿದೆ. ಆದರೆ ಇದು ಮಗು ಹೆತ್ತ ಯಾವುದೇ ಮಹಿಳೆಗೆ ಕಾಮನ್ ಅಲ್ವಾ? ಇತರ ಮಹಿಳೆಯರು ಇದನ್ನು ಹೇಗೆ ಸರಿಪಡಿಸಿಕೊಳ್ಳುತ್ತಾರೆ? ನಾನು ಹೇಗೆ ಸರಿಪಡಿಸಿಕೊಳ್ಳಬಹುದು? ನನ್ನ ಬಳಿ ಸಾಕಷ್ಟು ತೃಪ್ತಿ ಸಿಗದೆ ಹೋದರೆ ನನ್ನ ಗಂಡ ಬೇರೆ ಹೆಣ್ಣಿನ ಬಳಿ ಹೋಗುವ ಸಾಧ್ಯತೆ ಇದೆಯಾ? ಪ್ಲೀಸ್, ದಾರಿ ತೋರಿಸಿ.

ಲೈಂಗಿಕ ಚಟುವಟಿಕೆ ಸುಗಮವಾಗಲು ಈ ವ್ಯಾಯಾಮ ಮಾಡಿ

ಉತ್ತರ:
ನಿಮ್ಮ ಭಯ ಆತಂಕಗಳು ಸಹಜವಾಗಿಯೇ ಇದೆ. ಒಂದು ಮಗುವಾದ ಬಳಿಕ ಯೋನಿ ಸಡಿಲವಾಗುತ್ತದೆ. ಮಗುವನ್ನು ಹೆರುವ ಪ್ರಕ್ರಿಯೆಯಲ್ಲಿ ಯೋನಿರಂಧ್ರ ದೊಡ್ಡದಾಗುವುದೇ ಇದಕ್ಕೆ ಕಾರಣ. ಇದಾದ ಬಳಿಕ ಸೆಕ್ಸ್ ವೇಳೆ ಪುರುಷನ ಶಿಶ್ನಕ್ಕೆ ಸಾಕಷ್ಟು ಘರ್ಷಣೆ ಸಿಗದೇ ಹೋಗಬಹುದು. ಆದ್ದರಿಂದ ಅಂಗದಲ್ಲಿ ಮೊದಲಿನ ಬಿಗಿ ಇಲ್ಲ ಎನಿಸುವುದು ಸಹಜ. ಇದೊಂದು ಸಹಜ ಪ್ರಕ್ರಿಯೆ. ಆದರೆ ಇದರಿಂದ ಗಂಡು ಬೇರೊಂದು ಹೆಣ್ಣಿನ ಕಡೆಗೆ ಆಕರ್ಷಿತನಾಗುತ್ತಾನೆ ಎಂದು ಭಾವಿಸಬೇಕಿಲ್ಲ. ಹಾಗೆ ಆಗುವುದೇ ಆಗಿದ್ದರೆ ಎಲ್ಲ ಗಂಡಸರೂ ತಮ್ಮ ಹೆಂಡತಿ ಮಗು ಹೆತ್ತ ಬಳಿಕ ಇನ್ನೊಂದು ಹೆಣ್ಣಿನ ಕಡೆಗೆ ಹೋಗಬೇಕಿತ್ತು. ಹಾಗಾಗಿಲ್ಲ. 

ಇನ್ನು, ಸೆಕ್ಸ್‌ನಲ್ಲಿ ಮೊದಲಿನ ಆಕರ್ಷಣೆ ತರುವುದು ಹೇಗೆ, ಎಂಬ ಪ್ರಶ್ನೆ. ಸೆಕ್ಸ್ ಅನ್ನುವುದು ಕೇವಲ ಯೋನಿ- ಶಿಶ್ನಗಳ ಸಂಪರ್ಕ ಮಾತ್ರವಲ್ಲ. ಅದಕ್ಕೆ ಮೊದಲಿನ ಮುನ್ನಲಿವಿನ ಕ್ರಿಯೆಗಳು ಕೂಡ ಸಂಭೋಗದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಆಲಿಂಗನ, ಚುಂಬನ, ಹಸ್ತಮೈಥುನ, ಮುಖಮೈಥುನ ಮುಂತಾದ ಕ್ರಿಯೆಗಳೂ ಕೂಡ ಸೆಕ್ಸ್‌ನಲ್ಲಿ ರೋಚಕತೆ ತುಂಬುವ ಅಂಶಗಳೇ ಆಗಿವೆ. ಇವುಗಳಲ್ಲಿ ವೈವಿಧ್ಯತೆ ತಂದಾಗ, ಸೆಕ್ಸ್‌ಗೆ ಹೊಸ ಹುರುಪು ತುಂಬುತ್ತದೆ. ಇದನ್ನು ನಿರಂತರವಾಗಿ ಶೋಧಿಸುತ್ತ, ಹೊಸಹೊಸದನ್ನು ಪ್ರಯತ್ನಿಸುತ್ತ ನೀವು ಇರಬೇಕಾಗುತ್ತದೆ, ಇದಕ್ಕೆ ಬೇಕಾದ ಸಾಹಿತ್ಯ, ಡಾಕ್ಯುಮೆಂಟರಿ, ಮಾಹಿತಿ ಎಲ್ಲವೂ ಈಗ ಬಹಳ ಕಡೆ ಸಿಗುತ್ತವೆ. ನಿಮಗೆ ವಿಶ್ವಾಸವುಳ್ಳ ನಿಮ್ಮ ವಿವಾಹಿತ ಗೆಳತಿಯರ ಬಳಿ ಕೂಡ ನೀವು ಈ ವಿಚಾರ ಹಂಚಿಕೊಂಡು ಕೆಲವು ಪರಿಹಾರ ಪಡೆಯಬಹುದು.

Latest Videos

undefined

#Feelfree: ಸಾರ್ವಜನಿಕ ಜಾಗದಲ್ಲಿ ಸೆಕ್ಸ್ ಮಾಡೋ ಚಟ! 

ಯೋನಿಯನ್ನು ಬಿಗಿಯಾಗಿಸುವುದಕ್ಕೂ ಮಾರ್ಗಗಳಿವೆ. ಇದನ್ನು ಕೆಗೆಲ್‌ ವ್ಯಾಯಾಮ ಎಂದು ಕರೆಯುತ್ತಾರೆ. ಇದನ್ನು ದಿನಕ್ಕೆ ಮೂರು ಬಾರಿ, ಮೂರು ತಿಂಗಳ ಕಾಲ ಮಾಡಬೇಕು.
ಅದನ್ನು ಮಾಡುವ ಕ್ರಮ ಹೀಗೆ. ನಿಮ್ಮ ಕೆಳಹೊಟ್ಟೆ ಖಾಲಿಯಾಗಿರುವಾಗ, ಅಂತರೆ ಮೂತ್ರ ಸಂಗ್ರಹ ಆಗಿಲ್ಲದೆ ಇರುವಾಗ ಈ ವ್ಯಾಯಾಮ ಮಾಡಬೇಕು. ಕುಳಿತು ಅಥವಾ ಮಲಗಿಕೊಂಡು ಇದನ್ನು ಮಾಡಬಹುದು. ಆರಾಮವಾಗಿ ಕುಳಿತು ಅಥವಾ ಮಲಗಿ, ನಿಮ್ಮ ಪೆಲ್ವಿಕ್‌ ಫ್ಲೋರ್‌ ಸ್ನಾಯುಗಳನ್ನು ಬಿಗಿ ಮಾಡಿ. ಪೆಲ್ವಿಕ್‌ ಫ್ಲೋರ್‌ ಸ್ನಾಯುವನ್ನು ಗುರುತಿಸುವುದು ಹೇಗೆ? ನೀವು ಮೂತ್ರ ಮಾಡುವಾಗ ಒಮ್ಮೆ ಮೂತ್ರವನ್ನು ಬಿಗಿಹಿಡಿಯಿರಿ. ಈಗ ಮೂತ್ರ ಕಟ್ಟಲು ಯಾವ ಸ್ನಾಯುವನ್ನು ಬಳಸಿದಿರೋ, ಅದೇ ಪೆಲ್ವಿಕ್ ಫ್ಲೋರ್‌ ಸ್ನಾಯು. ಈ ಸ್ನಾಯುವನ್ನು ಮೂರರಿಂದ ಐದು ಸೆಕೆಂಡ್‌ ಕಾಲ ಬಿಗಿಹಿಡಿಯಿರಿ. ನಂತರ ಸಡಿಲ ಬಿಡಿ. ಹೀಗೆ ಹತ್ತು ಸಲ ಮಾಡಿರಿ. ಇದೇ ಕ್ರಿಯೆಯನ್ನು ದಿನದಲ್ಲಿ ಮೂರು ಸಲ ಪುನರಾವರ್ತಿಸಿ. ಇದರಿಂದ ನಿಮ್ಮ ಪೆಲ್ವಿಕ್‌ ಸ್ನಾಯುಗಳು ಬಿಗಿಯಾಗುತ್ತವೆ. ಆಗ ಶಿಶ್ನಕ್ಕೂ ಹೆಚ್ಚಿನ ಘರ್ಷಣೆ ಸಿಗುತ್ತದೆ. ಸೆಕ್ಸ್‌ ಮೊದಲಿನಂತಾಗುತ್ತದೆ. 

#Feelfree: ಸ್ತನಗಳ ಶೇಪ್ ಕಾಪಾಡಿಕೊಳ್ಳುವುದು ಹೇಗೆ? 

ಪ್ರಶ್ನೆ: ನಾನು ಎಪ್ಪತ್ತು ವರ್ಷದ ವ್ಯಕ್ತಿ. ಪತ್ನಿ ಸತ್ತು ಐದು ವರ್ಷಗಳಾಗಿವೆ. ಈಗಲೂ ಆಗಾಗ ಹಸ್ತಮೈಥುನ ಮಾಡಿಕೊಳ್ಳುತ್ತೇನೆ. ಇದರಿಂದ ಏನಾದರೂ ತೊಂದರೆ ಇದೆಯಾ?

ಉತ್ತರ: ನಿಮಗೆ ಈ ಬಗ್ಗೆ ಪಾಪಪ್ರಜ್ಞೆ ಅಥವಾ ಕೀಳರಿಮೆ ಇಲ್ಲ ಎಂದಾದರೆ, ಹಸ್ತಮೈಥುನದಿಂದ ಯಾವ ಸಮಸ್ಯೆಯೂ ಇಲ್ಲ. ನಿಮ್ಮ ವಯಸ್ಸಿನ ದಂಪತಿಗಳು ಸೆಕ್ಸ್ ಮಾಡುವುದು ಹೇಗೆ ಸಹಜವೋ, ಹಾಗೇ ನಿಮ್ಮ ವಯಸ್ಸಿನಲ್ಲಿ ಹಸ್ತಮೈಥುನ ಮಾಡಿಕೊಳ್ಳುವುದು ಕೂಡ ನ್ಯಾಚುರಲ್ ಕ್ರಿಯೆ.

ಡಾಕ್ಟರ್ ಮಗು ಆಗೊಲ್ಲ ಎಂದಾಗ ಈ ಸೆಲೆಬ್ರಿಟಿಗಳು ಮಾಡಿದ್ದೇನು? 

click me!